ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ಇದನ್ನು ದೇಶದ 117 ಕೋಟಿ ಜನಸಂಖ್ಯೆಗೆ ವಿಭಜಿಸಿದರೆ ಅದನ್ನೇ ತಲಾದಾಯ ಎಂದು ಪರಿಗಣಿಸಲಾಗುತ್ತದೆ. 33,731 ಕೋಟಿ ತಲುಪಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ಮಾರುಕಟ್ಟೆ ದರಗಳು ರೂ 52,82,086 ಕೋಟಿಯಿಂದ ಶೇ 16ರಷ್ಟು ಏರಿಕೆ ಕಂಡಿದ್ದು, ರೂ 61,33,230 ಕೋಟಿ ತಲುಪಿದೆ. ದೇಶದ ಜನಸಂಖ್ಯೆ ಕೂಡ ಇದೇ ಅವಧಿಯಲ್ಲಿ 11.4 ಕೋಟಿಯಿಂದ 117ಕೋಟಿಗೆ ಏರಿದೆ.
2. ಇಂಡಿಯನ್ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವತರಣಿಕೆಯ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡದ ಯಾವುದೇ ಆಟಗಾರರಿಗೆ ಅವಕಾಶ ಲಭಿಸಿಲ್ಲ. ಆದರೆ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಪಾಕಿಸ್ತಾನದ ಅಲೀಮ್ ದಾರ್ ಹಾಗೂ ಅಸಾದ್ ರೌಫ್ ಅವಕಾಶ ಪಡೆದುಕೊಂಡಿದ್ದಾರೆ.
3. ಶ್ರೀಶಾಂತ್ ಭಾನುವಾರ ರಾತ್ರಿ ತಮ್ಮ ‘ಎಸ್- 36’ ಬ್ಯಾಂಡ್ ಆಯೋಜಿಸಿದ್ದ ಸಮಾರಂಭದಲ್ಲಿ ತಾವೇ ರಚಿಸಿದ ಗೀತೆಯನ್ನು ಹಾಡಿದರಲ್ಲದೆ, ಅದನ್ನು ಭಾರತ ತಂಡಕ್ಕೆ ಸಮರ್ಪಿಸಿದರು.
4. ಸಿಎಜಿ ವರದಿಯೊಂದನ್ನೇ ಆಧರಿಸಿ 2ಜಿ ತರಾಂಗತರ ಹಂಚಿಕೆಯ ಪರವಾನಗಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
5. ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದ ಬಗ್ಗೆ ಮೊದಲ ಮಧ್ಯಂತರ ತನಿಖಾ ವರದಿ ಸಲ್ಲಿಸಿರುವ ಶುಂಗ್ಲು ಸಮಿತಿಯು, 135 ಕೋಟಿ ರೂಪಾಯಿ ಮೌಲ್ಯದ ಪ್ರಸಾರದ ಹಕ್ಕು ನೀಡಿಕೆ ವ್ಯವಹಾರದಲ್ಲಿನ ಅಕ್ರಮಗಳಲ್ಲಿ ಪ್ರಸಾರ ಭಾರತಿಯಿಂದ ಅಮಾನತುಗೊಂಡಿರುವ ಸಿಇಒ ಬಿ.ಎಸ್.ಲಲ್ಲಿ ಹಾಗೂ ದೂರದರ್ಶನದ ಮಹಾ ನಿರ್ದೇಶಕ ಅರುಣ ಶರ್ಮ ಅವರನ್ನು ಪ್ರಧಾನವಾಗಿ ಹೆಸರಿಸಿದೆ.
6. ‘ಕ್ರೀಡಾಕೂಟದ ವ್ಯವಹಾರ ಸುಮಾರು 28,000 ಕೋಟಿಯಷ್ಟು ಭಾರಿ ಮೊತ್ತದ್ದಾಗಿರುವುದರಿಂದ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಅದಕ್ಕಾಗಿ ಅವಧಿ ವಿಸ್ತರಿಸಬೇಕು’ ಎಂದು ಶುಂಗ್ಲು ಮಂಗಳವಾರ ಹೇಳಿದ್ದಾರೆ.
7. ವಿಶ್ವದಲ್ಲೇ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಮೆರಿಕದ ಯೂನೈಸ್ ಸ್ಯಾನ್‌ಬಾರ್ನ್ (115) ಟೆಕ್ಸಾಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.
8. ಸ್ಯಾನ್‌ಬಾರ್ನ್ ನಿಧನದಿಂದ ಹಿರಿಯಜ್ಜಿಯ ಪಟ್ಟ ಜಾರ್ಜಿಯಾದ 114ರ ಹರೆಯದ ಬೆಸ್ಸೆ ಕೂಪರ್ ಪಾಲಾಗಿದೆ.
9. 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಜಿ.ವೆಂಕಟಸುಬ್ಬಯ್ಯ ಹೇಳಿದರು.
10. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣ ಶೇಕಡ 36ರಷ್ಟು ಏರಿಕೆ ಕಂಡಿದೆ.
11. ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ (ಉತ್ತರ ಪ್ರದೇಶ ಕೇಡರ್‌ನ 1973ರ ತಂಡದ ಐಎಎಸ್ ಅಧಿಕಾರಿ) ರಾಜಾ ಅವರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯ (1984ನೇ ತಂಡದ ಭಾರತೀಯ ಆರ್ಥಿಕ ಸೇವೆ ಅಧಿಕಾರಿ) ಬಂಧಿತರು.
12. ಕೇಂದ್ರ ಜಾಗೃತ ಆಯೋಗದ ತನಿಖೆಯನ್ನು ಆಧರಿಸಿ,2 ಜಿ ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿದಂತೆ ರೂ 22,000 ಕೋಟಿ ನಷ್ಟವಾಗಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ಯಲ್ಲಿ ದಾಖಲಿಸಿದೆ.
13. ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ’ (ನೈಸ್)
14. ಜಗತ್ತಿನಲ್ಲಿ ಅಂತರ್ಜಾಲ ಬಳಕೆ ದಟ್ಟಣೆ ಎಷ್ಟರಮಟ್ಟಿಗೆ ಏರುತ್ತಿದೆಯೆಂದರೆ ಅದಕ್ಕೆ ನಿಗದಿ ಮಾಡಿದ್ದ ಐಪಿ ವಿಳಾಸಗಳೆಲ್ಲಾ (ಇಂಟರ್‌ನೆಟ್ ಪ್ರೊಟೊಕಾಲ್) ಶುಕ್ರವಾರ (ಫೆ.4ರಂದು) ಸಂಪೂರ್ಣ ಬರಿದಾಗಲಿವೆ!
15. 1980ರಲ್ಲಿ ಐಪಿವಿ 4 ಆವೃತ್ತಿ ಜಾರಿಗೊಳಿಸಿದಾಗ 410 ಕೋಟಿ ಐಪಿ ವಿಳಾಸ ನೀಡುವ ಸಾಮರ್ಥ್ಯ ಅದಕ್ಕಿತ್ತು. ಅಷ್ಟೊಂದು ಅಗಾಧ ಸಾಮರ್ಥ್ಯವಿದ್ದ ಹಿನ್ನೆಲೆಯಲ್ಲಿ ಐಪಿ ವಿಳಾಸ ಯಾವತ್ತಿಗೂ ಬರಿದಾಗದು ಎಂದೇ ಆಗ ತಜ್ಞರು ಭಾವಿಸಿದ್ದರು.
16. 2ಜಿ ತಂರಂಗಾಂತರ ಹಂಚಿಕೆ ಹಗರಣ ಸೃಷ್ಟಿಸಿದ ಕೋಲಾಹಲದಿಂದ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯಾಸ ಪಡುತ್ತಿರುವ ಬೆನ್ನಲ್ಲೇ ‘ಇಸ್ರೊ ಎಸ್-ಬ್ಯಾಂಡ್’ಬಹುಕೋಟಿ ಹಗರಣದ ಭೂತ ಅದರ ಹೆಗಲೇರಿದೆ.
17. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಖಾಸಗಿ ಕಂಪೆನಿ ನಡುವೆ ನಡೆದ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದವೊಂದು ದೇಶದ ಬೊಕ್ಕಸಕ್ಕೆ ರೂ 2 ಲಕ್ಷ ಕೋಟಿ ಮೊತ್ತದ ಹಾನಿ ಉಂಟು ಮಾಡಿದೆ ಎನ್ನಲಾಗಿದೆ.
18. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ: ಇಸ್ರೊದ ವಾಣಿಜ್ಯ ವ್ಯವಹಾರದ ಅಂಗ ಸಂಸ್ಥೆ ‘ಆ್ಯಂಟ್ರಿಕ್ಸ್ ಕಾರ್ಪೊರೇಷನ್’ ಹಾಗೂ ಖಾಸಗಿ ಕಂಪೆನಿಯಾದ ದೇವಾಸ್ ಮಲ್ಟಿಮೀಡಿಯ ಸರ್ವಿಸ್ ನಡುವೆ ನಡೆದ ಒಪ್ಪಂದ ಈಗ ವಿವಾದವನ್ನು ಎಬ್ಬಿಸಿದ್ದು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
19. ದೇವಾಸ್ ಮತ್ತು ಆ್ಯಂಟ್ರಿಕ್ಸ್ ನಡುವಿನ ಪ್ರಸ್ತುತ ಒಪ್ಪಂದ 2005ರ ಜನವರಿ 28ರಂದು ನಡೆದಿತ್ತು. 70 ಮೆಗಾ ಹರ್ಟ್ಸ್ ಎಸ್-ಬ್ಯಾಂಡ್ ಅತಿ ದುಬಾರಿ ತರಂಗಾಂತರವನ್ನು ಸುಮಾರು ಎರಡು ಲಕ್ಷ ಕೋಟಿ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು.
20. 12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012-17) ಶೇಕಡ 4ರಷ್ಟು ಕೃಷಿ ವೃದ್ಧಿ ದರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಯೋಜನಾ ಆಯೋಗ ಉಪಾಧ್ಯಕ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.
21. ಏಕದಿನ ಕ್ರಿಕೆಟ್ ಹುಟ್ಟು ಪಡೆದಿದ್ದು 7ನೇ ಜೂನ್ 1971ರಲ್ಲಿ.
22. ಮೊಟ್ಟ ಮೊದಲ ಏಕದಿನ ವಿಶ್ವಕಪ್ ನಡೆದಿದ್ದು 1975ರಲ್ಲಿ.
23. ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದು ಭಾರತ ಹಾಗೂ ಇಂಗ್ಲೆಂಡ್ (ಲಾರ್ಡ್ಸ್, 7ನೇ ಜೂನ್). ವಿಶೇಷವೆಂದರೆ ಇದಕ್ಕೂ ಮುನ್ನ 18 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿದ್ದವು. ಆಗ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದ ಅಂಗಳಗಳಲ್ಲಿಯೇ ಏಕದಿನ ಪಂದ್ಯಗಳು ನಡೆದಿದ್ದು.
24. ಮೊದಲ ವಿಶ್ವಕಪ್‌ನಲ್ಲಿ ಟೆಸ್ಟ್ ಮಾನ್ಯತೆ ಹೊಂದಿದ್ದ ಆರು ರಾಷ್ಟ್ರಗಳು ಹಾಗೂ ಆಗ ಐಸಿಸಿ ಸಹ ಸದಸ್ಯ ರಾಷ್ಟ್ರಗಳಾಗಿದ್ದ ಪೂರ್ವ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಂಡಿದ್ದವು. ಶ್ರೀಲಂಕಾ ಆಗ ಟೆಸ್ಟ್ ಆಡುವ ರಾಷ್ಟ್ರದ ಮಾನ್ಯತೆ ಹೊಂದಿರಲಿಲ್ಲ ಎನ್ನುವುದು ಗಮನ ಸೆಳೆಯುವ ಅಂಶ.
25. ವಿಶ್ವಕಪ್‌ನಲ್ಲಿ ಮೊದಲ ಬೌಲ್ ಎಸೆದಿದ್ದು ಭಾರತದ ಮದನ್‌ಲಾಲ್ ಹಾಗೂ ಅದನ್ನು ಎದುರಿಸಿದ್ದು ಇಂಗ್ಲೆಂಡ್‌ನ ಜಾನ್ ಜೇಮ್ಸನ್.
26. ಮೊದಲ ಕ್ಯಾಚ್ ಪಡೆದಿದ್ದು ಭಾರತ ತಂಡದ ನಾಯಕರಾಗಿದ್ದ ಶ್ರೀನಿವಾಸ್ ವೆಂಕಟರಾಘವನ್.
27. ಇಂಗ್ಲೆಂಡ್ ವಿರುದ್ಧವೇ ಚೊಚ್ಚಲ ಪಂದ್ಯ ಆಡಿದ್ದ ಮೋಹಿಂದರ್ ಅಮರ್ನಾಥ್ ಎಸೆತದಲ್ಲಿ. ಅಮರ್ನಾಥ್ ಅವರು ಜೇಮ್ಸನ್ ರೂಪದಲ್ಲಿ ವಿಶ್ವಕಪ್‌ನ ಪ್ರಥಮ ವಿಕೆಟ್ ಪಡೆದ ಶ್ರೇಯ ಹೊಂದಿದ್ದಾರೆ.
28. ಇಂಗ್ಲೆಂಡ್‌ನ ಡಿ.ಎಲ್.ಅಮೀಸ್ ಅವರು ಭಾರತದ ವಿರುದ್ಧವೇ ವಿಶ್ವಕಪ್‌ನ ಮೊದಲ ಶತಕ ಗಳಿಸಿದ್ದು. ಅವರು 137 ರನ್ ಗಳಿಸಿದ್ದರು.
29. ವಿಚಿತ್ರವೆಂದರೆ ಭಾರತ ಅದೇ ಪಂದ್ಯದಲ್ಲಿ ಗಳಿಸಿದ್ದ ಒಟ್ಟು ಮೊತ್ತ 60 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್. ಸುನಿಲ್ ಗಾವಸ್ಕರ್ ಔಟಾಗದೆ ಉಳಿದಿದ್ದರು. ಆದರೆ ಅವರು 174 ಎಸೆತಗಳಲ್ಲಿ ಗಳಿಸಿದ್ದು ಕೇವಲ 36 ರನ್.
30. ಇಂಗ್ಲೆಂಡ್‌ನವರು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುನ್ನೂರಕ್ಕೂ ಅಧಿಕ ರನ್ ಗಳಿಸಿದ್ದು. ಇಂಗ್ಲೆಂಡ್ 60 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತ್ತು. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದು ಕೂಡ ಅದೇ ಮೊದಲು.
31. ಭಾರತ ವಿರುದ್ಧದ ಪಂದ್ಯದಲ್ಲಿಯೇ ಇಂಗ್ಲೆಂಡ್ 202 ರನ್‌ಗಳಿಂದ ಜಯ ಪಡೆದಿದ್ದು, ದೊಡ್ಡ ಮೊತ್ತದ ಅಂತರದಲ್ಲಿ ತಂಡವೊಂದು ವಿಜಯ ಸಾಧಿಸಿದ ಮೊದಲ ಘಟನೆ.
32. ಕೀಥ್ ಫ್ಲೆಚರ್ ಹಾಗೂ ಅಮೀಸ್ ವಿಶ್ವಕಪ್‌ನಲ್ಲಿ ಮೂರಂಕಿಯ ಜೊತೆಯಾಟವಾಡಿದ ಮೊದಲ ಜೋಡಿ. ಎರಡನೇ ವಿಕೆಟ್‌ನಲ್ಲಿ ಇವರಿಬ್ಬರೂ 176 ರನ್ ಕಲೆಹಾಕಿದ್ದರು.ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು.
33. ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು. ಹದಿನೈದಕ್ಕೂ ಹೆಚ್ಚು ಬೌಂಡರಿಗಳನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.
34. ವಿಕಿಪೀಡಿಯ ತಿಂಗಳ ಪುಟ ವೀಕ್ಷಣೆ ಸಂಖ್ಯೆ 8.5 ಶತಕೋಟಿಗೆ ಏರಿದ್ದು, ಅತಿ ಹೆಚ್ಚು ಜನ ಭೇಟಿ ನೀಡುವ ಪ್ರಪಂಚದ ಐದನೆಯ ವೆಬ್ ತಾಣ ವಿಕಿಪೀಡಿಯ.
35. ಪರಮಾಣು ದಾಸ್ತಾನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಹಾಗೂ ರಷ್ಯ “ ಸ್ಟಾರ್ಟ್ ” ಒಪ್ಪಂದ ಅಮೆರಿಕಾ ಸೆನೆಟ್ ನಲ್ಲಿ ಅಂಗೀಕಾರವಾಯಿತು .
36. “ ಸ್ಟಾರ್ಟ್ ” ಒಪ್ಪಂದಕ್ಕೆ ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ಮತ್ತು ರಷ್ಯದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ 2010 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು .
37. “ ಸ್ಟಾರ್ಟ್ ” ಒಪ್ಪಂದದ ನಂತರ ಜಾರಿಗೊಂಡ ನಂತರ 2200 ರಿಂದ 1500 ಕ್ಕೆ ಇಳಿಯಲಿದೆ.
38. “ ಸ್ಟಾರ್ಟ್ ” ಒಪ್ಪಂದದ ನಂತರ ಅಮೆರಿಕಾದ 17 ಹಾಗೂ ರಷ್ಯಾದ 35 ಅಣ್ವಸ್ತ್ರ ತಾಣಗಳು ಪರಸ್ಪರ ಪರಿಶೀಲನೆಗೆ ಮುಕ್ತವಾಗಲಿದೆ.
39. ಬ್ರೆಜಿಲ್ ನ ಎಡಪಂಥೀಯ ಚಿಂತಕಿ ಅರ್ಥಶಾಸ್ತ್ರಜ್ಞೆ “ ದಿಲ್ಮಾ ರೌಸೆಫ್ ” ನೂತನ ಅಧ್ಯಕ್ಷರಾಗಿ 2011 , ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು .
40. ಟ್ಯುನೀಷಿಯಾ ಅಧ್ಯಕ್ಷ “ ಜಿನೆ ಅಲ್ ಅಬಿದಿನ್ ಬೆನ್ ಅಲಿ ” ಪದಚ್ಯುತಗೊಂಡರು ಇದರೊಂದಿಗೆ 23 ವರ್ಷಗಳ ನಿರಂಕುಶ ಅಧ್ಯಕ್ಷೀಯ ಆಡಳಿತ ಮುಕ್ತಾಯಗೊಂಡಿತು .
41. ದೇಶದ ಮಹತ್ವಕಾಂಕ್ಷೆಯ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸಂಪರ್ಕ ಉಪಗ್ರಹ “ ಜಿ ಸ್ಯಾಟ್ -5 ಪಿ ” ಅನ್ನು ಹೊತ್ತು ಸಾಗಿಸುತ್ತಿದ್ದ ಜಿ.ಎಸ್.ಎಲ್.ವಿ – ಎಫ್ 06 ರಾಕೆಟ್ 2010 ಡಿ.25 ರಂದು ಉಡಾವಣಿಗೊಂಡ ನಿಮಿಷದೊಳಗೆ ಸ್ಪೋಟಗೊಂಡು , ಯೋಜನೆ ಸಂಪೂರ್ಣ ವಿಫಲವಾಯಿತು. ಇದಕ್ಕಾದ ವೆಚ್ಚ 125 ಕೋಟಿ ರೂ .
42. “ ಜಿ ಸ್ಯಾಟ್ -5 ಪಿ ” ನಲ್ಲಿ “ ಸಿ – ಬ್ಯಾಂಡ್ ” ಪ್ರೇಷಕಗಳು , 12 ವಿಸ್ತರಿತ ಸಿ ಬ್ಯಾಂಡ್ ಪ್ರೇಷಕರಗಳನ್ನು ಅಳವಡಿಸಲಾಗಿತ್ತು .
43. “ ಜಿ ಸ್ಯಾಟ್ -5 ಪಿ ” ಇದು ದೇಶದ ದೂರಸಂಪರ್ಕ ,ಟಿವಿ ಮತ್ತಿತರ ಸಂವಹನ ರಂಗದ ಮಹತ್ತರ ಅಭಿವೃದ್ಧಯನ್ನು ನಿರೀಕ್ಷಿಸಲಾಗಿತ್ತು ಹಾಗೂ ಇನ್ ಸ್ಯಾಟ್ – 3ಇ ಉಪಗ್ರಹಕ್ಕೆ ಪರ್ಯಾಯವಾಗಿ ಇದನ್ನು ಸಿದ್ಧಪಡಿಸಲಾಗಿತ್ತು .
44. ಪ್ರಜಾಪ್ರಭುತ್ವದ ವಿರುದ್ಧ ಹೋರಾಡಲು ನಕ್ಸಲೀಯರ ಜೊತೆ ಸೇರಿ ಸಂಚು ರೂಪಿಸಿ ರಾಷ್ಟ್ರ ದ್ರೋಹ ಎಸಗಿದ ಆರೋಪಕ್ಕಾಗಿ ಮಾನವಹಕ್ಕು ಕಾರ್ಯಕರ್ತ “ ವಿನಾಯಕ ಸೇನ್ ” ನಕ್ಸಲ್ ಸಿದ್ಧಾಂತವಾದಿ ನಾರಾಯಣ್ ಸನ್ಯಾಲ್ ಮತ್ತು ಕೋಲ್ಕತ್ತಾದ ಉದ್ಯಮಿ ಪಿಯೂಷ್ ಗುಹಾ ಅವರಿಗೆ ಛತ್ತೀಸ್ ಗಢ್ ದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.
45. ಮಂಗಳೂರು ಮೂಲದ ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗೀಶ್ ಭಟ್ ವಿಧಾನ ಸಭೆಯ ಉಪಸಭಾಧ್ಯಕ್ಷ ಅಥವಾ Deputy Speaker .
46. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ದ.ಆಫ್ರೀಕಾದ ಜಾಕ್ ಕಾಲೀಸ್ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್ 10 ನೇ ಬಾರಿಗೆ ಟೆಸ್ಟ್ ರ್ಯಾಂಕಿಂಗ್ ನಂ.1 ಪಟ್ಟಿ ಪಡೆದುಕೊಂಡಿದ್ದಾರೆ.
47. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನ ಕ್ರಮವಾಗಿ ದ.ಆಫ್ರೀಕಾ ಹಾಗೂ ಇಂಗ್ಲೇಂಡ್ ಪಾಲಾಗಿದೆ.
48. ಅರ್ಜೇಂಟೀನಾದ ಪುಟ್ಬಾಲ್ ಆಟಗಾರ “ ಲಯೋನೆಲ್ ಮೆಸ್ಸಿ ” ಸತತ ಎರಡನೇ ಬಾರಿಗೆ FIFA ನೀಡುವ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ,
49. ಫೀಫಾ ರ್ಯಾಂಕಿಂಗ್ ಪಟ್ಟಯಲ್ಲಿ ಸ್ಪೇನ್ ಮೊದಲ ಸ್ಥಾನ ಹಾಲೆಂಡ್ ಜರ್ಮನಿ ಕ್ರಮವಾಗಿ ಹಾಗೂ ಭಾರತದ 144 ನೇ ಸ್ಥಾನ ಪಡೆದಿದೆ.
50. ವಿಶ್ವದ ಅತಿ ಉದ್ದವಾದ ಸೇತುವೆ ಚೀನಾದಲ್ಲಿದೆ ಅದರ ಉದ್ದ 42.5 ಕಿ.ಮೀ. ಇದರ ಹೆಸರು “ ಖಂ – ಗ್ ಡೋ ಹೈವಾನ್ ” ಆರು ಪಥಗಳ ಎಕ್ಸ್ ಪ್ರೆಸ್ ವೇ ಇದಾಗಿದ್ದು 8.0 ತೀವ್ರತೆಯ ಭೂ ಕಂಪನವನ್ನ ಎದುರಿಸುವ ಸಾಮರ್ಥ್ಯ ಹೊಂದಿದೆ . ಇದರ ಬಾಳಿಕೆ ಅವಧಿ ಸುಮಾರು 120 ವರ್ಷ ಪ್ರಯಾಣದ ಅವಧಿ 30 ನಿಮಿಷ ಹಾಗೂ ಇದರ ಯೋಜನೆಯ ವೆಚ್ಚ 500 ಶತ ಕೋಟಿ
51. ಮಾನವ ಪ್ರಥಮ ಭಾರಿಗೆ 1.70 ಲಕ್ಷ ವರ್ಷಗಳ ಹಿಂದೆ ಬಟ್ಟೆ ಧರಿಸಿದನಂತೆ ಇದರಿಂದ ಆಫ್ರೀಕಾದಿಂದ ಬೇರೆಡೆಗೆ ವಲಸೆ ಹೋಗಲು ಆತನಿಗೆ ಸಾಧ್ಯವಾಯಿತು.
52. ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ( ರಾ ) ನೂತನ ಮುಖ್ಯಸ್ಥರಾಗಿ “ ಎಸ್.ಕೆ.ತ್ರಿಪಾಠಿ ” ಅವರನ್ನು ನೇಮಿಸಲಾಯಿತು ಇವರು ಈ ಮೊದಲು ರಾ ಏರ್ ವಿಂಗ್ ಘಟಕದ ವಿಮಾನಯಾನ ಸಂಶೋಧನಾ ಕೇಂದ್ರದ ( ಎ.ಆರ್.ಸಿ ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು .
53. ಯುದ್ಧ ವಿಮಾನಗಳ ಅನುಭವಿ ಫೈಲಟ್ ಹಾಗೂ ರ್ ಮಾರ್ಷಲ್ ಎನ್.ಎ.ಕೆ.ಬ್ರೌನೆ ಅವರು ಭಾರತೀಯ ವಾಯುಪಡೆಯ ನೂತನ ಉಪಮುಖ್ಯಸ್ಥರಾಗಿ ನೇಮಕಗೊಂಡರು .
54. ಯುಎಎಸ್ ಪರವಾನಗಿ ಮತ್ತು ರೇಡಿಯೊ ತರಂಗಾಂತರ ಪಡೆಯುವ ನಿಟ್ಟಿನಲ್ಲಿ ಬಲ್ವಾ ಅವರಿಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ನೆರವಾಗಿದ್ದರು ಎನ್ನಲಾಗಿದೆ. ಬಲ್ವಾ ಅವರ ಡಿ.ಬಿ.ರಿಯಾಲ್ಟಿ ಗುಂಪು ಕಲೈಞ್ಞರ್ ಟಿವಿಗೆ 214 ಕೋಟಿ ರೂಪಾಯಿಗಳ ಸಾಲ ಒದಗಿಸಿತ್ತು. ಇದರಿಂದಾಗಿ ಹಗರಣದಲ್ಲಿ ಕಲೈಞ್ಞರ್ ಟಿವಿ ಶಾಮೀಲಾದ ಸಂಶಯ ಎದುರಾಗಿದೆ.
55. ಕಲೈಞ್ಞರ್ ಟಿವಿಯಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅವರಿಗೆ ಶೇ 60ರಷ್ಟು ಒಡೆತನ ಇದ್ದರೆ, ಅವರ ಪುತ್ರಿ ಹಾಗೂ ಸಂಸದೆ ಕನಿಮೋಳಿ ಅವರಿಗೆ ಶೇ 20ರಷ್ಟು ಒಡೆತನ ಇದೆ.
56. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಲಾದ ವೈದ್ಯಕೀಯ ವಿಮಾ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಂಧಿಸಿರುವ 111 ಮಂದಿಯಲ್ಲಿ ಭಾರತೀಯ ಮೂಲದ ಕನಿಷ್ಠ 6 ಜನ ಸೇರಿದ್ದಾರೆ.
57. ವೈದ್ಯಕೀಯ ವಿಮಾ ಹಗರಣವೊಂದು ವೈದ್ಯರು, ನರ್ಸ್‌ಗಳು, ಆರೋಗ್ಯ ಸುರಕ್ಷಾ ಕಂಪೆನಿಗಳು ಜಂಟಿಯಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 225 ದಶಲಕ್ಷ ಡಾಲರ್‌ಗೂ ಹೆಚ್ಚು ವಂಚಿಸಿರುವುದಾಗಿ ಹೇಳಲಾಗಿದೆ.ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9.54 ಲಕ್ಷ ವೈದ್ಯರಲ್ಲಿ ಭಾರತೀಯ ಮೂಲದ 60 ಸಾವಿರ ಮಂದಿ ಇದ್ದಾರೆ.
58. ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ
59. ನಗರ ಸೌಂದರ್ಯ ವರ್ಧನೆ ಕಲ್ಪನೆಯಡಿ ನಿರ್ಮಿಸಲಾದ ವಿಪ್ರೊ ಬೀದಿ ದೀಪ ‘ಒರಿಯೊ’ಕ್ಕೆ ಪ್ರಸಕ್ತ ಸಾಲಿನ ‘ಏಷ್ಯಾ-ಶ್ರೇಷ್ಠತೆ ಮನ್ನಣೆ ಪ್ರಶಸ್ತಿ’ ಲಭಿಸಿದೆ. ದೇಶದ ಪ್ರಮುಖ 120 ಪರಿಸರ ಸ್ನೇಹಿ ಕಟ್ಟಡಗಳಲ್ಲಿ 70 ಕಟ್ಟಡಗಳಿಗೆ ಈಗಾಗಲೇ ಹಸಿರು ತಂತ್ರಜ್ಞಾನದ ‘ಎಲ್‌ಇಡಿ’ ದೀಪಗಳನ್ನು ಕಂಪೆನಿ ಅಳವಡಿಸಿದೆ.
60. ಈಜಿಪ್ಟ್ ಮತ್ತಿತರ ಅರಬ್ ರಾಷ್ಟ್ರಗಳಲ್ಲಿನ ಜನಾಂದೋಲನದಿಂದ ಪ್ರಭಾವಿತರಾದ ಚೀನಾ ನಾಗರಿಕರು ಭಾನುವಾರ ‘ಮಲ್ಲಿಗೆ ಕ್ರಾಂತಿ’ ಹೆಸರಿನಲ್ಲಿ ಇಂಟರ್‌ನೆಟ್‌ನಲ್ಲಿ ನೀಡಿದ ಕರೆ ಮೇರೆಗೆ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಬೀದಿಗಿಳಿದಿದ್ದರು.
61. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಇದಂತೂ ನಿಜ. ಮಿಜೊರಾಂನ ವ್ಯಕ್ತಿಯೊಬ್ಬರಿಗೆ 39 ಹೆಂಡತಿಯರು, 94 ಮಕ್ಕಳು ಮತ್ತು 33 ಜನ ಮೊಮ್ಮಕ್ಕಳಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಇವರೆಲ್ಲಾ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ!
62. ಬಹುಪತ್ನಿತ್ವಕ್ಕೆ ಅವಕಾಶ ಇರುವ ’ಚನಾ’ ಪಂಗಡದ ಮುಖ್ಯಸ್ಥರಾಗಿರುವ 66 ವರ್ಷದ ಜಿಯೋನಾ ಚನಾ ‘ಚ್ಚುವಾನ್ ಥಾಟ್ ರನ್’ (ಹೊಸ ತಲೆಮಾರಿನ ಮನೆ) ಎಂಬ 100 ಕೋಣೆಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬದುಕು ನಡೆಸುತ್ತಿದ್ದಾರೆ.
63. ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಸೋಮವಾರದ ಪಂದ್ಯದ ಮೂಲಕ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲಿದ್ದಾರೆ. ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಆಟಗಾರ ಎಂಬ ಗೌರವ ಪಾಂಟಿಂಗ್‌ಗೆ ಒಲಿಯಲಿದೆ.
64. ಪಾಂಟಿಂಗ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ವಿಶ್ವಕಪ್‌ನಲ್ಲಿ 39 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರದ ಪಂದ್ಯ ಆಸೀಸ್ ನಾಯಕನಿಗೆ 40ನೇ ಪಂದ್ಯ ಎನಿಸಲಿದೆ. ಆ ಮೂಲಕ ಮೆಕ್‌ಗ್ರಾ ಅವರನ್ನು ಹಿಂದಿಕ್ಕುವರು.
65. ಸನತ್ ಜಯಸೂರ್ಯ (38), ವಾಸೀಮ್ ಅಕ್ರಮ್ (38) ಮತ್ತು ಸಚಿನ್ ತೆಂಡೂಲ್ಕರ್ (37) ಅವರು ಅತಿಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡವರ ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.
66. ದೇಶದಲ್ಲಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ 150 ವರ್ಷಗಳ ಸ್ಮರಣಾರ್ಥ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ.ದೇಶದ ನಾಣ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರೂ 150 ಬೆಲೆಯ ವಿಶೇಷ ನಾಣ್ಯಗಳನ್ನು ಮುದ್ರಿಸಲು ನಿರ್ಧರಿಸಿದೆ.
67. ಆದಾಯ ತೆರಿಗೆ ಇಲಾಖೆಗೆ (1860-2010) 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರೂ 5 ಬೆಲೆಯ ನಾಣ್ಯಗಳನ್ನೂ ಹೊರತರಲಾಗುವುದು. 150 ನಾಣ್ಯಗಳನ್ನು ಕೇಂದ್ರ ಸರ್ಕಾರವು ಮುದ್ರಿಸುತ್ತಿರುವುದು ಇದೇ ಮೊದಲು. ಈ ನಾಣ್ಯವನ್ನು ಬೆಳ್ಳಿ, ತಾಮ್ರ, ನಿಕಲ್ ಮತ್ತು ಸತುವಿನಿಂದ ಕೂಡಿದ ಮಿಶ್ರ ಲೋಹದಿಂದ ತಯಾರಿಸಲಾಗುವುದು. ‘ಸತ್ಯಮೇವ ಜಯತೆ’ ಮತ್ತು ಭಾರತ ಮುದ್ರಿಸಲಾಗುವುದು. ಇನ್ನೊಂದು ಬದಿ ಚಾಣಕ್ಯ, ಕಮಲದ ಹೂ ಜತೆ ಜೇನುಹುಳ ಮುದ್ರಿಸಲಾಗಿರುತ್ತದೆ.
68. ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಮತ್ತು ಎಂಜಿನಿಯರ್ ಪವಿತ್ರಾ ಮಝಿ ಅವರನ್ನು ಇನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಲು ನಕ್ಸಲೀಯರು ಒಪ್ಪಿಕೊಂಡಿದ್ದಾರೆ ಎಂದು ಸಂಧಾನಕಾರ ಪ್ರೊ.ಹರಗೋಪಾಲ್ ಈ ಮೊದಲು ತಿಳಿಸಿದ್ದರು.
69. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
70. ಸಂಧ್ಯಾ ಸುರಕ್ಷಾ, ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿೆ, ನಿಶ್ಯಕ್ತ ವಿಧವಾ ಪಿಂಚಣಿ ಹಾಗೂ ಅಶಕ್ತ ಪಿಂಚಣಿ ಯೋಜನೆಗಳಿಗಾಗಿ ಸರ್ಕಾರವು 2011-12ನೇ ಸಾಲಿನಲ್ಲಿ ರೂ 1,742 ಕೋಟಿ ಹಣ ಒದಗಿಸಿದೆ.
71. ಸುಮಾರು 10,450 ಗ್ರಾಮ ಸಹಾಯಕರ ಗೌರವಧನವನ್ನು ರೂ 3,000ಗಳಿಂದ ರೂ 3,500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಏಪ್ರಿಲ್ 1ರಿಂದ ಜಾರಿಯಾಗಲಿದೆ.
72. ಸಚಿನ್ ಅವರ ಭಾನುವಾರದ ಶತಕ ಒಂದು ದಿನದ ಕ್ರಿಕೆಟ್‌ನಲ್ಲಿ 47ನೇಯದು. ಟೆಸ್ಟ್‌ಗಳಲ್ಲಿ ಅವರು 50 ಶತಕ ಹೊಡೆದಿದ್ದಾರೆ. ಅಂದರೆ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ತಲುಪಲು ಕೇವಲ ಮೂರು ಶತಕಗಳು ಬೇಕು.
73. ಒಟ್ಟು 17,777 ರನ್ ಗಳಿಸಿದ್ದಾರೆ. ಅವರು ಒಂದು ದಿನದ ಪಂದ್ಯಗಳಲ್ಲಿ ಮೊಟ್ಟಮೊದಲ ದ್ವಿಶತಕ ಗಳಿಸಿದ (ನ್ಯೂಜಿಲೆಂಡ್ ವಿರುದ್ಧ) ಮೊದಲ ಆಟಗಾರನೂ ಹೌದು.
74. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಾಡಲಿರುವ ಬಜೆಟ್ ಭಾಷಣವು ಸ್ವತಂತ್ರ ಭಾರತದ 80ನೇ ಬಜೆಟ್ ಭಾಷಣವಾಗಲಿದೆ.
75. 1947ರ ನವೆಂಬರ್ 26ರಂದು ದೇಶದ ಪ್ರಥಮ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಅವರು ಮೊಟ್ಟ ಮೊದಲ ಬಜೆಟ್ ಭಾಷಣ ಮಾಡಿದರು.
76. ಅತಿ ಹೆಚ್ಚು ಅಂದರೆ 10 ಬಾರಿ ಬಜೆಟ್ ಭಾಷಣ ಮಾಡಿದ ಕೀರ್ತಿ ಮೂರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಪಿ. ಚಿದಂಬರಂ, ಯಶವಂತ್ ಸಿನ್ಹಾ, ವೈ. ಬಿ. ಚವಾಣ್ ಮತ್ತು ಸಿ. ಡಿ. ದೇಶಮುಖ್ ಅವರು ತಲಾ 7 ಬಾರಿ ಬಜೆಟ್ ಮಂಡಿಸಿದ್ದಾರೆ.
77. ದೇಶದ ನಾಲ್ಕನೇ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಆರು ಬಾರಿ ಬಜೆಟ್ ಮಂಡಿಸಿದ್ದಾರೆ.
78. ಮುಖರ್ಜಿ ಅವರು ಸೋಮವಾರದ್ದು ಸೇರಿ ನಾಲ್ಕು ವಾರ್ಷಿಕ ಬಜೆಟ್ ಮತ್ತು 2009-10ರ ಮಧ್ಯಂತರ ಬಜೆಟ್ ಸೇರಿದಂತೆ ಐದು ಬಜೆಟ್ ಮಂಡಿಸಿದ ಕಿರ್ತಿಗೆ ಪಾತ್ರರಾಗಲಿದ್ದಾರೆ.
79. ಅಮೆರಿಕದ ಅಲಸ್ಕಾ ನಗರದ ಮಾಜಿ ಗವರ್ನರ್ ಮತ್ತು ರಿಪಬ್ಲಿಕನ್ ಪಕ್ಷದ ನಾಯಕಿ ಸಾರಾ ಪಾಲಿನ್ ಅವರು ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
80. ಭಾರತದ ದಿಗ್ಗಜ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 2010 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ನಲ್ಲಿ ಬಾರಿಸಿದ ಏಕದಿನ ದ್ವಿಶತಕ
81. ಕರ್ನಾಟಕದ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ರಣಜಿ ಪಂದ್ಯಾವಳಿಯಲ್ಲಿ 600 ವಿಕೆಟ್ ಸಾಧನೆಗೈದಿದ್ದಾರೆ.
82. ಭಾರತದ ರೋಹನ್ ಬೋಪಣ್ಣ ಮತ್ತು ಇಸಾಮ್ ಉಲ್ ಹಕ್ ಖುರೇಷಿ 2010 ಗ್ಯಾನ್ ಪ್ರಿ ಪೀಸ್ ಅಂಡ್ ಸ್ಪೋರ್ಟ್ಸ್ ಪ್ರಶಸ್ತಿ ಪಡೆದಿದ್ದಾರೆ.
83. ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ 2010ನೆಯ ಸಾಲಿನ ಹಾಂಕಾಂಗ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಜಯಿಸಿದರು .
84. ಬೆಂಗಳೂರು ಮಿಡ್ ನೈಟ್ ಮ್ಯಾರಾಥಾನ್ ಡಿಸೆಂಬರ್ 11 ರಂದು ನಡೆಯಿತು. ಪುರುಷರು ವಿಭಾಗದಲ್ಲಿ ಇಥಿಯೋಪಿಯಾ ದೇಶದ ಸೆಗಾಜ್ ಹಿಲುಫ್ ಮೊದಲ ಸ್ಥಾನ ಪಡೆದರು.
85. ಜರ್ಮನಿಯ ಫಾರ್ಮುಲಾ – 1 ಮೋಟಾರ್ ಕಾರ್ ರೇಸ್ ಪಟು ಸೆಬಾಸ್ಟಿಯನ್ ವೆಟ್ಟೆಲ್ 2010 ನೆಯ ಸಾಲಿನ ಇಂಟರ್ ನ್ಯಾಷನಲ್ ಆಟೋಮೊಬೈಲ್ ಫೆಡರೇಷನ್ ಪುರಸ್ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
86. ಭಾರತದ ಪ್ರತಿಭಾವಂತ ಶೂಟಿಂಗ್ ಪಟು ಗಗನ್ ನಾರಂಗ್ ಇತ್ತೀಚಿನ ರ್ಯಾಂಕಿಂಗ್ ನಂತೆ ಏಷ್ಯಾದ ನಂಬರ್ ಒನ್ ಪಟು ಎನಿಸಿದ್ದಾರೆ. 2845 ಅಂಕಗಳೊಂದಿಗೆ ಮೊದಲ ಶ್ರೇಯಾಂಕದಲ್ಲಿ ಇದ್ದರು .
87. ಅರ್ಜೇಂಟೀನಾದ ಫಾರ್ವರ್ಡ್ ಫುಟ್ಬಾಲ್ ರ್ ಲಿಯೋನೆಲ್ ಮೆಸ್ಸಿ ಕ್ಯಾಸ್ಟ್ರೋಲ್ ರ್ಯಾಂಕಿಂಗ್ ನಲ್ಲಿ ವಿಶ್ವದ ಅಗ್ರಮಾನ್ಯ ಕ್ಲಬ್ ಪಟು ಎನಿಸಿದ್ದಾರೆ. 1268 ಅಂಕಗಳೊಂದಿಗೆ
88. ವಿಯಟ್ನಾಂನ ಹೊ ಚಿ ಮಿನ್ ನಗರದಲ್ಲಿ ನಡೆದ ಸ್ಪರ್ದೇಯಲ್ಲಿ ಬೆಂಗಳೂರಿನ 20 ವರ್ಷದ ಸುಂದರಿ “ ನೆಕೋಲ್ ಫರಿಯಾ ಮಿಸ್ ಅರ್ಥ್ – 2010 ಕಿರೀಟ ಧರಿಸಿದ್ದಾರೆ. ” ಅಂತಿಮ ಸುತ್ತಿನಲ್ಲಿ “ ಬೆಲ್ಲಿ ನೃತ್ಯ ”ಪ್ರದರ್ಶಿಸಿ 17 ಸ್ಪರ್ದಿಗಳನ್ನು ಹಿಂದಿಕ್ಕಿದರು
89. ಮಿಸ್ ಅರ್ಥ್ ಸ್ಪರ್ದೇಯನ್ನು 2001 ರಿಂದ ಆಯೋಜಿಸಲಾಯಿತು.
90. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮೆಕ್ಸಿಕೋದ ಕ್ಯಾನ್ ಕಾನ್ ನಲ್ಲಿ ಡಿಸೆಂಬರ್ 11 ರಂದು ನಡೆಯಿತು.
91. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮುಂದಿನ ಸಭೆ 2011 ಡರ್ಬನ್ ನಲ್ಲಿ ನಡೆಯಲಿದೆ.
92. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ 2020 ರ ವೇಳೆಗೆ ಹಸಿರು ನಿಧಿಗೆ 100 ಶತಕೋಟಿ ಡಾಲರ್ ಕ್ರೂಡೀಕರಿಸುವ ಗುರಿ .
93. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆಯಲ್ಲಿ ಬೊಲಿವಿಯಾ ಮಾತ್ರ ವಿರೋಧಿಸಿದೆ.
94. ಮಹಿಳೆಯರಿಗೆ ಸಮಾನ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆ ಹೊಸದಾಗಿ ಸ್ಥಾಪಿಸಿರುವ ಮಂಡಳಿಗೆ ಭಾರತ ಆಯ್ಕೆಯಾಗಿದೆ. ( ಯು.ಎನ್.ವುಮೆನ್ ).
95. ಅಮೆರಿಕಾದ ಅತ್ಯಂತ ಪ್ರಮುಖ ನಾಗರಿಕ ಪ್ರಶಸ್ತಿಯಾದ ಸ್ವಾತಂತ್ರ್ಯ ಪ್ರಶಸ್ತಿಗೆ ಈ ಭಾರಿ ಜರ್ಮನ್ ಚಾನ್ಸ್ ಲರ್ ಏಂಜೆಲ್ ಮರ್ಕೆಲ್ ಹಾಗೂ ಅಮಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಿದೆ.
96. ಫೆ.19 ರಿಂದ 21 ರ ವರೆಗೆ ಗದಗದಲ್ಲಿ 76 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
97. 77 ನೇ ಸಾಹಿತ ಸಮ್ಮೇಳನದ ಅಧ್ಯಕ್ಷರಾಗಿ ಪ್ರೋ. ಜಿ.ವೆಂಕಟಸುಬ್ಬಯ್ಯ ಆಯ್ಕೆ .
98. ಕಲ್ಯಾಣ ಸಿಂಗ್ ರಿಂದ “ ಜನಕ್ರಾಂತಿ ” ಪಕ್ಷ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆ .
99. ಗೋವಾ – ಕರ್ನಾಟಕ ಷಟ್ಪಥ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ
100. 2010 ರ 61 ನೇ ಗಣರಾಜ್ಯೋತ್ಸವಕ್ಕೆ ದ.ಕೊರಿಯಾದ ಅಧ್ಯಕ್ಷ ಲೀ ಮಯಂಗ್ ಬಾಕ್ ಮುಖ್ಯ ಅತಿಥಿ
101. ಗಂಗಾನದಿಯಲ್ಲಿ ಹಡಗಿನೊಂದರ ಮೇಲೆ ಬಿಹಾರ ಸಚಿವ ಸಂಪುಟ ಸಭೆ
102. ರಂಗ ಕಲಾವಿದೆ ಬಿ.ಜಯಶ್ರೀ ರಾಜ್ಯಸಭೆಗೆ ನಾಮಕರಣ
103. ದೇಶದ ಅತಿ ಐಷಾರಾಮಿ ರೈಲು “ ಮಹಾರಾಜ” ಕ್ಕೆ ಮಮತಾ ಬ್ಯಾನರ್ಜಿ ಚಾಲನೆ
104. ಬ್ರಿಟಿಷ್ ಮ್ಯಾಗಜಿನ್ ಯೂರೋ ಮನಿಯ 2010 ಸಾಲಿನ ಅತ್ಯುತಮ ರಾಷ್ಟ್ರೀಯ ಬ್ಯಾಂಕ್ ಗವರ್ನರ್ ಪ್ರಶಸ್ತಿಯನ್ನು ಬ್ಯಾಂಕ್ ಆಫ್ ಇಸ್ರೇಲ್ ನ ಗವರ್ನರ್ ಸ್ಟ್ಯಾನ್ಲಿ ಫಿಶ್ಚರ್ ರಿಗೆ ನೀಡಲಾಗಿದೆ.
105. ಬಾರತದಲ್ಲಿ ಶೇ.4 ಮುಸ್ಲಿಂ ಮೀಸಲಿಗೆ ಸುಪ್ರೀಂಕೋರ್ಟ್ ಒಪ್ಪಿಗೆ .
106. 2010 ಪರಿಸರ ಪ್ರಗತಿ ಸೂಚ್ಯಂಕ ( ಇಪಿಐ) ದಲ್ಲಿ 123 ನೇ ಸ್ಥಾನ ಪಡೆದ ಭಾರತ
107. ಭಾರತದ ಪ್ರಧಾನಿ ಸಿಂಗ್ , ರಷ್ಯಾ ಪ್ರಧಾನಿ ಪುಟಿನ್ 12 ಅಣುಸ್ಥಾವರ ಸ್ಥಾಪನೆಗೆ ಸಹಿ
108. ಜಿನಿವಾದಲ್ಲಿ ಬಿಗ್ ಬ್ಯಾಂಗ್ ಯಶಸ್ವಿ
109. ಭೂತಾನ್ ನ ಥಿಂಪುವಿನಲ್ಲಿ 16 ನೇ ಸಾರ್ಕ್ ಶೃಂಗಸಭೆ
110. ಕೆನಾಡ ಮ್ಯೂಸಿಯಂನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಅನಾವರಣ
111. ಮದರ್ ಥೆರೆಸಾ ಅಂಚೆ ಚೀಟಿ ಬಿಡುಗಡೆ ಮಾಡಿದ ಅಮೆರಿಕ
112. ರಾಜಭಾಷಾ ( ವಿದಾಯ) ಆಯೋಗದ ಅಧ್ಯಕ್ಷರಾಗಿ ಬೇಲೂರು ಜವರಯ್ಯ ನೇಮಕ
113. ಸಾರ್ವಜನಿಕ ಲೆಕ್ಕಪತ್ರ ಸಮಿತಿ ( ಪಿಎಸಿ) ಅಧ್ಯಕ್ಷರಾಗಿ ಗೋಪಿನಾಥ ಮುಂಡೆ ನೇಮಕ
114. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕಿಯಾಗಿ ಮಾಜಿ ಸಚಿವೆ ಮೋಟಮ್ಮ ನೇಮಕ
115. ಐಯುಸಿಎ ಮುಖ್ಯಸ್ಥರಾಗಿ ಪ್ರೋ.ಬಿ.ಹನುಮಯ್ಯ ನೇಮಕ
116. ತೆರಿಗೆ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ದೇಶದಿಂದ ದೋಚಿದ ದುಡ್ಡು 36 ಸಾವಿರ ಕೋಟಿ (8 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದ್ದು, ಅವನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಿನಂತಹ ಕಠಿಣ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
117. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನವಿ ಪಿಳ್ಳೈ
118. ವಾಷಿಂಗ್ಟನ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಹಿಂದೂ ಗುರು ಪ್ರಕಾಶಾನಂದ ಸರಸ್ವತಿ ನಿಗದಿತ ಸಮಯಕ್ಕೆ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಆತನ ಬಂಧನಕ್ಕೆ ಕೋರ್ಟ್ ವಾರೆಂಟ್.
119. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿದ್ದು, ಆ ಸಂದರ್ಭದಲ್ಲಿ ಕನ್ನಡ ಭಾಷಾಭಿವೃದ್ಧಿಗೆ ವಿಶೇಷ ಕೊಡುಗೆಯಾಗಿ ಅದನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ
120. ದೇಶದ ಆರ್ಥಿಕತೆ 2022-25ರ ವೇಳೆಗೆ 5 ಸಾವಿರ ಕೋಟಿಯನ್ನು ತಲುಪಲಿದೆ ಎಂದು ರಿಯಲನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ಐಸಿಐಸಿಐ ಬ್ಯಾಂಕಿನ ಅಧ್ಯಕ್ಷ ಕೆ.ವಿ ಕಾಮತ್ ಇದನ್ನು ಅನುಮೋದಿಸಿದ್ದಾರೆ.

ಪ್ರಚಲಿತ ಘಟನೆಗಳು

1. ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ - ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು.
2. ಕರ್ನಾಟಕದಲ್ಲಿ ಅತಿ ದೊಡ್ಡ ಮೃಗಾಲಯ - ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು.
3. ಕರ್ನಾಟಕದಲ್ಲಿ ಅತಿ ದೊಡ್ಡ ವಿಗ್ರಹ - ಗೊಮ್ಮಟೇಶ್ವರ, ಶ್ರವಣಬೆಳಗೊಳ.
4. ಕರ್ನಾಟಕದಲ್ಲಿ ಅತಿ ದೊಡ್ಡ ಗುಮ್ಮಟ - ಗೋಲಗುಮ್ಮಟ, ವಿಜಾಪುರ.
5. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷಿಧಾಮ - ರಂಗನತಿಟ್ಟು, ಮಂಡ್ಯ.
6. ಕರ್ನಾಟಕದಲ್ಲಿ ಅತಿ ದೊಡ್ಡ ಬಂದರು - ನವಮಂಗಳೂರು ಬಂದರು, ಮಂಗಳೂರು.
7. ಕರ್ನಾಟಕದಲ್ಲಿ ಅತಿ ದೊಡ್ಡ ಹೊರಾಂಗಣ ಕ್ರೀಡಾಂಗಣ - ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
8. ಕರ್ನಾಟಕದಲ್ಲಿ ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ - ಕಂಠೀರವ ಕ್ರೀಡಾಂಗಣ, ಬೆಂಗಳೂರು
9. ಕರ್ನಾಟಕದಲ್ಲಿ ಅತಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ - ಶರಾವತಿ
10. ಕರ್ನಾಟಕದಲ್ಲಿ ಅತಿ ದೊಡ್ಡ ನೀರಾವರಿ ಯೋಜನೆ ಹೊಂದಿರುವ ನದಿ – ಕಾವೇರಿ.
11. ಕರ್ನಾಟಕದಲ್ಲಿ ಅತಿ ದೊಡ್ಡ ಪುಸ್ತಕ ಮಳಿಗೆ - ಸಪ್ನಾ ಬುಕ್ ಸ್ಟಾಲ್, ಬೆಂಗಳೂರು
12. ಕರ್ನಾಟಕದಲ್ಲಿ ಅತಿ ದೊಡ್ಡ ಕೆರೆ - ಶಾಂತಿಸಾಗರ (ಸೂಳೆಕೆರೆ), ಚನ್ನಗಿರಿ (ದ.ಭಾರತದ 2ನೇ ಅತಿ ದೊಡ್ಡ ಕೆರೆ)
13. ಕರ್ನಾಟಕದಲ್ಲಿ ಅತಿ ದೊಡ್ಡ ಆಲದಮರವಿರುವ ಊರು - ರಾಮೋಹಳ್ಳಿ, ಬೆಂಗಳೂರು
14. ಕರ್ನಾಟಕದಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ - ಹಾರೂಗೇರಿ, ರಾಯಬಾಗ ವಿ.ಸ.ಕ್ಷೇತ್ರ.
15. ಕರ್ನಾಟಕದಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ - ........., ಬೆಂಗಳೂರು
16. ಕರ್ನಾಟಕದಲ್ಲಿ ಅತಿ ದೊಡ್ಡ ಲೋಕಸಭಾ ಕ್ಷೇತ್ರ - ಬೆಂಗಳೂರು ಉತ್ತರ (ದೇಶದಲ್ಲಿ 2ನೇ ಅತಿ ದೊಡ್ಡ)
17. ಕರ್ನಾಟಕದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ - ಬೃ.ಬೆಂ.ಮ.ಪಾ. (ಚುನಾವಣಾ ಆಯೋಗ ಬೃ.ಬೆಂ.ಮ.ಪಾ.ಅನ್ನು ಚುನಾವಣಾ ಜಿಲ್ಲೆ ಎಂದು ಪರಿಗಣಿಸಿದೆ.)
18. ಕರ್ನಾಟಕದಲ್ಲಿ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ - ರಾಮನಗರ ಮಾರುಕಟ್ಟೆ, ರಾಮನಗರ
19. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಬೆಂಗಳೂರು ನಗರ
20. ಕರ್ನಾಟಕದಲ್ಲಿ ಅತಿ ಜನಸಂಖ್ಯೆ ಹೊಂದಿರುವ ನಗರ / ಜಿಲ್ಲೆ - ಬೆಂಗಳೂರು ನಗರ
21. ಕರ್ನಾಟಕದಲ್ಲಿ ಅತಿ ಹೆಚ್ಚು ಅನಕ್ಷರತೆ ಹೊಂದಿರುವ ಜಿಲ್ಲೆ - ರಾಯಚೂರು
22. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ ( 814.5 ಹೆಕ್ಟೇರು )
23. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ – ಆಗುಂಬೆ (ದೇಶದ 2ನೇ ಅತಿ ಹೆಚ್ಚು)
24. ಕರ್ನಾಟಕದಲ್ಲಿ ಅತಿ ಚಿಕ್ಕ ಜಿಲ್ಲೆ - ಬೆಂಗಳೂರು ನಗರ ಜಿಲ್ಲೆ
25. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ (131.5)
26. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ - ಕೊಡಗು
27. ಕರ್ನಾಟಕದಲ್ಲಿ ಅತಿ ಚಿಕ್ಕ ವಿಧಾನಸಭಾ ಕ್ಷೇತ್ರ -
28. ಕರ್ನಾಟಕದಲ್ಲಿ ಅತಿ ಚಿಕ್ಕ ಲೋಕಸಭಾ ಕ್ಷೇತ್ರ -
29. ಕರ್ನಾಟಕದಲ್ಲಿ ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ - ಉಡುಪಿ : ಚಿಕ್ಕಮಗಳೂರು
30. ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ – ಚಳ್ಳಕೆರೆ
31. ೧೯೬೩ - ಕನ್ನಡ ರಾಜ್ಯಭಾಷಾ ಅಧಿನಿಯಮ ಜಾರಿ.
32. ೧೯೬೮ - ತಾಲೂಕು ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
33. ೧೯೭೦ - ಉಪವಿಭಾಗ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
34. ೧೯೭೨ - ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
35. ೧೯೭೪ - ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
36. ೧೯೭೮ - ಸಿವಿಲ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ .
37. ೧೯೭೯ - ಸೆಷನ್ಸ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
38. ೧೯೮೦ - ಗೋಕಾಕ್ ಆಯೋಗ ರಚನೆ.
39. ೧೯೮೩ - ಕನ್ನಡ ಆಡಳಿತ ಭಾಷಾ ಸಮಿತಿ ರಚನೆ.
40. ೧೯೮೩ - ಸಚಿವಾಲಯದಲ್ಲಿ ಆಡಳಿತ ಕನ್ನಡ ಕಡ್ಡಾಯ.
41. ೧೯೮೪ - ಗಡಿ ಸಲಹಾ ಸಮಿತಿ ರಚನೆ.
42. ೧೯೮೪ - ಸರೋಜಿನಿ ಮಹಿಷಿ ಸಮಿತಿ ರಚನೆ.
43. ೧೯೮೫ - ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶ.
44. ೧೯೯೨ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ.
45. ೧೯೯೩ - ಕನ್ನಡ ಜಾಗೃತಿ ವರ್ಷಾಚರಣೆ.
46. ೧೯೯೫ - ಭಾ.ಆ.ಸೇ. (IAS) ಪರೀಕ್ಷೆಗೆ ಕನ್ನಡ ಪತ್ರಿಕೆ ಸೇರ್ಪಡೆ.
47. ೧೯೯೯ - ಕೆ.ಎ.ಎಸ್. (KAS) ಪರೀಕ್ಷೆಗೆ ಕನ್ನಡ ಕಡ್ಡಾಯ.
48. ೨೦೦೦ - ಗಡಿನಾಡು ಅಭಿವೃದ್ಧಿ ಅಧ್ಯಯನ ಆಯೋಗ ರಚನೆ
49. ೨೦೦೩ - ನಾಡಗೀತೆ ಅಧಿಕೃತ ನಿರ್ಧಾರ
50. ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ರಣಹದ್ದು ಸೌದಿ ಅರೇಬಿಯಾ ಗಡಿಯಲ್ಲಿ ಸಿಕ್ಕಿಬಿದ್ದಿದೆ.ಇಸ್ರೇಲ್ ಬೇಹುಗಾರಿಕಾ ಸಂಸ್ಥೆ ಮೊಸಾದ್‌ಗೆ ಸೇರಿದ ಈ ರಣಹದ್ದು ಟೆಲ್‌ಅವೀವ್ ವಿಶ್ವವಿದ್ಯಾಲಯದ ಲಾಂಛನವನ್ನು ಒಳಗೊಂಡ ಪಟ್ಟಿಯನ್ನು ಹೊಂದಿತ್ತು ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.
51. ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಹರ್ದೀಪ್ ಸಿಂಗ್ ಪುರಿ ಅವರು ಭಯೋತ್ಪಾದನಾ ನಿಗ್ರಹದ ಭದ್ರತಾ ಮಂಡಳಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
52. ಬ್ಯಾಂಕ್ ಶಾಖೆಗಳಿರದ ಗ್ರಾಮಗಳಲ್ಲಿ ಗ್ರಾಮೀಣ ವಿಕಾಸ ಕೇಂದ್ರಗಳ ಮೂಲಕ ಹಣಕಾಸು ಸೇವೆ ನೀಡುವ ವಿತ್ತೀಯ ಸೇರ್ಪಡೆಗೆ ಗಣನೀಯ ಕೊಡುಗೆ ನೀಡಿದ ಸಾಧನೆಗಾಗಿ ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್‌ಗೆ ‘ಸ್ಕೋಚ್ ವಿತ್ತೀಯ ಸೇರ್ಪಡೆ ಪ್ರಶಸ್ತಿ-2011’ ಲಭಿಸಿದೆ.
53. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಸರ್ವಶ್ರೇಷ್ಠ ಒಂದು ದಿನದ ಅಂತರರಾಷ್ಟ್ರೀಯ ತಂಡದಲ್ಲಿ ಆರಂಭಿಕ ಆಟಗಾರ ವಿಭಾಗದಲ್ಲಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ.
54. ಕೋಕ್ ತಂಪು ಪಾನೀಯ ಉತ್ಪಾದನಾ ಕಂಪೆನಿಯು ಐವತ್ತೊಂದು ಟೆಸ್ಟ್ ಶತಕಗಳ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಳ್ಳಲು ಮುಂದಾಗಿದೆ.ಮೂರು ವರ್ಷಗಳ ಅವಧಿಗೆ 20 ಕೋಟಿ ರೂಪಾಯಿ ಒಪ್ಪಂದದ ಪ್ರಸ್ತಾವವನ್ನು ‘ಮಾಸ್ಟರ್ ಬ್ಲಾಸ್ಟರ್’ ಮುಂದೆ ಇಟ್ಟಿದೆ.
55. ಪೂರ್ವ ಆಫ್ರಿಕಾದ ಉಗಾಂಡ ಮತ್ತು ಭಾರತದ ನಡುವೆ ಆರ್ಥಿಕ ಸಹಕಾರ ವೃದ್ಧಿಗೊಳ್ಳುತ್ತಿರುವಂತೆಯೇ ಕಂಪಾಲದಲ್ಲಿ ನೂತನ ರಾಯಭಾರಿಯನ್ನಾಗಿ ಎಸ್.ಎನ್.ರೇ ಅವರನ್ನು ಭಾರತ ನೇಮಕ ಮಾಡಿದೆ.
56. ಚೀನಾ ಮತ್ತು ಅಮೆರಿಕ ಜಂಟಿಯಾಗಿ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಆರ್ಡೊಸ್‌ನಲ್ಲಿ ಜಗತ್ತಿನ ಅತಿ ದೊಡ್ಡ ಸೌರ ಶಕ್ತಿ ಘಟಕವನ್ನು ಅಭಿವೃದ್ಧಿಪಡಿಸಲಿವೆ.
57. ಅಮೆರಿಕ ಮೂಲದ ರಿನಿವೇಬಲ್ ಎನರ್ಜಿ ಕಂಪೆನಿ ಮತ್ತು ಚೀನಾದ ಗಾಂಗ್‌ಡೌನ್ ಅಣು ಸೌರಶಕ್ತಿ ಕಂಪೆನಿಯ ಮಧ್ಯೆ ಈ ಬಗ್ಗೆ ಒಪ್ಪಂದ ಏರ್ಪಟ್ಟಿದೆ.
58. ಅಬ್ಬರದ ಬ್ಯಾಟಿಂಗ್‌ನಿಂದ ಎಲ್ಲಾ ಪ್ರಕಾರದ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿರುವ ಗೌತಮ್ ಗಂಭೀರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಭಾರಿ ಬೆಲೆಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾದರು..
59. ದೆಹಲಿಯ ಬ್ಯಾಟ್ಸ್‌ಮನ್ ಗಂಭೀರ್‌ಗೆ ರೂ.11.40 ಕೋಟಿ ಬೆಲೆ ತೆತ್ತು ಶಾರೂಖ್ ಖಾನ್ ಒಡೆತನದ ರೈಡರ್ಸ್ ಖರೀದಿ ಮಾಡಿತು.
60. ಟ್ವೆಂಟಿ-20 ಕ್ರಿಕೆಟ್‌ಗೆ ಅಗತ್ಯವಾದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಯೂಸುಫ್ ಪಠಾಣ್ ಹಾಗೂ ಕೊಡಗಿನ ‘ಬ್ಯಾಟಿಂಗ್ ಕಲಿ’ ರಾಬಿನ್ ಉತ್ತಪ್ಪ ಅವರು ಮೊದಲ ಸುತ್ತಿನಲ್ಲಿ ಬೆಲೆ ಏರಿಸಿಕೊಂಡ ಕ್ರಿಕೆಟಿಗರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ನಿಂತರು. ಇವರಿಬ್ಬರೂ ರೂ. 9.66 ಕೋಟಿಗೆ ಮಾರಾಟವಾದರು.
61. ತೀಸ್ತಾ ನದಿ ನೀರು ಹಂಚಿಕೆ ಕುರಿತು ಮಧ್ಯಂತರ ಒಪ್ಪಂದಕ್ಕೆ ಬರಲು ಬಾಂಗ್ಲಾದೇಶ ಮತ್ತು ಭಾರತವು ಸೋಮವಾರ ಮಾತುಕತೆ ಆರಂಭಿಸಿವೆ.
62. ತೀಸ್ತಾ ನದಿ ನೀರು ಹಂಚಿಕೆ ವಿವಾದವು 1952ರಿಂದಲೂ ಕಗ್ಗಂಟಾಗಿದೆ. ಈವರೆಗೂ ಎರಡೂ ದೇಶಗಳ ನಡುವೆ ಬರೀ ದಾಖಲೆ ಪತ್ರಗಳ ವಿನಿಮಯವಷ್ಟೆ ಆಗಿದೆ.
63. ಇಂಡಿಯನ್ ಪ್ರೀಮಿ ಯರ್ ಲೀಗ್ (ಐಪಿಎಲ್) ಟ್ವೆಂಟಿ- 20 ಕ್ರಿಕೆಟ್‌ನ ನಾಲ್ಕನೇ ಅವತರಣಿಕೆಯ ಟೂರ್ನಿಯಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿವೆ.
64. ನಾಲ್ಕನೇ ಋತುವಿನ ಟೂರ್ನಿಗೆ ಏಪ್ರಿಲ್ 8 ರಂದು ಚಾಲನೆ ಲಭಿಸಲಿದ್ದು, ಮೇ 28 ರಂದು ಕೊನೆಗೊಳ್ಳಲಿದೆ.
65. ಐಪಿಎಲ್ ಅಧ್ಯಕ್ಷ ಚಿರಾಯು ಅಮಿನ್.
66. ಸಾರಸ್ ಕೊಕ್ಕರೆ ತನ್ನ ವಿಶಿಷ್ಟ ಕೆಂಪು ತಲೆ, 6 ಅಡಿ ಎತ್ತರ, 8 ಅಡಿ ಗಾತ್ರದ ರೆಕ್ಕೆಗಳಿಂದಾಗಿ ‘ದೊಡ್ಡ ಪಕ್ಷಿ’ ಎಂದು ವಿಶ್ವದ ಗಮನ ಸೆಳೆದಿದೆ. ಕೊಕ್ಕರೆಗಳ 15 ತಳಿಗಳಲ್ಲಿ ಇದು ಅತಿ ದೊಡ್ಡ ಗಾತ್ರದ್ದಾಗಿದೆ.
67. ಮತದಾನದ ಕನಿಷ್ಠ ವಯೋಮಿತಿಯನ್ನು ಈಗಿನ 18ರಿಂದ 16 ವರ್ಷಕ್ಕೆ ಇಳಿಸುವ ಪ್ರಸ್ತಾವವನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವೈ.ಎಸ್.ಖುರೇಶಿ ತಿಳಿಸಿದ್ದಾರೆ.
68. ಭಾರತದ 15,000 ಬಡವರಿಗಾಗಿ ಬ್ರಿಟನ್ ರಾಜಕುಮಾರ ಚಾಲ್ಸ್ ಬೆಂಗಳೂರಿನಲ್ಲಿ ಅಥವಾ ಕೋಲ್ಕತ್ತದಲ್ಲಿ ಶಾಂತಿ ಪಟ್ಟಣ ಎಂಬ ಹೆಸರಿನ ಪರಿಸರ ಸ್ನೇಹಿ ಪಟ್ಟಣವೊಂದನ್ನು ನಿರ್ಮಿಸಲಿದ್ದಾರೆ.
69. ರಾಜಕುಮಾರ ಚಾರ್ಲ್ಸ್ ಅವರ ಈ ಯೋಜನೆಗೆ ಆಸ್ಕರ್ ಪುರಸ್ಕೃತ ಚಿತ್ರ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರವು ಸ್ಫೂರ್ತಿ ಎಂದು ಮಾಧ್ಯಮವೊಂದು ವರದಿ ಮಾಡಿದೆ.
70. ಬಹುಕೋಟಿ ವೆಚ್ಚದ ಈ ಯೋಜನೆಯ ಅಡಿಯಲ್ಲಿ 14 ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಪ್ರದೇಶದಲ್ಲಿ ಶಾಲೆಗಳು, ಅಂಗಡಿಗಳು ಮತ್ತು 3000 ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.
71. ಸ್ವಿಟ್ಜರ್‌ಲೆಂಡ್‌ನ ಡಾವೊಸ್‌ನಲ್ಲಿ ಜನವರಿ 26ರಿಂದ 30ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಬೆಂಗಳೂರು ಮೂಲದ 17ರ ಹರೆಯದ ಅಂಜಲಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
72. ಪ್ರಮುಖ ಪತ್ರಕರ್ತ ಎಂ.ಜೆ.ಅಕ್ಬರ್ ಅವರ ಟಿಂಡರ್‌ಬಾಕ್ಸ್- ‘ದಿ ಪಾಸ್ಟ್ ಅಂಡ್ ಫ್ಯೂಚರ್ ಆಫ್ ಪಾಕಿಸ್ತಾನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಸಂಜೆ ಮಾತನಾಡಿದ ಅಡ್ವಾಣಿ, ‘ಮತ್ತೆ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ’ ಎಂದು ಬಣ್ಣಿಸಿದರು.
73. ವಿಶ್ವಸಂಸ್ಥೆ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ನಿರ್ದೇಶಕರಾಗಿ ಕನ್ನಡಿಗ ಆಂಡಿ ಕೇಶವ ಶೆಣೈ ಅವರನ್ನು ನೇಮಕ ಮಾಡಲಾಗಿದೆ.
74. 2010-11ರ ಅವಧಿಯಲ್ಲಿ ರೈಲ್ವೆಯು ಸರಕು ಸಾಗಣೆಯಿಂದ 94,765 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದೂ ತಿಳಿಸಿವೆ.
75. .‘ಟ್ರೈನ್ ಸೆಟ್’ ಅಂದರೆ ರೈಲ್ವೆ ಎಂಜಿನ್ ಹಾಗೂ ಬೋಗಿಗಳು ಪರಸ್ಪರ ಸೇರಿಕೊಂಡಿರುವ ಹೊಸ ಶ್ರೇಣಿಯ ರೈಲುಗಳನ್ನು ದೇಶದಲ್ಲಿ ಪರಿಚಯಿಸುವ ವಿಚಾರವನ್ನು ಬಜೆಟ್ ಒಳಗೊಳ್ಳಲಿರುವ ಸಾಧ್ಯತೆ ಇದೆ.
76. ವಿದೇಶಗಳಲ್ಲಿರುವ 462 ಶತಕೋಟಿ ಡಾಲರ್ ಕಪ್ಪುಹಣವನ್ನು ಮರಳಿ ತಂದರೆ ಅದರಿಂದ ದೇಶದ ಪರಿಸ್ಥಿತಿಯಲ್ಲಿ ಅದ್ಭುತವೆನಿಸುವ ಬದಲಾವಣೆ ತರಲು ಸಾಧ್ಯ.
77. ಸಿಮಿ’ ಎಂದರೆ ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ ಎಂದರ್ಥ.
78. ಭಾರತಕ್ಕೆ ಬೇಕಾಗಿರುವ ನೌಕಾ ಯುದ್ಧ ತಂತ್ರ ಮಾಹಿತಿ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ನೌಕಾದಳದ ನಿವೃತ್ತ ಮುಖ್ಯಸ್ಥ ಅರುಣ್ ಪ್ರಕಾಶ್ ಅವರ ಬಂಧು ರವಿ ಶಂಕರನ್ ವಿಚಾರಣೆ ಜ.19ರಂದು ಲಂಡನ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸಿಬಿಐನ ಇಬ್ಬರು ಅಧಿಕಾರಿಗಳು ಭಾನುವಾರ ಲಂಡನ್‌ಗೆ ಪ್ರಯಾಣ ಬೆಳೆಸಿದರು.
79. ‘ರಾಷ್ಟ್ರೀಯ ದಿನದಂದು ಕುವೈತ್ ನಗರದಲ್ಲಿ ದೊರೆ ಶೇಖ್ ಸಬಾ ಅಲ್ ಅಹ್ಮದ್ ಅಲ್ ಸಭಾ ಅವರ ಆಶ್ರಯದಲ್ಲಿ ನಡೆಯಲಿರುವ ಸೇನಾ ಪೆರೇಡ್‌ನಲ್ಲಿ 2000 ಮೀಟರ್ ಉದ್ದದ ಧ್ವಜ ಅನಾವರಣಗೊಳ್ಳಲಿದೆ’ಎಂಬ ಸ್ವಯಂ ಸೇವಾ ಕೇಂದ್ರದ ಅಧ್ಯಕ್ಷ ಶೇಖಾ ಅಮ್ತಾಲ್ ಅಲ್ ಅಹ್ಮದ್ ಅಲ್ ಸಬಾ.
80. ವಿಧಾನ ಪರಿಷತ್‌ನ ನೂತನ ಉಪ ಸಭಾಪತಿಯಾಗಿ ಬಿಜೆಪಿಯ ಹಿರಿಯ ಸದಸ್ಯೆ ವಿಮಲಾಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
81. ವಿಮಲಾಗೌಡ ಅವರು ವಿಧಾನ ಪರಿಷತ್‌ನ ಉಪ ಸಭಾಪತಿ ಹುದ್ದೆಗೇರುತ್ತಿರುವ ಮೂರನೇ ಮಹಿಳೆ. ಈ ಹಿಂದೆ ಎಂ.ಆರ್.­ಲಕ್ಷ್ಮಮ್ಮ ಮತ್ತು ರಾಣಿ ಸತೀಶ್ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
82. ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳ ಸಹಾಯಕ್ಕಾಗಿ ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ‘ವಿಪತ್ತು ನಿರ್ವಹಣಾ ತಂಡವನ್ನು’ ನಿಯೋಜಿಸಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
83. ದೂರ ಸಂಪರ್ಕ ಸಚಿವಾಲಯ ದೂರವಾಣಿ ಕದ್ದಾಲಿಕೆ ಪ್ರಕರಣಗಳಿಗೆ ವಿಧಿಸುವ ದಂಡವನ್ನು ರೂ 500 ರಿಂದ ರೂ 2 ಕೋಟಿಗೆ ಏರಿಸುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ.
84. ಕೇಂದ್ರ ಜಾಗೃತ ಆಯುಕ್ತರಾಗಿ ಪಿ.ಜೆ.ಜೋಸೆಫ್ ಅವರ ನೇಮಕವನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
85. ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇನ್‌ಫ್ರಾ ಮತ್ತು ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ (ಆರ್‌ಎನ್‌ಆರ್‌ಎಲ್) ಕಂಪೆನಿಗಳಿಗೆ ತನಿಖೆ ಇತ್ಯರ್ಥ ಪಡಿಸಲು ‘ಸೆಬಿ’ ರೂ 50 ಕೋಟಿ ದಂಡ ವಿಧಿಸಿದೆ.
86. ಮೊದಲ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆದಾಗ ಸರ್ಕಾರ 91 ಕೋಟಿ ರೂಪಾಯಿಯನ್ನು ಆದಾಯದಲ್ಲಿನ ಮೂಲ ತೆರಿಗೆ ರೂಪದಲ್ಲಿ ಹಣ ಪಡೆದಿತ್ತು. ಮೂರನೇ ಆವೃತ್ತಿಯಲ್ಲಿ ಸರ್ಕಾರ ಮೂಲ ರೂಪದಲ್ಲಿಯೇ 400 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯನ್ನು ಪಡೆದುಕೊಂಡಿತ್ತು.
87. ಇಂಡಿಯನ್ ಪ್ರೀಮಿಯರ್ ಲೀಗ್‌ನ ನಾಲ್ಕನೇ ಅವತರಣಿಕೆಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ 300 ಕೋಟಿ ರೂಪಾಯಿಗೂ ಹೆಚ್ಚು ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಬಹುದು ಎಂದು ಸರ್ಕಾರ ನಿರೀಕ್ಷೆ ಮಾಡಿದೆ.
88. ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಮಹಾನಿರ್ದೇಶಕ ಯೂಕಿಯಾ ಅಮನೊ.
89. ಜಗತ್ತಿನಲ್ಲಿ ಈಗ 61 ಅಣು ಸ್ಥಾವರಗಳು ನಿರ್ಮಾಣವಾಗುತ್ತಿದ್ದು, ಅದರಲ್ಲಿ 39 ಸ್ಥಾವರಗಳು ಏಷ್ಯಾದಲ್ಲೇ ಇವೆ ಎಂದರು.
90. 2030ರ ವೇಳೆಗೆ ಹೊಸದಾಗಿ 10-25ರಾಷ್ಟ್ರಗಳು ಅಣು ಶಕ್ತಿ ಹೊಂದುವ ನಿರೀಕ್ಷೆ ಇದೆ. ಇಂತಹ ರಾಷ್ಟ್ರಗಳು ಏಷ್ಯಾದಲ್ಲೇ ಹೆಚ್ಚಾಗಿರುತ್ತವೆ. ಭಾರತ, ಚೀನಾ, ಜಪಾನ್ ಮತ್ತು ಕೊರಿಯಾ ಗಣರಾಜ್ಯಗಳು ಸಹ ತಮ್ಮ ಅಣು ಶಕ್ತಿ ಯೋಜನೆಯನ್ನು ವಿಸ್ತರಿಸಲಿವೆ.
91. ಟ್ಯುನಿಸ್‌ನ ಉಚ್ಚಾಟಿತ ಅಧ್ಯಕ್ಷ ಜಿನೆ ಎಲ್ ಅಬಿದಿನೆ ಅಲಿ ಅವರ ಪತ್ನಿ ದೇಶದಿಂದ ಪರಾರಿಯಾಗುವ ಮೊದಲು ಕೇಂದ್ರ ಬ್ಯಾಂಕಿನಿಂದ 1.5 ಟನ್ ಚಿನ್ನವನ್ನು ಒಯ್ದಿದ್ದಾರೆ ಎಂದು ಫ್ರಾನ್ಸ್‌ನ ಪತ್ರಿಕೆಯೊಂದು ವರದಿ ಮಾಡಿದೆ.
92. ಇಪ್ಪತ್ತೈದರ ಹರೆಯದ ಇಬ್ಬರು ಮಕ್ಕಳ ತಾಯಿ ಆಸ್ಮಾ ಎಂಬವರು ತಮ್ಮ ಪುಟಾಣಿ ಮಕ್ಕಳೊಂದಿಗೆ 1ನೇ ತರಗತಿಗೆ ಸೇರಿದ ವಿಲಕ್ಷಣ ಪ್ರಸಂಗ ಪಂಜಾಬ್ ಪ್ರಾಂತ್ಯದ ಮಿಯಾನ್‌ವಲಿಯಲ್ಲಿ ನಡೆದಿದೆ.
93. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2009-10ನೇ ಹಣಕಾಸು ವರ್ಷದಲ್ಲಿ ಕಾಮಗಾರಿ ಸಂಕೇತ (ವರ್ಕ್ ಕೋಡ್) ನೀಡುವಾಗ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧನೆಯಲ್ಲಿ ದೃಢಪಟ್ಟಿದೆ.
94. ಸ್ವಿಟ್ಜರ್ಲೆಂಡ್ ಮೂಲದ ಕೇಮನ್ ದ್ವೀಪದಲ್ಲಿರುವ ಬ್ಯಾಂಕ್ ಜ್ಯೂಲಿಯಸ್ ಬಿಯರ್‌ನ ಮಾಜಿ ಉದ್ಯೋಗಿ ರುಡಾಲ್ಫ್ ಎಲ್ಮೆರ್ ಅವರು ಸೋಮವಾರ ಇಲ್ಲಿ ಬಹಿರಂಗವಾಗಿಯೇ ಅಸಾಂಜ್ ಅವರನ್ನು ಭೇಟಿ ಮಾಡಿ 2,000 ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಮಾಹಿತಿಗಳು ಇರುವ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಿದರು.
95. 1990ರಿಂದ 2009ರ ತನಕ ಅಮೆರಿಕ, ಬ್ರಿಟನ್, ಜರ್ಮನಿ, ಏಷ್ಯಾ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ ಮಾಹಿತಿಗಳು ಇದರಲ್ಲಿವೆ. ಹೀಗೆ ಕಪ್ಪು ಹಣವನ್ನು ಗೋಪ್ಯವಾಗಿ ಇಟ್ಟವರಲ್ಲಿ ಗಣ್ಯ ವ್ಯಕ್ತಿಗಳು, ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ ಎಂದು ಸ್ವಿಸ್ ಪತ್ರಿಕೆ ‘ಡೆರ್ ಸೊನ್‌ಟಾಗ್’ ಹೇಳಿದೆ.
96. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲ್ಡೀವ್ಸ್‌ನ 36ರ ಹರೆಯದ ವಕೀಲೆ ಫಾತಿಮಾತ್ ಧಿಯಾನಾ ಸಯೀದ್ ಮಾರ್ಚ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
97. ಹಾಲಿ ಪ್ರಧಾನ ಕಾರ್ಯದರ್ಶಿ ಭಾರತದ ರಾಜತಾಂತ್ರಿಕ ಶೀಲಕಾಂತ್ ಶರ್ಮಾ ಅವರ ಅಧಿಕಾರ ಅವಧಿ ಫೆ. 28ಕ್ಕೆ ಕೊನೆಗೊಳ್ಳಲಿದ್ದು,
98. ನವೆಂಬರ್ 10-11ರಂದು ಮಾಲ್ಡೀವ್ಸ್‌ನಲ್ಲಿ 17ನೇ ಸಾರ್ಕ್ ಸಮಾವೇಶ ನಡೆಯಲಿದ್ದು, ಅದನ್ನು ನಿಭಾಯಿಸುವ ಪ್ರಮುಖ ಹೊಣೆಗಾರಿಕೆ ಫಾತಿಮಾ ಅವರ ಮೇಲಿದೆ.
99. ನಗರದ ಜೆ.ಪಿ.ನಗರ 24ನೇ ಮುಖ್ಯರಸ್ತೆ ಮತ್ತು 15ನೇ ಅಡ್ಡರಸ್ತೆ ಕೂಡುವ ಜಂಕ್ಷನ್‌ನಲ್ಲಿ ಬಿಬಿಎಂಪಿ ನೂತನವಾಗಿ ನಿರ್ಮಿಸಿರುವ ‘ಜಿ.ಆರ್.ವಿಶ್ವನಾಥ್ ಅಂಡರ್‌ಪಾಸ್’
100. ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಎಫ್) ಮಾನ್ಯತೆ ರದ್ದುಗೊಳಿಸಿರುವ ಕೇಂದ್ರ ಸರ್ಕಾರಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿರುಗೇಟು ನೀಡಿದೆ. ‘ನಮ್ಮದು ಸ್ವಾಯತ್ತ ಸಂಸ್ಥೆ. ಐಸಿಸಿ ಮಾನ್ಯತೆ ಹೊಂದಿದ್ದೇವೆ.
101. 2010 ಅನ್ನು ಯಾವುದೇ ಗೊಂದಲವಿಲ್ಲದೆ ‘ಅಪ್ಲಿಕೇಷನ್ ವರ್ಷ’ ಎಂದು ಮೊಬೈಲ್ ಜಗತ್ತು ಕರೆದುಬಿಟ್ಟಿದೆ.
102. ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್,
103. ಪಟ್ನಾ: ಇಲ್ಲಿನ ಬಂಕಾ ಜಿಲ್ಲೆಯ ಗ್ರಾಮವೊಂದರ ಜನರು ಕೇಂದ್ರ ಕೃಷಿ ಸಚಿವರ ವಿರುದ್ಧ ಯಾವುದೇ ಗೊಣಗಾಟ ನಡೆಸಿಲ್ಲ. ಕಾರಣ, ಇವರು ಈರುಳ್ಳಿಯನ್ನೇ ಬಳಸುವುದಿಲ್ಲ. ಈ ಗ್ರಾಮದ ಜನರು ಕಳೆದ 200 ವರ್ಷಗಳಿಂದಲೂ ಈರುಳ್ಳಿಯನ್ನು ಉಪಯೋಗಿಸಿಲ್ಲ. ಅಮರ್‌ಪುರ್ ಬ್ಲಾಕ್‌ನ ಭಿಮ್‌ಸೆನ್ ಗ್ರಾಮದಲ್ಲಿ
104. ‘ಮಂತ್ರಿ ಮಂಡಲದ ನಿರ್ಣಯವನ್ನು ಬದಿಗೊತ್ತಿ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ’ ಎಂದು 2004ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣಪೀಠ ತೀರ್ಪು ನೀಡಿದೆ.
105.
106. 2010ರ ಆಗಸ್ಟ್ 30ರಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಸ್ವಿಸ್ ಕೌನ್ಸಿಲರ್ ಮಿಚೆಲಿನ್ ಕಾಲ್‌ಮಿರೇ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸ್ವಿಸ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವ ಅಧಿಕಾರ ಸಹಿತ ಹಲವು ತೆರಿಗೆ ವಂಚನೆ ತಡೆ ಕ್ರಮಗಳು ಈ ಒಪ್ಪಂದದಲ್ಲಿ ಇದ್ದು, ವಾಸ್ತವವಾಗಿ ಕಳೆದ ಜನವರಿ 1ರಿಂದಲೇ ಒಪ್ಪಂದ ಜಾರಿಗೆ ಬರಬೇಕಿತ್ತು.
107. ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್.ಅಶೋಕ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ‘ಜಸ್ಟೀಸ್ ಲಾಯರ್ಸ್‌ ಫೋರಂ’ ಮಾಡಿರುವ ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಸರ್ಕಾರ ಮನವಿ ಮಾಡಿದೆ.
108. ರಾಜಕೀಯ ಪ್ರಕ್ರಿಯೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ಗಣರಾಜ್ಯೋತ್ಸವದ ಮುನ್ನಾದಿನ, ಅಂದರೆ ಜ.25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
109. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್‌ಗೆ ಅಂಕಿ ಅಂಶಗಳ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಲು ಸೋಮವಾರ ಲಂಡನ್‌ಗೆ ತೆರಳಿದ್ದ ಸ್ವಿಸ್ ಬ್ಯಾಂಕ್ ಉದ್ಯೋಗಿ ರುಡಾಲ್ಫ್ ಎಲ್ಮರ್ ಅವರನ್ನು ಬುಧವಾರ ಸಂಜೆ ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಇಲ್ಲಿನ ಮುಖ್ಯ ಅಭಿಯೋಜಕ ಪೀಟರ್ ಪೆಲ್ಲೆಗ್ರಿನಿ ಗುರುವಾರ ತಿಳಿಸಿದ್ದಾರೆ.
110. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಆಗಿ ಆನಂದ್ ಸಿನ್ಹಾ ಅಧಿಕಾರ ಸ್ವೀಕರಿಸಿದ್ದಾರೆ. ಫೆಬ್ರುವರಿ 28, 2013ರ ವರೆಗೆ ಅವರ ಅಧಿಕಾರ ಅವಧಿ ಇರಲಿದೆ.
111. ಭಾರದ್ವಾಜ್, ‘ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಉಲ್ಟಾ ಚೋರ್ ಕೊತ್ವಾಲ್ ಕೊ ಡಾಂಟಾ (ಕಳ್ಳನೇ ಪೊಲೀಸರನ್ನು ನಿಂದಿಸಿದಂತೆ) ಎಂಬಂತಾಗಿದೆ.
112. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಭಾಗವಹಿಸಲಿದ್ದು ಇದೇ ಸಂದರ್ಭದಲ್ಲಿ ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಾಗಿ ಕ್ರಿಸ್ಟಲ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
113. ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಭದ್ರತಾ ಪಡೆಗಳಿಗೆ ಶೀಘ್ರವೇ ಆಮದು ಮಾಡಿಕೊಂಡ ‘ಬೆಲ್ಜಿಯಂ ಷೆಫರ್ಡ್ ಶ್ವಾನ’ಗಳು ನೆರವಾಗಲಿವೆ.
114. ಕಾಬೂಲ್‌ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ ಮೇಜರ್ ಲೈಶ್ರಮ್ ಜ್ಯೋತಿನ್ ಸಿಂಗ್ ಅವರಿಗೆ ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ನೀಡಲಾಗುತ್ತಿದೆ. ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಲಾಗುತ್ತಿದೆ.
115. ಚೀನಾಕ್ಕೆ ಅಮೆರಿಕದಿಂದ ವರ್ಷಕ್ಕೆ 100 ಶತಕೋಟಿ ಡಾಲರ್‌ಗೂ ಅಧಿಕ ಮೊತ್ತದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಲು ಒಪ್ಪಂದ ಮಾಡಲಾಗಿದೆ.
116. ಜಸ್ಟೀಸ್ ಲಾಯರ್ಸ್ ಫೋರಂನ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’
117. ಅಟಾರ್ನಿ ಜನರಲ್ ಜಿ. ವಹನ್ವತಿ,.
118. ವಿಶ್ವ ಆರ್ಥಿಕ ಒಕ್ಕೂಟದ (ಡಬ್ಲ್ಯುಇಎಫ್) ‘ಕ್ರಿಸ್ಟಲ್’ ಪ್ರಶಸ್ತಿಗೆ ಭಾರತೀಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಪಾತ್ರರಾಗಿದ್ದಾರೆ.
119. ಕ್ಯಾನ್ಸರ್ ರೋಗಿಗಳಿಗಾಗಿ ಶ್ರಮಿಸಿದ ಬಾರ್ಸಿಲೋನಾದ ಕಲಾವಿದ ಜೋಸ್ ಕ್ಯಾರಿರಾಸ್ ಅವರಿಗೂ ‘ಕ್ರಿಸ್ಟಲ್’ ಪ್ರಶಸ್ತಿ ನೀಡಲಾಗಿದೆ.
120. ಭಾರತೀಯ ಮೂಲದ ವೈದ್ಯ ವಿವೇಕ್ ಮೂರ್ತಿ ಅವರನ್ನು ಸಾರ್ವಜನಿಕ ಆರೋಗ್ಯ ಸಂಬಂಧಿತ ಸಲಹಾ ಸಮಿತಿಗೆ ನೇಮಿಸಲಾಗಿದ್ದು, ಕೃಷಿ ವಿಜ್ಞಾನಿ ಇಸ್ಲಾಂ ಎ.ಸಿದ್ದಿಕಿ ಅವರನ್ನು ಮುಖ್ಯ ಕೃಷಿ ಸಂಧಾನಕಾರರಾಗಿ ಮರುನೇಮಕ ಮಾಡಲಾಗಿದೆ.
121. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ಫೆಬ್ರುವರಿ 19ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್‌ನ ಸಮಗ್ರ ಮಾಹಿತಿಯನ್ನು ನೀಡುವ ಅಧಿಕೃತ ವೆಬ್‌ಸೈಟ್ ಅನ್ನು ‘ಯಾಹೂ’ ಸಹಯೋಗದಲ್ಲಿ ರೂಪಿಸಿದೆ iccevents.yahoo.com ಗೆ ಗುರುವಾರ ಚಾಲನೆ ನೀಡಲಾಯಿತು.
122. ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗಾಗಿ ಆಯೋಜಿಸಲಾಗುತ್ತಿರುವ ‘ಇಂಡಿಯಾ ಟ್ರೋಫಿ’ ಟ್ವೆಂಟಿ-20 ಕ್ರಿಕೆಟ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು,
123. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 27 ಸರ್ಕಾರಿ ಅಧಿಕಾರಿಗಳೂ ಸೇರಿದಂತೆ 62 ಮಂದಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ.
124. ಐದನೇ ಪೀಳಿಗೆಯ ಯುದ್ಧ ವಿಮಾನ ಎಫ್- 35 ಖರೀದಿಗೆ ಭಾರತ ಮುಂದಾಗಬಹುದು ಎಂಬ ಭಾರಿ ನಿರೀಕ್ಷೆಯನ್ನು ಅಮೆರಿಕ ಹೊಂದಿದೆ.
125. 10 ಶತಕೋಟಿ ಡಾಲರ್ ಮೌಲ್ಯದ 126 ವಿಮಾನಗಳಿಗೆ ಭಾರತ ಟೆಂಡರ್‌ದಾರನಾಗಿದೆ. ಎಂಟು ದೇಶಗಳು ಮತ್ತು ಆರು ಕಂಪೆನಿಗಳು ಈ ಕುರಿತ ಆಯ್ಕೆ ಪ್ರಕ್ರಿಯೆಯನ್ನು ಕಾತರದಿಂದ ಎದುರು ನೋಡುತ್ತಿವೆ.
126. ಸೌರವ್ಯೆಹದ ಹೊರಗಡೆ ಸೂರ್ಯನಂತಹ ಬೇರೆ ನಕ್ಷತ್ರಕ್ಕೆ ಸುತ್ತು ಹಾಕುತ್ತಿರುವ ಈ ‘ಬಿಸಿ ಗ್ರಹ’ವನ್ನು ‘ವ್ಯಾಸ್ಪ್-33ಬಿ’ ಅಥವಾ ‘ಎಚ್‌ಡಿ 15082’ ಎಂದು ಗುರುತಿಸಲಾಗಿದೆ.
127. ಬ್ರಿಟನ್‌ನ ಕೀಲ್ ವಿಶ್ವವಿದ್ಯಾಲಯದ ಅಲೆಕ್ಸಿಸ್ ಸ್ಮಿತ್ ನೇತೃತ್ವದ ತಂಡ ಈ ಗ್ರಹವನ್ನು ಗುರುತಿಸಿದೆ. ಕ್ಯಾನೆರಿ ದ್ವೀಪದಿಂದ ‘ವಿಲಿಯಂ ಹಾರ್ಷಲ್’ ದೂರದರ್ಶಕ ಇದನ್ನು ಪತ್ತೆ ಮಾಡಿದೆ. ವ್ಯಾಸ್ಪ್ ಗ್ರಹದಿಂದ ಹೊರಹೊಮ್ಮುತ್ತಿದ್ದ ಶಾಖವನ್ನು ಅತಿನೇರಳೆ ಕಿರಣ ದಾಖಲಿಸುವ ಕ್ಯಾಮೆರಾಗಳಿಂದ ಪತ್ತೆಮಾಡಲಾಯಿತು.
128. ‘ವ್ಯಾಸ್ಪ್-33ಬಿ’ ಗ್ರಹದ ಉಷ್ಣತೆ 3,200 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಸುತ್ತುಹಾಕುವ ನಕ್ಷತ್ರದ ಉಷ್ಣತೆ 7160 ಡಿಗ್ರಿ ಸೆಲ್ಸಿಯಸ್ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
129. ಸೌರವ್ಯೆಹದ ಅತಿದೊಡ್ಡ ಗ್ರಹ ಗುರುವಿಗಿಂತ ನಾಲ್ಕೂವರೆ ಪಟ್ಟು ದೊಡ್ಡದಾಗಿರುವ ವ್ಯಾಸ್ಪ್, ಸೂರ್ಯನ ನಿಕಟವರ್ತಿ ಗ್ರಹ ಬುಧನಿಗಿಂತ ತನ್ನ ನಕ್ಷತ್ರಕ್ಕೆ ಹತ್ತಿರದಲ್ಲಿದೆ.
130. ವ್ಯಾಸ್ಪ್ ಗ್ರಹ ಸುತ್ತುಹಾಕುವ ನಕ್ಷತ್ರದ ಉಷ್ಣತೆಯನ್ನು (7160 ಸೆ.) ಗಮನಿಸಿದರೆ ನಮ್ಮ ಸೂರ್ಯನ ಉಷ್ಣತೆ (5600 ಸೆ.) ತೀರಾ ಕಡಿಮೆ ಎಂದನಿಸಬಹುದು.
131. ನಮ್ಮ ಆಕಾಶಗಂಗೆ ತಾರಾಗಣದಲ್ಲಿ ಈ ಮುನ್ನ ಅತಿ ಬಿಸಿಯ ಗ್ರಹ ಎಂದು ಗುರುತಿಸಲಾಗಿದ್ದ ‘ವ್ಯಾಸ್ಪ್12ಬಿ’ ಗ್ರಹದ ಉಷ್ಣತೆಗಿಂತ 900 ಸೆಲ್ಸಿಯಸ್ ಹೆಚ್ಚು ಶಾಖವನ್ನು ಹೊಂದಿದೆ.
132. ಚೀನಾದಲ್ಲಿ ಹೊಸ ವರ್ಷದ ಆಚರಣೆ ಅಂಗವಾಗಿ ಪಂಚತಾರಾ ಹೋಟೆಲೊಂದು ಈ ವಿಶೇಷ ಔತಣಕ್ಕಾಗಿ 3,88,888 ಯುವಾನ್ (59 ಸಾವಿರ ಅಮೆರಿಕನ್ ಡಾಲರ್) ನಿಗದಿಪಡಿಸಿದೆ.ಚಾಂದ್ರಮಾನ ಕ್ಯಾಲೆಂಡರ್‌ನಂತೆ ಚೀನಾದಲ್ಲಿ ಫೆಬ್ರುವರಿ 2ರಂದು ಹೊಸ ವರ್ಷಾಚರಣೆ ನಡೆಯುತ್ತದೆ.
133. 2009ನೇ ಸಾಲಿನ ಕ್ಯಾಸ್ಟ್ರಾಲ್ ‘ವರ್ಷದ ಶ್ರೇಷ್ಠ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾದ ಸಚಿನ್ ತೆಂಡೂಲ್ಕರ್.
134. ಈಜಿಪ್ಟ್ ವಿದ್ಯಮಾನವನ್ನು ದಿನವಿಡೀ ಪ್ರಸಾರ ಮಾಡುತ್ತಿದ್ದ ಅಲ್ ಜಜೀರಾ ಟಿವಿ ಚಾಲೆನ್‌ನ ಪ್ರಸಾರಕ್ಕೆ ಹೊಸ್ನಿ ಮುಬಾರಕ್ ಆಡಳಿತ ಭಾನುವಾರದಿಂದ ನಿಷೇಧ ಹೇರಿದೆ.
135. ಉಚಿತ ಸಂಖ್ಯೆ 54321ಕ್ಕೆ JOIN ಎಂದು ಸಂದೇಶ ಕಳುಹಿಸುವ ಮೂಲಕ ಗ್ರಾಹಕರು ರಕ್ತ ಸಹಾಯವಾಣಿ ಕ್ಲಬ್‌ಗೆ ಸೇರಬಹುದು. ತುರ್ತು ಸಂದರ್ಭದಲ್ಲಿ ಗ್ರಾಹಕರು 54321ಕ್ಕೆ NEED ಎಂದು ಸಂದೇಶ ಕಳುಹಿಸಿ ಲಾಭ ಪಡೆಯಬಹುದು.
136. ಟ್ರೈ ವ್ಯಾಲಿ’ ವಿಶ್ವವಿದ್ಯಾಲಯದಿಂದ ವಂಚನೆಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೊ ಕಾಲರ್ ಅಳವಡಿಸಿರುವ ತನ್ನ ಕ್ರಮವನ್ನು ಅಮೆರಿಕ ಸೋಮವಾರ ಸಮರ್ಥಿಸಿಕೊಂಡಿದೆ.
137. ದೂರಸಂಪರ್ಕ ಕಾರ್ಯದರ್ಶಿಯಾಗಿದ್ದ ಸಿದ್ಧಾರ್ಥ ಬೇಹೂರ, ಅವರ ಸಹಾಯಕ ಆರ್.ಕೆ.ಚಂದೋ ಲಿಯಾ ಮತ್ತಿತರರನ್ನು ಸಮಿತಿ ಹೊಣೆ ಮಾಡಿದೆ ಎಂದು ಹೇಳಲಾಗಿದೆ.
138. . 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿನ ಲೋಪಗಳ ತನಿಖೆಯ 1300 ಪುಟಗಳ ದಾಖಲೆಯನ್ನು ಒಳಗೊಂಡ 150 ಪುಟಗಳ ವರದಿಯನ್ನು ಪಾಟೀಲ್ ಸಲ್ಲಿಸಿದ್ದಾರೆ.
139. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿನ ಲೋಪಗಳಲ್ಲಿ ನೀರಾ ರಾಡಿಯಾ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಮಾಜಿ ಮುಖ್ಯಸ್ಥ ಪ್ರದೀಪ್ ಬೈಜಾಲ್, ಸಿದ್ಧಾರ್ಥ ಬೇಹೂರ, ಡಿ.ಎಸ್.ಮಾಥುರ್ ಮತ್ತಿತರರ ವಿಚಾರಣೆಯನ್ನು ಸಂಸ್ಥೆ ಈಗಾಗಲೇ ನಡೆಸಿದೆ.
140. ದಕ್ಷಿಣ ದೆಹಲಿಯ ವಸಂತ ವಿಹಾರ ಪ್ರದೇಶದ ಮಮತಾ ಪಾಲನಾ ಕೇಂದ್ರದಲ್ಲಿರುವ ಈ ಪುಟ್ಟ ‘ಪಾರ್ಥ’ನನ್ನು ಇಟಲಿಯ ಜರ್ಮನೊ ಗುಸೆಪ್ ಮತ್ತು ಬೊಶೆಟ್ಟೊ ಮಿಷೆಲಾ ದಂಪತಿ ತಮ್ಮ ದೇಶಕ್ಕೆ ಕರೆದೊಯ್ಯಬಹುದು ಎಂದು ಕೋರ್ಟ್ ತಿಳಿಸಿದೆ.
141. ವಿಳಿಂಜಂ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ನೆಸಿದ್ದ ಮಧ್ಯಪ್ರದೇಶದ ಇಂದೋರ್ ಮೂಲದ ಕರಣ್ ಸಿಂಗ್ ಠಾಕೂರ್ (44) ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ. ಆತನಿಂದ 79 ಪಾಸ್‌ಪೋರ್ಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
142. ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ನಾಗರಿಕರು ಸೋಮವಾರ ಕೂಡಾ ಅನಿರ್ದಿಷ್ಟಾವಧಿಯ ಪ್ರತಿಭಟನೆ ಮುಂದುವರಿಸಿದ್ದು.
143. ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ 30-80 ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದರ ಬತ್ತಳಿಕೆಯಲ್ಲಿ 110ಕ್ಕೂ ಅಧಿಕ ಅಣ್ವಸ್ತ್ರಗಳಿವೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
144. ಶತಮಾನಗಳಿಂದ ಬೀಗ ಮುದ್ರೆ ಹಾಕಿರುವ ಇಲ್ಲಿನ ಪ್ರಸಿದ್ಧ ಪಶುಪತಿನಾಥ ದೇವಾಲಯದ ಮುಖ್ಯ ಖಜಾನೆಯನ್ನು ತೆರೆಯದಂತೆ ನೇಪಾಳದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
145. ಸಾಧಾರಣವಾಗಿ ಹುಟ್ಟಿದ ಆರೋಗ್ಯವಂತ ಶಿಶು 3.35 ಕೆ.ಜಿ. ಇರುತ್ತದೆ. 5 ಕೆ.ಜಿ ವರೆಗೆ ಇರುವ ಮಕ್ಕಳನ್ನು ದೊಡ್ಡದು ಎಂದು ಪರಿಗಣಿಸಲಾಗಿದ್ದು 5 ಕೆ.ಜಿ.ಗಿಂತ ಹೆಚ್ಚಿರುವ ಮಗುವನ್ನು ‘ದೈತ್ಯ’ ಎಂದು ಕರೆಯಲಾಗುತ್ತದೆ.
146. ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ- ಐಜಿಪಿ) ಡಾ. ಅಜಯ್ ಕುಮಾರ್ ಸಿಂಹ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಜೀಜಾ ಹರಿಸಿಂಗ್ ಮತ್ತು ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮಂಡಳಿಯ ಡಿಜಿಪಿ ಎಸ್.ಸಿ.ಸಕ್ಸೇನಾ ಅವರು ಸೇವೆಯಿಂದ ಸೋಮವಾರ ನಿವೃತ್ತರಾದರು.
147. ನೇಮಕಾತಿ ವಿಭಾಗದ ಡಿಜಿಪಿ ಡಾ.ಎಸ್.ಟಿ.ರಮೇಶ್ ಅವರು ರಾಜ್ಯದ ನೂತನ ಹಂಗಾಮಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ- ಐಜಿಪಿ) ಸೋಮವಾರ ಅಧಿಕಾರ ಸ್ವೀಕರಿಸಿದರು. ಇದೇ ಮೊದಲ ಬಾರಿಗೆ ಹಂಗಾಮಿ ಡಿಜಿಪಿ- ಐಜಿಪಿಯನ್ನು ಸರ್ಕಾರ ನೇಮಕ ಮಾಡಿದೆ.
148. 2009-10ನೇ ಸಾಲಿನ ಪರಿಷ್ಕೃತ ಆರ್ಥಿಕ ವೃದ್ಧಿ ದರವನ್ನು ಸರ್ಕಾರ ಪ್ರಕಟಿಸಿದೆ.ಮೊದಲು ಶೇಕಡ 7.4ರಷ್ಟು ವೃದ್ಧಿ ದರ ಅಂದಾಜಿಸಲಾಗಿತ್ತು. ತಯಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದು ಶೇ 8ರಷ್ಟು ತಲುಪಬಹುದು ಎಂದು ಪರಿಷ್ಕೃತ ವರದಿ ಹೇಳಿದೆ.
149. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ಭಾರತೀಯರ ತಲಾದಾಯ ಶೇಕಡ 14.5ರಷ್ಟು ಹೆಚ್ಚಿದ್ದು, ರೂ

ಪ್ರಚಲಿತ ಘಟನೆಗಳು

1. 1998 ರಲ್ಲಿ 9 ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
2. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಏಕೈಕ ವ್ಯಕ್ತಿ .
3. ಕ್ರಿಕೆಟ್ ಆಡುವ ಎಲ್ಲಾ ಪ್ರಮುಖ ದೇಶಗಳ ವಿರುದ್ಧ 1000 ಕ್ಕೂ ಅಧಿಕ ರನ್ ಬಾರಿಸಿದ ಖ್ಯಾತಿ . ಮತ್ತು ಅತಿ ಹೆಚ್ಚು ಬಾರಿ ಸಾವಿರ ರನ್ ಪೂರೈಸಿದ ಆಟಗಾರ.
4. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಇವರು 259 ಇನಿಂಗ್ಸ್ ನಿಂದ 10000 ರನ್ ಗಡಿ ದಾಟಿದ ಸಾಧನೆಗೆ ಪಾತ್ರರಾಗಿದ್ದಾರೆ.
5. ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಮೈದಾನಗಳಲ್ಲಿ ಆಡಿದ ಆಟಗಾರ 90 .
6. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಅತಿ ಕಿರಿಯ ವಯಸ್ಸಿನಲ್ಲಿ ಪದಾರ್ಪಣಿ ಮಾಡಿದ ಎರಡನೇ ಆಟಗಾರ.
7. 1990 ರಲ್ಲಿ ಚೊಚ್ಚಲ ಶತಕ ಸಿಡಿಸಿದ ಸಚಿನ್ , ಈ ಸಾಧನೆ ಮಾಡಿದ ಎರಡನೇ ಅತಿ ಕಿರಿಯ ಬ್ಯಾಟ್ಸ್ ಮನ್ .
8. ಸಚಿನ್ ತೆಂಡೂಲ್ಕರ್ 20 ವರ್ಷಕ್ಕೂ ಮುನ್ನ 5 ಟೆಸ್ಟ್ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ .
9. ಸಚಿನ್ ತೆಂಡೂಲ್ಕರ್ ಭಾರತದ ತಂಡದ ನಾಯಕತ್ವ ವಹಿಸಿದ ಆಟಗಾರನ ಗರಿಷ್ಠ ರನ್ (1990 – 2000 ರಲ್ಲಿ ನ್ಯೂಜಿಲೆಂಡ್ ವಿರುದ್ಧ 217 ರನ್ .) .
10. ಟೆಸ್ಟ್ ಆಡುವ ಎಲ್ಲಾ ತಂಡಗಳ ವಿರುದ್ಧವೂ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ ಮೂರನೇ ಆಟಗಾರ ( ಸ್ಟಿವ್ ವ್ಹಾ ಮತ್ತು ಗ್ಯಾರಿ ಕರ್ಸ್ಟನ್) .
11. ಸಚಿನ್ ಮತ್ತು ಲಾರಾ ಟೆಸ್ಟ್ ನಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿದ್ದಾರೆ. ( 195 ಇನ್ನಿಂಗ್ಸ್ )
12. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 150 ವಿಕೆಟ್ ಮತ್ತು 15000 ರನ್ ಸಂಪಾದಿಸಿದ ಏಕೈಕ ವ್ಯಕ್ತಿ .
13. ಸಚಿನ್ ತೆಂಡೂಲ್ಕರ್ ಟೆಸ್ಟ್ ನಲ್ಲಿ 40 ವಿಕೆಟ್ ಮತ್ತು 11000 ರನ್ ರನ್ ಗಳಿಸಿದ ಏಕೈಕ ವ್ಯಕ್ತಿ .
14. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಶತಕಗಳ ಶತಕ ಬಾರಿಸಿದ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್.
15. ರಾಡಿಯಾ ಅವರು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 22,000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಕೆಲವು ವ್ಯಕ್ತಿಗಳು ಈ ಹಿಂದೆಯೇ ದೂರು ಸಲ್ಲಿಸಿದ್ದರು.
16. ರಾಜೇಂದ್ರ ಸಿಂಗ್ ರಾಣಾ ಹಾಗೂ ಮನೀಶ್ ತ್ಯಾಗಿ ಎಂಬ ವಕೀಲರನ್ನು ಸೋಮವಾರ ಉತ್ತರ ದೆಹಲಿಯ ಪೀತಂಪುರದಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಮಂಗಳವಾರ ತಿಳಿಸಿವೆ.
17. ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ಲಲ್ಲಿ ಅವರನ್ನು ಅಮಾನತುಗೊಳಿಸುವಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆದೇಶ ಹೊರಡಿಸಿದ್ದಾರೆ.
18. ಗ್ಲಾಸ್ಗೊ ವಿಮಾನ ನಿಲ್ದಾಣದ ಮೇಲೆ ದಾಳಿ ಎಸಗಲು ಸಂಚು ರೂಪಿಸಿದ್ದವರಲ್ಲಿ ಒಬ್ಬರೆಂಬ ಶಂಕೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪೊಲೀಸರಿಂದ ವಿನಾಕಾರಣ ಬಂಧನಕ್ಕೊಳಗಾಗಿ ಸಾಕಷ್ಟು ಮಾನಸಿಕ ಕ್ಷೋಭೆಗೆ ತುತ್ತಾಗಿದ್ದ ಬೆಂಗಳೂರಿನ ವೈದ್ಯ ಮೊಹಮ್ಮದ್ ಹನೀಫ್ ಅವರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ಸುಮಾರು ರೂ 5 ಕೋಟಿ ಪರಿಹಾರ ಸಿಗುವ ಸಂಭವವಿದೆ.
19. ಗುವಾಂಗ್‌ಜೌ ಏಷ್ಯನ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ‘ಸ್ಯಾಮ್ಸಂಗ್’ ಪ್ರಾಯೋಜಿತ ಅತಿ ಬೆಲೆಯುಳ್ಳ ಪ್ರದರ್ಶನ ನೀಡಿದ ಕ್ರೀಡಾಪಟು ಪ್ರಶಸ್ತಿ ಸಂದಿದೆ.
20. ಬ್ರೆಜಿಲ್, ರಷ್ಯ, ಭಾರತ ಮತ್ತು ಚೀನಾವನ್ನು ಒಳಗೊಂಡ ಆರ್ಥಿಕ ಮುಂಚೂಣಿ ರಾಷ್ಟ್ರಗಳ ‘ಬ್ರಿಕ್’ ಗುಂಪಿಗೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸಲಾಗಿದ್ದು, ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
21. ಬ್ರಿಕ್ ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿರುವ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಅವರು ಈ ಶೃಂಗದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜಿಯಾಂಗ್ ಯು ತಿಳಿಸಿದರು.
22. ನಾಲ್ಕು ದೇಶಗಳು ಸಭೆಯಲ್ಲಿ ದಕ್ಷಿಣ ಆಫ್ರಿಕಾ ಪಾಲ್ಗೊಳ್ಳಲು ಸಮ್ಮತಿ ಸೂಚಿಸಿವೆ. ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾವೂ ಸೇರಿದರೆ ಗುಂಪನ್ನು ‘ಬಿಕ್ಸ್’ ಎಂದು ಕರೆಯಲಾಗುವುದು.
23. ಸಚಿವರಾದ ಜಿ.ಕರುಣಾಕರ ರೆಡ್ಡಿ, ಜಿ.ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಸುಮಾರು 86.42 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಮಾಡಿದೆ.
24. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದು, ಅವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಕೋರಿ ‘ಜಸ್ಟೀಸ್ ಲಾಯರ್ಸ್‌ ಫೋರಂ’ನ ಪದಾಧಿಕಾರಿಗಳು ರಾಜ್ಯಪಾಲರನ್ನು ಕೋರಿದ್ದಾರೆ.
25. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಕ್ರಮದಲ್ಲಿ ಭಾಗಿಯಾಗಿದ್ದು, ಇದಕ್ಕೆ ಪೂರಕವಾದ 18 ಪ್ರಕರಣಗಳಿಗೆ ಸಂಬಂಧಿಸಿದಂತೆ 1700 ಪುಟಗಳ ವರದಿಯನ್ನೂ ಈ ತಂಡ ರಾಜಭವನಕ್ಕೆ ಸಲ್ಲಿಸಿದೆ. ಇದಲ್ಲದೆ, ಮುಖ್ಯಮಂತ್ರಿ ವಿರುದ್ಧದ 170 ಪುಟಗಳ ದೂರನ್ನೂ ನೀಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಸುಮಾರು 5000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ.
26. ಭಾರತವೂ ಸೇರಿದಂತೆ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ಸದಸ್ಯ ರಾಷ್ಟ್ರಗಳ ವಾಣಿಜ್ಯ ಸಚಿವರುಗಳ ಸಭೆ ಜನವರಿ 29ರಂದು ಸ್ವಿಟ್ಜರ್‌ಲೆಂಡ್‌ನ ದಾವೂಸ್‌ನಲ್ಲಿ ನಡೆಯಲಿದೆ. 2011 ಜನವರಿ ಕೊನೆಯ ವಾರದಲ್ಲಿ ‘ವಿಶ್ವ ವಾಣಿಜ್ಯ ಶೃಂಗ ಸಭೆ (ಡಬ್ಲ್ಯುಇಎಫ್) ನಡೆಯಲಿದ್ದು
27. ಏಷ್ಯಾನ್ ಗೇಮ್ಸ್ ನಲ್ಲಿ ಅವಳಿ ಚಿನ್ನದ ಪದಕ ಗೆದ್ದ ಅಸ್ವಿನಿ ಅಕ್ಕುಂಜೆ ಮತ್ತು ನೀರಾ ರಾಡಿಯಾ ಟೇಪ್ ಹಗರಣದ ಮೇಲೆ ಬೆಳಕು ಚೆಲ್ಲಿದ ಔಟ್ ಲುಕ್ ಪತ್ರಿಕೆಯ ಸಂಪಾದಕ ಕೃಷ್ಣ ಪ್ರಸಾದ್ , ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ನ ವರ್ಷದ ವ್ಯಕ್ತಿಗಳಾಗಿ ಆಯ್ಕೆಯಾಗಿದ್ದಾರೆ.
28. ಕಾಂಗ್ರೆಸ್ 125 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಕಳೆದ ವಾರ ದೆಹಲಿಯಲ್ಲಿ ನಡೆದ ಮಹಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಡುಗಡೆ ಮಾಡಿದ ‘ಕಾಂಗ್ರೆಸ್ ಆ್ಯಂಡ್ ದಿ ಮೇಕಿಂಗ್ ಆಫ್ ದಿ ಇಂಡಿಯನ್ ನೇಷನ್’ ಪುಸ್ತಕದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
29. ರಾಜೀವ್ ಹತ್ಯೆಯನ್ನು ತನಿಖೆ ನಡೆಸಿ ಜೈನ್ ಆಯೋಗ.
30. ಆಂಧ್ರದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ ಅವರು ಭೂಹಗರಣವೊಂದರಲ್ಲಿ ಸಿಲುಕಿದ್ದು, 200 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಭೂಮಿಯನ್ನು ಮಾಲೀಕರಿಗೇ ಬಿಟ್ಟುಕೊಟ್ಟ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ.
31. ಪ್ರತ್ಯೇಕ ತೆಲಂಗಾಣ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಸಮಿತಿ.
32.
33. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ ರಾಜ್ಯ.
34. ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
35. ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು, ಕರ್ನಾಟಕ.
36. ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ಕರ್ನಾಟಕ.
37. ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
38. ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಕರ್ನಾಟಕ.
39. ಸೋಮೇಶ್ವರ ವನ್ಯಧಾಮ - ಉತ್ತರಕನ್ನಡ , ಕರ್ನಾಟಕ.
40. ತುಂಗಭದ್ರ ವನ್ಯಧಾಮ - ಬಳ್ಳಾರಿ, ಕರ್ನಾಟಕ.
41. ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
42. ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
43. ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ .
44. ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ , ಮಧ್ಯಪ್ರದೇಶ್
45. ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ
46. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ
47. ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್.
48. ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್.
49. ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
50. ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
51. ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
52. ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
53. ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
54. ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
55. ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
56. ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ ಪ್ರದೇಶ.
57. ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು , ಪಶ್ಚಿಮ ಬಂಗಾಳ.
58. ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
59. ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
60. ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ ಪ್ರದೇಶ.
61. ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
62. ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ
ಪ್ರಮುಖ ಹಣಕಾಸು ಸಂಸ್ಥೆಗಳು – ಸ್ಥಾಪನೆಯಾದ ವರ್ಷ
63. ಇಂಪೀರಿಯಲ ಬ್ಯಾಂಕ್ ಆಪ್ ಇಂಡಿಯಾ - 1921.
64. ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಎಪ್ರಿಲ್ 1, 1935 ( ಜನೆವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )
65. ಭಾರತೀಯ ಕೈಗಾರಿಕಾ ಹಣಕಾಸು ಸಂಸ್ಥೆ - 1948.
66. ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.
67. ಯೂನಿಟ್ ಟ್ರಸ್ಟ್ ಆಪ್ ಇಂಡಿಯಾ (ಯು .ಟಿ. ಐ ) - ಫೆಬ್ರವರಿ 1, 1964.
68. ಯು.ಟಿ. ಐ. ವಿಭಜನೆ - ಫೆಬ್ರವರಿ 2003 .
69. ಐ. ಡಿ . ಬಿ. ಐ. - ಜುಲೈ 1964.
70. ನಬಾರ್ಡ್ - ಜುಲೈ 12, 1982.
71. IRBI ( 1997 ಮಾರ್ಚ್ 6 ರಿಂದ IIBIAL ಎಂದು ಮರುನಾಮಕರಣ ) - ಮಾರ್ಚ್ 20, 1985.
72. SIDBI - ಜನವರಿ 1, 1982.
73. ಜೀವ ವಿಮಾ ನಿಗಮ (LIC) - ಸೆಪ್ಟೆಂಬರ್ 1956.
74. ಸಾಮಾನ್ಯ ವಿಮಾ ನಿಗಮ ( GIC) - ನವೆಂಬೆರ್ 1972.
75. ರಿಜಿನಲ್ ರೂರಲ್ BYAANKS -ಅಕ್ಟೊಬರ್ 2, 1975.
76. ರಿಸ್ಕ್ ಕ್ಯಾಪಿಟಲ್ ಹಾಗು ಟೆಕ್ನಾಲಜಿ ಪೈನಾನ್ಸ್ ಕಾರ್ಪೋರೇಶನ್ ಲಿ. -1989
77. ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಗೂ ಪೈನಾನ್ಸಯಾಲ್ ಸರ್ವಿಸೆಸ್ ಲಿ. - 1988.
78. ಹೌಸಿಂಗ್ ಡೆವಲೆಪ್ಮೆಂಟ್ ಪೈನಾನ್ಸ್ ಕಾರ್ಪೋರೇಶನ್ ಲಿ. - 1977 .
ವಾಣಿಜ್ಯ ಬ್ಯಾಂಕುಗಳು – ಸ್ಥಾಪನೆಯಾದ ವರ್ಷ
79. ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ )
80. ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724
81. ಬ್ಯಾಂಕ್ ಆಪ್ ಹಿಂದುಸ್ತಾನ್ - 1770
82. ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785
83. ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860
84. ದಿ ಅಲಹಾಬಾದ್ ಬ್ಯಾಂಕ್ - 1865
85. ಔದ್ಹ್ ವಾಣಿಜ್ಯ ಬ್ಯಾಂಕ್ - 1881
86. ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894
87. ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901
88. ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906
89. ಇಂಡಿಯನ್ ಬ್ಯಾಂಕ್ - 1907
90. ಬ್ಯಾಂಕ್ ಆಪ್ ಬರೋಡಾ - 1908
91. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911
92. ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921
93. ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935,
94. ಭಾರತೀಯ ಸ್ಟೇಟ್ ಬ್ಯಾಂಕ್ - ಜುಅಲೈ 1, 1955
95. ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
96. ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
97. ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
98. ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
99. ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
100.BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
101.ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
102.ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
103.EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
104.ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
105.ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
106.ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
107.ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
108.MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
109.UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
110.IOA: ಭಾರತ ಒಲಂಪಿಕ್ ಸಂಸ್ಥೆ .
111.ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
112.ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
113.BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
114.BSNL:ಭಾರತ ಸಂಚಾರ್ ನಿಗಮ ನಿಯಮಿತ .
115.MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
116.ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು
117.ಕನ್ನಡದ ಪ್ರಾಚೀನತೆ - ೧ ನೆ ಶತಮಾನ .(ಗ್ರೀಕ್ ಪ್ರಹಸನಗಳಲ್ಲಿ 'ದೀನ ' ಮತ್ತು 'ದಮ್ಮಾರ' ಎಂಬ ಕನ್ನಡ ಪದಗಳ ಬಳಕೆ - ಸಂಶೋಧನೆ ಎಂ. ಗೋವಿಂದ ಪೈ )
ಕನ್ನಡದ ಪ್ರಥಮಗಳು
118. ಕನ್ನಡದ ಮೊದಲ ದೊರೆ - ಕದಂಬ ವಂಶದ ಮಯೂರವರ್ಮ.
119. ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ.
120. ಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ ).
121. .ಮೊದಲ ಶಾಸನ - ಹಲ್ಮಿದಿ ಶಾಸನ ( ಕ್ರಿ.ಶ. ೪೫೦ ).
122. ಮೊದಲ ಕೋಟೆ - ಬಾದಾಮಿ ( ಕ್ರಿ. ಶ. ೫೪೩).
123. ಮೊದಲ ಕನ್ನಡ ಕೃತಿ - ಕವಿರಾಜ ಮಾರ್ಗ (ಕ್ರಿ.ಶ.೯ನೇ ಶತಮಾನ- ಶ್ರೀವಿಜಯ).
124. ಕನ್ನಡದ ಮೊದಲ ನಾಟಕ - ಸಿಂಗರಾಯನ ಮಿತ್ರ- ವಿಂದಾಗೋವಿಂದ.
125. .ಕನ್ನಡದ ಮೊದಲ ದಿನ ಪತ್ರಿಕೆ - ಸೂರ್ಯೋದಯ ಪ್ರಕಾಶಿಕ .
126. ಕನ್ನಡದ ಮೊದಲ ವಚನಕಾರ್ತಿ – ಅಕ್ಕಮಹಾದೇವಿ.
127. ಕನ್ನಡದ ಮೊದಲ ರಾಷ್ಟ್ರಕವಿ - ಗೋವಿಂದ ಪೈ.
128. ಕನ್ನಡದ ಮೊದಲ ಪತ್ರಿಕೆ - ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -೧೮೪೨.
129. ಮೊದಲ ಗದ್ಯ ಕೃತಿ - ವಡ್ಡಾರಾಧನೆ.
130. ಮೊದಲ ಕಾವ್ಯ - ಆದಿಪುರಾಣ.
131. ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ – ಕುವೆಂಪು.
132. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಸರ್. ಎಂ. ವಿಶ್ವೇಶ್ವರಯ್ಯ.
133. ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ – ಶ್ರೀ ರಾಮಾಯಣ ದರ್ಶಣಂ ಕುವೆಂಪು .
134. ಶ್ರೀ ರಾಮಾಯಣ ದರ್ಶನಂ ( ಕುವೆಂಪು ).
135. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ - ಬೇಡರ ಕಣ್ಣಪ್ಪ.
136. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ - ಶಿವಮೊಗ್ಗ ಸುಬ್ಬಣ್ಣ.
137. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ - ಜಯದೇವಿತಾಯಿ ಲಿಗಾಡೆ ( ೧೯೮೪ ).
138. ಕನ್ನಡದ ಮೊದಲ ವರ್ಣಚಿತ್ರ - ಅಮರಶಿಲ್ಪಿ ಜಕಣಾಚಾರಿ.
139. ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ - ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ -ಇಂಗ್ಲೀಷ್ ನಿಘಂಟು)ಕನ್ನಡ ರಂಗಭೂಮಿಯ ಮೊದಲ.
140. ನಾಯಕಿ ನಟಿ - ಎಲ್ಲೂಬಾಯಿ ಗುಳೇದಗುಡ್ಡ.
141. ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – ಮೃಚ್ಛಕಟಿಕ.
142. ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – ಉದಯವಾಣಿ.
143. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ - ರಾಮಗಾಣಿಗ.
144. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ - ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ.
145. ಕನ್ನಡದ ಮೊದಲ ನವೋದಯ ಕವಿತ್ರಿ - ಬೆಳಗೆರೆ ಜಾನಕಮ್ಮ.
146.ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.೪೫೦)
147.ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .೭೦೦)
148.ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. ೮೫೦)
149.ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.೯೨೦)
150.ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.೯೪೦)
151.ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.೯೪೧)
152.ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.೧೧೫೦)
153.ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಪ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ೧೮೯೦)
154.ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ. ಶ.೧೮೧೯)
155.ಕರ್ನಾಟಕದ ಮೊದಲ ದೊರೆ – ಮಯೂರವರ್ಮ
156.ಕರ್ನಾಟಕದ ಮೊದಲ ಗಣಿತ ಶಾಸ್ತ್ರಜ್ಞ – ಮಹಾವೀರಾಚಾರ್ಯ.
157.ಕರ್ನಾಟಕದ ಮೊದಲ ವಚನಗಾರ ದೇವರದಾಸಿಮಯ್ಯ.
158.ಕರ್ನಾಟಕದ ಮೊದಲ ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ.
159.ಕರ್ನಾಟಕದ ಮೊದಲ ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ - ಅನಂತ ಸುಬ್ಬರಾವ್.
160.ಕರ್ನಾಟಕದ ಮೊದಲ ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್.
161.ಕರ್ನಾಟಕದ ಮೊದಲ ಕನ್ನಡ ಶೀಘ್ರಲಿಪಿ – ರೆವರೆಂಡ್ ಬಿ.ಲೂಥಿ.
162.ಕರ್ನಾಟಕದ ಮೊದಲ ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ.

ಪ್ರಚಲಿತ ಘಟನೆಗಳು

1. ದೆಹಲಿ ಡೇರ್‌ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ 7.2 ದಶಲಕ್ಷ ಡಾಲರ್ ಅನ್ನು ಆಟಗಾರರ ಖರೀದಿಗಾಗಿ ವಿನಿಯೋಗಿಸುವುದಕ್ಕೆ ಅವಕಾಶವಿದೆ.
2. ಸೂಪರ್ ಕಿಂಗ್ಸ್ ಹರಾಜಿನಲ್ಲಿ ವೆಚ್ಚ ಮಾಡಲು ಲಭ್ಯ ಇರುವುದು 4.5 ದಶಲಕ್ಷ ಡಾಲರ್. ಅದು ಹರಾಜಿನಲ್ಲಿ ಆಟಗಾರರನ್ನು ಕೊಳ್ಳಬಹುದು; ಇಲ್ಲವೆ ಹರಾಜಿನಿಂದ ಹೊರಗೆ ಉಳಿದು ರಣಜಿ ಆಟಗಾರರನ್ನು ಖರೀದಿಸಬಹುದು.
3. ಅತಿವೇಗವಾಗಿ ವಾಹನ ಓಡಿಸಿದ್ದಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅವರಿಗೆ ಇಲ್ಲಿನ ಪೊಲೀಸರು 239 ಡಾಲರ್ ದಂಡ ವಿಧಿಸಿದ್ದಾರೆ.
4. ವಿಕ್ಟೋರಿಯಾದ ಗೀಲಾಂಗ್ ಪ್ರದೇಶದಲ್ಲಿನ ರಸ್ತೆಯಲ್ಲಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ವಾಹನ ಓಡಿಸುವ ಮಿತಿ ಇದ್ದು; ಅಲ್ಲಿ ಕೆವಿನ್ ಅವರು ಗಂಟೆಗೆ 121 ಕಿ.ಮೀ. ವೇಗದಲ್ಲಿ ವಾಹನ ಓಡಿಸಿದ್ದು ಲೇಸರ್ ಸ್ಪೀಡ್ ಪತ್ತೆ ಯಂತ್ರದಲ್ಲಿ ದಾಖಲಾಗಿದೆ.
5. ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಸಾಧನೆಯ ಮೈಲಿಗಲ್ಲನ್ನು ಎಡಗೈ ಸ್ಪಿನ್ನರ್ ಜೋಶಿ ದಾಟಿದರು.
6. ಹರಿಯಾಣಾದ ರಾಜೇಂದ್ರ ಗೋಯೆಲ್ 750 ಗಳಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್‌ನ ದಾಖಲೆಯಾಗಿದೆ.
7. ಕನ್ನಡದ ಮೊಟ್ಟಮೊದಲ ವರ್ಣಚಿತ್ರ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದ ಹಿರಿಯ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಹಕ ಬಿ.ಎಸ್.ರಂಗಾ (93) ಇಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
8. 2011ರ ಜನವರಿ ಒಂದರಿಂದ ಜಾರಿಗೆ ಬರಲಿದೆ. ಕಾಂಬೋಡಿಯಾ, ಪಿಲಿಫೀನ್ಸ್, ವಿಯೆಟ್ನಾಂ, ಲಾವೋಸ್ ಮತ್ತು ಮ್ಯಾನ್ಮಾರ್ ದೇಶದಿಂದ ಆಗಮಿಸುವ ಬೌದ್ಧ ಭಿಕ್ಕುಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ.
9. ಏಕ ಗವಾಕ್ಷಿ ಪದ್ಧತಿಯಂತೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಈ ವೀಸಾ ನೀಡಲಾಗುವುದು ಹಾಗೂ ಇದು 30 ದಿನಗಳ ಕಾಲಾವಧಿ ಒಳಗೊಂಡಿದೆ.
10. 21ರಿಂದ ಎರಡು ದಿನದ ಭಾರತ ಪ್ರವಾಸ ಕೈಗೊಳ್ಳಲಿರುವ ರಷ್ಯ ಅಧ್ಯಕ್ಷ ಡ್ರಿಮಿಟಿ ಮೆಡ್ವಡೆವ್ ಪರಮಾಣು, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತದ ಜತೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ.
11. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ (ಆಸಿಯಾನ್) ‘ಅರ್ಧ ಒಳಗೆ, ಅರ್ಧ ಹೊರಗೆ’ ಎಂಬಂತೆ ಇರುವ ಭಾರತ ಒಂದು ಅವಿವೇಕಿಗಳ ದೇಶ ಎಂಬುದಾಗಿ ಸಿಂಗಪುರದ ರಾಜತಾಂತ್ರಿಕರು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿರುವ ಅಂಶವನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
12. ಜಪಾನ್‌ನಲ್ಲಿ ನಾಯಕತ್ವದ ಕೊರತೆ ಇದೆ,ಆಸಿಯಾನ್ ಜತೆಗೆ ಚೀನಾದ ಸಂಬಂಧ ಹೆಚ್ಚಿರುವುದರಿಂದ ಜಪಾನ್‌ನ ಕೊಬ್ಬು ಕರಗಿದೆ, ಭಾರತವೂ ಇಲ್ಲಿ ಅರ್ಧ ಒಳಗೆ, ಅರ್ಧ ಹೊರಗೆ ಎಂಬಂತೆ ಇದ್ದು, ಅದೊಂದು ‘ಸ್ಟುಪಿಡ್’ ದೇಶ ಎಂದು ಸಿಂಗಪುರದ ರಾಯಭಾರಿ ಟೊಮ್ಮಿ ಕೋ ಅವರು ಅಮೆರಿಕಕ್ಕೆ ತಿಳಿಸಿದ್ದರು.
13. ಸತತ ಮೂರನೇ ವರ್ಷವೂ ಬಾಲಿವುಡ್ ಸುಂದರಿ ಕತ್ರೀನಾ ಕೈಫ್ ಅವರು ವಿಶ್ವದ ‘ಅತ್ಯಂತ ಸೆಕ್ಸಿ ಮಹಿಳೆ’ ಎಂದು ನಾಮಕರಣಗೊಂಡಿದ್ದಾರೆ.
14. ಕೆನಡಾ ಸಂಸತ್ತಿನಲ್ಲಿ ಮೊದಲ ಬಾರಿ ಆಯ್ಕೆಯಾದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಿಖ್ ಸದಸ್ಯ ಟಿಮ್ ಉಪ್ಪಲ್ ಅವರು ಖಾಸಗಿಯಾಗಿ ಮಂಡಿಸಿದ ರಾಷ್ಟ್ರೀಯ ಸಾಮೂಹಿಕ ಹತ್ಯಾಕಾಂಡ ಸ್ಮಾರಕ ನಿರ್ಮಾಣ ಮಸೂದೆಯು ಅವಿರೋಧವಾಗಿ ಅಂಗೀಕಾರಗೊಂಡಿದೆ.
15. ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಮೆಕ್ಸಿಕೊದ ಕ್ಯಾನ್‌ಕನ್‌ನಲ್ಲಿ ನಡೆದ ಹವಾಮಾನ ವೈಪರೀತ್ಯ ತಡೆ ಕುರಿತ ಶೃಂಗದ ಯಶಸ್ಸನ್ನು ಜಪಾನ್ ಪ್ರಧಾನ ಮಂತ್ರಿ ನ್ಯಾಟೊ ಕಾನ್ ಸ್ವಾಗತಿಸಿದ್ದಾರೆ.
16. ‘ಸಮುದಾಯ ಸಹಭಾಗಿತ್ವದಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ’ ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ಆಯುಕ್ತ ಆರ್.ಶ್ರೀಕುಮಾರ್ ಅಭಿಪ್ರಾಯಪಟ್ಟರು.
17. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ದ್ವಿಶತಕ ಟೈಮ್ಸ್ ನಿಯತಕಾಲಿಕದಲ್ಲಿ ಸ್ಥಾನ ಪಡೆದಿದೆ.
18. ಅವರು ಗ್ವಾಲಿಯರ್‌ನಲ್ಲಿ 199 ರನ್ ಗಳಿಸಿದ್ದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಅಬ್ಬರ ಹೇಳತೀರದು. ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಇತಿಹಾಸವೊಂದಕ್ಕೆ ಸಾಕ್ಷಿಯಾಗಿದ್ದರು. ಸಚಿನ್ ಒಂದು ರನ್ ಗಳಿಸಿ 200 ರನ್ ತಲುಪಿದ್ದರು.
19. ಟೈಮ್ಸ್ ನಿಯತಕಾಲಿಕ ಈ ವರ್ಷದ ಕ್ರೀಡಾ ಕ್ಷೇತ್ರದ 10 ಅದ್ಭುತ ಕ್ಷಣಗಳನ್ನು ಪ್ರಕಟಿಸಿದೆ.
20. ವಾಂಚಾಯ್‌ನಲ್ಲಿರುವ ಕ್ವೀನ್ ಎಲಿಜಬೆತ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸೈನಾ 15-21, 21-16, 21-17 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಶಿಕ್ಸಿಯಾನ್ ವಾಂಗ್ ವಿರುದ್ಧ ಜಯ ಪಡೆದರು.
21. ಪ್ರಸಕ್ತ ಋತುವಿನಲ್ಲಿ ಸೈನಾ ಪಡೆಯುತ್ತಿರುವ ಮೂರನೇ ಹಾಗೂ ವೃತ್ತಿ ಜೀವನದ ನಾಲ್ಕನೇ ಸೂಪರ್ ಸೀರಿಸ್ ಪ್ರಶಸ್ತಿ ಇದಾಗಿದೆ.
22. ಭಾರತದ ಅಮೀಶ್ ಸಾಹೇಬಾ ಹಾಗೂ ಶಾವೀರ್ ತಾರಪುರ ಅವರು ಉಪಖಂಡದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
23. ಮಾಜಿ ಟೆನಿಸ್ ಆಟಗಾರ್ತಿ ಸ್ವಿಟ್ಜರ್ಲೆಂಡ್‌ನ ಮಾರ್ಟಿ ನಾ ಹಿಂಗಿಸ್ ಅವರು ಫ್ರಾನ್ಸ್‌ನ ಶೋಜಂಪರ್ ತಿಬಾಲ್ಟ್ ಹಟಿಮ್ ಅವರನ್ನು ವಿವಾಹವಾಗಿದ್ದಾರೆ.
24. ವಿಶ್ವದ ಖ್ಯಾತ ಮಾಹಿತಿ ಶೋಧ ಅಂತರ್‌ಜಾಲ ತಾಣ ಗೂಗಲ್, ಮೂರು ತಿಂಗಳ ಹಿಂದೆ ಶಾಲಾ ಮಕ್ಕಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಡೂಡಲ್4ಗೂಗಲ್ (doodle 4 google- ಗೂಗಲ್ ಲಾಂಛನ ರೇಖಾಚಿತ್ರ) ಸ್ಪರ್ಧೆಯಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬ ಪ್ರಥಮ ಬಹುಮಾನ ಗಳಿಸಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ.
25. ತಾಂತ್ರಿಕವಾಗಿ ಮತ್ತು ಸ್ವಾಭಾವಿಕವಾಗಿ ಬೆಳೆಯುತ್ತಿರುವ ಭಾರತ’ (technically and naturally growing india) ಶೀರ್ಷಿಕೆಯಡಿ ಮಂಗಳೂರಿನ ಸೇಂಟ್ ಅಲೋಶಿಯಸ್ ಪ್ರೌಢ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಅಕ್ಷಯ್ ರಾಜ್, ರಚಿಸಿದ ಗೂಗಲ್ ಲಾಂಛನದ ರೇಖಾ ಚಿತ್ರ ಪ್ರಥಮ ಸ್ಥಾನ ಪಡೆದಿದೆ.
26. ಈ ಬಾರಿಯ ಡೂಡ್ಲು 4ಗೂಗಲ್ ಸ್ಪರ್ಧೆಯ ವಿಷಯ ‘ಭಾರತಕ್ಕಾಗಿ ನನ್ನ ಕನಸು’. (my dream for india). ಎಲ್ಲಾ ಮಕ್ಕಳು ತಮ್ಮ ತಮ್ಮ ಕನಸಿನ ಭಾರತದ ಚಿತ್ರವನ್ನು ಗೂಗಲ್ ಲಾಂಛನದ ಅಕ್ಷರಗಳಲ್ಲಿ ಮೂಡಿಸಬೇಕಾಗಿತ್ತು.
27. ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಡಿಯಾ 300 ಕೋಟಿ ರೂಪಾಯಿ ವ್ಯವಹಾರ ನಡೆಸಲು ಆರಂಭಿಸಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅವರ ದೂರವಾಣಿಯ ಕದ್ದಾಲಿಕೆಗೆ ಮುಂದಾಗಿದ್ದಾಗಿ ಕಳೆದ ವಾರ ಸರ್ಕಾರ ಪೀಠದ ಮುಂದೆ ಪ್ರಮಾಣ ಪತ್ರ ಸಲ್ಲಿಸಿತ್ತು.
28. ಅಟಾರ್ನಿ ಜನರಲ್ ಜಿ.ಇ.ವಹನ್ವತಿ.
29. 2ಜಿ ತರಂಗಾಂತರ ಹಗರಣ ಆರೋಪ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುತ್ತಿರುವ ಖಾಸಗಿ ಕಂಪೆನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ನೀರಾ ರಾಡಿಯಾ.
30. ಹ್ಯೂಸ್ಟನ್ ವಿಮಾನನಿಲ್ದಾಣದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರ್‌ದೀಪ್ ಪುರಿ ಅವರು ಈ ರೀತಿಯ ಅವಮಾನಕ್ಕೆ ಒಳಗಾಗಿದ್ದು, ಮೀರಾ ಶಂಕರ್ ಪ್ರಕರಣದ ಬಳಿಕ ಇದು ತಡವಾಗಿ ಬೆಳಕಿಗೆ ಬಂದಿದೆ.
31. ಡಿಸೆಂಬರ್ 4ರಂದು ಮಿಸ್ಸಿಸಿಪ್ಪಿ ವಿಮಾನನಿಲ್ದಾಣದಲ್ಲಿ ಮೀರಾ ಶಂಕರ್ ಅವರನ್ನು ಮೈದಡವಿ ತಪಾಸಣೆ ಮಾಡಲಾಗಿತ್ತು.
32. ಅಧಿವೇಶನ ನಡೆಯಬೇಕಿದ್ದುದು 114 ಗಂಟೆ. ಆದರೆ ನಡೆದುದು ಕೇವಲ ಆರೂಮುಕ್ಕಾಲು ಗಂಟೆ. ಇದಕ್ಕೆ ಆದ ಖರ್ಚು 172 ಕೋಟಿ ರೂಪಾಯಿ.
33. ಸಂಸತ್ ಕಲಾಪಕ್ಕೆ ವರ್ಷಕ್ಕೆ ಒಟ್ಟು 527.45 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ.
34. ಸರ್ಕಾರ ಪ್ರತಿ ದಿನದ ಕಲಾಪಕ್ಕೆ ಸರಾಸರಿ 6.35 ಕೋಟಿ ರೂಪಾಯಿ ವ್ಯಯಿಸುತ್ತದೆ.
35. ನಿಯಮದ ಪ್ರಕಾರ ಬಜೆಟ್ ಅಧಿವೇಶನ 35 ದಿನ, ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳು ತಲಾ 24 ದಿನ ನಡೆಯಬೇಕೆಂದಿದೆ.
36. ಸತತ 23 ದಿನ ಯಾವುದೇ ಕಲಾಪ ನಡೆಯದೆ ಇದ್ದರೂ, ಸಂಸದರ ಭತ್ಯೆ, ಇತರ ಖರ್ಚುಗಳನ್ನೆಲ್ಲ ಭರಿಸಬೇಕಿರುವುದರಿಂದ 172 ಕೋಟಿ ಕೋಟಿ ರೂಪಾಯಿ ವೆಚ್ಚ ಆಗಿದೆ.
37. ದುಬೈ ವರ್ಲ್ಡ್ ಕಂಪೆನಿಯ ನೂತನ ಅಧ್ಯಕ್ಷರನ್ನಾಗಿ ಶೇಖ್ ಅಹಮದ್ ಬಿನ್ ಸಯೀದ್ ಅಲ್ ಮಗ್ದುಂಮ್ ಅವರನ್ನು ನೇಮಕ ಮಾಡಲಾಗಿದೆ.
38. ಅರಸರ ನ್ಯಾಯಾಲಯದ ನಿರ್ದೇಶಕ ಮೊಹಮದ್ ಅಲ್ ಶೈಬಾನಿ, ದುಬೈ ಇಂಟರ್‌ನ್ಯಾಷನಲ್ ಫನಾನ್ಸಿಯಲ್ ಸೆಂಟರ್‌ನ ಮುಖ್ಯಸ್ಥ ಅಹಮದ್ ಹಮೀದ್ ಅಲ್-ಟಯರ್ ಅವರನ್ನು ದುಬೈ ವರ್ಲ್ಡ್ ಕಂಪೆನಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
39. ದುಬೈ ವರ್ಲ್ಡ್ ಕಂಪೆನಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಶೇಖ್ ಅಹಮದ್ ಅವರು ಎಮಿರೇಟ್ಸ್ ಏರ್‌ಲೈನ್ಸ್ ಮತ್ತು ದುಬೈ ನಾಗರಿಕ ವಿಮಾನಯಾನ ಖಾತೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
40. ದುಬೈಯಲ್ಲಿ ಅನೇಕ ಕೃತಕ ದ್ವೀಪಗಳನ್ನು ನಿರ್ಮಿಸಿದ ದುಬೈ ವರ್ಲ್ಡ್ ಕಂಪೆನಿಯ ಅಂಗ ಸಂಸ್ಥೆಯಾದ ನಕೀಲ್ ಕಂಪೆನಿ ಸಹ ಅಪಾರ ನಷ್ಟ ಅನುಭವಿಸುತ್ತಿದ್ದು 10.5 ಶತಕೋಟಿ ಡಾಲರ್ ಸಾಲ ಮರುಪಾವತಿಗೆ ಸಮಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.
41. ಪ್ರಪಂಚದ ಅತಿ ಎತ್ತರದ ಕಟ್ಟಡವಾದ ‘ಬುರ್ಜ್ ಖಲೀಫಾ’ದಲ್ಲಿ ಒಂದು ರಾತ್ರಿ ತಂಗಲು ಬಯಸುವವರಿಗೆ ಬಾಡಿಗೆ ದಿನಕ್ಕೆ 285 ಅಮೆರಿಕನ್ ಡಾಲರ್ ಬಾಡಿಗೆ ನೀಡಿದರೆ ಈ ಕಟ್ಟಡದಲ್ಲಿ ಪಿಠೋಪಕರಣಗಳಿಂದ ಸುಸಜ್ಜಿತವಾದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ರಾತ್ರಿ ಕಳೆಯಬಹುದು ಎಂಬುದನ್ನು ದುಬೈ ಮೂಲದ ಕಂಪೆನಿ ಪ್ರಕಟಿಸಿದೆ.
42. 188 ಅಂತಸ್ತುಗಳಿರುವ ‘ಬುರ್ಜ್ ಖಲೀಫಾ’.
43. ಭಾರತೀಯ ಮೂಲದ ಹಿರಿಯ ಮುಖಂಡ ಸಾಮಿ ವೇಲು (74) ಅವರನ್ನು ಭಾರತ ಮತ್ತು ದಕ್ಷಿಣ ಏಷ್ಯಾಗಳಿಗೆ ಮಲೇಷ್ಯಾದ ವಿಶೇಷ ರಾಜತಾಂತ್ರಿಕರನ್ನಾಗಿ ನೇಮಿಸಲಾಗಿದೆ.
44. ಸಿಮೊನ್ ಕ್ಯಾಲನ್ ಅವರಿಂದ ವಿಚ್ಛೇದನ ಪಡೆದಿದ್ದು; ಇಂಗ್ಲೆಂಡ್ ನಟಿ ಲಿಜ್ ಹರ್ಲಿ ಅವರೊಂದಿಗೆ ಸ್ನೇಹ ಸಂಬಂಧ ಬೆಸೆದಿ ರುವುದಾಗಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಬೌಲರ್ ಶೇನ್ ವಾರ್ನ್ ಸ್ಪಷ್ಟಪಡಿಸಿದ್ದಾರೆ.
45. 2000-2010ರ ದಶಕವನ್ನು ಅಂತರ್‌ರಾಷ್ಟ್ರೀಯ ಇಂಟರ್‌ನೆಟ್ ದಶಕ ಎಂದೇ ವಿಶ್ವದಾದ್ಯಂತ ಪರಿಗಣಿಸಲಾಗುತ್ತಿದೆ.
46. ಸದ್ಯಕ್ಕೆ 20.2 ಕೋಟಿಗಳಷ್ಟು ವಿಳಾಸದ ಹೆಸರುಗಳು ನೋಂದಾವಣೆ ಮಾಡಲಾಗಿದೆ.
47. ಈ ವಿಳಾಸ ಸೂಚಿಸುವ ವ್ಯವಸ್ಥೆಯು (Domain Name System --DNS) ಇಂಟರ್‌ನೆಟ್ ಅನ್ನು ಅನೇಕ ಬಗೆಗಳಲ್ಲಿ ವಿಂಗಡಿಸಿದೆ.
48. ಉದಾಹರಣೆಗೆ ವಿಶ್ವವಿದ್ಯಾನಿಲಗಳು (edu) ಸರ್ಕಾರಗಳು gov (government), ವಾಣಿಜ್ಯ ಸಂಘಟನೆಗಳು com (commercial organizations), ಸೇನೆ mil (military), ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು net (network service providers), ಮತ್ತು ಲಾಭರಹಿತ ಸಂಘಟನೆಗಳು org (nonprofit organizations). ಹೀಗೆ ವಿಭಿನ್ನ ಸಂಘ, ಸಂಸ್ಥೆಗಳು ಅಂತರ್‌ಜಾಲದಲ್ಲಿ ಪ್ರತ್ಯೇಕ ಹೆಸರಿನಲ್ಲಿ ಗುರುತಿಸಿಕೊಂಡಿವೆ.
49. ಡಾಟ್ ಕಾಮ್ ಮತ್ತು ಡಾಟ್‌ನೆಟ್ ಹೆಸರಿನಲ್ಲಿನ ವಿಳಾಸಗಳು 10.3 ಕೋಟಿಗಳ ಸಂಖ್ಯೆ ದಾಟಿವೆ. ಈ ವರ್ಷದ ತೃತೀಯ ತ್ರೈಮಾಸಿಕದಲ್ಲಿ 75 ಲಕ್ಷ ಹೊಸ ಹೆಸರು - ವಿಳಾಸಗಳು ನೋಂದಾವಣೆಗೊಂಡಿವೆ.
50. ಇಂಗ್ಲಿಷ್ ಮಾತನಾಡುವ ದೇಶಗಳು ಶೇ 40ರಷ್ಟು ಇಂಟರ್‌ನೆಟ್ ಬಳಸುತ್ತಿವೆ.
51. ಬಿಎಸ್‌ಎನ್‌ಎಲ್ ‘ತ್ರೀಜಿ’ ಸೇವೆ ಈಗ ಆ್ಯಪಲ್ ಐಪೊಡ್‌ನಲ್ಲೂ ಲಭ್ಯವಿದೆ. ರಾಜಸ್ತಾನ ವೃತ್ತದಲ್ಲಿ ಈ ಸೇವೆಯನ್ನು ಪ್ರಯೋಗಿಕವಾಗಿ ಜಾರಿಗೊಳಿಸಲಾಗಿದ್ದು,
52. JPC – Joint Parliamentary committee .
53. UPA – United Progressive Alliance
54. BSNL - Bharat Sanchar Nigam Limited.
55. CDMA - Code division multiple access.
56. GSM - Global System for Mobile Communications.
57. GPRS - General packet radio service.
58. WAP - Wireless Application Protocol.
59. VPT - Village pump technical.
60. MTNL - Mahanagar Telephone Nigam Limited.
61. Nokia - Connecting people.
62. BSNL - "Connecting India",
63. Tv9 – for a better society .
64. 26/11ರ ಮುಂಬೈ ದಾಳಿ ಕೋರರಿಗೆ ಸೂಕ್ತ ಶಿಕ್ಷೆ ನೀಡಿದರೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿಯ ಸೇನೆ ಕಡಿತ ಮತ್ತು ಸರ್ ಕ್ರೀಕ್ ಗಡಿ ವಿವಾದದ ಬಗ್ಗೆ ಪಾಕಿಸ್ತಾನದ ಜತೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ಹೇಳಲಾಗಿದೆ.
65. ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರಿಗೆ ಬ್ರಿಟನ್ನಿನ ನ್ಯಾಯಾಲಯ 2.40 ಲಕ್ಷ ಪೌಂಡ್‌ಗಳ ಭದ್ರತೆ ಆಧಾರದ ಮೇಲೆ ಷರತ್ತುಬದ್ಧ ಜಾಮೀನು ನೀಡಿದ್ದರೂ ಅವರು ಜೈಲಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
66. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಗಗ್ಗರ’ ತುಳು ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡದಿರುವುದು ತುಳು ಚಿತ್ರರಸಿಕರಲ್ಲಿ ನಿರಾಶೆ ಮೂಡಿಸಿದೆ’ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದಯ ಧರ್ಮಸ್ಥಳ ಅವರು ತಿಳಿಸಿದರು.
67. ಕೆನ್ ಫೋಲೆಟ್ ತಿಳಿಸಿದರು. ಇಂಗ್ಲಿಷ್ ಮಾತನಾಡುವ ಮತ್ತು ಓದುವ ಜನರು ಇಂಗ್ಲೆಂಡ್‌ಗಿಂತ ಹೆಚ್ಚಾಗಿ ಭಾರತದಲ್ಲಿದ್ದಾರೆ ಎಂದಿರುವ ಅವರು, 8.9 ಕೋಟಿ ಮಂದಿ ಇಲ್ಲಿ ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡುತ್ತಾರೆ ಎಂದರು.
68. ತನ್ನ ಹೊಸ ಪುಸ್ತಕ ‘ದಿ ಫಾಲ್ ಆಫ್ ಜೈಂಟ್ಸ್’ನ ಪ್ರಚಾರಕ್ಕಾಗಿ ಭಾರತದಲ್ಲಿ ಪ್ರವಾಸ ಕೈಗೊಳ್ಳುತ್ತಿರುವ ಫೋಲೆಟ್ ಅವರು, ಭಾರತ ಮತ್ತು ಏಷ್ಯಾ ಭವಿಷ್ಯದ ಮಾರುಕಟ್ಟೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
69. ವಿವೇಕಾನಂದಂ ದೇವರಾಜ್ ಎಂಬ ಹೆಸರಿನ 24 ವರ್ಷದ ತರುಣ ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಮಂಗಳವಾರ ಗಳಿಸಿದರು.144 ಕೆ.ಜಿ.ಯ ತೂಕವಿದ್ದ ದೇವರಾಜ್ ಅವರು ಆರು ತಿಂಗಳ ಅವಧಿಯಲ್ಲಿ 67 ಕೆ.ಜಿ.ಯಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ‘ಸ್ಟಾರ್’ ವರದಿ ಮಾಡಿದೆ.
70. ಅಂತರ್ಜಾಲ ಬಳಕೆದಾರರ ಸಂಖ್ಯೆ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿದ್ದು, ಸದ್ಯ ಭಾರತ ಇಂಟರ್‌ನೆಟ್ ಬಳಕೆಯಲ್ಲಿ ಪ್ರಪಂಚದಲ್ಲಿಯೇ ಮೂರನೆಯ ಸ್ಥಾನದಲ್ಲಿದೆ ಎಂದು ಖ್ಯಾತ ಶೋಧ ತಾಣ ಗೂಗಲ್ ಹೇಳಿದೆ.
71. ಚೀನಾದಲ್ಲಿ 300 ದಶಲಕ್ಷ ಅಂತರ್ಜಾಲ ಬಳಕೆದಾರರಿದ್ದು, ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. 207 ದಶಲಕ್ಷ ಬಳಕೆದಾರರಿರುವ ಅಮೆರಿಕ ಎರಡನೆಯ ಸ್ಥಾನದಲ್ಲಿ ಹಾಗೂ ಈಗ 100 ದಶಲಕ್ಷ ಬಳಕೆದಾರರನ್ನು ದಾಟುತ್ತಿರುವ ಭಾರತ ಮೂರನೆಯ ಸ್ಥಾನದಲ್ಲಿದೆ.
72. ಗೂಗಲ್ ಇಂಡಿಯಾದ ಉತ್ಪಾದನಾ ಮುಖ್ಯಸ್ಥ ವಿನಯ್ ಗೋಯಲ್.
73. ಭಾರತದಲ್ಲಿ ಮೊಬೈಲ್ ಮೂಲಕ ಅಂತರ್ಜಾಲ ಜಾಲಾಡುವರ ಸಂಖ್ಯೆ 40 ದಶಲಕ್ಷದಷ್ಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದು 20ಪಟ್ಟು ವೃದ್ಧಿಯಾಗಿದೆ.
74. ಸೆಂಚುರಿಯನ್ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಸೂಪರ್‌ಸ್ಪೋರ್ಟ್ ಪಾರ್ಕ್ ಅಂಗಳದಲ್ಲಿ 50ನೇ ಶತಕದ ಕೊಡುಗೆ ನೀಡುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆಗೆ ಕಾರಣರಾದರು.
75. ಏಷ್ಯಾ ಮಟ್ಟದ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಸಂಸ್ಥೆ ವಿಪ್ರೊ ಲೈಟಿಂಗ್ ಆಗಿದ್ದು, ಕಂಪೆನಿ ವಿನ್ಯಾಸಗೊಳಿಸಿದ ‘ಎಲ್‌ಇಡಿ ಬೀದಿ ದೀಪ ಒರಿಯೊ’ಗೆ ಈ ವಿಶೇಷ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.
76. ಭೋಪಾಲ್ ಅನಿಲ ದುರಂತ ಸಂತ್ರಸ್ತರ ಕುಟುಂಬದವರಿಗೆ ರೂ 750 ಕೋಟಿ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈಗ ಸದ್ಯದಲ್ಲಿ ಇದನ್ನು ಎಲ್ಲರಿಗೆ ವಿತರಿಸಲು ಆಗುತ್ತಿಲ್ಲ ಎಂದು ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
77. ಅಮೆರಿಕದ ರಾಜತಾಂತ್ರಿಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ‘ತಾತ್ವಿಕ ನಾಯಕತ್ವವಿಲ್ಲದ’ ನಾಯಕಿ ಎಂದೂ, ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರನ್ನು ‘ಸುಲಿಗೆಕೋರ’ ಎಂದೂ ಜರಿದಿದ್ದ ಸಂಗತಿಯು ವಿಕಿಲೀಕ್ಸ್‌ನಿಂದ ಬಹಿರಂಗವಾಗಿದೆ.
78. ದ್ವಿಚಕ್ರ ವಾಹನ ತಯಾರಿಕೆಯ ವಿಶ್ವದ ಅತಿದೊಡ್ಡ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೀರೊ ಗ್ರೂಪ್ ಮತ್ತು ಜಪಾನಿನ ಹೋಂಡಾ ಮೋಟಾರ್ ಕಂಪನಿ ಮಧ್ಯದ 26 ವರ್ಷಗಳ ಬಾಂಧವ್ಯವು ಈಗ ಅಧಿಕೃತವಾಗಿ ಕೊನೆಗೊಂಡಿದೆ.
79. 133 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟಿಗ ಸಚಿನ್. ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಡೆಲ್ ಸ್ಟೇಯ್ನ್ ಎಸೆತವನ್ನು ಕವರ್‌ನತ್ತ ಡ್ರೈವ್ ಮಾಡಿ ಒಂಟಿ ರನ್ ತೆಗೆಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ತೂಬು ಬಿಚ್ಚಿಕೊಂಡ ಅಣೆಕಟ್ಟು. ಸೆಂಚೂರಿಯನ್‌ನಲ್ಲಿ 50ನೇ ಸೆಂಚುರಿ ಸವಿದರು.
80. 175ನೇ ಪಂದ್ಯದಲ್ಲಿ ತೆಂಡೂಲ್ಕರ್ ಅವರಿಂದ ಈ ಅಮೋಘ ಸಾಧನೆ ಮೂಡಿಬಂದಿದೆ. 197 ಎಸೆತಗಳಲ್ಲಿ ಮೂರಂಕಿ ದಾಟಿದರು.
81. ಸದ್ಯ ಸಚಿನ್ 14509 ರನ್ ಪೇರಿಸಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ (12333) ಹೊಂದಿದ್ದಾರೆ. 37 ವರ್ಷ ವಯಸ್ಸಿನ ದ್ರಾವಿಡ್ 12000 ರನ್ ಸಾಧನೆಗಾಗಿ 148 ಪಂದ್ಯ ಹಾಗೂ 255 ಇನಿಂಗ್ಸ್ ಆಡಬೇಕಾಯಿತು. ಅದರಲ್ಲಿ 31 ಶತಕ ಹಾಗೂ 59 ಅರ್ಧ ಶತಕಗಳಿವೆ. 53.31 ಸರಾಸರಿ ಹೊಂದಿದ್ದಾರೆ.
82. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ 175 ಪಂದ್ಯಗಳಿಂದ 14509 ರನ್ ಗಳಿಸಿದ್ದಾರೆ.
83. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ 442 ಪಂದ್ಯಗಳಿಂದ 17598 ರನ್ ಗಳಿಸಿದ್ದಾರೆ.
84. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 175 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಅಂದರೇ 50 ಗಳಿಸಿದ್ದಾರೆ.
85. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 442 ಪಂದ್ಯಗಳಿಂದ 46 ಶತಕಗಳನ್ನ ಗಳಿಸಿದ್ದಾರೆ.
86. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 90 ಕ್ಕೆ ಅತಿ ಹೆಚ್ಚು ಭಾರಿ ಔಟದ ಆಟಗಾರ 18
87. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಆಟಗಾರ 61
88. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ ಆಟಗಾರ 16
89. ಸಚಿನ್ ತೆಂಡೂಲ್ಕರ್ 10 ಸಾವಿರಗಳ ರನ್ ಗಡಿ ದಾಟಿದ ಮೊದಲ ಆಟಗಾರ .
90. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ( 1796 ರನ್ ,ಸರಾಸರಿ 59.87 )
91. ಸಚಿನ್ ತೆಂಡೂಲ್ಕರ್ 15000 ರನ್ ಗಡಿ ದಾಟಿದ ಮೊದಲ ಆಟಗಾರ .
92. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪುರಸ್ಕಾರಗಳಿಸಿದ ಆಟಗಾರ 8 .
93. ಸಚಿನ್ ತೆಂಡೂಲ್ಕರ್ 1996 ರ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಮತ್ತು ಸರಾಸರಿ ಹೊಂದಿದ ಆಟಗಾರ ( 573 ರನ್ ಸರಾಸರಿ 87.16 )
94. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನ ಒಂದೆ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ (2003 ರಲ್ಲಿ 673 ರನ್ ) .
95. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಆಟಗಾರ 90.
96. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಆಡಿದ ಆಟಗಾರ 442.
97. ಸಚಿನ್ ತೆಂಡೂಲ್ಕರ್ 10 ವರ್ಷಗಳ ಕಾಲ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಮೊದಲ ಆಟಗಾರ .
98. ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಟೆಸ್ಟ್ ಆಡಿದ ಆಟಗಾರ 175.
99. ಸಚಿನ್ ತೆಂಡೂಲ್ಕರ್ ರಾಜೀವ್ ಗಾಂಧಿ ಖೇಲ್ ರತ್ನ , ಅರ್ಜುನ್ ಮತ್ತು ಪದ್ಮಶ್ರೀ ಈ ಮೂರು ಪ್ರಶಸ್ತಿಗಳನ್ನ ಗಳಿಸಿದ ಏಕೈಕ ವ್ಯಕ್ತಿ .
100. ಸಚಿನ್ ತೆಂಡೂಲ್ಕರ್ ರಣಜಿ , ದುಲೀಪ್ ಮತ್ತು ಇರಾನಿ ಟ್ರೋಪಿಗಳಲ್ಲಿ ಚೊಚ್ಚಲ ಪಂದ್ಯ ಪಂದ್ಯ ಶತಕ ಬಾರಿಸಿದ ಏಕೈಕ ವ್ಯಕ್ತಿ .
101. ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ನ ಕೌಂಟಿ ಕ್ಲಬ್ ಯಾರ್ಕ್ ಶೈರ್ ತಂಡವನ್ನು ಪ್ರತಿನಿಧಿಸಿದ ಮೊದಲ ವಿದೇಶಿ ಆಟಗಾರ ( 19 ನೇ ವಯಸ್ಸಿನಲ್ಲೆ ಸೇರ್ಪಡೆ .
102. ಕ್ರೀಡಾ ಋತುವಿನಲ್ಲಿ 7 ಬಾರಿ ಸಚಿನ್ ಸಾವಿರ ರನ್ ಗಳ ಗಡಿ ದಾಟಿದ್ದಾರೆ.
103. ಸಚಿನ್ ತೆಂಡೂಲ್ಕರ್ ಕ್ರೀಡಾ ಋತುವಿನಲ್ಲಿ ಅತ್ಯಧಿಕ 1894 ರನ್ ಗಳಿಕೆ ( 1998 ).
104. ಸಚಿನ್ ತೆಂಡೂಲ್ಕರ್ 56 ಬಾರಿ ಪಂದ್ಯ ಶೇಷ್ಠರಾಗಿ ಆಯ್ಕೆಯಾಗಿದ್ದು ಈ ಬಾರಿ 5 ಪೈಕಿ ಭಾರತ ಸೋತಿದೆ.
105. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 50 ಶತಕ ಬಾರಿಸಿದ ಮೊದಲ ಆಟಗಾರ .
106. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 75 ಶತಕ ಸಿಡಿಸಿದ ಮೊದಲ ಆಟಗಾರ.
107. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಟೆಸ್ಟ್ 175 ಪಂದ್ಯ 14513 ರನ್ ಏಕದಿನ 442 ಪಂದ್ಯ 17598 ರನ್ ಒಟ್ಟು 31,958 ರನ್ .
108. ಸಚಿನ್ ತೆಂಡೂಲ್ಕರ್ – ಗಂಗೂಲಿ ಮೊದಲ ವಿಕೆಟ್ ಅತಿ ಹೆಚ್ಚು ಜತೆಯಾಟ ನಡೆಸಿದ ವಿಶ್ವದಾಖಲೆ ಹೊಂದಿದ್ದಾರೆ, 128 ಪಂದ್ಯಗಳಲ್ಲಿ 6271 ರನ್ .
109. ಸಚಿನ್ ತೆಂಡೂಲ್ಕರ್ – ಗಂಗೂಲಿ 20 ಬಾರಿ ಮೊದಲ ವಿಕೆಟ್ ಶತಕದ ಜೊತೆಯಾಟ ನಡೆಸಿರುವುದ ದಾಖಲೆ.
110. ಸಚಿನ್ ತೆಂಡೂಲ್ಕರ್ – ದ್ರಾವಿಡ್ 1999 ರಲ್ಲಿ ನ್ಯೂಜಿಲೆಂಡ್ ವಿರುದ್ದ 331 ರನ್ ಗಳ ಜೊತೆಯಾಟ ನಡೆಸಿರುವುದು ವಿಶ್ವದಾಖಲೆಯಾಗಿದೆ.
111. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 200ರನ್ ಗಳ ಜೊತೆಯಾಟವನ್ನು 6 ಬಾರಿ ನಿಭಾಯಿಸಿದ್ದಾರೆ, ಸಚಿನ್ ಮತ್ತು ದ್ರಾವಿಡ್ ಈ ಸಾಧನೆಯಲ್ಲಿ ಸಮಪಾಲು ಪಡೆದಿದ್ದಾರೆ.

ಪ್ರಚಲಿತ ಘಟನೆಗಳು

1. ಭಾರತದ ಆರ್ಥಿಕ, ಕೈಗಾರಿಕಾ ಅಭಿವೃದ್ಧಿ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದರು. ಜನರಲ್ ಎಲೆಕ್ಟ್ರೀಕ್ಸ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ರಿ ಇಮ್ಮೆಲ್ಟ್ ‘ಗ್ಲೋಬಲ್ ಲೀಡರ್‌ಷಿಪ್ ಅವಾರ್ಡ್’ ಪಡೆದುಕೊಂಡರು.
2. ಏಷ್ಯಾ ಮತ್ತು ಅಮೆರಿಕ ಉದ್ಯಮಿಗಳ ನಡುವೆ ಹೆಚ್ಚಿನ ಹೊಂದಾಣಿಕೆ ಮೂಡಿಸುವ ಸಲುವಾಗಿ ‘ಏಷ್ಯಾ ಸೊಸೈಟಿ’ ಸ್ಥಾಪಿಸಿರುವ ‘ಗ್ಲೋಬಲ್ ವಿಷನ್ ಅವಾರ್ಡ್’ ಪ್ರಶಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ, ಉದ್ಯಮಿ ಮುಖೇಶ್ ಅಂಬಾನಿ ಸ್ವೀಕರಿಸಿದರು.
3. ಅಮೆರಿಕಾದ ಅಧ್ಯಕ್ಷ 2012 ರ ಚುನಾವಣಿಗೆ ಪ್ರಸ್ತುತ ‘ಫಾಕ್ಸ್ ನ್ಯೂಸ್’ ಚಾನೆಲ್‌ನಲ್ಲಿ ವ್ಯಾಖ್ಯಾನಕಾರಿಣಿಯಾಗಿ ಮತ್ತು ಕಲಿಕಾ ಚಾನೆಲ್‌ನ ಕೇಬಲ್ ಜಾಲದ ಕಾರ್ಯಕ್ರಮ ವೊಂದರಲ್ಲಿ ಕಾಣಿಸಿ ಕೊಳ್ಳುತ್ತಿರುವ ಪಾಲಿನ್, ಪ್ರತಿ ಆವತರಣಿಕೆಗೆ (ಎಪಿಸೋಡ್) 2.50 ಲಕ್ಷ ಅಮೆರಿಕನ್ ಡಾಲರ್ ಸಂಭಾವನೆ ಪಡೆಯುತ್ತಿ ರುವುದಾಗಿ ‘ನ್ಯೂಯಾಕ್ ಟೈಮ್ಸ್’ ವರದಿ ಮಾಡಿದೆ.
4. ಸುಪ್ರೀಂಕೋರ್ಟ್‌ನಲ್ಲಿ ನಡೆದಿರುವ 2ಜಿ ಹಗರಣದ ವಿಚಾರಣೆಯಲ್ಲಿ ಪ್ರಧಾನಿ ಪರ ವಕಾಲತ್ತು ವಹಿಸುವ ಹೊಣೆಯನ್ನು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್ ಅವರಿಂದ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರಿಗೆ ಬದಲಾಯಿಸಲಾಗಿದೆ.
5. ಮುಂದಿನ ವರ್ಷದ ವೇಳೆಗೆ ದೇಶದ 9.306ಕೋಟಿ ಜನರು ಕೊಳೆಗೇರಿ ವಾಸಿಗಳಾಗಲಿದ್ದಾರೆ ಎಂದು ವಸತಿ, ಮತ್ತು ನಗರ ಬಡತನ ನಿರ್ಮೂಲನೆ ಸಚಿವೆ ಕುಮಾರಿ ಸೆಲ್ಜಾ ಶುಕ್ರವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
6. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಮೇಲಾ ಆ್ಯಂಡರ್ಸನ್ ತುಂಡುಡುಗೆಯಲ್ಲಿ ‘ಧಕ್ ಧಕ್ ಕರ್ನೇ ಲಗಾ..’ ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತು ‘ಅಶ್ಲೀಲತೆಯ ಆರೋಪದ ಮೇಲೆ ಈ ಕಾರ್ಯಕ್ರಮದ ಸಮಯ ಬದಲಾವಣೆಗೆ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಆದೇಶಿಸಿದ್ದು- ಜಾಗತಿಕ ಮಟ್ಟದಲ್ಲಿ ಈ ಜನಪ್ರಿಯ ಭಾರತೀಯ ರಿಯಾಲಿಟಿ ಶೋ ಪ್ರಚಾರವನ್ನು ಪಡೆಯಲು ನೆರವಾಗಿದೆ.
7. ಆಸ್ಟ್ರೇಲಿಯಾದಲ್ಲಿನ ಭಾರತೀಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ದೌರ್ಜನ್ಯದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಸಮುದಾಯದ ಪ್ರಮುಖರು ತಮ್ಮ ಹಕ್ಕುಗಳು ಹಾಗೂ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದಾರೆ.ಹೊಸ ಸಂಘಟನೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಆಸ್ಟ್ರೇಲಿಯನ್ಸ್ (ಎನ್‌ಸಿಐಎ) ಎಂದು ಹೆಸರಿಡಲಾಗಿದೆ.
8. ಪಾಕಿಸ್ತಾನ ತಂಡ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ವೆಂಟಿ-20 ಕ್ರಿಕೆಟ್ ಫೈನಲ್ ಪಂದ್ಯ ದಲ್ಲಿ ಬಾಂಗ್ಲಾದೇಶದ ವಿರುದ್ಧ 10 ವಿಕೆಟ್‌ಗಳ ಜಯ ಪಡೆಯಿತು.
9. ಮುಕ್ತ ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾ ರಾಜಧಾನಿ ಪಣಜಿ ನಲವತ್ತೊಂದನೆಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಜ್ಜಾಗಿದೆ. ಪಣಜಿಯನ್ನು ಚಿತ್ರೋತ್ಸವದ ಕಾಯಂ ನೆಲೆಯಾಗಿ ಪರಿಗಣಿಸಿದ ನಂತರ ನಡೆಯುತ್ತಿರುವ ಏಳನೇ ವರ್ಷದ ಚಿತ್ರೋತ್ಸವ ಇದು.
10. ಅಕ್ಟೋಬರ್ ತಿಂಗಳಲ್ಲಿ ದೇಶದ ರಫ್ತು ಪ್ರಮಾಣವು ಶೇ 21ರಷ್ಟು ವೃದ್ಧಿಯಾಗಿದ್ದು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಮದು ಹೆಚ್ಚಳವನ್ನು ಹಿಂದಿಕ್ಕಿದೆ.
11. ಭಾರತದ ಒಟ್ಟು 18 ಶತಕೋಟಿ ಡಾಲರ್‌ಗಳಷ್ಟು (ರೂ 90,000 ಕೋಟಿ) ರಫ್ತು ಸಾಧ್ಯವಾಗಿದ್ದು, ಆಮದು ಪ್ರಮಾಣವು ಶೇ 6.8ರಷ್ಟು ಏರಿಕೆಯಾಗಿ 28 ಶತಕೋಟಿ ಡಾಲರ್‌ಗಳಷ್ಟು (ರೂ 1,40,000 ಕೋಟಿ) ಆಗಿದೆ.
12. ಸೆಹ್ವಾಗ್ ಟೆಸ್ಟ್‌ನಲ್ಲಿ ಅವರ ಸಿಕ್ಸರ್‌ಗಳ ಸಂಖ್ಯೆ 84ಕ್ಕೇರಿತು. ಆ್ಯಡಂ ಗಿಲ್‌ಕ್ರಿಸ್ಟ್ (100 ಸಿಕ್ಸರ್) ದಾಖಲೆ ಹೊಂದಿದ್ದಾರೆ.
13. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಅಧ್ಯಕ್ಷರಾಗಿ ಭಾನುವಾರ 43 ಮತಗಳ ಅಂತರದಿಂದ ಆಯ್ಕೆಯಾದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಕ್ಷಣಕ್ಕೆ ಪ್ರತಿಕ್ರಿಯಿಸಿದ ಪರಿ ಇದು.
14. ಶ್ರೀನಾಥ್ ತಮ್ಮ ಪ್ರತಿಸ್ಪರ್ಧಿ ಎ.ವಿ. ಜಯಪ್ರಕಾಶ ವಿರುದ್ಧ 245 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
15. ಅಂತರರಾಷ್ಟ್ರೀಯ ಕ್ರಿಕೆಟ್‌ರಂಗದಲ್ಲಿ ಅಪಾರ ಅನುಭವ ಪಡೆದಿರುವ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಅತ್ಯಧಿಕ ಮತಗಳಿಂದ ಗೆದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದರು.
16. ಕುಂಬ್ಳೆ ಬಣದಿಂದ ಉಪಾಧ್ಯಕ್ಷರಾಗಿ ರಾಜರ್ ಬಿನ್ನಿ, ಬಿ.ಕೆ. ವೆಂಕಟೇಶ್ ಪ್ರಸಾದ್, ಪಿ. ಸದಾನಂದ ಮಯ್ಯ, ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
17. ಏಷ್ಯನ್ ಕ್ರೀಡಾಕೂಟದ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ‘ಬೆಂಗಳೂರು ಹುಡುಗ’ ಪಂಕಜ್ ಅಡ್ವಾಣಿ.
18. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ 1995ರಿಂದ ಈವರೆಗೆ ನಡೆದಿರುವ ಭೂಹಗರಣಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್ ನೇತೃತ್ವದ ಆಯೋಗವನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
19.
20. ವಿಶ್ವದ ಪ್ರತಿಷ್ಠಿತ ಶಿಷ್ಯವೇತನ ‘ರೋಡ್ಸ್ ಸ್ಕಾಲರ್‌ಷಿಪ್-2011’ಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 4 ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
21. ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರಲು ಸುಲಭ ಮಾರ್ಗವಾಗಿರುವ ಅಮೆರಿಕ ಗ್ರೀನ್ ಕಾರ್ಡ್ ವಾರ್ಷಿಕ ಲಾಟರಿ ಯೋಜನೆಗೆ ನಾನಾ ದೇಶಗಳ 1.5 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ.
22. ‘ಅಲ್ಪಸಂಖ್ಯಾತರ ಸ್ಥಿತಿ- ಗತಿಗಳ ಅಧ್ಯಯನಕ್ಕೆ ನೇಮಕ ಮಾಡಲಾದ ಸಾಚಾರ್, ರಂಗನಾಥ್ ಮಿಶ್ರಾ ನೇತೃತ್ವದ ಸಮಿತಿಗಳು ವರದಿ ನೀಡಿದ್ದರೂ ಅವುಗಳ ಶಿಫಾರಸುಗಳನ್ನು ಜಾರಿಗೆ ತರುವ ಕೆಲಸ ಮಾತ್ರ ಆಗುತ್ತಿಲ್ಲ’
23. ಭಾರತದರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಅವರು ಸೋಮವಾರ ಅಧ್ಯಕ್ಷರ ಅರಮನೆಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
24. ನ್ಯಾಯಮೂರ್ತಿ ಪದ್ಮರಾಜ್ ಅವರು ಪ್ರಸ್ತುತ ರಾಜ್ಯದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಶುಲ್ಕ ನಿಯಂತ್ರಣ ಆಯೋಗದ ಅಧ್ಯಕ್ಷರಾಗಿದ್ದಾರೆ.
25. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಆತ್ಮ ಚರಿತ್ರೆ ‘ಡಿಸಿಷನ್ ಪಾಯಿಂಟ್’ ಕೃತಿ ಅತ್ಯುತ್ತಮ ಮಾರಾಟವಾದ ಪುಸ್ತಕವಾಗಿದ್ದು, 10 ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ.
26. ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಏರಿಸುವ ಸಂಬಂಧ ಸಂವಿಧಾನದ ಉದ್ದೇಶಿತ (114ನೇ ತಿದ್ದುಪಡಿ) ಮಸೂದೆ 2010 ಗೆ ಹಲವಾರು ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
27. ಬಹಳ ದಿನಗಳಿಂದ ಎದುರು ನೋಡುತ್ತಿದ್ದ, ಮೊಬೈಲ್ ಸೇವಾ ಸಂಸ್ಥೆ ಬದಲಿಸಿದರೂ ಮೊಬೈಲ್ ಸಂಖ್ಯೆ ಬದಲಾಗದ (ಮೊಬೈಲ್ ನಂಬರ್ ಪೋರ್ಟೆಬಿಲಿಟಿ-ಎಂಎನ್‌ಟಿ) ಸೇವಾ ಸೌಲಭ್ಯವು ಗುರುವಾರ ಹರಿಯಾಣ ವೃತ್ತದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಲನೆಗೆ ಬಂದಿತು.
28. ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಈ ಸೇವೆಯನ್ನು ಇಲ್ಲಿ ಉದ್ಘಾಟಿಸಿದರು ದೇಶದಾದ್ಯಂತ ಇರುವ ಉಳಿದ 21 ವೃತ್ತಗಳಲ್ಲಿ ಈ ಸೇವೆಯು 2011ರ ಜನವರಿ 20ರಿಂದ ಜಾರಿಗೆ ಬರಲಿದೆ.
29. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥ ಅಧ್ಯಕ್ಷ ಡೊಮಿನಿಕ್ ಸ್ಟ್ರಾಸ್ ಕಾನ್.
30. ವಿಕಿಲೀಕ್ಸ್ ಬಹಿರಂಗಗೊಳಿಸಿರುವ ಅಮೆರಿಕದ 2.5 ಲಕ್ಷ ರಹಸ್ಯ ದಾಖಲೆಗಳ ಪೈಕಿ 3038 ದಾಖಲೆಗಳು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಸಂಬಂಧಪಟ್ಟವು ಎಂಬ ಸಂಗತಿಗೆ ಇದೀಗ ಬೆಳಕಿಗೆ ಬಂದಿದೆ.
31. ರಹಸ್ಯ ದಾಖಲೆಗಳೇನಲ್ಲ; 2,51,287 ದಾಖಲೆಗಳ ಪೈಕಿ 11,000 ದಾಖಲೆಗಳು ಮಾತ್ರ ಗೋಪ್ಯಕ್ಕೆ ಅರ್ಹವಾದವು; 9000 ದಾಖಲೆಗಳು ‘ವಿದೇಶೀಯರಿಗೆ ನಿಷಿದ್ಧ’ ಎಂದು ವರ್ಗೀಕರಣಗೊಂಡಿದ್ದವು; 4000 ದಾಖಲೆಗಳು ‘ಗೋಪ್ಯತೆಯ ಜತೆಗೆ ವಿದೇಶೀಯರಿಗೆ ನಿಷೇಧ’ ವಿಭಾಗದಡಿ ಸೇರಿದ್ದವು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
32. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ನಡೆಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲು ಅವರು 2009ರ ಜುಲೈ 31ರಂದು ಸೂಚಿಸಿದ್ದರು.
33. ನೀರಾ ರಾಡಿಯಾ ಮತ್ತು ಆಕೆಯು ತನ್ನ ಗ್ರಾಹಕರೊಂದಿಗೆ ನಡೆಸಿದ ಸಂಭಾಷಣೆಯ ಧ್ವನಿಮುದ್ರಣದ ಕ್ಯಾಸೆಟ್ ಸೋರಿಕೆ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
34. ಆಜಾದಿ ಬಚಾವೊ ಆಂದೋಲನದ ಚಳವಳಿಕಾರ, ಸ್ವದೇಶಿ ಚಿಂತನೆಯ ಪ್ರಚಾರಕ ರಾಜೀವ್ ದೀಕ್ಷಿತ್ (44) ಅವರು ತೀವ್ರ ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
35. ‘ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಪಿ.ಜೆ.ಥಾಮಸ್.
36. ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಇಂಟರ್‌ಪೋಲ್‌ ಬಂಧನಕ್ಕಾಗಿ ವಾರೆಂಟ್ ಹೊರಡಿಸಿದೆ.
37. ವಿವಾದಿತ ಇಟಾಸ್ಕಾ ಕಂಪೆನಿಗೆ ಕೆಐಎಡಿಬಿ ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು 87 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ 10 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
38. ಭಾರತೀಯ ದಂಡ ಸಂಹಿತೆ (ಐಪಿಸಿ)ಕಲಮು 491ನೇ (ಪರರ ಹೆಸರು ಹೇಳಿ ವಂಚನೆ),
39. ಭಾರತೀಯ ದಂಡ ಸಂಹಿತೆ (ಐಪಿಸಿ) 420 (ವಂಚನೆ),
40. ಭಾರತೀಯ ದಂಡ ಸಂಹಿತೆ (ಐಪಿಸಿ) 465 (ನಕಲಿ ದಾಖಲೆ ಸೃಷ್ಟಿ),
41. ಭಾರತೀಯ ದಂಡ ಸಂಹಿತೆ (ಐಪಿಸಿ) 468 (ಬೇರೆಯವರನ್ನು ವಂಚಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು) 32 - ರೆಡ್ ವಿತ್ 120 ಬಿ (ಒಳಸಂಚು)
42. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 7 - ಕಚೇರಿಯ ಕೆಲಸ ಮಾಡಿಕೊಡಲು ಲಂಚ ಪಡೆಯುವುದು.
43. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 8 - ಸರ್ಕಾರಿ ಅಧಿಕಾರಿಗಳಿಗೆ ಶಿಫಾರಸು ಮಾಡುವ ಸಲುವಾಗಿ ಲಂಚ ಪಡೆಯುವುದು.
44. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 12- ಲಂಚ ಪಡೆಯಲು ಪ್ರಚೋದಿಸುವುದು.
45. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 13(1)(ಡಿ)- ಲಂಚ ಪಡೆಯುವ ಸಂಬಂಧ ಅನುಚಿತ ವರ್ತನೆ.
46. 2ಜಿ ಸ್ಪ್ರಕ್ಟ್ರಮ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಕಳೆದ 15 ದಿನಗಳಿಂದ ಸಂಸತ್ ಕಲಾಪಗಳಿಗೆ ಅಡ್ಡಿ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಬೊಕ್ಕಸಕ್ಕೆ 95 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
47. ಪ್ರಸಕ್ತ ವರ್ಷದ ಲೋಕಸಭೆ ಬಜೆಟ್ 347.65 ಕೋಟಿ ರೂಪಾಯಿಯಾದರೆ ರಾಜ್ಯಸಭೆಗೆ 172.33 ಕೋಟಿ ರೂಪಾಯಿ. ಒಟ್ಟಾರೆ ಸಂಸತ್ತಿಗೆ 527.45 ಕೋಟಿ ರೂಪಾಯಿ ನಿಗದಿಯಾಗಿದೆ.
48. ನ್ಯೂಟ್ರಾನ್ ಬಾಂಬ್ ಅನ್ವೇಷಕ ಸ್ಯಾಮುಯೆಲ್ ಟಿ. ಕೋಹೆನ್(89) ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ನಿಧನರಾದರು. ಅವರು ಉದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
49. ಪರಮಾಣು ಶಸ್ತ್ರಾಸ್ತ್ರಗಳಿಗೆ ಪರ್ಯಾಯವಾಗಿ ಪರಿಣಾಮಕಾರಿಯಾಗಿ ಬಳಸುವಂತಹ ನ್ಯೂಟ್ರಾನ್ ಬಾಂಬ್‌ಅನ್ನು ಕೋಹೆನ್ 1958ರಲ್ಲಿ ಕಂಡುಹಿಡಿದಿದ್ದರು.
50. ಅಕ್ರಮವಾಗಿ ಭೂಮಿ ಪಡೆಯಲು ಸಚಿವರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಯುನೈಟೆಡ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪೂರ್ಣಯ್ಯ.
51. ಪ್ರಸ್ತುತ 4,000 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಭೂಮಿಯನ್ನು ಹೊಂದಿರುವ ಇಟಾಸ್ಕಾ ಕಂಪೆನಿ ಭೂಮಿ ಪಡೆಯುವ ಹಾದಿಯುದ್ದಕ್ಕೂ ಅಕ್ರಮವನ್ನೇ ಮಾಡಿತ್ತು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ.
52. ರೂ 1 ಲಕ್ಷ ಮೌಲ್ಯದ ಕಂಪೆನಿಯಲ್ಲಿ ಯುನೈಟೆಡ್ ಟೆಲಿಕಾಂ ಬರೋಬ್ಬರಿ 350 ಕೋಟಿ ಷೇರು ಹೂಡಿಕೆ ಮಾಡುತ್ತದೆ.
53. ಅಚ್ಚರಿಯ ಸಂಗತಿ ಎಂದರೆ ‘ಸೌಭಾಗ್ಯ ಪೆಟ್ರೋಲ್ ಬಂಕ್’ನ ಕಾರ್ಮಿಕರ ಹೆಸರಿನಲ್ಲೇ ಇಂದೂ ಬಿಲ್ಡರ್ಸ್ ಎಂಬ ಬೇನಾಮಿ ಕಂಪೆನಿ ಅಸ್ತಿತ್ವಕ್ಕೆ ಬಂದಿತ್ತು.
54. ಚೀನಾದ ಒಂದು ಅತಿ ವೇಗದ ಪ್ರಯಾಣಿಕರ ರೈಲು ಪರೀಕ್ಷಾರ್ಥ ಓಡಿಸಿದ ವೇಳೆ ಗಂಟೆಗೆ 486 ಕಿ.ಮೀ. ಚಲಿಸಿ ವಿಶ್ವ ದಾಖಲೆಯನ್ನು ಮುರಿದಿದೆ ಎಂದು ಚೀನಾದ ರೈಲ್ವೆ ಸಚಿವಾಲಯ ತಿಳಿಸಿದೆ.
55. ಆರೋಪಿಯನ್ನು ಶರಣಾಗತನಾಗಿ ನಂತರ ಕ್ರಮಬದ್ಧವಾಗಿ ಜಾಮೀನು ಪಡೆಯುವಂತೆ ಯಾವುದೇ ಷರತ್ತು ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಾಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಕೆ.ಎಸ್. ರಾಧಾಕೃಷ್ಣನ್ ಹೇಳಿದ್ದಾರೆ.
56. ಪರಮಾಣು ಬಾಧ್ಯತಾ ಮಸೂದೆೆಯಲ್ಲಿನ ಕರಾರುಗಳು ಭಾರತದ ಆಂತರಿಕ ಪರಮಾಣು ಕೈಗಾರಿಕೆಗೆ ತೀವ್ರವಾದ ಪೆಟ್ಟು ನೀಡಲಿದೆ ಎಂದು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
57. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆ ಎಸಗಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಸಂಚು ರೂಪಿಸಿದ್ದ ಸಂಗತಿ ವಿಕಿಲೀಕ್ಸ್ ಅಮೆರಿಕದ ಬೇಹುಗಾರಿಕಾ ದಳ 2009ರ ಜೂನ್ 19ರಂದು ಅಮೆರಿಕ ಸರ್ಕಾರಕ್ಕೆ ಈ ಆಘಾತಕಾರಿ ಮಾಹಿತಿ ರವಾನಿಸಿದ್ದ ಅಂಶ ದಾಖಲೆಯಿಂದ ದೃಢಪಟ್ಟಿದೆ.
58. ಕ್ವಾಲಾಲಂಪುರ ಅಂತಿಮ ಸುತ್ತಿನ ಪ್ರತಿಭಾ ಸ್ಪರ್ಧೆಯಲ್ಲಿ ‘ಬೆಲ್ಲಿ’ ನೃತ್ಯ ಪ್ರದರ್ಶಿಸಿದ ನಿಕೋಲ್ 17 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ‘ಮಿಸ್ ಅರ್ಥ್’ ಆಗಿ ಹೊರಹೊಮ್ಮಿದರು.
59. ಬ್ಲ್ಯಾಕ್ ಬೆರಿ ಮೆಸೆಂಜರ್ ಸೇವೆಯಲ್ಲಿ (ಬಿಬಿಎಂ) ಬಳಸುವ ಗೂಢ ಲಿಫಿಯ ಕುರಿತು ಭಾರತ ಸರ್ಕಾರಕ್ಕೆ ಕಾನೂನು ರೀತಿಯಲ್ಲಿ ಮಾಹಿತಿ ನೀಡುವುದಾಗಿ ರಿಸರ್ಚ್ ಇನ್ ಮೋಷನ್ (ರಿಮ್) ಹೇಳಿದೆ.‘
60. ಹರಾಜಿನಲ್ಲಿ ಕೊಚ್ಚಿ ತಂಡವನ್ನು 1533.33 ಕೋಟಿ ರೂಪಾಯಿಗೆ ಕೊಳ್ಳಲಾಗಿತ್ತು.
61. ಕೊಚ್ಚಿ ತಂಡದ ಪಾಲುದಾರ ಕಂಪೆನಿಗಳಾದ ಆ್ಯಂಕರ್ ಅರ್ಥ್, ಪಾರಿನೀ ಡೆವಲಪರ್ಸ್, ರೋಸಿ ಬ್ಲೂ ಮತ್ತು ಫಿಲ್ಮ್ ವೇವ್ ಬಳಿ ಶೇ 74 ರಷ್ಟು ಷೇರು ಇವೆ. ಉಳಿದ ಶೇ 26 ಪಾಲು ‘ಫ್ರೀ ಈಕ್ವಿಟಿ’ ರೂಪದಲ್ಲಿ ಗಾಯಕ್ವಾಡ್ ಕುಟುಂಬದ ರೆಂಡೆವೂ ಸ್ಪೋರ್ಟ್ಸ್ ವರ್ಲ್ಡ್ ಕಂಪೆನಿಯ ಬಳಿಯಿದೆ.
62. ಐಪಿಎಲ್ ಒಪ್ಪಂದವನ್ನು ಮುರಿದದ್ದಕ್ಕೆ ಬಿಸಿಸಿಐ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಈಗಾಗಲೇ ನಾಲ್ಕನೇ ವರ್ಷದ ಟೂರ್ನಿಯಲ್ಲಿ ಪಾಲ್ಗೊಳ್ಳುವುದರ ಮೇಲೆ ನಿಷೇಧ ಹೇರಿದೆ.
63. ಇಪ್ಪತ್ತೊಂದನೆಯ ಶತಮಾನದಲ್ಲಿ ಸುದ್ದಿಯ ಸ್ವರೂಪ ಮತ್ತು ವಿಶ್ವಾಸಾರ್ಹತೆಯನ್ನೇ ಬದಲಿಸಿರುವ ವಿಕಿಲೀಕ್ಸ್ ಒಂದು ಸ್ವತಂತ್ರ ಸುದ್ದಿ ಮಾಧ್ಯಮ ಸಂಸ್ಥೆ. ಜ್ಯೂಲಿಯನ್ ಅಸ್ಸಾಂಜೆ ಎಂಬಾತ 2006ರಲ್ಲಿ ಇದನ್ನು ಹುಟ್ಟು ಹಾಕಿದ.
64. ವಿಕಿಲೀಕ್ಸ್ ‘ದಿ ಸನ್‌ಶೈನ್ ಪ್ರೆಸ್’ ಎಂಬ ಹೆಸರಿನ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.
65. ಸ್ವಯಂ ಸನ್‌ಶೈನ್ ಸಂಸ್ಥೆಯೇ ಹೇಳಿಕೊಂಡಿರುವಂತೆ ಚೀನಾದ ಕೆಲವು ಬಂಡುಕೋರರು ಇದರ ಜನ್ಮದಾತರು.
66. 2008ರ ಸಾಲಿನ ‘ಎಕನಾಮಿಸ್ಟ್’ ನಿಯತಕಾಲಿಕದ ಮಾಧ್ಯಮ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿರುವ ವಿಕಿಲೀಕ್ಸ್ ನಿಜಕ್ಕೂ ಈಗ ಭ್ರಷ್ಟರು ಹಾಗೂ ದಾರಿ ಬಿಟ್ಟ ರಾಷ್ಟ್ರಗಳ ಪಾಲಿನ ಅದ್ಭುತ ಕಾವಲುಗಾರ.
67. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಅನುಸಾರ ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಆಸ್ಟ್ರೇಲಿಯಾ ಮೂಲದವನು.
68. ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶ ಈತನನ್ನು ನಮ್ಮಲ್ಲಿಗೆ ಬಾ ನಿನ್ನನ್ನು ರಕ್ಷಿಸುತ್ತೇವೆ ಎಂದು ಕೈಬೀಸಿ ಕರೆಯುತ್ತಿದೆ.
69. ವಾರ್ಷಿಕ ಹಜ್ ಯಾತ್ರೆ ವೇಳೆ ಸಂಗ್ರಹವಾಗುವ ಭಾರಿ ಪ್ರಮಾಣದ ಹಣವನ್ನೇ 26/11 ದಾಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಮೆರಿಕದ ರಾಯಭಾರ ಕಚೇರಿ ಶಂಕಿಸಿರುವುದನ್ನು ವಿಕಿಲೀಕ್ಸ್ ವೆಬ್‌ಸೈಟ್ ಬಹಿರಂಗಪಡಿಸಿದೆ.
70. ಚೀನಾ ಜತೆಗಿನ ರಾಜತಾಂತ್ರಿಕ ಸಂಬಂಧದಲ್ಲಿ ಯಾವುದಾದರೂ ತೊಂದರೆ ಎದುರಾದರೆ ಅದರ ವಿರುದ್ಧ ಬಲ ಪ್ರಯೋಗಕ್ಕೂ ಅಮೆರಿಕ ಸಜ್ಜಾಗಿರಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಅವರು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ತಿಳಿಸಿದ್ದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
71. ನಿಷೇಧಿತ ಉಗ್ರವಾದಿ ಸಂಘಟನೆ ಲಷ್ಕರ್-ಎ- ತೊಯ್ಬಾ, ತನ್ನ ಕಾರ್ಯ ಚಟುವಟಿಕೆಗಳಿಗಾಗಿ ಪ್ರತಿ ವರ್ಷ 52 ಲಕ್ಷ ಡಾಲರ್ ಆಯವ್ಯಯವನ್ನು ಹೊಂದಿದೆ ಎಂದು ಅಮೆರಿಕದ ರಹಸ್ಯ ದಾಖಲೆಯಿಂದ ತಿಳಿದು ಬಂದಿದೆ.
72. ಲಷ್ಕರ್‌ನ ಈ ಬೃಹತ್ ಮೊತ್ತದ ಆಯವ್ಯಯಕ್ಕೆ ಜಮಾತ್-ಉದ್- ದುವಾ ಸಂಘಟನೆಯ ದತ್ತಿನಿಧಿಯಿಂದ ಹಣ ಹರಿದು ಬರುತ್ತಿದೆ.
73. ಹಫೀಜ್ ಸಯೀದ್ ಎಂಬಾತ ಲಷ್ಕರ್-ಎ-ತೊಯ್ಬಾ ಮತ್ತು ಜಮಾತ್- ಉದ್- ದುವಾ ಎರಡೂ ಸಂಘಟನೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾನೆ.
74. ಹೊಸ ಅಧ್ಯಯನದ ಪ್ರಕಾರ ಹವಾಮಾನ ವೈಪರಿತ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ 2100ರ ವೇಳೆಗೆ ಸಮುದ್ರ ಮಟ್ಟ 3.3 ಅಡಿ (ಒಂದು ಮೀಟರ್) ಹೆಚ್ಚಳವಾಗಬಹುದು,
75. ಜಪಾನ್ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ 2011ರ ಹಣಕಾಸು ವರ್ಷದಲ್ಲಿ ಪರಿಸರ ತೆರಿಗೆಯನ್ನು ಜಾರಿಗೆ ತರಲು ಸರ್ಕಾರಿ ತೆರಿಗೆ ಆಯೋಗ ನಿರ್ಧರಿಸಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
76. 9 ಶತಮಾನಗಳ ಹಿಂದೆ ಚೀನಾ ಆಡಳಿತದ ಚುಕ್ಕಾಣಿ ಹಿಡಿದಿದ್ದ ಚಕ್ರವರ್ತಿ ಸ್ಯಾಂಗ್ ಹ್ಯೂತ್ಸಾಂಗ್ ಅವರ ಕಾಲದ ಸಾಂಪ್ರದಾಯಿಕ ತಂತಿವಾದ್ಯ ಇಲ್ಲಿ ನಡೆದ ಹರಾಜಿನಲ್ಲಿ 2ಕೋಟಿ ಡಾಲರ್‌ಗೆ ದಾಖ ಲೆಯ ಮಾರಾಟವಾಗಿದೆ.
77. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ‘ಆಟಗಾರರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸೀಫ್ ಮತ್ತು ಮೊಹಮ್ಮದ್ ಆಮೇರ್ ಅವರು ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಬಹುದು’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸುದ್ದಿಸಂಸ್ಥೆಗೆ ತಿಳಿಸಿದೆ.
78. ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಮಸೂದೆ- 2010’ ಅಡಿಯಲ್ಲಿ ಮನೆಗೆಲಸ ಮಾಡುವ ಮಹಿಳೆಯರನ್ನು ತರಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
79. ಅಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರಿಗೆ ಪ್ರತಿಷ್ಠಿತ ಹೋಮಿಭಾಭಾ ಆಜೀವ ಸಾಧನೆ ಪ್ರಶಸ್ತಿಯನ್ನು ಜನವರಿ 17 ರಂದು ಇಲ್ಲಿ ನಡೆಯುವ ಭಾರತೀಯ ಪರಮಾಣು ಸಂಸ್ಥೆಯ 21ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು.
80. ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ
81. IPCC – Intergovernmetal Panel On Climate Change
82. ಇರಾನಿನ ವಿಜ್ಞಾನಿಯೊಬ್ಬರು ಆಯ್ಕೆಯಾಗುವುದನ್ನು ತಡೆಗಟ್ಟುವುದಕ್ಕಾಗಿ ಅಮೆರಿಕವು ಐಪಿಸಿಸಿ ಮುಖ್ಯಸ್ಥರೂ ಆದ ವಿಶ್ವಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಆರ್. ಕೆ. ಪಚೌರಿ ಅವರ ಮೇಲೆ ಒತ್ತಡ ಹೇರಿತ್ತು ಎಂಬ ಅಂಶ ವಿಕಿಲೀಕ್ಸ್ ವೆಬ್‌ಸೈಟ್‌ನಿಂದ ಬಹಿರಂಗವಾಗಿದೆ.
83. 2050 ವೇಳೆಗೆ ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು ಶೇ. 80ರಷ್ಟು ನಿಯಂತ್ರಿಸುವ ಯೋಜನೆಯನ್ನು ಅಮೆರಿಕ ಹೊಂದಿದೆ.
84. ಅಂತರರಾಷ್ಟ್ರೀಯ ಸರಾಸರಿಯಂತೆ ಶೇ 71ರಷ್ಟು ಜನರು ಮದ್ಯ ಸೇವಿಸುತ್ತಿದ್ದರೆ,
85. ಭಾರತದಲ್ಲಿ ಈ ಪ್ರಮಾಣ ಕೇವಲ ಶೇ 27ರಷ್ಟು ಮಾತ್ರ. ಮೊದಲ ಸ್ಥಾನದಲ್ಲಿ ಬ್ರಿಟನ್ ಇದೆ. ಅಲ್ಲಿ ಶೇ 84ರಷ್ಟು ಮಂದಿ ಕುಡಿತದ ಚಟ ಅಂಟಿಸಿಕೊಂಡಿದ್ದಾರೆ.
86. ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ.
87. ಎನ್‌ಡಿಎ ಆಡಳಿತವನ್ನೂ ಒಳಗೊಂಡಂತೆ 2001-09ರ ಅವಧಿಯಲ್ಲಿನ 2ಜಿ ತರಂಗಾಂತರ ಹಂಚಿಕೆ ಹಗರಣ ಪರಿಶೀಲನೆಗೆ ಸರ್ಕಾರ ಗುರುವಾರ ಏಕ ವ್ಯಕ್ತಿ ಸಮಿತಿ ರಚಿಸಿದೆ. ನಾಲ್ಕು ವಾರಗಳಲ್ಲಿ ಸಮಿತಿಯು ವರದಿ ನೀಡುವ ನಿರೀಕ್ಷೆ ಇದೆ.
88. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರನ್ನು ಒಳಗೊಂಡ ಏಕ ವ್ಯಕ್ತಿ ಸಮಿತಿಯು ‘2001-09ರ ಅವಧಿಯಲ್ಲಿ ತರಂಗಾಂತರ ಹಂಚಿಕೆಗೆ ಮತ್ತು ಪರವಾನಗಿ ವಿತರಣೆಗೆ ದೂರ ಸಂಪರ್ಕ ಇಲಾಖೆ ಅಳವಡಿಸಿಕೊಂಡಿದ್ದ ಕಾರ್ಯ ವಿಧಾನದ ಯುಕ್ತಾಯುಕ್ತತೆಯನ್ನು ಪರಿಶೀಲಿಸಲಿದೆ’.
89. ದೂರಸಂಪರ್ಕ ನೀತಿಯಲ್ಲಿ ಹಲವು ಲೋಪಗಳಾಗಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಂದು ಟಾಟಾ ಉದ್ಯಮ ಸಮೂಹದ ಮುಖ್ಯಸ್ಥ ರತನ್ ಟಾಟಾ ಆಪಾದಿಸಿದ್ದಾರೆ.
90. ಭಾರತದಲ್ಲಿ ಶೇ 54ರಷ್ಟು ಮಂದಿ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ!
91. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು: ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ಭಾರತ), ಮುರಳಿ ವಿಜಯ್ (ಭಾರತ), ಸುರೇಶ್ ರೈನಾ (ಭಾರತ), ಅಲ್ಬಿ ಮಾರ್ಕೆಲ್ (ದಕ್ಷಿಣ ಆಫ್ರಿಕಾ).
92. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ಮುಂಬೈ ಇಂಡಿಯನ್ಸ್: ಸಚಿನ್ ತೆಂಡೂಲ್ಕರ್ (ಭಾರತ), ಹರಭಜನ್ ಸಿಂಗ್ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಕಿರೋನ್ ಪೊಲಾರ್ಡ್ (ವೆಸ್ಟ್ ಇಂಡೀಸ್).
93. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ರಾಜಸ್ತಾನ್ ರಾಯಲ್ಸ್: ಶೇನ್ ವಾರ್ನ್ (ಆಸ್ಟ್ರೇಲಿಯಾ), ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ).
94. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ದೆಹಲಿ ಡೇರ್‌ಡೆವಿಲ್ಸ್: ವೀರೇಂದ್ರ ಸೆಹ್ವಾಗ್ (ಭಾರತ).
95. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ಭಾರತ).

ಪ್ರಚಲಿತ ಘಟನೆಗಳು

1. ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರು ಕ್ರಮವಾಗಿ ಕೆಎಸ್‌ಸಿಎ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚುನಾವಣೆ ನವೆಂಬರ್ 21 ರಂದು ನಡೆಯಲಿದೆ.
2. ಕುಂಬ್ಳೆ ಸ್ಪರ್ಧಿಸಲು ನಿರ್ಧರಿಸಿರುವ ಕಾರಣ ಅಧ್ಯಕ್ಷರಾಗಿ ಮರು ಆಯ್ಕೆ ಬಯಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಾದಿ ಕಠಿಣವಾಗಿದೆ.
3. ಆದರ್ಶ ಗೃಹ ನಿರ್ಮಾಣ ಸಂಘದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟ ಸೇನೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಇಂಗಿತವನ್ನು ರಕ್ಷಣಾ ಸಚಿವಾಲಯ ವ್ಯಕ್ತಪಡಿಸಿದೆ.
4. ದಕ್ಷಿಣ ಕರೊಲಿನಾ ಪ್ರಾಂತ್ಯದ ಗವರ್ನರ್ ಹುದ್ದೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದ 38 ವರ್ಷದ ನಿಕ್ಕಿ ಹ್ಯಾಲೆ ಜಯಭೇರಿ ಬಾರಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಾಟ್ ಪಕ್ಷದ. ವಿನ್ಸೆಂಟ್ ಶೀಶನ್ ಅವರನ್ನು ಹಿಂದಿಕ್ಕುವ ಮೂಲಕ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
5. ವ್ಯಾಪಾರ ಮತ್ತು ಹೂಡಿಕೆ, ಗಣಿ, ಕಲ್ಲಿದ್ದಲು ಮತ್ತು ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಕಾರ ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಆಫ್ರಿಕಾ ಒಕ್ಕೂಟದ ಪ್ರಮುಖ ದೇಶವಾದ ಮಾಲವಿ ಮತ್ತು ಭಾರತ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
6. ಪಂಡಿತ್ ರಾವ್ ಬರೆದ ‘ಅಕ್ಕಮಹಾದೇವಿ: ಪ್ರೇಮ್ ದಿವಾನಿ ಎಂಬ ಪುಸ್ತಕವನ್ನು ರಾಜ್ಯ ಸಾರಿಗೆ ಸಚಿವ ಮೋಹನ್ ಲಾಲ್ ಬುಧವಾರ ಬಿಡುಗಡೆ ಮಾಡಿದರು.ಅಕ್ಕನ ಕೃತಿಯೊಂದು ಪಂಜಾಬ್‌ಗೆ ಅನುವಾದವಾದ್ದು ಇದೇ ಮೊದಲು.
7. ರೊಮೇನಿಯಾದ ಜಿಪ್ಸಿ ಸಮುದಾಯಕ್ಕೆ ಸೇರಿದ 10 ವರ್ಷದ ಬಾಲೆಯೊಬ್ಬಳು ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದಾಳೆ!ತನ್ನ 10 ವರ್ಷದ ಮಗಳು ತಾಯಿಯಾಗಿರುವುದನ್ನು ಆಕೆಯ ಜಿಪ್ಸಿ ಅಮ್ಮ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ‘ನಮ್ಮ ಕುಟುಂಬಕ್ಕೆ ಮೊಮ್ಮಗಳ ಸೇರ್ಪಡೆಯಾಗಿರುವುದರಿಂದ ಬಹಳ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.
8. ತಂತ್ರಜ್ಞಾನ ಕ್ಷೇತ್ರದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಪ್ರಮುಖ ನಿಯತಕಾಲಿಕೆ ಈ ಆಯ್ಕೆ ಮಾಡಿದ್ದು, ಅಮಿತ್ ಗೋಯಲ್ ಅವರನ್ನು ‘ಆವಿಷ್ಕಾರದ ಆಸ್ಕರ್’ ಎಂದು ಬಣ್ಣಿಸಿದೆ.
9. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಅಮಿತ್ ಗೋಯಲ್ ಅವರು ಇಂಧನ ವಲಯದಲ್ಲಿ ಮಾಡಿರುವ ಸಾಧನೆಗಾಗಿ ಅವರನ್ನು 2010ನೇ ಸಾಲಿನ ಅತ್ಯುತ್ತಮ ಸಂಶೋಧಕ ಎಂದು ಆಯ್ಕೆ ಮಾಡಲಾಗಿದೆ.
10. ಅಕ್ಟೋಪಸ್ ಪಾಲ್-2 ಇದು ಹೊಸದಾಗಿ ಸೇರ್ಪಡೆಗೊಂಡಿರುವ ಅಷ್ಟಪದಿ. ವಿಶ್ವಕಪ್ ಫುಟ್‌ಬಾಲ್ ಪಂದ್ಯಾಟ ದ ಭವಿಷ್ಯ ಹೇಳಿದ್ದ ಅಕ್ಟೋಪಸ್ ಪಾಲ್‌ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದನ್ನು ಪಶ್ಚಿಮ ಜರ್ಮನಿಯ ‘ಸೀ ಲೈಫ್’ ಕೇಂದ್ರಕ್ಕೆ ಸೇರಿಸಲಾಗಿದೆ.
11. ಕ್ರಿಸ್ತಪೂರ್ವ 1550-1295ರ ಅವಧಿಯಲ್ಲಿ ಥೇಬ್ಸ್ ಅನ್ನು ಆಳಿದ ಸತ್ದೆಜೆಹುಟಿ ರಾಜವಂಶಕ್ಕೆ ಸೇರಿದ 18ನೇ ಅರಸನ ಶವ (ಮಮ್ಮಿ)ದ ಮುಖವಾಡ. ಇದನ್ನು ಲಂಡನ್‌ನ ‘ಬ್ರಿಟಿಷ್ ಮ್ಯೂಸಿಯಂ’ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. -ಎಪಿ ಚಿತ್ರ
12. 15 ಶಾಸಕರ ಪೈಕಿ 9 ಮಂದಿ ಸದನ ಸಮಿತಿ ಅಧ್ಯಕ್ಷ ಅಪ್ಪಚ್ಚು ರಂಜನ್ ಅವರಿಗೆ ಲಿಖಿತವಾಗಿ ಉತ್ತರ ನೀಡಿದ್ದಾರೆ.ಖುದ್ದಾಗಿ ಹಾಜರಾಗಿ ಉತ್ತರಿಸಲು ಗುರುವಾರದವರೆಗೂ ಕಾಲಾವಕಾಶವಿದೆ. ಹೀಗಾಗಿ ಉಳಿದ ಶಾಸಕರು ನೋಟಿಸ್‌ಗೆ ಉತ್ತರ ನೀಡುವ ಸಾಧ್ಯತೆಗಳಿವೆ.
13. ಒಬಾಮ ಅವರ ಭೇಟಿಯ ನಿಮಿತ್ತ ಸಂಸತ್ ಭವನವನ್ನು ಸುಂದರಗೊಳಿಸಲಾಗಿದ್ದು ಬ್ರಿಟಿಷರು 1947ರಲ್ಲಿ ಇದೇ ಸೆಂಟ್ರಲ್ ಹಾಲ್‌ನಲ್ಲಿ ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ್ದರು.
14. ಒಬಾಮ ಉತ್ತಮ ವಾಗ್ಮಿಯಾದರೂ ಸಂಸತ್ತಿನ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಎಂಬ ಉಪಕರಣವನ್ನು ಬಳಸಲಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಸ್ಪೀಕರ್ ಮೀರಾ ಕುಮಾರ್ ಮತ್ತು ಸಂಸದೀಯ ವ್ಯವಹಾರ ಸಚಿವ ಪವನ್ ಕುಮಾರ್ ಬನ್ಸಲ್ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ.
15. ಅನ್ಸಾರಿ ಸ್ವಾಗತ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಸಂಸತ್ತಿನಲ್ಲಿಟ್ಟಿರುವ ಸಂದರ್ಶಕರ ಪುಸ್ತಕದಲ್ಲಿ ಒಬಾಮ ಅವರು ಸಹಿ ಹಾಕುವರು.
16. ಆಫ್ರೋ- ಅಮೆರಿಕನ್ ಗೀತೆ ‘ಡೀಪ್ ರಿವರ್’ನೊಂದಿಗೆ ಕಾರ್ಯಕ್ರಮ ಮುಗಿಯಲಿದೆ.
17. ವಿಶ್ವದ ಶ್ರೀಮಂತ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಪ್ರಪಂಚದಲ್ಲೇ ಕನಿಷ್ಠ ಬೆಲೆಯ ನ್ಯಾನೊ ಕಾರು ಮೋಡಿ ಮಾಡಿದೆ.
18. 2,500 ಡಾಲರ್ ಬೆಲೆಯ ಈ ಕಾರನ್ನು ಪರಿಚಯಿಸಿದ ರತನ್ ಟಾಟಾ ಅವರ ಬಗ್ಗೆ ಮಿಶೆಲ್‌ಗೆ ಒಬಾಮ ಹೇಳಿದರು.
19. ಒಬಾಮ ದಂಪತಿ ನವದೆಹಲಿಗೆ ತೆರಳುವ ಮುನ್ನ ಸಂತ ಕ್ಸೇವಿಯರ್ ಕಾಲೇಜಿಗೆ ಭೇಟಿ ನೀಡಿದ್ದರು.
20. ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ಉಪ ನಾಯಕ ಎಸ್.ಎಸ್.ಅಹ್ಲುವಾಲಿಯ, ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಪಾಲ್ಗೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
21. ‘ಡಿಜಿಟಲ್ ಗ್ರೀನ್’ ಸರ್ಕಾರೇತರ ಸಂಸ್ಥೆಯ ರೈತ ಮಹಿಳೆ ವಂದನಾ ಭೈರಿಕೊಪ್ಪೆ ಅವರು ತೂಗುಫಲಕದ ಕೊಡುಗೆ ನೀಡಿದಾಗ, ‘ಇದನ್ನು ಶ್ವೇತಭವನದಲ್ಲಿ ತೂಗಿ ಹಾಕುತ್ತೇನೆ’ ಎನ್ನುತ್ತಾ ಕೃತಜ್ಞತೆ ಅರ್ಪಿಸಿದರು.
22. ಸಾಂಪ್ರದಾಯಿಕ ಮಹಾರಾಷ್ಟ್ರ ದಿರಿಸಿನಲ್ಲಿದ್ದ ರೈತನೊಬ್ಬನ ಕೈ ಕುಲುಕಿ ‘ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು’ ಎಂದರು.
23. ಮಕ್ಕಳ ಹಕ್ಕು ಮತ್ತು ಶಿಕ್ಷಣಕ್ಕಾಗಿ ದುಡಿಯುತ್ತಿರುವ ‘ಪ್ರಥಮ್’ ಸಂಸ್ಥೆಯ ಮಳಿಗೆಗೆ ತೆರಳಿ ‘ಮಹಾತ್ಮ ಗಾಂಧೀಜಿ’ ಅವರನ್ನು ಕುರಿತ ಪುಸ್ತಕಗಳಿಗೆ ಸಹಿ ಹಾಕಿದರು.
24. 2009- 10ರಲ್ಲಿ ಭಾರತ- ಅಮೆರಿಕದ ದ್ವಿಪಕ್ಷೀಯ ವ್ಯವಹಾರ 36.6 ಶತಕೋಟಿ ಡಾಲರ್ ತಲುಪಿದೆ.
25. ತೈವಾನ್ ಪ್ರತಿಷ್ಠಾನವು, ‘ಏಷ್ಯಾ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪ್ರಶಸ್ತಿ -2010’ಗೆ ವೇಶ್ಯಾವಾಟಿಕೆ ಜಾಲದಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುತ್ತಿರುವ ಮುಂಬೈ ಮೂಲದ ರಕ್ಷಣಾ ಪ್ರತಿಷ್ಠಾನವನ್ನು ಆಯ್ಕೆ ಮಾಡಿದೆ.
26. ತೈವಾನ್ ಪ್ರತಿಷ್ಠಾನದ ಅಧ್ಯಕ್ಷ ಎಂದು ವಾಂಗ್ ಜಿನ್-ಪೈಂಗ್.
27. ಜಪಾನ್ ಪ್ರಧಾನಿ ನಯಟೊ ಕನ್.
28. ನವದೆಹಲಿ: ಒರಿಸ್ಸಾಗೆ ‘ಒಡಿಶಾ’ ಎಂದು ಮರು ನಾಮಕರಣ ಮಾಡಲು ಹಾಗೂ ಈ ರಾಜ್ಯದ ಭಾಷೆ ಒರಿಯಾವನ್ನು ‘ಒಡಿಯಾ’ ಎಂದು ಕರೆಯಲು ಅವಕಾಶ ನೀಡುವ ತಿದ್ದುಪಡಿ ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ನೀಡಿತು.
29. ಅಮೆರಿಕದ ಭಾರತದ ರಾಯಭಾರಿ ಟಿಮತಿ ರೋಮರ್.
30. ತಮ್ಮ ಬಾಲ್ಯದ ನಾಲ್ಕು ವರ್ಷಗಳನ್ನು ಕಳೆದ ಜಕಾರ್ತದಲ್ಲಿ ಒಬಾಮ ಕಳೆದಿದ್ದರು.
31. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ವಿಚಾರವಾಗಿ ಒಬಾಮ ಅವರ ಈ ನಿರ್ಧಾರದ ಬಗ್ಗೆ ಮುಂದಿನ ದಿನಗಳಲ್ಲಿ ಚೀನಾ ತಲೆಕೆಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದಿ ಟೈಮ್ಸ್ ಎಚ್ಚರಿಸಿದೆ.
32. ಅಮೆರಿಕದ ಬೆಂಬಲವಿದ್ದರೂ ಭಾರತಕ್ಕೆ ಕಾಯಂ ಸದಸ್ಯತ್ವ ಶೀಘ್ರವೇ ದಕ್ಕುವ ಸಾಧ್ಯತೆ ಇಲ್ಲ ಎಂದು ಹೆಸರಾಂತ ಮಾಧ್ಯಮ ಸಂಸ್ಥೆಯಾದ ಎನ್‌ಪಿಆರ್ ಹೇಳಿದೆ.
33. ಅಂತರರಾಷ್ಟ್ರೀಯ ಭೂಪಟದಲ್ಲಿ ಭಾರತ ಪಡೆಯುತ್ತಿರುವ ಮಹತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಈ ನಿರ್ಧಾರ ಒಂದು ಹೆಜ್ಜೆ ಮಾತ್ರ ಎಂದು ದಿ ಲಾಸ್ ಏಂಜಲೀಸ್ ಟೈಮ್ಸ್ ಹೇಳಿದೆ.
34. ‘ಕಾರ್ಪೊರೇಷನ್ ಬ್ಯಾಂಕ್ ಪ್ರಾಯೋಜಿಸಿದ ‘ಕಾರ್ಪ್ ಪ್ರಶಸ್ತಿ’ಯನ್ನು ಇಬ್ಬರಿಗೆ (ರೈತ ಹಾಗೂ ರೈತಮಹಿಳೆ) ನೀಡಲಾಗುವುದು.
35. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಉಷಾ ಥೋರಟ್, ತಮ್ಮ 38 ವರ್ಷಗಳ ಸೇವೆಯ ನಂತರ ಮಂಗಳವಾರ ಇಲ್ಲಿ ನಿವೃತ್ತರಾದರು.
36. ಮೋಸದಾಟಕ್ಕೆ ಒಪ್ಪದಿರುವ ಕಾರಣ ಪ್ರಾಣ ಬೆದರಿಕೆ ಬಂದಿದೆ ಎಂದು ಹೇಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್ ಜುಲ್ಕರೈನ್ ಹೈದರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೇ ವಿದಾಯ ಹೇಳಿ; ಅಚ್ಚರಿಗೊಳಿಸಿದ್ದಾರೆ.
37. (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳ೦: ಮ೦ಗಲಾಪುರ೦.
38. ಕಾರ್ಗಿಲ್ ಹುತಾತ್ಮರ ಕುಟುಂಬದವರಿಗಾಗಿ ನಿರ್ಮಿಸಲಾದ ಮುಂಬೈನ ‘ಆದರ್ಶ ಹೌಸಿಂಗ್ ಕಾಂಪ್ಲೆಕ್ಸ್’ ಹಗರಣಕ್ಕೆ ಸಿಕ್ಕಿ ತಲೆದಂಡ ತೆತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್.
39. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರಿಗೂ ಹತ್ತಿರದವರಾದ ‘ಶುದ್ಧ ವರ್ಚಸ್ಸು, ದಕ್ಷತೆ ಹಾಗೂ ಉತ್ತಮ ನಡವಳಿಕೆಯ’ ಪೃಥ್ವಿರಾಜ್ ಅವರಿಗೆ ಅನಿರೀಕ್ಷಿತವಾಗಿ ‘ಮುಖ್ಯಮಂತ್ರಿ ಸ್ಥಾನ’ ಒಲಿದಿದೆ.
40. ಹಿಂದುಳಿದ ವರ್ಗದ ಜನಪ್ರಿಯ ನಾಯಕ ಛಗನ್ ಭುಜಬಲ್ ಅವರು ನಿರ್ವಹಿಸುತ್ತಿದ್ದ ಈ ಸ್ಥಾನಕ್ಕೆ ಪಕ್ಷದ ವರಿಷ್ಠ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರನ್ನು ತಂದು ಕೂರಿಸಿದೆ.
41. ನಿಘಂಟುತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರನ್ನು ಬೆಂಗಳೂರಿನಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
42. ನಗರದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಡಿಸೆಂಬರ್ 24ರಿಂದ 26ರವರೆಗೆ ಸಮ್ಮೇಳನ ನಡೆಯಲಿದೆ.
43. ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರ ವಿರುದ್ಧ ಇರುವ ‘ಅಪಾರ ಮೊತ್ತದ ಹಣ ದುರ್ಬಳಕೆ’ ಆರೋಪವನ್ನು ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ನೇಮಿಸಿದ್ದ ತ್ರಿಸದಸ್ಯ ನ್ಯಾಯಾಂಗ ಸಮಿತಿ ಎತ್ತಿ ಹಿಡಿದಿದ್ದು ಇದರಿಂದ ಅವರಿಗೆ ವಾಗ್ದಂಡನೆ ವಿಧಿಸಲು ವೇದಿಕೆ ಸಿದ್ಧಗೊಂಡಂತಾಗಿದೆ.
44. ಸರಕು ಕ್ರಯದಾರನಿಂದ 33,22,800 ರೂಪಾಯಿ ಪಡೆದುಕೊಂಡು ತಮ್ಮ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡಿದ್ದ ಸೇನ್, ಈ ವಿಷಯವನ್ನು ಹೈಕೋರ್ಟ್‌ಗೆ ಮರೆಮಾಚಿದ್ದ ಆರೋಪ ಎದುರಿಸುತ್ತಿದ್ದಾರೆ.
45. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ನೇತೃತ್ವದ ಸಮಿತಿಯ ಪರವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರ ಮಂಡಿಸಲಾದ ವರದಿಯ ಪ್ರಕಾರ, ಸೆನ್ ಅವರ ದುರ್ನಡತೆ ಸಂವಿಧಾನದ ನಿಯಮಗಳಡಿ ಸಾಬೀತಾಗಿದೆ.
46. 2ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು ಇದಕ್ಕೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಎ.ರಾಜಾ ಅವರನ್ನು ಮಹಾಲೆಕ್ಕ ಪರಿಶೋಧಕ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ವರದಿಯು ನೇರ ಹೊಣೆ ಮಾಡಿದೆ ಎನ್ನಲಾಗಿದೆ.
47. ಮಹಾಲೆಕ್ಕ ಪರಿಶೋಧಕ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ವಿನೋದ ರೇ
48. ದೂರಸಂಪರ್ಕ ಸಚಿವಾಲಯ 2ಜಿ ಸ್ಪೆಕ್ಟ್ರಂ ‘ರೇಡಿಯೋ ತರಂಗ’ಗಳನ್ನು 2008ರಲ್ಲಿ 2001ರ ಬೆಲೆಗೆ ‘ಮೊದಲು ಬಂದವರಿಗೆ ಮೊದಲು’ ಎಂಬ ಆಧಾರದಲ್ಲಿ ಮಂಜೂರು ಮಾಡಿದ್ದು ಹರಾಜು ಪ್ರಕ್ರಿಯೆಯ ನಿಯಮಗಳನ್ನು ಗಾಳಿಗೆ ತೂರಿದೆ.
49. 2010ರಲ್ಲಿ 3ಜಿ ತರಂಗಗಳ ಹರಾಜಿನಿಂದ 67.718.95 ಕೋಟಿ ವರಮಾನ ದೊರೆತಿದೆ.2ಜಿ ಮಂಜೂರಾತಿಯಿಂದ 1.40 ಲಕ್ಷ ಕೋಟಿ ನಷ್ಟವಾಗಿದೆ.
50. ಉಳಿದ 36,700 ಸಾವಿರ ಕೋಟಿ ನಷ್ಟ ಗುತ್ತಿಗೆ ಮಿತಿಗಳನ್ನು ಮೀರಿ ಹಾಲಿ ಒಂಬತ್ತು ಸಂಸ್ಥೆಗಳಿಗೆ ನಿಗದಿ ಮಾಡಿರುವುದರಿಂದ ಸಂಭವಿಸಿದೆ ಎಂದು ವರದಿ ಹೇಳಿದೆ. ವರದಿ ಪ್ರತಿಯನ್ನು ಹಣಕಾಸು ಸಚಿವಾಲಯ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.
51. ಕಾಮನ್‌ವೆಲ್ತ್ ಕ್ರೀಡಾಕೂಟದ ಎರಡು ವಾರಗಳ ಕ್ರೀಡಾಕೂಟದಿಂದ ದೇಶಕ್ಕೆ 70,000 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಲಾಗಿದೆ.
52. ಕಾಮನ್‌ವೆಲ್ತ್ ಕ್ರೀಡಾಕೂಟದ ಮಾಜಿ ಮಹಾಲೇಖಪಾಲ ವಿ.ಕೆ.ಶುಂಗ್ಲು ನೇತೃತ್ವದಲ್ಲಿ ಪ್ರಧಾನಿ ಅ.15ರಂದು ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಅದು 90 ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ.
53. ಶಬರಿಮಲೆ ದೇವಾಲಯದ ಅಯ್ಯಪ್ಪ ಸ್ವಾಮಿ ಮೂರ್ತಿಯ ಪಾದಸ್ಪರ್ಶ ಮಾಡಿ ವಿವಾದಕ್ಕೆ ಒಳಗಾಗಿರುವ ಚಿತ್ರನಟಿ ಜಯಮಾಲಾ ಅವರ ವಿರುದ್ಧ ನಾಲ್ಕು ವರ್ಷಗಳ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೊಲೀಸರು ಮುಂದಾಗಿದ್ದಾರೆ.
54. ಇವರ ಜೊತೆಗೆ ಜ್ಯೋತಿಷಿ ಉಣ್ಣಿಕೃಷ್ಣನ್ ಮತ್ತು ಅವರ ಸಹಾಯಕ ರಘುಪತಿ ಅವರ ವಿರುದ್ಧವೂ ಭಾರತೀಯ ದಂಡ ಸಂಹಿತೆಯ 295 ಎ (ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು) ಕಲಮಿನ ಅಡಿ ಇದೇ 15ರ ಒಳಗೆ ದೋಷರೋಪಣಾ ಪಟ್ಟಿ ಸಲ್ಲಿಕೆಗೆ ಅವರು ನಿರ್ಧರಿಸಿದ್ದಾರೆ.
55. ನ್ಯಾಯಾಂಗ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎಂಬ ತಮ್ಮ ಹಿಂದಿನ ಆರೋಪದಿಂದ ಹಿಂದೆ ಸರಿಯದ ಹಿರಿಯ ವಕೀಲ ಮತ್ತು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್, ಈ ಸಂಬಂಧ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.
56. ಹರಿಯಾಣದ ಮಾಜಿ ಪೊಲೀಸ್ ಮುಖ್ಯಸ್ಥ ಎಸ್.ಪಿ.ಎಸ್.ರಾಥೋಡ್ ವಿರುದ್ಧ ರುಚಿಕಾ ಗಿರ್‌ಹೋತ್ರ ಅವರ ಕುಟುಂಬ ಮಾಡಿರುವ ಆರೋಪಗಳನ್ನು ಎತ್ತಿಹಿಡಿಯಲು ಅಗತ್ಯವಾದ ಯಾವ ಸಾಕ್ಷ್ಯವೂ ಇಲ್ಲ ಎಂದು ಸಿಬಿಐ ಬುಧವಾರ ಹೇಳಿದೆ.
57. ದೇಶದ ಅತಿದೊಡ್ಡ ಕಾರ್ಪೋರೇಟ್ ಹಗರಣದ ಪ್ರಮುಖ ರೂವಾರಿಯಾಗಿರುವ ‘ಸತ್ಯಂ ಕಂಪ್ಯೂಟರ್ಸ್’ನ ಮಾಜಿ ಅಧ್ಯಕ್ಷ ಬಿ. ರಾಮಲಿಂಗರಾಜು ಬುಧವಾರ ಇಲ್ಲಿಯ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗತರಾದರು.
58. ಭಾರತ ಆಫ್ಘಾನಿಸ್ತಾನವನ್ನು ಪಾಕಿಸ್ತಾನದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಪಿಸಿದ್ದಾರೆ.
59. ಪರಮಾಣು ಪರೀಕ್ಷೆ ನಡೆಸಿ ಅಮೆರಿಕದಿಂದ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿರುವ ಉತ್ತರ ಕೊರಿಯಾ ಈಗ ವಿವಿಧ ದೇಶಗಳಿಗೆ ಪರಮಾಣು ತಂತ್ರಜ್ಞಾನ ಪೂರೈಸಿದ ಮತ್ತೊಂದು ಗುರುತರ ಅಪಾದನೆ ಎದುರಿಸುತ್ತಿದೆ.
60. ಇರಾನ್, ಸಿರಿಯಾ ಮತ್ತು ಮ್ಯಾನ್ಮಾರ್‌ಗಳಿಗೆ ಉತ್ತರ ಕೊರಿಯಾ ಪರಮಾಣು ತಂತ್ರಜ್ಞಾನ ಪೂರೈಸಿರಬಹುದಾದ ಸಾಧ್ಯತೆಗಳಿವೆ ಎಂದು ಆರೋಪಿಸಿರುವ ವಿಶ್ವಸಂಸ್ಥೆ, ಈ ಕುರಿತು ಬುಧವಾರ ಭದ್ರತಾ ಮಂಡಳಿಗೆ 75 ಪುಟಗಳ ವರದಿ ಸಲ್ಲಿಸಿದೆ.
61. ಭಾರತೀಯರಾದ ಕೃಷ್ಣನ್ ಪಾರ್ಥಸಾರಥಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಲಾಟರಿ ಸ್ಪರ್ಧೆಯಲ್ಲಿ 20 ಲಕ್ಷ ಡಾಲರ್ ಗೆದ್ದಿದ್ದಾರೆ.
62. ಭಾರತೀಯ ಮೂಲದ ಕಾನೂನು ತಜ್ಞ ಪ್ರೊ. ವರ್ನ್ ಕೃಷ್ಣನ್ ಅವರನ್ನು ಕೆನಡಾದ ಒಂಟಾರಿಯೊದ ಭದ್ರತಾ ಆಯೋಗದ ಆಯುಕ್ತರ ಸ್ಥಾನಕ್ಕೆ ನೇಮಿಸಲಾಗಿದೆ.
63. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮೆರಿಕದ ಸಿಐಎ ಏಜೆಂಟ್ ಆಗಿದ್ದರು ಮತ್ತು ಅವರು ತಮ್ಮ ಪತಿ ರಾಜೀವ್ ಗಾಂಧಿ ಹಾಗೂ ಅತ್ತೆ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಲು ಸಂಚು ನಡೆಸುತ್ತಿದ್ದರು ಎಂದು ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್.
64. ಪೀಠದಲ್ಲಿದ್ದ ಉಪ ಸಭಾಪತಿ ಕೆ. ರೆಹಮಾನ್ ಖಾನ್.
65. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪೃಥ್ವಿರಾಜ್ ಚವಾಣ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಮತ್ತು ಎಂಟು ಮಂದಿ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
66. ಮಹಾರಾಷ್ಟ್ರದ ರಾಜ್ಯಪಾಲ ರಾಜ್ಯಪಾಲ ಕೆ. ಶಂಕರನಾರಾಯಣನ್.
67.
68. ಕರ್ನಾಟಕ ಜಿ.ಎ.ಸ್ಟ್ಯಾನಿ, ಜಮ್ಮುವಿನಲ್ಲಿ ಗುರುವಾರ ಮುಕ್ತಾಯಗೊಂಡ, 21ನೇ ರಾಷ್ಟ್ರೀಯ 17 ವರ್ಷದೊಳಗಿನವರ ಚೆಸ್ ಕೂಟದಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು.
69. ಶೂಟರ್ ಗಗನ್ ನಾರಂಗ್ ಅವರೇ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿ ಆಗಿರುತ್ತಾರೆಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಸ್ಪಷ್ಟಪಡಿಸಿದೆ.
70. ಸಚಿನ್ ಅವರಂತಹ ಆಟಗಾರನ ಬೆಂಬಲ ಲಭಿಸಿದ್ದು ಸಂಘಟಕ ಸಮಿತಿಯ ಅದೃಷ್ಟ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲೊರ್ಗಟ್ ತಿಳಿಸಿದರು.
71. ಮುಂಬೈಕರ್‌ಗೆ ಇದು ಆರನೇ ವಿಶ್ವಕಪ್ ಎನಿಸಲಿದೆ. ಈ ಮೂಲಕ ಅವರು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಸರಿಗಟ್ಟಲಿದೆ. ಮಿಯಾಂದಾದ್ ಆರು ವಿಶ್ವಕಪ್‌ಗಳಲ್ಲಿ ಪಾಕ್‌ನ್ನು ಪ್ರತಿನಿಧಿಸಿದ್ದಾರೆ.
72. ಏಕದಿನ ವಿಶ್ವಕಪ್ ಟೂರ್ನಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ಮುಂದಿನ ಫೆಬ್ರುವರಿ 19 ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದೆ.
73. ಸಚಿನ್ ತೆಂಡೂಲ್ಕರ್ ಅವರು ಮುಂದಿನ ವರ್ಷ ಉಪಭೂಖಂಡದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
74. ರಾಜಧಾನಿಯ ಹೃದಯ ಭಾಗದಲ್ಲಿರುವ, ರೈಲ್ವೆಗೆ ಸೇರಿದ 38 ಎಕರೆ ಭೂಮಿಯನ್ನು ಪಾರ್ಶ್ವನಾಥ್ ಡೆವಲಪರ್ಸ್‌ ಸಂಸ್ಥೆ 1,651ಕೋಟಿಗೆ ಖರೀದಿಸಿದೆ.
75. ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ಮೀಸಲಾತಿ ಶೇ 50 ಮೀರಬಾರದು ಎಂದು ಕಳೆದ ತಿಂಗಳ 4 ರಂದು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಗುರುವಾರ ವಾಪಸ್ ಕಳುಹಿಸಿದ್ದಾರೆ.
76. ಬಿರ್‌ಭೂಮ್ ಜಿಲ್ಲೆಯ ಸುಚಪುರ ಗ್ರಾಮದ ತೃಣಮೂಲ ಕಾಂಗ್ರೆಸ್‌ನ 11 ಮಂದಿ ಬೆಂಬಲಿಗರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಂನ 44 ಮಂದಿ ಬೆಂಬಲಿಗರು ಮತ್ತು ಸ್ಥಳೀಯ ಮುಖಂಡರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
77. ಪ್ರಧಾನಮಂತ್ರಿ ಕಚೇರಿಯು ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳಿಗಾಗಿಯೇ 3 ವರ್ಷಕ್ಕೆ ರೂ 34 ಲಕ್ಷ ಖರ್ಚು ಮಾಡಿದೆ !ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವಿ.ನಾರಾಯಣಸ್ವಾಮಿ ಈ ವಿಷಯವನ್ನು ತಿಳಿಸಿದರು.
78. ಅನೌಷ್ಕ ಅವರನ್ನು ಬ್ಲಾಕ್‌ಮೇಲ್ ಮಾಡಲು ಮುಂಬೈ ಮೂಲದ ಉದ್ಯಮಿ ಜುನೈದ್ ಖಾನ್ ಬಳಸಿದ್ದರು ಎನ್ನಲಾದ ಇ-ಮೇಲ್‌ಗೆ ಸಂಬಂಧಿಸಿದಂತೆ ಗೂಗಲ್ ಕಾರ್ಪೊರೇಷನ್‌ನಿಂದ ಸ್ಪಷ್ಟವಾದ ಮಾಹಿತಿ ಪಡೆಯಲು ತಮಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
79. ಇಂಗ್ಲೆಂಡ್‌ನಲ್ಲಿ ಕಾಗದದ ತೆಳು ಕೊಳವೆಗಳಿಂದ ತಯಾರಿಸಿದ, ಮೂರು ಅಡಿ ರೆಕ್ಕೆ ಇದ್ದ ಪುಟ್ಟ ವಿಮಾನವೊಂದು ಬೃಹತ್ ಗಾತ್ರದ ಹೀಲಿಯಂ ಬಲೂನಿನ ಸಹಾಯದಿಂದ 90,000 ಅಡಿ ಎತ್ತರದಲ್ಲಿ ಯಶಸ್ವಿಯಾಗಿ ಹಾರಾಡಿದೆ.
80. ‘ಪಾರಿಸ್’ (ಪೇಪರ್ ಏರ್‌ಕ್ರಾಫ್ಟ್ ರಿಲೇಸ್ಡ್ ಇನ್‌ಟು ಸ್ಪೇಸ್) ಹೆಸರಿನ ಈ ಯೋಜನೆಗೆ ಎಂಟು ಸಾವಿರ ಪೌಂಡ್ ವೆಚ್ಚವಾಗಿದೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.
81. ಕೊಲೆ ಆರೋಪದ ಮೇಲೆ ಗಲ್ಲಿಗೇರಿಸಿದ್ದ ವ್ಯಕ್ತಿಯ ಶವದ ಪಳೆಯುಳಿಕೆ (ಅಸ್ಥಿಪಂಜರ)ಯು 189 ವರ್ಷದ ಬಳಿಕ ವಾರಸುದಾರರ ವಶಕ್ಕೆ ದಕ್ಕಿದೆ! ತಮ್ಮ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜಾನ್ ಹೊರ್‌ವುಡ್ ಅವರನ್ನು 1821ರಲ್ಲಿ ನೇಣು ಹಾಕಲಾಗಿತ್ತು. ಅವರ ಅಸ್ಥಿಪಂಜರವನ್ನು ಬ್ರಿಟನ್ನಿನ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಗಿತ್ತು.
82. ಪೆನ್ ತೆಗೆದುಕೊಂಡರೆ ಇಂಕ್ ಖಾಲಿಯಾಗುವವರೆಗೆ ಬರೆದು ನಂತರ ಎಸೆಯುವುದು ರೂಢಿ. ಆದರೆ ಒಂದು ಅಕ್ಷರವನ್ನೂ ಬರೆಯಲು ಮನಸ್ಸಾಗದಂತಹ ಪೆನ್ ಆಸ್ಟ್ರೇಲಿಯಾದಲ್ಲಿದೆ. ಏಕೆಂದರೆ ಈ ಪೆನ್ನಿನ ಬೆಲೆ 1.7 ಕೋಟಿ ಡಾಲರ್!.
83. ಜನಸಂಖ್ಯಾ ನಿಯಂತ್ರಣಕ್ಕೆ ಒಂದೇ ಮಗುವಿನ ಕಡ್ಡಾಯ ನಿಯಮ ಜಾರಿಗೆ ತಂದಿದ್ದ ಚೀನಾದ ಪ್ರಮುಖ ನಗರವಾದ ಶಾಂಘೈ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮನೆಯಲ್ಲಿ ಒಂದೇ ನಾಯಿ ಸಾಕಬೇಕೆಂಬ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ.
84. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರಯತ್ನದ ಹೊರತಾಗಿಯೂ ಭಾರತದಲ್ಲಿ 2009ರಲ್ಲಿ 2 ಕೋಟಿ ಕ್ಷಯರೋಗಿಗಳ (ಟಿಬಿ) ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಮಾಣದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಓ) ವರದಿ ತಿಳಿಸಿದೆ.
85. ಸಚಿವ ರಾಜಾ 2008ರಲ್ಲಿ ಒಂಬತ್ತು ನಿರ್ವಾಹಕ ಕಂಪೆನಿಗಳಿಗೆ ತರಂಗಾಂತರವನ್ನು ಹಂಚಿಕೆ ಮಾಡಿದ್ದರು. ಆದರೆ ಕೆಲವು ಕಂಪೆನಿಗಳು, ಯಾವ ಉದ್ದೇಶಕ್ಕಾಗಿ ತರಾಂಗಾಂತರಗಳನ್ನು ಪಡೆದಿದ್ದವೋ ಆ ಸೇವೆಗಳನ್ನು ಇನ್ನೂ ಆರಂಭಿಸಿಯೇ ಇಲ್ಲ. ಈ ಸಂಬಂಧ ನಿರ್ವಾಹಕ ಕಂಪೆನಿಗಳಿಂದ ಟ್ರಾಯ್ ಈಗಾಗಲೇ ಅಗತ್ಯ ಮಾಹಿತಿಗಳನ್ನು ಕಲೆಹಾಕಿದೆ.
86. ಟ್ರಾಯ್ ಅಧ್ಯಕ್ಷ ಜೆ.ಆರ್.ಶರ್ಮ.
87. 2 ಜಿ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ನೀಡಿರುವ ವರದಿ ಇನ್ನು ಕೆಲವೇ ದಿನಗಳಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
88. ಈ ಹಗರಣದಿಂದಾಗಿ 70,000 ಕೋಟಿ ನಷ್ಟವಾಗಿದೆ ಎಂದು ದೂರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಮತ್ತು ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ಪೀಠ ವಿಚಾರಣೆ ನಡೆಸುತ್ತಿದೆ.
89. ದೂರವಾಣಿ ನಿರ್ವಾಹಕ ಕಂಪೆನಿಗಳಿಗೆ ಸಚಿವ ಎ.ರಾಜಾ ಅವರು ಹೆಚ್ಚುವರಿಯಾಗಿ ನೀಡಿರುವುದು 12.6 ಮೆಗಾಹರ್ಟ್ಸ್ ತರಂಗಾಂತರಗಳನ್ನು ಮಾತ್ರ.
90. ರಾಜಾ ಅವರಿಗಿಂತ ಮುಂಚೆ ದೂರಸಂಪರ್ಕ ಸಚಿವರಾಗಿದ್ದ ಉಳಿದ ಮೂವರು ಸಚಿವರು ಯಾವುದೇ ಮುಂಗಡ ಶುಲ್ಕ ಪಡೆಯದೇ 65.2 ಮೆಗಾಹರ್ಟ್ಸ್ ತರಾಂಗಾಂತರಗಳನ್ನು ವಿತರಿಸಿದ್ದರು ಎಂದು ದೂರಸಂಪರ್ಕ ಇಲಾಖೆಯು ಭಾನುವಾರ ಬಹಿರಂಗಪಡಿಸಿದೆ.
91. ದಯಾನಿಧಿ ಮಾರನ್, ಅರುಣ್ ಶೌರಿ ಮತ್ತು ದಿವಂಗತ ಪ್ರಮೋದ್ ಮಹಾಜನ್ ಅವರು ಸಚಿವರಾಗಿದ್ದ ಸಂದರ್ಭ ಹರಾಜು ನಡೆಸದೇ ಈ ತರಂಗಾಂತರ ಹಂಚಲಾಗಿತ್ತೆಂಬುದನ್ನು ಪುಷ್ಟೀಕರಿಸುವ ದಾಖಲೆಯನ್ನು ಇಲಾಖೆ ಬಿಡುಗಡೆ ಮಾಡಿದೆ.
92. ಶ್ರೀಕೃಷ್ಣ ದೇವಸ್ಥಾನವನ್ನು ಸರ್ಕಾರದ ಆದೇಶ (ಕಂಇ81 ಮುಅಬಿ 2008, ಬೆಂಗಳೂರು ದಿನಾಂಕ 26ನೇ ಅಕ್ಟೋಬರ್ 2010)ದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯಿದೆಯಡಿ ಸರ್ಕಾರ ಉಡುಪಿಯ ಅಷ್ಟಮಠಾಧಿಪತ್ಯಕ್ಕೆ ಬಿಟ್ಟುಕೊಡಲಾಗಿದೆ.
93. ಪಂಕಜ್ ಅಡ್ವಾಣಿ ಅವರು 16ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಂಗಾರ ತಂದಿತ್ತ ಗೌರವಕ್ಕೆ ಪಾತ್ರರಾದರು.
94. ಉತ್ತರಾಖಂಡ ಮೂಲದ ಹಿಮಾಲಯದ ಚಿಪ್ಕೊ ಪ್ರತಿಷ್ಠಾನವು ಲಂಡನ್ ಸಂಸತ್‌ನ ಕೆಳಮನೆಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಗ್ರೀನ್ ಆಪಲ್ ಪ್ರಶಸ್ತಿ ಪಡೆಯಲಿದೆ.
95. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತು 19 ವರ್ಷಗಳ ನಂತರ ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಅವರನ್ನು ಭಾಷಣ ಮಾಡುವಂತೆ ಒಸ್ಲೊಕ್ಕೆ ಆಹ್ವಾನಿಸಿದೆ.
96. ಮ್ಯಾನ್ಮಾರದಲ್ಲಿ ಸೇನಾಡಳಿತವನ್ನು ಕೊನೆಗಾಣಿಸಿ ಪ್ರಜಾಸತ್ತೆಯ ಮರು ಸ್ಥಾಪನೆ ಮತ್ತು ಮಾನವ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ನಡೆಸಿದ ಸೂಕಿ ಅವರಿಗೆ 1991ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
97. ನೊಬೆಲ್ ಸಮಿತಿ ಮುಖ್ಯಸ್ಥ ಥೋರ್ಬಜರ್ನ್ ಜಗ್‌ಲ್ಯಾಂಡ್.
98. ರತನ್ ಅವರಿಗಿಂತ ಮುಂಚೆ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಟಾಟಾ ಅವರು 1930ರಲ್ಲಿಯೇ ‘ಟಾಟಾ ಏರ್‌ಲೈನ್ಸ್’ ಸ್ಥಾಪಿಸಿದ್ದರು. 1950ರಲ್ಲಿ ಕೇಂದ್ರ ಸರ್ಕಾರವು ಈ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿ ‘ಏರ್ ಇಂಡಿಯಾ’ ಎಂದು ನಾಮಕರಣ ಮಾಡಿತ್ತು.
99. 2012ರಲ್ಲಿ ಸೇವಾ ನಿವೃತ್ತಿಯಾಗುವ ತಮ್ಮ ಈ ಮೊದಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ರತನ್ ಸ್ಪಷ್ಟಪಡಿಸಿದರು.72 ಶತಕೋಟಿ ಡಾಲರ್ ಮೌಲ್ಯದ ( ್ಙ 3,60,000 ಕೋಟಿ) ಟಾಟಾ ಸಮೂಹದ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ನಂತರ ರತನ್ ಅವರು, ಸಂಸ್ಥೆಯನ್ನು ಅಗಾಧವಾಗಿ ಬೆಳೆಸಿದ್ದಾರೆ. ವಿಶ್ವದ ಅತ್ಯಂತ ಕಡಿಮೆ ಬೆಲೆಯ ಮತ್ತು ಪುಟ್ಟ ಕಾರು ‘ನ್ಯಾನೊ’ ಅನ್ನೂ ಪರಿಚಯಿಸಿದ ಹೆಗ್ಗಳಿಕೆ ರತನ್ ಅವರದ್ದು.
100. 2ಜಿ ತರಂಗಾಂತರ ಹಗರಣದ ತನಿಖೆಗೆ ಸಂಸತ್‌ನ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸುವ ಅಗತ್ಯವೂ ಇಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
101. ಆಲ್ಕೋ ಮೀಟರ್: ವಾಹನ ಚಾಲಕರು ಪಾನಮತ್ತರಾಗಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಈ ಸಾಧನ ಬಳಸಲಾಗುತ್ತದೆ.
102. ವಿವಾದಿತ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ನಿವೇಶನ ಮಾಲೀಕತ್ವ ಕುರಿತಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಜಮಾತೆ ಉಲೇಮಾ-ಎ-ಹಿಂದ್ (ಜೆಯುಎಚ್) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
103. ವಿವಾದಿತ ನಿವೇಶನವನ್ನು ಹಿಂದೂ, ಮುಸ್ಲಿಮರು ಮತ್ತು ನಿರ್ಮೋಹಿ ಅಖಾಡಕ್ಕೆ ಸಮನಾಗಿ ಹಂಚಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಸೆ. 31ರಂದು ತೀರ್ಪು ನೀಡಿತ್ತು.
104. ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಕಳೆದ 9 ತಿಂಗಳಲ್ಲೇ ಕನಿಷ್ಠ ಎನ್ನಬಹುದಾದ ಶೇಕಡ 8.58ಕ್ಕೆ ಕುಸಿದಿದೆ.
105. ಇಲ್ಲಿ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ‘ಬಗೆಹರಿಯದ ವಿವಾದದ ಪಟ್ಟಿ’ಯಿಂದ ಜಮ್ಮು ಮತ್ತು ಕಾಶ್ಮೀರವನ್ನು ಕಿತ್ತು ಹಾಕಲಾಗಿದ್ದು ಇದರಿಂದ ಕಾಶ್ಮೀರ ವಿವಾದದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆನ್ನುವ ಪಾಕ್ ಕೋರಿಕೆಗೆ ಹಿನ್ನಡೆ ಉಂಟಾಗಿದೆ.
106. ಕರ್ನಾಟಕ ಸರ್ಕಾರದ ಲಾಂಛನದಲ್ಲಿರುವ ಬಿಳಿ ಗಂಢಬೇರುಂಡ ಶಾಂತಿ, ಸಮಾನತೆ ಹಾಗೂ ಧರ್ಮದ ಸಿದ್ಧಾಂತಗಳನ್ನು ಸಾರುತ್ತದೆ. ಆನೆಯ ಸೊಂಡಿಲು ಸಿಂಹದ ಶರೀರ ಹೊಂದಿರುವ ಶರಭದ ಚಿತ್ರ ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಹಳದಿ ಬಣ್ಣ ಪ್ರಾಮಾಣಿಕತೆ ಹಾಗೂ ರಾಜನಿಷ್ಠೆಯನ್ನು ಪ್ರತಿನಿಧಿಸಿದರೆ ಕೆಂಪು ಧೈರ್ಯ ಮತ್ತು ಆಳ್ವಿಕೆಯ ಸಂಕೇತವಾಗಿದೆ.
107. ವಿಶ್ವ ಕ್ರಿಕೆಟ್‌ನ ಏಕೈಕ ಮಹಿಳಾ ಫಿಜಿಯೋ ಕೂಡ ನ್ಯೂಜಿಲೆಂಡ್ ತಂಡದ ಆ ವೈದ್ಯೆ ಹೆಸರು ಕೇಟ್ ಸ್ಟಾಕರ್.
108. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಮೊದಲ ದೇಶ ನ್ಯೂಜಿಲೆಂಡ್.
109. ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಆವೃತ್ತಿಯನ್ನು 2011ರ ಏಪ್ರಿಲ್ 8ರಿಂದ ಮೇ 22ರವರೆಗೆ ನಡೆಯಲಿದೆ.
110.
111. ಏರ್ ಟೆಲ್ ಸಂಸ್ಥೆಯ ಒಟ್ಟಾರೆ ಗ್ರಾಹಕರ ಸಂಖ್ಯೆ 20 ಕೋಟಿ ದಾಟಿದ್ದು, ದೇಶದಲ್ಲಿನ ಚಂದಾದಾರರ ಸಂಖ್ಯೆ 15 ಕೋಟಿ ದಾಟಿದೆ. ಆಫ್ರಿಕಾದಲ್ಲಿ 4 ಕೋಟಿ ಮತ್ತು ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಉಳಿದ ಗ್ರಾಹಕರು ಇದ್ದಾರೆ.
112. ವಿಶ್ವದ 5ನೇ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆಯಾಗಿರುವ ಭಾರ್ತಿ ಏರ್‌ಟೆಲ್ ಗುರುವಾರ ಇಲ್ಲಿ ತನ್ನ ಹೊಸ ‘ಜಾಗತಿಕ ಲಾಂಛನ’ ಬಿಡುಗಡೆ ಮಾಡಿತು. ಲಾಂಛನದ ಜೊತೆ ಸಂಸ್ಥೆಯು, ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ. ಆರ್. ರೆಹಮಾನ್ ಅವರು ಸಂಯೋಜಿಸಿರುವ ‘ಏರ್‌ಟೆಲ್ ರಾಗ’ವನ್ನೂ ಬದಲಾಯಿಸಿದೆ.
113. ಜಿನಿವಾ, (ಎಪಿ): ಇಲ್ಲಿ ನಡೆದ ಹರಾಜಿನಲ್ಲಿ ನಸುಗೆಂಪಿನ ವಜ್ರ 4.60 ಕೋಟಿ ಡಾಲರ್‌ಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. 24.78 ಕ್ಯಾರಟ್‌ನ ಈ ನಸುಗೆಂಪಿನ ವಜ್ರವನ್ನು ಬ್ರಿಟಿಷ್ ವಜ್ರ ವ್ಯಾಪಾರಿ ಲಾರೆನ್ಸ್ ಗ್ರಾಫ್ ಖರೀದಿಸಿದ್ದರು.

ಐ.ಪಿ.ಎಲ್ ನ ಕೋಟಿ ವೀರರು 2011 ಬಿಡ್ಡಿಂಗ್


ಪ್ರಸ್ತುತ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯತ್ ಬಲಾಬಲ 2011