ಗುರುವಾರ, ಆಗಸ್ಟ್ 30, 2018

ವಿಶ್ವ ಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.



* ಆಸ್ತಿರಹಿತ ವ್ಯವಸ್ಥೆಯನ್ನು ಅತೀ ಸೂಕ್ಷ್ಮವಾಗಿ ವಿವರಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
* ಕೋಲಂಬಿಯಾ (ವಿದೇಶಿ ) ವಿಶ್ವವಿದ್ಯಾಲಯಗಳ ಪ್ರವೇಶ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್.
* ಪ್ರಾಂತೀಯ ಹಣಕಾಸು ವ್ಯವಸ್ಥೆಯನ್ನು ವಿಶ್ಲೀಷಿಸಿರುವ ಪ್ರಥಮ ಭಾರತೀಯ ಹಣಕಾಸು  ಅರ್ಥವಿಜ್ಞಾನಿ ನಮ್ಮ ಡಾ.ಬಿ.ಆರ್.ಅಂಬೇಡ್ಕರ್.
*  ಭಾರತದ ರೂಪಾಯಿ ಸಮಸ್ಯೆಯ ನಿವಾರಣೆಯ  ಚಿಂತಕ ಡಾ.ಬಿ.ಆರ್.ಅಂಬೇಡ್ಕರ್.
*  ಫೌಲರ ಸಮಿತಿಯ  ಸೂತ್ರವನ್ನು ತಿರಸ್ಕರಿಸಿ ಅದಕ್ಕೆ ಬದಲಾಗಿ ಅವರದೇ ಆದ ಸೂತ್ರವನ್ನು ಸೂಚಿಸಿದ್ದಾರೆ .ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
*  ಶ್ರಮ ಶೋಷಣೆ ಮತ್ತು ತಾರತಮ್ಯ ಕುರಿತು ಜಗತ್ತಿಗೆ ಹೊಸ ಸಿದ್ಧಾಂತ ನೀಡಿದವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
ಜಗತ್ತಿನ ಇತಿಹಾಸ ಸಂದರ್ಭದಲ್ಲಿ ಗುಲಾಮಗಿರಿಯ ಪದ್ಧತಿ  ಸಮಗ್ರವಾಗಿ ಅಧ್ಯಯನ ಮಾಡಿದವರು    ಡಾ.ಬಿ.ಆರ್.ಅಂಬೇಡ್ಕರ್.
* ಪಾಶ್ಚಿಮಾತ್ಯ  ಗುಲಾಮ ಪದ್ಧತಿ ಮತ್ತು ಅಸ್ಪ್ರೃಶ್ಯತೆಗಳೆರಡರ ನಡುವೆ ಮೂಲಭೂತವಾದ  ವ್ಯತ್ಯಾಸ ಗುರುತಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
* ಬ್ರಿಟಿಷ್ ಆಡಳಿತದಲ್ಲಿ ಕಾರ್ಮಿಕ ಮಂತ್ರಿಯಾಗಿ ಏಕ ರೀತಿಯ ಶಾಸನ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
*  ಬ್ರಿಟಿಷ್ ವೈಸ್ ರಾಯ್ ಕಾರ್ಮಿಕರ ಕಾರ್ಯ ಕಾರಿ ಮಂಡಳಿ  ಪ್ರತಿನಿಧಿಯಾಗಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
*   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್.
*   ನೀರಾವರಿ ಮತ್ತು ವಿದ್ಯುತ್  ಯೋಜನೆಗಳ ರೂವಾರಿ ಡಾ.ಬಿ.ಆರ್.ಅಂಬೇಡ್ಕರ್.
*  ಬಿಹಾರ್ ನ ದಾಮೋದರ ಕಣಿವೆಗೆ ಶಾಶ್ವತ ಯೋಜನೆ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
*  ಪ್ರಥಮ ಅಸ್ಪೃಶ್ಯ ತಲೆಮಾರಿನ ಪ್ರಪ್ರಥಮ ವಿದ್ಯಾವಂತರು ಡಾ.ಬಿ.ಆರ್.ಅಂಬೇಡ್ಕರ್.
*  ತುಳಿತಕ್ಕೊಳಪಟ್ಟ ಸಮುದಾಯದಲ್ಲೆ ಪ್ರಥಮವಾಗಿ ಮೆಟ್ರಿಕ್ಯೊಲೇಷನ್ ಪರೀಕ್ಷೆ ಪಾಸಾದವರು ಡಾ.ಬಿ.ಆರ್.ಅಂಬೇಡ್ಕರ್.
*  ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಮಾನವ ವಿರೋಧಿ ಮನುಸ್ಮೃತಿ ಗ್ರಂಥವನ್ನು ಪ್ರಪ್ರಥಮವಾಗಿ ಬಹಿರಂಗವಾಗಿ ಸುಟ್ಟವರು ಡಾ.ಬಿ.ಆರ್.ಅಂಬೇಡ್ಕರ್.
*  ದಕ್ಷಿಣ ಏಷ್ಯಾ ಖಂಡದಲ್ಲಿ ಸಮಾಜ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಪ್ರಪ್ರಥಮ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್.
*  ದಕ್ಷಿಣ ಏಷ್ಯಾ ಖಂಡದಲ್ಲಿ ಅರ್ಥಶಾಸ್ತ್ರದಲ್ಲಿ  ಡಿ.ಎಸ್ಸಿ. ಪದವಿ ಪಡೆದ ಪ್ರಪ್ರಥಮ ಭಾರತೀಯ  ನೀರಿಗಾಗಿ (ಚೌಡರ್ ಕೆರೆ ) ಯ ಪ್ರಪ್ರಥಮವಾಗಿ ಧ್ವನಿ ಎತ್ತಿದವರು(1927) ಡಾ.ಬಿ.ಆರ್.ಅಂಬೇಡ್ಕರ್.
* 1930-31-32 ರಲ್ಲಿ  ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಹಾಜರಿದ್ದು ಸದಸ್ಯರ ಪೈಕಿ  ಡಿ.ಎಸ್ಸಿ.ಪದವಿ  ಪಡೆದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.
*  ಭಾರತದಲ್ಲಿ ರಾಜಕೀಯ ಕ್ರಾಂತಿಯ ಪ್ರಥಮ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್.
*   ಭಾರತದ ಸಂವಿಧಾನ ರಚನಾ ಸಭೆಯ ಪ್ರಪ್ರಥಮ ಅಧ್ಯಕ್ಷ ಹಾಗೂ ಸಂವಿಧಾನ ಶಿಲ್ಪಿ ಎಂಬ ಖ್ಯಾತಿಗೆ ಹೆಸರಾದವರು ಡಾ.ಬಿ.ಆರ್.ಅಂಬೇಡ್ಕರ್.
*  ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಮಂತ್ರಿ ಡಾ.ಬಿ.ಆರ್.ಅಂಬೇಡ್ಕರ್.
*  ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಆಸ್ತಿ ವಿಚಾರದಲ್ಲಿ ಸಂಸತ್ ನಲ್ಲಿ ಪ್ರಫ್ರಥಮವಾಗಿ ಧ್ವನಿ ಎತ್ತಿದವರು(1951) ಡಾ.ಬಿ.ಆರ್.ಅಂಬೇಡ್ಕರ್.
*   ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಕಾರ್ಮಿಕರನ್ನು ಕುರಿತು ಧ್ವನಿಯೇರಿಸಿದ ಮೊದಲ ವ್ಯಕ್ತಿ (ಕಾರ್ಮಿಕ  ಕ್ರಾಂತಿಯ ಹರಿಕಾರ) (1942-46) ಡಾ.ಬಿ.ಆರ್.ಅಂಬೇಡ್ಕರ್.
*   ಕಾಂಗ್ರೆಸ್ ಮತ್ತು  ಗಾಂಧೀಜಿಯನ್ನು ಎದುರುಹಾಕಿಕೊಂಡ ಪ್ರಥಮ ನಾಗರಿಕ ಹಕ್ಕುಗಳು ಹರಿಕಾರ ಡಾ.ಬಿ.ಆರ್ .ಅಂಬೇಡ್ಕರ್.
*  ಮೂರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ಪ್ರಪ್ರಥಮ ಶೋಷಿತ್ ಸಮುದಾಯದ ನಾಯಕ  ಡಾ.ಬಿ.ಆರ್.ಅಂಬೇಡ್ಕರ್.
* 563 ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಬೇಕೆಂದು ಮೊದಲು ಧ್ವನಿ ಎತ್ತಿದವರು (16 ಸೆಪ್ಟೆಂಬರ್  1921) ಡಾ.ಬಿ.ಆರ್.ಅಂಬೇಡ್ಕರ್.
* ಲಂಡನ್ ಮ್ಯೊಸಿಯಂನಲ್ಲಿ ಕಾರ್ಲ್ ಮಾಕ್ಸ್ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಶೇಖರಿಸಿಡಲಾಗಿದೆ.
*  ಭಾರತದ ರಾಷ್ಟ್ರೀಯ ಧ್ವಜದಲ್ಲಿ ಅಶೋಕ ಚಕ್ರವನ್ನು ಮತ್ತು ರಾಷ್ಟ್ರೀಯ ಚಿಹ್ನೆಯಾಗಿ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹವನ್ನು ಪರಿಗಣಿಸಿಸುವಂತೆ ಪ್ರಭಾವ ಬೀರಿದ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್
ಮೊದಲಿಗರುಹಾಗೂಏಕೈಕರು:

* Phd (ಡಾಕ್ಟರೇಟ್) ಪದವಿ ಪಡೆದ ಮೊಟ್ಟ ಮೊದಲ ಭಾರತ ವಿದ್ಯಾರ್ಥಿ ನಮ್ಮ ಅಂಬೇಡ್ಕರ್.

* ಅತಿಹೆಚ್ಚು ವಿದ್ಯಾಭ್ಯಾಸ ಮಾಡಿರುವ ವಿಶ್ವದ ಏಕೈಕ ರಾಷ್ಟ್ರನಾಯಕ ನಮ್ಮ ಅಂಬೇಡ್ಕರ್.

* ಅರ್ಥಶಾಸ್ತ್ರದಲ್ಲಿ Dsc ಪದವಿ ಹಾಗೂ ಕಾನೂನು ಶಾಸ್ತ್ರದಲ್ಲಿ BAR-AT-LAW ಪದವಿ ಪಡೆದ ಮೂದಲಿಗರು ಹಾಗೂ ಏಕೈಕ ಭಾರತೀಯ ನಮ್ಮ ಅಂಬೇಡ್ಕರ್

* ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳ ಅಧ್ಯಾಯನಕ್ಕೆ ವಿಶ್ವದಲ್ಲೇ ಪ್ರಖ್ಯಾತವಾಗಿರುವ ಬ್ರಿಟನ್ನಿನ "ಲಂಡನ್ ಸ್ಕೂಲ್  ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸ್" ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಡಾ.ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸಲಾಗಿದೆ. (ಈ ಗೌರವಕ್ಕೆ ಪಾತ್ರರಾಗಿರುವ ಭಾರತದ ಏಕೈಕ ವ್ಯಕ್ತಿ ನಮ್ಮೆಲ್ಲರ ಅಂಬೇಡ್ಕರ್)
ವಿಶ್ವದ ಬೃಹತ್ ಹಾಗೂ ಪ್ರತಿಷ್ಠಿತ ಗ್ರಂಥಾಲಯವಾದ ಲಂಡನ್ನಿನ "ಬ್ರಿಟಿಷ್ ಮ್ಯೂಸಿಯಂ ಲೈಬ್ರರಿ"ಯಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಪಡೆದು ಓದಿರುವ ವಿಶ್ವದ ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ. (ಈ ಮಾಹಿತಿಯನ್ನು ಅಲ್ಲಿನ ಗ್ರಂಥಾಲಯದಲ್ಲಿ ದಾಖಲು ಮಾಡಲಾಗಿದೆ)

* ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಅಮೇರಿಕದ ಕೊಲಂಬೀಯಾ ವಿಶ್ವವಿದ್ಯಾಲಯದ "ಕಾನೂನ ಮತ್ತು ಸಂವಿಧಾನ" ಅಧ್ಯಯನ ವಿಭಾಗಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರಿಡಲಾಗಿದೆ.

* 2011ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಜಗತ್ತಿನ 100ಜನ ಪ್ರತಿಭಾವಂತ ಘನ ವಿಧ್ವಾಂಸರ ಪಟ್ಟಿ ಮಾಡಿತ್ತು. ಈ 100ಜನರ ಪಟ್ಟಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮೊದಲನೇ ವ್ಯಕ್ತಿಯಾಗಿದ್ದರು.

* ತನ್ನ ಮನೆಯಲ್ಲಿ 50ಸಾವಿರ ವಿದ್ವತ್ಪೂರ್ಣ ಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿರುವ ಜಗತ್ತಿನ ಏಕೈಕ ವಿದ್ವಾಂಸ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ.

ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರ 'ವಿಶೇಷ ಗೌರವಕ್ಕೆ' ಪಾತ್ರರಾದ ಏಕೈಕ ಭಾರತೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್.

ಬ್ರಿಟನ್ನಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ರವರ ವಿದ್ವತ್ತು, ವಾಕ್ ಚಾತುರ್ಯ, ಪ್ರತಿಭೆ ಹಾಗೂ ಭಾರತದ ಶೋಷಿತರ ಕುರಿತು ಅವರು ಮಾಡಿದ ಹೃದಯ ಕುಲಕುವಂತಹ ಭಾಷಣಕ್ಕೆ ನಿಬ್ಬೆರೆಗಾದ ಬ್ರಿಟನ್ ದೊರೆ ಮತ್ತು ಮಹಾರಾಣಿಯವರು ಅಂಬೇಡ್ಕರ್ ರವರನ್ನು ಅರಮನೆಗೆ ಆಹ್ವಾನಿಸಿ ಔತಣಕೂಟ ಏರ್ಪಡಿಸಿ ವಿಶೇಷ ಗೌರವ (Honour) ನೀಡಿದರು. ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರಿಂದ ಈ ರೀತಿ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯ ಬಾಬಾ ಸಾಹೇಬ್ ಅಂಬೇಡ್ಕರ್ ರವರೊಬ್ಬರೆ.

(ಬ್ರಿಟನ್ ಪ್ರಧಾನಿ, ಬ್ರಿಟನ್ ದೇಶದ ರಾಜಕೀಯ ಧುರೀಣರು, ಭಾರತದ ಮಹಾರಾಜರುಗಳು, ಸಾಮಂತರು, ಅಗ್ರ ನಾಯಕರು ಸೇರಿ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ 89ಜನ ಸದಸ್ಯರಲ್ಲಿ ಅತೀ ಚಿಕ್ಕವಯಸ್ಸಿನವರೆಂದರೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (ಕೇವಲ 39ವರ್ಷಗಳು), ಅದೇ ರೀತಿ ಆ ಸದಸ್ಯರುಗಳಲ್ಲೇ ಅತೀ ಹೆಚ್ಚಿನ ವಿಧ್ಯಾ ಅರ್ಹತೆ ಹೂಂದಿದವರೂ ಸಹ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಆಗಿದ್ದರು.)

ಕ್ರೀಡಾಂಗಣಗಳು ಮತ್ತು ಇರುವ ಸ್ಥಳಗಳು


* ಈಡನ್ ಗಾರ್ಡನ್ಸ್ ಕೊಲ್ಕತ್ತಾ
* ಫಿರೋಜ್ ಶಾ ಕೋಟ್ಲಾ ದೆಹಲಿ
* ಗಾಂಧಿ ಕ್ರೀಡಾಂಗಣ ಜಲಂಧರ್
* ಗ್ರೀನ್ ಪಾರ್ಕ್ –  ಕಾನ್ಪುರ್
* ಇಂದಿರಾ ಗಾಂಧಿ ಕ್ರೀಡಾಂಗಣ ವಿಜಯವಾಡಾ
* ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ
ಕ್ರೀಡಾಂಗಣ ವಿಶಾಖಪಟ್ಟಣಂ
* ಜವಾಹರಲಾಲ್ ನೆಹರು ಕ್ರೀಡಾಂಗಣ ನವ ದೆಹಲಿ
* ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ ಹೈದರಾಬಾದ್
* ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು
* *ಎಂ.ಎ ಚಿದಂಬರಂ ಕ್ರೀಡಾಂಗಣ ಚೆನ್ನೈ
* ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ ರಾಜ್ಕೋಟ್
* ಮೊಯಿನ್-ಉಲ್-ಹಕ್ ಕ್ರೀಡಾಂಗಣ ಪಾಟ್ನಾ
* ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ- ಕ್ರೀಡಾಂಗಣ ಅಹಮದಾಬಾದ್
* ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಜೈಪುರ
* ವಿದರ್ಭ ಸಿಎ ಮೈದಾನ ನಾಗಪುರ
* ವಾಂಖೇಡೆ ಕ್ರೀಡಾಂಗಣ ಮುಂಬೈ
* ಬರಾಬಾಟಿ ಕ್ರೀಡಾಂಗಣ ಕಟಕ್
* ಬರ್ಕತುಲ್ಲಾ ಖಾನ್ ಕ್ರೀಡಾಂಗಣ ಜೋಧಪುರ್