ಸೋಮವಾರ, ಜೂನ್ 27, 2011

ಪಿ.ಡಿ.ಓ ಪರೀಕ್ಷಾ ಮಾಹಿತಿ

1. ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಕೆ.ಬಾಲಚಂದರ್ ಅವರಿಗೆ 2010 ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
2. ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ಅವರ ವಿವಾಹ ಲಂಡನ್ನಿನ ಕೇಂಬ್ರಿಜ್ ನಲ್ಲಿರುವ ವೆಸ್ಟ್ ಮಿನ್ ಸ್ಟರ್ ಅಬೆ ಚರ್ಚ್ ನಲ್ಲಿ ನಡೆಯಿತು.
3. ವಿವಾಹದ ಬಳಿಕ ವಿಲಿಯಂಗೆ “ ಡ್ಯೂಕ್ ಆಫ್ ಕೇಂಬ್ರಿಜ್ ” ಮತ್ತು ಕೇಟ್ ಗೆ “ ಡಚಸ್ ಆಫ್ ಕೇಂಬ್ರಿಜ್ ” ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.
4. ವಿಲಿಯಂ ತಾಯಿ ಡಯಾನಾ 1997 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ರಾಜಕುಮಾರ ಚಾರ್ಲ್ಸ್ ಅವರು ಕೆಮಿಲ್ಲಾ ಪಾರ್ಕರ್ ಬೌಲ್ಸ್ ಅವರನ್ನು ವಿವಾಹವಾಗಿದ್ದಾರೆ.
5. ಮೈಸೂರು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ “ಕೆ.ಚಂಗಲರಾ ರೆಡ್ಡಿ ”.
6. ರಾಜಸ್ಥಾನವು ಭಾರತದಲ್ಲಿ ಮೊಟ್ಟ ಮೊದಲ ಬಾರಿ “ ಕ್ರೆಡಿಟ್ ಕಾರ್ಡ್ ” ನೀಡಿದ ರಾಜ್ಯವಾಗಿದೆ.
7. ವಿಶಾಲ ಹಿರಿವಿನ ಆಲದ ಮರ “ ಫೈರಸ್ ಬೆಂಗಾಲೆನ್ಸಿಸ್ ” ಗಿನ್ನಿಸ್ ದಾಖಲೆಯಾಗಿದ್ದು , ಕೋಲ್ಕತ್ತಾದ ರಾಷ್ಟ್ರೀಯ ಸಸ್ಯೋಧ್ಯಾನದಲ್ಲಿದೆ.
8. ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿಯ ಕೇಂದ್ರ ಕಛೇರಿ “ ಆಸ್ಟ್ರೀಯಾ ( ವಿಯೆನ್ನಾ )” ದಲ್ಲಿದೆ.
9. 2011 ರ ಜೂನ್ 09 ರಂದು “ ದಕ್ಷಿಣ ಸೂಡಾನ್ ” ಪ್ರತ್ಯೇಕ ದೇಶವಾಗಿ ಉದಯವಾಯಿತು .
10. ದಕ್ಷಿಣ ಸೂಡಾನ್ ನ ಹಂಗಾಮಿ ಅಧ್ಯಕ್ಷರಾಗಿ “ ಸಾಲ್ವಾಕೀರ್ ” ಆಯ್ಕೆಯಾಗಿದ್ದಾರೆ.
11. ದಕ್ಷಿಣ ಸೂಡಾನ್ ರಾಜಾಧಾನಿ “ ಜಾಬಾ ”.
12. ವಿಶ್ವದಲ್ಲಿಯೆ ಅತ್ಯಂತ ಅಧಿಕ ಯುರೇನಿಯಂ ನಿಕ್ಷೇಪ “ ಆಸ್ಟ್ರೇಲಿಯಾ” ದಲ್ಲಿದೆ.
13. ಅಣು ಇಂಧನ ಸಮುಚ್ಚಯ “ ಹೈದರಾಬಾದ್ ” ನಲ್ಲಿದೆ.
14. ಸಮಾಜ ಸೇವಕ ಶ್ರೀ.ಸತ್ಯ ಸಾಯಿಬಾಬಾ 2011 ಏಪ್ರಿಲ್ 24 ರಂದು ಬೆಳಿಗ್ಗೆ 7 :40 ಕ್ಕೆ ನಿಧನರಾದರು.
15. ಇಂದು 186 ದೇಶಗಳಲ್ಲಿ 1200 ಕ್ಕೂ ಅಧಿಕ ಸತ್ಯ ಸಾಯಿ ಕೇಂದ್ರಗಳಿವೆ.
16. ಶ್ರೀ.ಸತ್ಯಸಾಯಿ ಬಾಬಾ ಮುಂದಿನ ಜನ್ಮದಲ್ಲಿ ಮಂಡ್ಯ ಬಳಿಯ ಕಾವೇರಿ ನದಿ ತೀರದ ಹಳ್ಳಿಯೊಂದರಲ್ಲಿ ಕ್ರಿ.ಶ.2023 ರ ವೇಳೆಗೆ ಹುಟ್ಟಿ ಬರುತ್ತೇನೆ . ಈ ಜನ್ಮದಲ್ಲಿ ಸತ್ಯಸಾಯಿ ಆಗಿರುವ ನಾನು ಮುಂದಿನ ಜನ್ಮದಲ್ಲಿ ಪ್ರೇಮಸಾಯಿಯಾಗಿ ಅವತರಿಸಲಿದ್ದೇನೆ.
17. 1926 , ನವೆಂಬರ್ 23 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಚಿತ್ರಾವತಿ ನದಿ ತಟದ ಪುಟ್ಟಪರ್ತಿಯಲ್ಲಿ ಜನಿಸಿದ ಸತ್ಯಸಾಯಿಬಾಬ ಅವರ ಬಾಲ್ಯದ ಹೆಸರು “ ಸತ್ಯನಾರಾಯಣರಾಜು ”.
18. ಕರ್ನಾಟಕದ ಅರ್ಜುನ್ ಹಾಲಪ್ಪ ಅಜ್ಲಾನ್ ಷಾ ಹಾಕಿ ಟೂರ್ನಿಗೆ ಭಾರತದ ಹಾಕಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
19. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದ 368 ನೇ ಅನುಚ್ಛೇದದಲ್ಲಿ ವಿವರಿಸಲಾಗಿದೆ.
20. ಲೋಕಪಾಲ ಮಸೂದೆ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಭಾರೀ ಬೆಂಬಲ ಸಿಕ್ಕಿದ್ದರಿಂದ ಏಪ್ರಿಲ್ 8 ರಂದು ಕೇಂದ್ರ ಸರ್ಕಾರ ಜಂಟಿ ಸಮಿತಿ ರಚನೆಗೆ ಸಮ್ಮತಿಸಿತು.
21. ಲೋಕಪಾಲ್ ಮಸೂದೆಯ ಅಧ್ಯಕ್ಷ “ ಪ್ರಣಬ್ ಮುಖರ್ಜಿ ”.
22. ದೇಶಾದ್ಯಂತ ಸಂಚಲನ ಉಂಟು ಮಾಡಿದ್ದ ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಮೊದಲು ಮಂಡನೆಯಾಗಿದ್ದು 1968 ರಲ್ಲಿ . 43 ವರ್ಷಗಳಲ್ಲಿ ಎಂಟು ಬಾರಿ ಮಸೂದೆ ಮಂಡನೆಯಾಗಿದ್ದರೂ ಅಂಗೀಕಾರ ಪಡೆಯಲು ಮಾತ್ರ ಸಾಧ್ಯವಾಗಿಲ್ಲ.
23. ಸಂವಿಧಾನದ 169 ನೇ ಅನುಚ್ಛೇದವು ರಾಜ್ಯಗಳಲ್ಲಿ ವಿಧಾನಪರಿಷತ್ ರಚನೆ ಹಾಗೂ ರದ್ದತಿ ಕುರಿತು ವಿವರಿಸುತ್ತದೆ.
24. 1945 ರಲ್ಲಿ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಸ್ಥಾಪನೆಯೊಂದಿಗೆ ಅಣು ವಿಜ್ಞಾನದಲ್ಲಿ ಸಂಶೋಧನೆಗಳು ಪ್ರರಂಭವಾದವು.
25. 1948 ರಲ್ಲಿ ಭಾರತ ಅಣುಶಕ್ತಿ ಆಯೋಗವು ರಚನೆಯಾಯಿತು
26. 1945 ರಲ್ಲಿ ಅಣು ಶಕ್ತಿ ವಿಭಾಗವನ್ನು , ಟ್ರಾಂಬೆ ಅಣುವಿದ್ಯುತ್ ಕೇಂದ್ರವನ್ನು ಸಹ ಸ್ಥಾಪಿಸಲಾಯಿತು.
27. ಪ್ರಸ್ತುತ ದೇಶದಲ್ಲಿ 20 ಅಣು ಸ್ಥವರಗಳು ಕಾರ್ಯನಿರ್ವಹಿಸುತ್ತಿವೆ.
28. ಅಣು ಸ್ಥಾವರಗಳಿಂದ 2020 ವೇಳೆಗೆ 20 ಸಾವಿರ ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
29. ಪ್ರಸ್ತುತ ಭಾರತದಲ್ಲಿ ಅಣು ವಿದ್ಯುತ್ ಶಕ್ತಿಯ ಪಾಲು ಶೇ.2.2 ರಷ್ಟಿದೆ.
30. ದೇಶದ ಎಲ್ಲಾ ಅಣು ವಿದ್ಯುತ್ ಕೇಂದ್ರಗಳ ನಿರ್ಮಾಣ , ನಿರ್ವಹಣೆ ,ವಿನ್ಯಾಸ , ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL ) ನ ನೇತೃತ್ವದಲ್ಲಿ ನಡೆಯುತ್ತದೆ.
31. ವಿಶ್ವದಲ್ಲಿಯೇ ಅಣು ವಿದ್ಯುತ್ ನ ಮೇಲೆ ಹೆಚ್ಚಾಗಿ ಅವಲಂಬಿಸಿರುವ ದೇಶವೆಂದರೇ ಫ್ರಾನ್ಸ್ ಶೇ.75 ರಷ್ಟು .
32. ಜಪಾನ್ 54 ಅಣು ರಿಯಾಕ್ಟರ್ ಗಳಿಂದ ಶೇ.29 ರಷ್ಟು ವಿದ್ಯುತ್ ಉತ್ಪಾದಿಸುತ್ತಿದೆ.
33. ವಿಶ್ವದಾದ್ಯಂತ ಅಮೆರಿಕಾದಲ್ಲಿ ಶೇ.27 ರಷ್ಟು , ಫ್ರಾನ್ಸ್ ಶೇ.17 ರಷ್ಟು , ಜಪಾನಿನಲ್ಲಿ ಶೇ.13 ರಷ್ಟು , ರಷ್ಯಾದಲ್ಲಿ ಶೇ.6 ರಷ್ಟು ಜರ್ಮನಿಯಲ್ಲಿ ಶೇ.5 ರಷ್ಟು ಅಣು ವಿದ್ಯುತ್ ಉತ್ಪಾದನೆ ಆಗುತ್ತದೆ.
34. ಅಣು ವಿದ್ಯುತ್ ಉತ್ಪಾದನೆಯಲ್ಲಿ ಭಾರತವು 29 ನೇ ಸ್ಥಾನದಲ್ಲಿದೆ.
35. ವಿಶ್ವದಾದ್ಯಂತ 30 ದೇಶಗಳಲ್ಲಿ 343 ಅಣು ರಿಯಾಕ್ಟರ್ ಗಳು ಕೆಲಸ ಮಾಡುತ್ತಿವೆ. ಇನ್ನೂ 158 ರಿಯಾಕ್ಟರ್ ಗಳು ಶೀಘ್ರದಲ್ಲಿಯೆ ಪ್ರಾರಂಭಿಸಲಿದೆ.
36. ಭಾರತ ಸರ್ಕಾರವು ಅಣು ಶಕ್ತಿ ಕ್ಷೇತ್ರಕ್ಕಾಗಿ ವಿಶೇಷವಾಗಿ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿಯನ್ನು ಪ್ರಾರಂಭಿಸಿತು.
37. ಮಹಾರಾಷ್ಟ್ರದಲ್ಲಿ ಭಾರತದ ಮೊಟ್ಟ ಮೊದಲನೇ ಅಣು ವಿದ್ಯುತ್ ಕೇಂದ್ರವನ್ನು 1969 ರಲ್ಲಿ ಸ್ಥಾಪಿಸಲಾಯಿತು.
38. ಭಾರತದ ಮೊಟ್ಟ ಮೊದಲನೇ ಭಾರಿ ಜಲ ವಿದ್ಯುತ್ ಕಾರ್ಖಾನೆ “ ನಂಗಲ್ ” ( ಪಂಜಾಬ್ ) 1962 ರಲ್ಲಿ ಸ್ಥಾಪಿಸಲಾಯಿತು.
39. ಸಂವಿಧಾನದ 171 ನೇ ಅನುಚ್ಛೇದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ವಿಧಾನಸಭೆಯ 1/3 ರಷ್ಟು ಮೀರಬಾರದೆಂದು ವಿವರಿಸುತ್ತದೆ.
40. ಜಪಾನಿನ ರಾಷ್ಟ್ರೀಯ ಚಿನ್ಹೆ “ ಕ್ರಿಸಾಂತಮ್ ” ( ಚೆಂಡು ಹೂ ).
41. 2011 ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಧೋನಿ ಪಡೆ ಶ್ರೀಲಂಕಾ ವಿರುದ್ಧ ಅದ್ಭುತವಾಗಿ ಆಡಿ 28 ವರ್ಷಗಳ ಟ್ರೋಪಿಯ ಭರವಾನ್ನ ನಿಗಿಸಿದರು.
42. ಪೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ನಾಯಕ “ ಮಹೇಂದ್ರ ಸಿಂಗ್ ಧೋನಿ ”.
43. 10 ನೇ ವಿಶ್ವ ಕಪ್ ನ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ “ ಯುವರಾಜ್ ಸಿಂಗ್ ” ಪಡೆದರು.
44. ಸಚಿನ್ ತೆಂಡೂಲ್ಕರ್ ಈ ಬಾರಿ ಆಡಿದ್ದು 451 ನೇ ಏಕದಿನ ಪಂದ್ಯ .18 ಸಾವಿರ ರನ್ ಗಡಿ ದಾಟಿ ದಾಖಲೆ ನಿರ್ಮಿಸಿದರು. ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 94 ನೇ ಅರ್ಧ ಶತಕದ ದಾಖಲೆ ಮಾಡಿದರು.
45. ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾದ ವಿರುದ್ಧ ಸತತ 5 ನೇ ಬಾರಿ ಗೆಲುವ ದಾಖಲಿಸಿತು.
46. ವಿರೇಂದ್ರ ಸೆಹ್ವಾಗ್ ಮತ್ತು ಎಂ.ಎಸ್.ಧೋನಿ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದ ಸಾಧನೆ ಮಾಡಿದರು.
47. ಆಸ್ಟೇಲಿಯಾದ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್ ನಲ್ಲಿ 1000 ರನ್ ಪೂರೈಸಿದ ಮೊದಲ ನಾಯಕ ಎನಿಸಿದರು .
48. ವಿಶ್ವದಲ್ಲಿಯೇ ಅತ್ಯಧಿಕವಾಗ ಜಪಾನಿನಲ್ಲಿ 24 ಸಲ ಸುನಾಮಿ ಸಂಭವಿಸಿದೆ.
49. ಭಾರತದ ಜೊತೆ ಅತ್ಯಂತ ಉದ್ಧವಾದ ಸರಹದ್ದನ್ನು ಹೊಂದಿರುವ ದೇಶ “ ಬಾಂಗ್ಲಾದೇಶ”.
50. 2015 ರ ವಿಶ್ವಕಪ್ ಅಸ್ಟ್ರೇಲಿಯಾ – ನ್ಯೂಜಿಲೆಂಡ್ ನಲ್ಲಿ , 2019 ರ ವಿಶ್ವಕಪ್ ಇಂಗ್ಲೇಂಡ್ ನಲ್ಲಿ ನಡೆಯಲಿದೆ. ಪಾಲ್ಗೋಳ್ಳುವ ತಂಡಗಳ ಸಂಖ್ಯೆ ಕೇವಲ 10 ಇರುತ್ತದೆ.
51. ಸುನಾಮಿ ಎಂದರೇ “ ಅಲೆಗಳ ಬೀಭತ್ಸ್ಯ” ಎಂದು ಅರ್ಥ.
52. 1975 ರಲ್ಲಿ ಇಂಗ್ಲೇಂಡ್ ನಲ್ಲಿ ಆರಂಭವಾದ ಮೊದಲ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡ ವೆಸ್ಟ್ ಇಂಡೀಸ್ , ನಾಯಕ ಕ್ಲೈವ್ ಲಾಯ್ಡ್ , ಆಸ್ಟ್ರೇಲಿಯಾ ರನ್ನರ್ ಆಪ್
53. ಭಾರತದ ಕಂಟ್ರೋಲರ್ ಅಂಡ್ ಆಡಿಟ್ ಜನರಲ್ ರನ್ನು ರಾಷ್ಟ್ರರಪತಿಗಳು ನೇಮಕ ಮಾಡುತ್ತಾರೆ.
54. ಭಾರತದ ಸಂವಿಧಾನದ ಪ್ರಕಾರ , ರಾಜ್ಯಗಳ ಕಾರ್ಯನಿರ್ವಹಣಾಧಿಕಾರಿಯೆಂದರೆ “ ರಾಜ್ಯಪಾಲರು ” ( ಗವರ್ನರ್ ).
55. ಹೆಡ್ ಹಂಟರ್ಸ್ ,ಡಯಾಕನ್ ಎಂಬ ಗಿರಿಜನರು ಬೋರ್ನಿಯಾ ( ಇಂಡೋನೇಷಿಯಾ ) ದ ಪ್ರಾಂತ್ಯಾದಲ್ಲಿ ವಾಸಿಸುತ್ತಾರೆ.
56. ಸಮಾನ ಭೂಕಂಪ ತೀವ್ರತೆಯುಳ್ಳ ಪ್ರದೇಶವನ್ನು ಒಂದುಗೂಡಿಸುವ ರೇಖೆಯನ್ನು “ ಐಸೋಸೀರ್ಸಲ್ ” ಎಂದು ಕರೆಯುತ್ತಾರೆ.
57. ವಿಶ್ವದಲ್ಲಿಯೇ ಅತಿ ದೊಡ್ಡ ಅರಣ್ಯ ಸಮೂಹವು “ ಟೈಗಾರ್ ಮಂಡಲ ” ಪ್ರಾಂತ್ಯದಲ್ಲಿದೆ.
58. ಸೂರ್ಯನ ನಂತರ ನಮಗೆ ಅತ್ಯಂತ ಹತ್ತಿರವಿರುವ ನಕ್ಷತ್ರವೆಂದರೆ “ ಫಾಕ್ಸಿಮಾ ಸೆಂಟಾರಿ ”.
59. ಏಷ್ಯಾದಲ್ಲೇ ದೊಡ್ಡದಾದ “ ದರೋಜಿ ಕರಡಿಧಾಮ ” ಬಳ್ಳಾರಿ ಜಿಲ್ಲೆಯಲ್ಲಿದೆ.
60. 24 ನೇ ಜನವರಿ 2011 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಯಿತು.
61. ಭೂಕಂಪದ ತೀವ್ರತೆಯನ್ನು ಅಳೆಯುವ ರಿಕ್ಟರ್ ಮಾಪಕವನ್ನು ಚಾರ್ಲ್ಸ್ ರಿಕ್ಟರ್ 1935 ರಲ್ಲಿ ಕಂಡುಹಿಡಿದರು.
62. ಶ್ವಾಸನಾಳದ ಮುಂದೆ ಹಾಗೂ ಗಂಟಲಿನ ಕೆಳಗೆ ಇರುವ ಥೈರಾಯಿಡ್ ಗ್ರಂಥಿಯು ಈ ಹಾರ್ಮೋನ್ ಸ್ರವಿಸುತ್ತದೆ. “ ಥೈರಾಕ್ಸಿನ್ ”.
63. “ ಪೇರಂಕೈಮ ” ಈ ಅಂಗಾಂಶ ನೀರು ಮತ್ತು ಆಹಾರ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
64. ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಥನೆಗಳಿಗೆ ಹಾಗೂ ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವ ಕಾರ್ಬಾನಿಕ್ ಸಂಯುಕ್ತಗಳು “ ಜೀವ ಸತ್ವಗಳು ”.
65. ಶಿಶುಗಳ ಆಹಾರದಲ್ಲಿ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದ್ದಲ್ಲಿ “ ಪೋಷಣಾ ಮರಸ್ಮಸ್ ” ಕಾಯಿಲೆ ಉಂಟಾಗುತ್ತದೆ.
66. ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳಿಗೆ “ ಬಯೋಮ್ ” ಎಂದು ಕರೆಯುತ್ತಾರೆ.
67. ತಂತಿಯ ಮೂಲಕ ವಿದ್ಯುತ್ ಹರಿಯುವಾಗ ಸ್ವಲ್ಪ ವಿದ್ಯುಚ್ಛಕ್ತಿ ಉಷ್ಣಶಕ್ತಿಯಾಗಿ ರಿವರ್ತನೆಯಾಗುವುದಕ್ಕೆ “ ವಿದ್ಯುತ್ಪ್ರವಾಹದ ಉಷ್ಣೋತ್ಪಾದನೆ ಪರಿಣಾಮ ” ಎಂದು ಕರೆಯುತ್ತಾರೆ.
68. ಹೆಚ್ಚು ಸಾಂದ್ರ ಮಾಧ್ಯಮದಿಂದ ಕಡಿಮೆ ಸಾಂದ್ರ ಮಾಧ್ಯಮಕ್ಕೆ ಬೆಳಕು ಪ್ರಸಾರವಾಗುವಾಗ ಮಾಧ್ಯಮಗಳನ್ನು ಪ್ರತ್ಯೇಕಿಸುವಾಗ ಮೈಯಲ್ಲಿ ಉಂಟಾಗುವ ಪತನಕೋನ ಕ್ರಾಂತಿಕೋನಕ್ಕಿಂತ ದೊಡ್ಡದಾಗಿರುವುದಕ್ಕೆ “ ಸಂಪೂರ್ಣ ಆಂತರಿಕ ಪ್ರತಿಫಲನ ” ಎಂದು ಕರೆಯುವರು .
69. ಎರಡೂ ಕಾಯಗಳು ಒಂದರ ಮೇಲೊಂದು ಉಂಟು ಮಾಡುವ ಪರಸ್ಪರ ಕ್ರಿಯೆಗಳು ಯಾವಾಗಲೂ ಸಮವಾಗಿರುತ್ತವೆ ಇದು ನ್ಯೂಟನ್ ನ “ ಮೂಕನೇ ನಿಯಮ ” ವಾಗಿದೆ.
70. ವಸ್ತುವಿಗೆ ಉಷ್ಣ ನೀಡಿದಾಗ ವಸ್ತುವಿನ ಅಣುಗಳ ನಡುವೆ “ ಚಲನ ಶಕ್ತಿ ” ಹೆಚ್ಚಾಗುತ್ತದೆ.
71. ಒಂದು ಕಿಲೋಗ್ರಾಂ ರಾಶಿಯುಳ್ಳ ವ್ಸತುವಿನ ತಾಪವನ್ನು ಒಂದು ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ನೀಡಬೇಕಾದ ಉಷ್ಣಕ್ಕೆ ಆ ವಸ್ತುವಿನ “ ವಿಶಿಷ್ಟೋಷ್ಣ ” ಎಂದು ಕರೆಯುವರು.
72. ಭಾರವಾಗಿರುವ ಪರಮಾಣು ಬೀಜಗಳು ನಿರ್ದಿಷ್ಟ ವಿಕಿರಣಗಳನ್ನು ಉತ್ಸರ್ಜಿಸುತ್ತ ತಮ್ಮಷ್ಟಕ್ಕೆ ತಾವೇ ಕ್ಷಯಿಸಿ ಹೋಗುವುದಕ್ಕೆ “ ವಿಕಿರಣ ಪಟುತ್ವ ” ಎಂದು ಕರೆಯುವರು.
73. ವಿಕರಣಪಟುತ್ವವನ್ನು ಹೆನ್ರಿ ಬೆಕೆರಲ್ ಎಂಬ ಫ್ರಾನ್ಸ್ ದೇಶದ ವಿಜ್ಞಾನಿ 1896 ರಲ್ಲಿ ಆವಿಷ್ಕರಿಸಿದ.
74. ಮೇರಿ ಕ್ಯೂರಿ ಮತ್ತು ಪಿಯರಿ ಕ್ಯೂರಿ ಈ ದಂಪತಿಗಳು 1898 ರಲ್ಲಿ ಪೊಲೊನಿಯಮ್ ಮತ್ತು ಇದರ ನಂತರ ರೇಡಿಯಮ್ ಎಂಬ ಧಾತುವನ್ನು ಆವಿಷ್ಕರಿಸಿದರು.
75. 1903 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು.
76. ಕಾರ್ಬನ್ ಮತ್ತು ಹೈಡ್ರೋಜನ್ ಗಳನ್ನು ಹೊಂದಿರುವ ಸಾವಯವ ಸಂಯುಕ್ತಗಳು “ ಹೈಡ್ರೋಕಾರ್ಬನ್ ”.
77. ಅತ್ಯಂತ ಸರಳ ಹೈಡ್ರೋಕಾರ್ಬನ್ “ ಮಿಥೇನ್ ”. ಇದರ ಅಣುಸೂತ್ರ CH4.
78. ಜೇಡಿಮಣ್ಣು ಮತ್ತು ಅಲ್ಯೂಮಿನಿಯಂ ಸಿಲಿಕೇಟ್ ನ ಸಂಯುಕ್ತಗಳ ಮಿಶ್ರಣದಿಂದ “ ಪಿಂಗಾಣಿ ” ವಸ್ತು ತಯಾರಿಸುತ್ತಾರೆ.
79. ಚೀನಾ ಪಾತ್ರೆ, ಪಿಂಗಾಣಿ, ಇಟ್ಟಿಗೆಯಂತಹ ಜೇಡಿಮಣ್ಣಿನ ವಸ್ತುಗಳನ್ನು “ ಸೆರಾಮಿಕ್ಸ್ ”ಗಳೆಂದು ಕರೆಯುತ್ತಾರೆ.
80. ಜೇಡಿ ಮಣ್ಣು ಮತ್ತು ಅಲ್ಯೂಮಿನಿಯಂ ಸಿಲಿಕೇಟ್ ನೊಂದಿಗೆ ಇತರ ಸಂಯುಕ್ತಗಳ ಮಿಶ್ರಣ .ಇದು ಗಾಳಿ ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ನ ವರ್ತನೆಯಿಂದಾಗಿ ಸಿಲಿಕೇಟ್ ಬಂಡೆಗಳ ಸವೇತದಿಂದ ಉಂಟಾಗುತ್ತದೆ.
81. ಸಾಬೂನೀಕರಣ ಪ್ರಕ್ರಿಯೆಯಲ್ಲಿ ಮೇದಾಮ್ಲವನ್ನು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ಬೆರೆಸಿ ಕಬ್ಬಿಣದ ಹಂಡೆಯಲ್ಲಿ ಕಾಯಿಸಿದಾಗ ಉಂಟಾಗುವ ಪದಾರ್ಥ “ ಗ್ಲಿಸರಾಲ್ ”.
82. ಸ್ವೀಡನ್ ದೇಶದ “ ಕಾರ್ಲ್ ವಿಲ್ ಹೆಲ್ಮ್ ಷೀಲೆ ” ಎಂಬ ರಾಸಾಯನಿಕ ವಿಜ್ಞಾನಿ ಸಾಬೂನು ತಯಾರಿಸುವ ಪ್ರಕ್ರಿಯೆಯನ್ನು ಆಕಸ್ಮಿಕವಾಗಿ 1783 ರಲ್ಲಿ ಪತ್ತೆ ಹಚ್ಚಿದರು .
83. ಪ್ರಕೃತಿಯಲ್ಲಿ ದೊರೆಯುವ ಅತ್ಯಂತ ಕಥಿಣ ವಸ್ತು “ ವಜ್ರ ”.
84. 27 ನೇ ಮಾರ್ಚ್ 2011 ರಂದು ವಿಶ್ವ ರಂಗಭೂಮಿ ದಿನ .
85. ಐ.ಪಿ.ಎಲ್ ಕ್ರಿಕೆಟ್ ಮ್ಯಾಚ್ 4 ನೇ ಆವೃತ್ತಿ ಏಪ್ರಿಲ್ 8 ರಿಂದ ಮೇ 28 ರ ವರೆಗೆ ನಡೆಯಿತು.
86. ಸಮಭಾಜಕ ವೃತ್ತದ ಎರಡೂ ಕಡೆಯ ಉಷ್ಣವಲಯ ಮತ್ತು ಉಪ ಉಷ್ಣ ವಲಯದಲ್ಲಿ “ ಪರಿಸರಣ ಮಳೆ ” ಉಂಟಾಗುತ್ತದೆ.
87. ಸಾಗರದ ನೀರು ನಿಯತಕಾಲಿಕವಾಗಿ ಏರಿ – ಇಳಿಯುವುದನ್ನೂ “ ಸಾಗರದ ಉಬ್ಬರವಿಳಿತ ” ಎಂದು ಕರೆಯುವರು .
88. ಸಾಗರದ ಉಬ್ಬರವಿಳಿತ ಪ್ರತಿ 12 ಗಂಟೆ 26 ನಿಮಿಷಕ್ಕೊಮ್ಮೆ ಸಂಭವಿಸುತ್ತದೆ.
89. ಟೈಗಾ ಪ್ರದೇಶ ಅಥವಾ ಮೊನಚಾದ ಅರಣ್ಯ ಪ್ರದೇಶಗಳು 50 ಯಿಂದ 70 ಡಿಗ್ರಿ ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ಕಂಡುಬರುತ್ತದೆ.
90. ವಿಶ್ವದ 2 ನೇ ದೊಡ್ಡ ಸಿಹಿನೀರಿನ ಸರೋವರ ಆಫ್ರಿಕಾ ಖಂಡದ ಲೇಕ್ ತ್ಯಾಂನ್ ಯಿಕಾ ( ಆಫ್ರಿಕನ್ ಗ್ರೇಟ್ ಲೇಕ್ )
91. ಟೈಗಾ ಪ್ರದೇಶ ಅಥವಾ ಮೊನಚಾದ ಅರಣ್ಯ ಪ್ರದೇಶಗಳಲ್ಲಿ ಪೈನ್ , ಸಿಡಾರ್ , ಫರ್ , ಸ್ಟ್ರೂಸ್ , ಲಾರ್ಚ್ , ಹೆಮ್ಲಾಕ್ ಮುಂತಾದ ಮರಘಲು
92. ಉತ್ತರ ಭಾರತದ ಮಹಾ ಮೈದಾನದ ನೈರುತ್ಯಕ್ಕೆ ಇರುವ ಮರುಭಾಮಿ “ ಥಾರ್ ಮರುಭೂಮಿ ”.
93. ಉತ್ತರ ಕರ್ನಾಟಕದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಸುಮಾರು 550 .ಕಿ.ಮೀ. ಉದ್ದವಾಗಿರುವ ಕರಾವಳಿ ಮೈದಾನ “ ಮಲಬಾರ್ ”.
94. “ವೆಂಬನಾಡ ” ಸರೋವರವು ಮಲಬಾರ್ ತೀರದ ಅತಿದೊಡ್ಡ ಹಿನ್ನೀರಿನ ಸರೋವರವಾಗಿದೆ.
95. ವಿಶ್ವದ ಅತಿ ದೊಡ್ಡ ಒಳಾಂಗಣ ಥೀಮ್ ಪಾರ್ಕ್ ಅಬುದಾಭಿಯ “ ಪೆರಾರಿ ಥಿಮ್ ಪಾರ್ಕ್ ” ಇದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
96. ಕಪ್ಪೆ ಅರಭಟ್ಟನ ಶೌರ್ಯ ಪರಾಕ್ರಮಗಳ ಬಗ್ಗೆ ಉಲ್ಲೇಖವಿರುವ ಶಾಸನ “ ಬಾದಾಮಿ ಶಾಸನ ”.
97. ಬಾದಾಮಿ ಶಾಸನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿರುವ ಕನ್ನಡದ ಪ್ರಮುಖ ಶಾಸನ ಇದರ ಕಾಲ ಸುಮಾರು ಕ್ರಿ.ಶ.7 ನೇ ಶತಮಾನ.
98. ಜಲಾಲುದ್ದೀನ್ ತೀರ ಪ್ರದೇಶದಲ್ಲಿ ಅತಿಯಾಗಿ ಮಂಗೋಲರ ದಾಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಸುಲ್ತಾನನಿಂದ “ ಷಯಿಸ್ತಾಖಾನ್ ” ಎಂಬ ಬಿರುದು ಪಡೆದನು.
99. ಕ್ರಿ.ಶ.1301 ರ ರಣಥಂಬೋರ್ ಆಕ್ರಮಣವು “ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಾ ಹಮ್ಮೀರ್ ದೇವ ” ಮಧ್ಯೆ ನಡೆಯಿತು.
100. ಆಗ್ರಾ ನಗರದ ಸ್ಥಾಪನೆಯ ಕೀರ್ತಿ ಲೂದಿ ಸಂತತಿಯ ಈ ಅರಸನಿಗೆ ಸಲ್ಲುತ್ತದೆ. “ ಸಿಕಂದರ್ ಲೂದಿ ”.
101. ಸಣ್ಣ ಕಥೆಗಳ ಜನಕ ಎಂದು “ ಮಾಸ್ತಿ ವೆಂಕಟೇಶ ಅಯ್ಯಂಗಾರ್ ” ರವರನ್ನ ಕರೆಯುತ್ತಾರೆ.
102. ಕ್ರಿಯೆಯ ಅರ್ಥವನ್ನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದೇ ಇರುವ ಕ್ರಿಯಾಪ್ರಕೃತಿ “ ಧಾತು ”.
103. ಹರ್ಷವರ್ಧನನ ಆಸ್ಥಾನದಲ್ಲಿದ್ದ ಬಾಣ ಕವಿಯು ತನ್ನ ಅಶ್ರಯದಾತನನ್ನು ಕುರಿತು ರಚಿಸಿದ ಕೃತಿ “ ಹರ್ಷ ಚರಿತೆ ”.
104. ಬಾಣನ “ ಕಾದಂಬರಿ ” ಕೃತಿಯ ಆಧಾರದಿಂದ ಕನ್ನಡದ ಒಂದನೇ ನಾಗವರ್ಮನು ಚಂಪೂ ಶಾಲಿಯಲ್ಲಿ “ ಕರ್ನಾಟಕ ಕಾದಂಬರಿ ”ಯನ್ನು ರಚಿಸಿದರು.
105. “ ರಾಮಾಯಣ” ವನ್ನು ರಚಿಸಿದ ಮಹರ್ಷಿ ಎಂದು “ ವಾಲ್ಮಿಕಿ ” ಕವಿಯನ್ನ ಕರೆಯುತ್ತಾರೆ.
106. ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ ಏಕರೂಪವಾಗಿರುವ ಶಬ್ದಗಳಿಗೆ “ ಅವ್ಯಯಗಳು ” ಎಂದು ಕರೆಯುವರು.
107. 70 ಜಿಲ್ಲೆಗಳನ್ನು ಹೋದಿರುವ ಉತ್ತರ ಪ್ರದೇಶ ಭಾರತದ ಅತ್ಯಧಿಕ ಜಿಲ್ಲೆಗಳನ್ನು ಹೊಂದಿರುವ ರಾಜ್ಯ .
108. ಚೀನಾ ,ಅಮೆರಿಕ, ಇಂಡೋನೇಷ್ಯಾ , ಬ್ರೆಜಿಲ್ ದೇಶಗಳು ಮಾತ್ರ ಉತ್ತರ ಪ್ರದೇಶಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ.
109. ಹಣಕಾಸಿನ ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳನ್ನು ಸಂವಿಧಾನದ “ 360 ನೇ ಅನುಚ್ಛೇದ ” ತಿಳಿಸುತ್ತದೆ.
110. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಧಿಕಾರ ಮತ್ತು ಅದಕ್ಕಾಗಿ ಪ್ರಕ್ರಿಯೆಗಳನ್ನು ಸಂವಿಧಾನದ “ 368 ” ಅನುಚ್ಛೇದದಲ್ಲಿ ತಿಳಿಸಲಾಗಿದೆ.
111. ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಮತ್ತು ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಇವರುಗಳಿಗೆ ಸಂಬಂಧಿಸಿದ ಉಪಬಂಧಗಳು ಸಂವಿಧಾನದ “ 2ನೇ ” ಅನುಸೂಚಿಯಲ್ಲಿ .
112. ಸಂವಿಧಾನದ ಯಾವ ಅನುಚ್ಛೇದವು ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಅನ್ವೇಷಣೆ ಮಾಡುವುದಕ್ಕಾಗಿ ಆಯೋಗದ ನೇಮಕಾತಿಯನ್ನು ರಚಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. “ 340 ನೇ ಅನುಚ್ಛೇದ ”.
113. ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ “ ಏಪ್ರಿಲ್ 2 ”.
114. ಭಾರತದಲ್ಲಿ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಅತ್ಯಧಿಕವಾಗಿ ಕಾರ್ಪೊರೇಟ್ ತೆರಿಗೆಯಿಂದ ಆದಾಯ ಬರುತ್ತಿದೆ.
115. ಮೇ – 1 ಕಾರ್ಮಿಕ ದಿನಚರಣೆ , ಮತ್ತು ವಿಶ್ವ ನ್ಯಾಯ ದಿನಾಚರಣೆಯನ್ನ ಆಚರಿಸುವರು.
116. ಮೇ – 03 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಶ್ವ ಸೌರ ದಿನಚರಣೆ ಆಚರಿಸುವರು.
117. ಮೇ – 05 ಅಂತರರಾಷ್ಟ್ರೀಯ ಸೂಲಗಿತ್ತಿಯರ ದಿನಾಚರಣೆ ಮತ್ತು ಯೂರೋಪ್ ಡೇ ಆಚರಿಸುವರು.
118. ಮೇ – 08 ರೆಡ್ ಕ್ರಾಸ್ ದಿನಾಚರಣೆ ಮತ್ತು ಮದರ್ಸ್ ಡೇಯನ್ನ ಆಚರಿಸುವರು.
119. ಮೇ - 10 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಿನಾಚರಣೆ, ರಾಷ್ಟ್ರೀಯ ತಂತ್ರಜ್ಞಾನ ದಿನೋತ್ಸವ ಆಚರಿಸುವರು.
120. ಮೇ – 15 ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆ , ಸರ್ ಅರ್ಥರ್ ಕಾನನ್ ಜಯಂತಿ ಆಚರಿಸುವರು.
121. ಮೇ – 17 ಟೆಲಿಕಮ್ಯೂನಿಕೇಷನ್ ( ದೂರಸಂಪರ್ಕ ) ದಿನಾಚರಣೆ .
122. ಮೇ – 21 ಭಯೋತ್ಪಾದನಾ ವಿರೋಧಿ ದಿನ , ಅಂತರರಾಷ್ಟ್ರೀಯ ನರ್ಸ್ ಗಳ ದಿನಾಚರಣೆ ಆಚರಿಸುವರು.
123. ಮೇ – 22 ಜೀವವೈವಿಧ್ಯ ದಿನಾಚರಣೆ ಆಚರಿಸುವರು .
124. ಮೇ – 24 ಕಾಮನ್ ವೆಲ್ತ್ ದಿನಾಚರಣೆ ಆಚರಿಸುವರು.
125. ಮೇ – 29 ಅಂತರರಾಷ್ಟ್ರೀಯ ಶಾಂತಿ ಸಂರಕ್ಷಣೆಗಾರರ ದಿನಾಚರಣೆ ಆಚರಿಸುವರು .
126. ಮೇ – 31 ವಿಶ್ವ ತಂಬಾಕು ವಿರೋಧಿ ( ಧೂಮಪಾನ ) ದಿನವಾಗಿ ಆಚರಿಸುವರು.
127. ಸೂರ್ಯ ಉದಯಿಸುವ ನಾಡು ಎಂದು “ ಜಪಾನ್”.
128. ಮ್ಯಾನ್ಮಾರ್ ನ ಸೇನೆ ಮಾ.30 ರಂದು ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿದ್ದು , ನೂತನ ಅಧ್ಯಕ್ಷರಾಗಿ “ ಥೆಯಿನ್ ಸಿಯೆನ್ ” ಅಧಿಕಾರ ಸ್ವೀಕರಿಸಿದರು.
129. 2010 ರಲ್ಲಿ ಅಮೆರಿಕಾದ ಶಾಶ್ವತ ಪೌರತ್ವದ ಗ್ರೀನ್ ಕಾರ್ಡ್ ಪಡೆದವರಲ್ಲಿ ಭಾರತೀಯರು 3ನೇ ಸ್ಥಾನ ಪಡೆದಿದ್ದಾರೆ , ಮೆಕ್ಸಿಕೋ ಮತ್ತು ಚೀನಾ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನ ಆಕ್ರಮಿಸಿಕೊಂಡಿದೆ.
130. ಮೆಸೇಜ್ ಟಾಕ್ಸ್ , ಹಾಟ್ ಪೊಟೋಟೋ ರೋಟಿಂಗ್ ಅನ್ವೆಷಣೆಗಳ ಮೂಲಕ 1960 ರ ದಶಕದಲ್ಲಿ ಕಂಪ್ಯೂಟರ್ ನಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದ ಇಂಟರ್ ನೆಟ್ ದಿಗ್ಗಜ “ ಪಾಲ್ ಬಾರನ್ ” ( 84 ) ಮಾ.29 ರಂದು ನಿಧನರಾದರು.
131. ಗೂಢಚಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿತನಾಗಿ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ “ ಗೋಪಾಲ್ ದಾಸ್ ” ಅವರನ್ನು ಬಿಡುಗಡೆ ಮಾಡಲಾಯಿತು. ( 1984 ರಲ್ಲಿ ಬಂಧಿಸಿಲಾಗಿತ್ತು , ಬಳಿಕ 1987 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು.).
132. ವಿಶ್ವ ವೃತ್ತ ಪತ್ರಿಕೆಗಳ ಸಂಘ ಮತ್ತು ಸುದ್ಧಿ ಪ್ರಕಾಶಕರ ಸಂಘ ( ವ್ಯಾನ್ ಇಫ್ರಾ ) ದ ಅಧ್ಯಕ್ಷರಾಗಿ ಮಲಯಾಳಂ ಮನೋರಮಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಪ್ರಕಾಶಕ “ ಜೇಕಬ್ ಮ್ಯಾಥ್ಯೂ ” ಆಯ್ಕೆಯಾದರು.
133. ವಿದೇಶಿ ವಲಸಿಗಿಗೆ “ ಕೆನಡಾ ” ಅತ್ಯಂತ ಸ್ನೇಹಿ ರಾಷ್ಟ್ರವೆಂದು ಗರಿಷ್ಠ ಅಂಕ ಪಡೆದರೆ “ ಮೆದರ್ ಲ್ಯಾಂಡ್ ಮತ್ತು ಭಾರತ ” ಅತಿ ಕಡಿಮೆ ಅಂಕ ಪಡೆದಿವೆ .
134. ಬಾರತೀಯ ಮೂಲದ ಅಮೆರಿಕ ಪ್ರಜೆ , ಕ್ಯಾನ್ಸರ್ ರೋಗ ತಜ್ಞ , ಸಿದ್ದಾರ್ಥ ಮುಖರ್ಜಿ ಅವರು ಬರೆದಿರುವ “ ದಿ ಎಂಪರರ್ ಆಫ್ ಆಲ್ ಮೆಲೋಡಿಸ್ ” ಪುಸ್ತಕಕ್ಕೆ ಪುಲಿಟ್ಜರ್ ಪ್ರಶಸ್ತಿ ಸಂದಿದೆ.
135. ಪುಲಿಟ್ಜರ್ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ಇವರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ 1937 ರಲ್ಲಿ “ ಗೋವಿಂದ ಬಿಹಾರಿಲಾಲ್ ”.
136. ಜಪಾನ್ ದೇಶದ ಆಡಳಿತ ಗ್ರಂಥದ ಹೆಸರು “ಗ್ರೇಬುಕ್ಸ್ ’.
137. ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.12 ರಷ್ಟು ಹೆಚ್ಚಳವಾಗಿದೆ.
138. 19 ರಾಜ್ಯಗಳ 6.25 ಸಾವಿರ ಕಿ.ಮೀ.ಅರಣ್ಯ ಪ್ರದೇಶದಲ್ಲಿ ಸುಮಾರು 9 ಕೋಟಿ ರೂ. ವೆಚ್ಚ ಮಾಡಿ ನಡೆಸಿದ 2010 ರ ಹುಲಿ ಗಣತಿ ವರದಿಯನ್ನು ಮಾ.28 ರಂದು ಬಿಡುಗಡೆ ಮಾಡಲಾಯಿತು.
139. ಕರ್ನಾಟಕದಲ್ಲಿ ಸುಮಾರು 300 – 320 ರಷ್ಟು ಹುಲಿಗಳಿದ್ದು ದೇಶದಲ್ಲಿಯೆ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು 534 ಹುಲಿಗಳಿವೆ.
140. ದೇಶದಲ್ಲಿರುವ 39 ಹುಲಿ ರಕ್ಷಿತಾರಣ್ಯ ಗಳಿಗಿಂತ ಹೊರಗಿನ ಅರಣ್ಯ ಪ್ರದೇಶಗಳಲ್ಲಿ ಶೇ.30 ರಷ್ಟು ಹುಲಿಗಳಿವೆ.
141. ಜಪಾನಿನ ಕರೆನ್ಸಿ “ ಯೆನ್ ”.
142. ರಾಜ್ಯಯೋಜನಾ ಮಂಡಳಿಯನ್ನು ಪುನರ್ ರಚಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ .ಯೋಜನಾ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ರಾಮಚಂದ್ರಗೌಡ ಉಪಾಧ್ಯಕ್ಷರಾಗಿದ್ದಾರೆ.
143. 83 ನೇ ಆಸ್ಕರ್ ಪ್ರಶಸ್ತಿಗಳ್ಲಿ ಉತ್ತಮ ಚಿತ್ರವಾಗಿ “ ದ ಕಿಂಗ್ಸ್ ಸ್ಪೀಚ್ ’ ಆಯ್ಕೆಯಾಗಿದೆ.
144. ಬಿ.ರಾಮದಾಸ್ ನಾಯ್ಡು ನಿರ್ದೇಶನದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ “ ಬಸಂತಕುಮಾರ್ ಪಾಟೀಲ್ ” ನಿರ್ಮಿಸಿದ ಹೆಜ್ಜೆಗಳು ಚಲನಚಿತ್ರಕ್ಕೆ ಲಖನೌ ನಲ್ಲಿ 3 ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿತು.
145. ಹಿಂದಿ ಚಲನಚಿತ್ರ “ ಐ ಯಾಮ್ ಕಲಾಂ ”ಗೆ ಮೊದಲ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ 3 ಲಕ್ಷ.
146. ಬರ್ಲಿನ್ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿ ಕನ್ನಡ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ನೇಮಕಗೊಂಡಿದ್ದಾರೆ.
147. ಗೋದ್ರಾ ರೈಲು ದುರಂತದ ತನಿಖೆಗಾಗಿ ಕೇಂದ್ರ ಸರ್ಕಾರವು “ ಜಸ್ಟೀಸ್ ನಾನಾವತಿ ಕಮೀಷನ್ ”ನ್ನು ರಚಿಸಿತು.
148. ಕರ್ನಾಟಕದ 121 ಗ್ರಾಮ ಪಂಚಾಯಿತಿಗಳು ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿವೆ ,
149. ಬೆಳಗಾವಿ ಜಿಲ್ಲೆಯ ಶಿರಗುಪ್ಪ ಗ್ರಾಮ ಪಂಚಾಯಿತಿಯನ್ನ ಮಾದರಿ ಗ್ರಾಮ ಪಂಚಾಯಿತಿ ಎಂದು ಕೇಂದ್ರ ಸರ್ಕಾರ ಪುರಸ್ಕರಿಸಿದೆ.