ಶನಿವಾರ, ಅಕ್ಟೋಬರ್ 22, 2011

ಭಾರತದ ಸಂವಿಧಾನ

1. 1857 ರಲ್ಲಿ ಸಿಪಾಯಿ ದಂಗೆ ನಡೆಯಿತು.
2. 1857 ರಲ್ಲಿ ಬ್ರಿಟಿಷ್ ಸರ್ಕಾರದ ನೇರ ಆಡಳಿತ .
3. 1861 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಕಾಯಿದೆ ಜಾರಿ .
4. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆ .
5. 1906 ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ .
6. 1909 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿ
7. 1915 ರಲ್ಲಿ ಭಾರತ ಸರ್ಕಾರ ಕಾಯಿದೆ ಜಾರಿ .
8. 1930 ರಲ್ಲಿ ಸೈಮನ್ ಆಯೋಗ ಭಾರತಕ್ಕೆ .
9. 1935 ರಲ್ಲಿ ಭಾರತ ಸರ್ಕಾರದ ಕಾಯಿದೆ ಜಾರಿ
10. 1942 ರಲ್ಲಿ ಕ್ರಿಪ್ಸ್ ಆಯೋಗ ಭಾರತಕ್ಕೆ
11. 1946 ರಲ್ಲಿ ಕ್ಯಾಬಿನೆಟ್ ಮಿಷನ್
12. 1946 ಜುಲೈ ಸಂವಿಧಾನ ಸಭೆಗೆ ಚುನಾವಣಿ
13. 1946 ಡಿಸೆಂಬರ್ 9 ಸಂವಿಧಾನ ಸಭೆಯ ಪ್ರಥಮ ಸಭೆ .
14. 1946 ಡಿಸೆಂಬರ್ 11 ಡಾ.ಬಾಬು ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಖಾಯಂ ಅಧ್ಯಕ್ಷರಾಗಿ ಆಯ್ಕೆ .
15. 1947 ಆಗಸ್ಟ್ 29 ಕರಡು ಸಮಿತಿ ( ಡ್ರಾಫ್ಟ್ ಕಮಿಟಿ ) ರಚನೆ.
16. 1948 ರಲ್ಲಿ ಕರಡು ಸಂವಿಧಾನ ಸಿದ್ಧ
17. 1949 ನವೆಂಬರ್ 26 ಸಂವಿಧಾನದ ಅಂಗೀಕಾರ
18. 1950 ಜನವರಿ 26 ಸಂವಿಧಾನ ಜಾರಿ .
19. ಮೂಲಭೂತ ಹಕ್ಕು , ಸ್ವತಂತ್ರ ನ್ಯಾಯಾಂಗ ಹಾಗೂ ನ್ಯಾಯಾಂಗೀಯ ಪರಿವಿಕ್ಷಣೆ ಇವುಗಳನ್ನು ಅಮೆರಿಕಾದ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
20. ಕೇಂದ್ರ ಹಾಗೂ ರಾಜ್ಯಗಳ ವಿಷಯ ಪಟ್ಟಿಯನ್ನು ಹೊರತುಪಡಿಸಿ ಉಳಿದ ಅಧಿಕಾರ ಹಾಗೂ ವಿಷಯಗಳನ್ನೆಲ್ಲ ಕೇಂದ್ರ ಸರ್ಕಾರಕ್ಕೆ ಕೊಡುವ ನಿರ್ಧಾರವನ್ನು ಕೆನಾಡ ಸಂವಿಧಾನದಿಂದ ಎತ್ತಿಕೊಳ್ಳಲಾಯಿತು.
21. ರಾಜ್ಯ ನೀತಿ ನಿರ್ದೇಶಕ ತತ್ವ ಹಾಗೂ ರಾಜ್ಯಸಭೆಗೆ ಸದಸ್ಯರುಗಳನ್ನ ನೇಮಕ ಮಾಡುವ ಪದ್ಧತಿಯನ್ನು ಐರಿಷ್ ಸಂವಿಧಾನದಿಂದ ಪಡೆಯಲಾಗಿದೆ.
22. ರಾಜ್ಯಸಭೆಯ ಸದಸ್ಯರುಗಳ ಚುನಾವಣಾ ವಿಧಾನ ಹಾಗೂ ಪದ್ಧತಿ ಹಾಗೂ ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಲು ಹಾಗೂ ಭಾರತೀಯ ಸಂವಿಧಾನ ತಿದ್ದುಪಡಿ ಮಾಡಲು ಅನುಸರಿಸುವ ವಿಧಾನಗಳು ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಪಡೆಯಿಲಾಗಿದೆ.
23. ದೇಶದ ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕು ರಾಷ್ಟ್ರಪತಿ ಹಿಂತೆಗೆದುಕೊಳ್ಳುವ ಪದ್ಧತಿಯನ್ನು ಜರ್ಮನಿಯ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
24. ಭಾರತದ ಸಂವಿಧಾನವು ನಮ್ಯ ಮತ್ತು ಅನಮ್ಯತೆಗಳ ಲಕ್ಷಣವನ್ನೊಳಗೊಂಡಿದೆ.
25. ನಮ್ಯ ಎಂದರೆ ಸಂವಿಧಾನವನ್ನ ಸರಳ ವಿಧಾನಗಳ ಮೂಲಕ ತಿದ್ದುಪಡಿ ಮಾಡಲು ಸಾಧ್ಯವಿರುವುದನ್ನ ನಮ್ಯ ಎಂದು ಕರೆಯುವರು
26. ಅನಮ್ಯ ಎಂದರೆ ಸಂವಿಧಾನದಲ್ಲಿನ ಕೆಲವು ಭಾಗಗಳನ್ನ ತಿದ್ದುಪಡಿ ಮಾಡಲು ಸರಳ ವಿಧಾನದಲ್ಲಿ ಆಗದಿರುವುದಾಗಿದೆ.
27. ಭಾರತದ ಸಂವಿಧಾನದಲ್ಲಿ 3 ನೇ ಭಾಗದಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆಯಿದೆ.
28. ಸಂವಿಧಾನದ 12 ರಿಂದ 35 ನೇ ವಿಧಿಗಳವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆ ನೀಡಲಾಗಿದೆ.
29. ಸಂವಿಧಾನದ 14 ರಿಂದ 18 ನೇ ವಿಧಿಯವರೆಗೆ ಸಮಾನತೆಯ ಹಕ್ಕು ಇದರ ಬಗ್ಗೆ ವಿವರಣೆಯಿದೆ.
30. ಸಂವಿಧಾನದ 14 ಮತ್ತು 15 ನೇ ವಿಧಿ ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿ ಸಮಾನ ರಕ್ಷಣೆ ಬಗ್ಗೆ ವಿವರಣೆಯಿದೆ.
31. ಸಂವಿಧಾನದ 16 ನೇ ವಿಧಿ ಸಾರ್ವಜನಿ ಸೇವೆಗಳಲ್ಲಿ ಸಮಾನ ಅವಕಾಶ ಇದರ ಬಗ್ಗೆ ವಿವರಣೆಯಿದೆ.
32. ಸಂವಿಧಾನದ 17 ನೇ ವಿಧಿ ಅಸ್ಪೃಶ್ಯತೆಯ ನಿಷೇದದ ಬಗ್ಗೆ ವಿವರಣೆಯಿದೆ.
33. 18 ನೇ ವಿಧಿಯಲ್ಲಿ ಮಿಲಿಟರಿ ಹಾಗೂ ಶೈಕ್ಷಣಿಕ ಬಿರುದುಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿರುದುಗಳನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ
34. ಸಂವಿಧಾನದ 19 ರಿಂದ 22 ನೇ ವಿಧಿಯು ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
35. ಸಂವಿಧಆನದ 23 ಮತ್ತು 24 ನೇ ವಿಧಿಯು ಶೋಷಣೆಯ ವಿರುದ್ಧದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
36. ಸಂವಿಧಾನನದ 23 ನೇ ವಿಧಿಯು ಹೆಣ್ಣುಮಕ್ಕಳನ್ನು ಕೊಂಡುಕೊಳ್ಳುವುದು , ಮಾರುವುದು ಮತ್ತು ಅನೈತಿಕ ವ್ಯವಹಾರಗಳಿಗೆ ತೊಡಗಿಸುವುದು ಹಾಗೇಯೆ ವೇಶ್ಯಾವಾಟಿಕೆಯನ್ನು ನಿಷೇಧದ ಬಗ್ಗೆ ವಿವರಣೆಯಿದೆ.
37. ಸಂವಿಧಾನದ 24 ನೇ ವಿಧಿಯ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಜೀತ ಅಥವಾ ಇತರೇ ಅಪಾಯಕಾರಿ ಕೆಲಸಗಳಿಗೆ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ.
38. ಸಂವಿಧಾನದ 25 ರಿಂದ 28 ನೇ ವಿಧಿಯು ಧಆರ್ಮಿಕ ಸ್ವಾತಂತ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ.
39. ಸಂವಿಧಾನದ 25 ನೇ ವಿಧಿಯು ಯಾವುದೇ ಧರ್ಮವನ್ನು ಸ್ವೀಕರಿಸುವ , ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿನ ಬಗ್ಗೆ ವಿವರಣೆಯಿದೆ
40. ಸಂವಿಧಾನದ 26 ನೇ ವಿಧಿಯು ಧಾರ್ಮಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಮತ್ತು ಇಂತಹ ಸಂಘ ಸಂಸ್ಥೆಗಳು ತಮ್ಮದೇ ಆದ ಮೂಲಗಳನ್ನು ಹೊಂದಿ ಆಡಳಿತ ನಡೆಸಲು ಅವಕಾಶವಿದೆ ಎಂಬ ಬಗ್ಗೆ ವಿವರಣೆಯಿದೆ.
41. ಸಂವಿಧಾನದ 27 ನೇ ವಿಧಿ ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡಲು ತೆರಿಗೆ ನೀಡುವಿಕೆಯಿಂದ ಸ್ವಾತಂತ್ರ್ಯ ಎಂಬ ಬಗ್ಗೆ .
42. ಸಂವಿಧಾನದ 29 ರಿಂದ 30 ನೇ ವಿಧಿ ವರೆಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ಬಗ್ಗೆ ವಿವರಣೆಯಿದೆ.
43. ಸಂವಿಧಾನದ 29 ನೇ ವಿಧಿಯ ಪ್ರಕಾರ ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಪ್ರಜೆಗಳು ತಮ್ಮದೇ ಭಾಷೆ , ಲಿಪಿ, ಸಂಸ್ಕೃತಿಯನ್ನು ಹೊಂದಿ , ಅವುಗಳನ್ನು ಅಭಿವೃದ್ಧಇ ಪಡಿಸಿಕೊಳ್ಳುವ ಹಾಗೂ ರಕ್ಷಿಸುವ ಹಕ್ಕು ಹೊಂದಿರುತ್ತಾರೆ.
44. ಸಂವಿಧಾನದ 29 ವಿಧಿಯ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಧನ ಸಹಾಯದಿಂದ ನಡೆಸುತ್ತಿರುವ ವಿಧ್ಯಾಸಂಸ್ಥೆಗಳಲ್ಲಿ ಜಾತಿ , ಮತ , ಧರ್ಮ , ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಪ್ರವೇಶ ನಿರಾಕರಿಸುವುದನ್ನು ಖಂಡಿಸುತ್ತದೆ.
45. ಸಂವಿಧಾನದ 30 ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಹೊಂದಿರುತ್ತಾರೆ.
46. ಸಂವಿಧಾನದ 32 ರಿಂದ 35 ವಿಧಿಯವರೆಗೆ ಸಂವಿಧಾನಾತ್ಮಕ ಪರಿಹಾರಗಳ ಹಕ್ಕಿನ ಬಗ್ಗೆ ವಿವರಣೆಯಿದೆ.
47. ಮೂಲ ಸಂವಿಧಾನದಲ್ಲಿ ಮೊದಲು 7 ಮೂಲಭೂತ ಹಕ್ಕುಗಳಿದ್ದವು ಏಳನೇಯದೇ “ ಆಸ್ತಿಯ ಹಕ್ಕಾ”ಗಿತ್ತು ಆದರೆ 1977 ರ 44 ನೇ ತಿದ್ದುಪಡಿ ಮೂಲಕ ಆ ಹಕ್ಕನ್ನು ಮಾತ್ರ ಉಳಿಸಿಕೊಳ್ಳಲಾಯಿತು.
48. ಭಾರತ ಸಂವಿಧಾನದ 42 ನೇ ತಿದ್ದುಪಡಿಯ ಪರಿಣಾಮವಾಗಿ ಸಂವಿಧಾನದ 51 ಎ ವಿಧಿಯಲ್ಲಿ 10 ಮೂಲ ಭೂತ ಕರ್ತವ್ಯಗಳಿವೆ .
49. ಸಂವಿಧಾನದ 4 ನೇ ಭಾಗದ 36 ರಿಂದ 51 ನೇ ವಿಧಿಗಳಲ್ಲಿಲ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಿಸಲಾಗಿದೆ.
50. ಭಾರತ ಸಂವಿಧಾನದ 58 ವಿಧಿ ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳನ್ನು ವಿವರಿಸಿದೆ.
51. ಭಾರತ ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿಯವರ ಚುನಾವಣೆ ಬಗ್ಗೆ ವಿವರುಸುತ್ತದೆ.
52. ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಹಾಗೂ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ.
53. ಭಾರತದ ರಾಷ್ಟ್ರಪತಿಯವರಿಂದ ನೇಮಕಗೊಳ್ಳುವವರು – ಪ್ರಧಾನಮಂತ್ರಿ , ಹಾಗೂ ಆತನ ಸೂಚನೆ ಮೇರೆಗೆ ಸಚಿವ ಸಂಪುಟ , ಸುಪ್ರೀ ಹಾಗೂ ಹೈಕೋರ್ಟ್ ನ ನ್ಯಾಯಾದೀಶರು , ರಾಜ್ಯಪಾಲರು , ಭಾರತದ ಆಟಾರ್ನಿ ಮತ್ತು ಕಂಟ್ರೋಲರ್ ಆಡಿಟರ್ ಜನರಲ್ , ಹಣಕಾಸು ಹಾಗೂ ಲೋಕ ಸೇವಾ ಆಯೋಗ , ಅಂತರ್ ರಾಜ್ಯ ಮಂಡಳಿ , ಪರಿಶಿಷ್ಟ ಜಾತಿ ಆಯೋಗ ಮತ್ತು ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು , ಚುನಾವಣಾ ಆಯೋಗದ ಕಮಿಷನರ್ , ರಕ್ಷಣಾ ಪಡೆಗಳ ಮಹಾ ದಂಡನಾಯಕರು ಮತ್ತು ರಾಯಭಾರಿಗಳು ಇವರನ್ನು ವಜಾ ಮಾಡುವ ಅಧಿಕಾರಿವು ಇವರಿಗಿದೆ.
54. ಭಾರತ ಸಂವಿಧಾನದ 60 ನೇ ವಿಧಿ ಪ್ರಕಾರ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಅಥವಾ ಅವರ ಗೈರು ಹಾಜರಿಯಲ್ಲಿ ಹಿರಿಯ ನ್ಯಾಯಾಧೀಶರು ಪ್ರಮಾಣ ವಚನ ಭೋಧಿಸುತ್ತಾರೆ.
55. ಭಾರತ ಸಂವಿಧಾನದ 56 ನೇ ವಿಧಿಯು ರಾಷ್ಟ್ರಪತಿಯವರ ಅಧಿಕಾರವದಿಯ ಬಗ್ಗೆ 5 ವರ್ಷಗಳ ಬಗ್ಗೆ ವಿವರಿಸುತ್ತದೆ.
56. ಭಾರತ ಸಂವಿಧಾನದ 53, 74, 75, 77 ನೇ ವಿಧಿಯು ರಾಷ್ಟ್ರಪತಿಯವರ ಕಾರ್ಯಾಂಗೀಯ ಅಧಿಕಾರವನ್ನು ತಿಳಿಸುತ್ತದೆ.
57. ಭಾರತ ಸಂವಿಧಾನದ 85 ನೇ ವಿಧಿಯ ಪ್ರಕಾರ ಸಂಸತ್ತಿನ ಉಭಯ ಸದನಗಳನ್ನ ಉದ್ದೇಶಿಸಿ ಭಾಷಣ ಮಾಡುವ ಹಾಗೂ 12 ಸದಸ್ಯರನ್ನು ರಾಜ್ಯಸಭೆಗೆ ನೇಮಕ ಮಾಡುವ ಹಾಗೂ ಇಬ್ಬರು ಆಂಗ್ಲೋ ಇಂಡಿಯನ್ನರನ್ನು ಲೋಕಸಭೆಗೆ ನಾಮಕರಣ ಮಾಡುವ ಅಧಿಕಾರ ಹಾಗೂ ಸಂಸತ್ತು ಅಧಿವೇಶನ ಸೇರದಿರುವಾಗ ಸುಗ್ರೀವಾಜ್ಞೆ ಹೊರಡಿಸುವ ಹಾಗೂ ಪಾರ್ಲಿಮೆಂಟಿನ ಅನುಮೋದಿಸಿದ ಮಸೂದೆಗಳಿಗೆ ಸಹಿ ಹಾಕುವ , ಲೋಕಸಭೆಯನ್ನ ವಿಸರ್ಜಿಸುವ ಹಾಗೂ ಹೊಸದಾಗಿ ಚುನಾವಣೆಗೆ ಆದೇಶ ನೀಡುವ ಅಧಿಕಾರ ರಾಷ್ಟ್ರಪತಿಗಿದೆ.
58. ಭಾರತ ಸಂವಿಧಾನದ 72 ನೇ ವಿಧಿ ಪ್ರಕಾರ ನ್ಯಾಯಿಕ ಅಧಿಕಾರಗಳು ಅಂದರೆ ಶಿಕ್ಷೆಗೊಳಗಾದ ಪರಾಧಿಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡುವ , ಮರಣದಂಡನೆ ಬದಲಾಗಿ ಬೇರೆ ಶಿಕ್ಷೆ ವಿಧಿಸುವ ಅಥವಾ ಸಂಪೂರ್ಣ ಕ್ಷಮಾಧಾನ ನೀಡುವ ಅಧಿಕಾರವಿದೆ ರಾಷ್ಟ್ರಪತಿಗಿದೆ.
59. ಭಾರತ ಸಂವಿಧಾನದ 352 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ವಿಧಿಸಬಹುದು
60. ಭಾರತ ಸಂವಿಧಾನದ 356 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಜ್ಯ ತುರ್ತು ಅಥವಾ ಆಂತರಿಕ ತುರ್ತು ಪರಿಸ್ಥಿತಿಯನ್ನ ಹೇರಬಹುದು
61. ಭಾರತ ಸಂವಿಧಾನದ 360 ನೇ ವಿಧಿ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿಯನ್ನ ರಾಷ್ಟ್ರಪತಿಗಳು ಹೇರಬಹುದು .
62. ಭಾರತದಲ್ಲಿ 1947 ರಲ್ಲಿ ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಜಾರಿಗೆ ಬಂತು ( Prevention of Corruption Act ).
63. 1964 ಭಾರತದಲ್ಲಿ ಕೇಂದ್ರಿಯ ಜಾಗೃತ ದಳ ( Central Vigilance Commission - CVC ) ಜಾರಿಗೆ ಬಂತು .
64. ಭಾರತದಲ್ಲಿ 1963 ರಲ್ಲಿ ಸಿ ಬಿ ಐ ( Central Bureau of Investigation ) ಸ್ಥಾಪಿಸಲಾಯಿತು.

ಪಂಚಾಯತ್ ರಾಜ್ ಅಧಿನಿಯಮ

1. ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.
2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.
3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.
4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.
5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.
6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.
8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.
10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.
15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.
17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.
18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.
19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.
20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು
21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.
22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.
23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.
24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.
25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .
26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .
27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.
28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.
29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.
30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
31. ಕೋರಂ ಇಲ್ಲದೇ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲಲ
32. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು.
33. ಅಧ್ಯಕ್ಷರು ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಬೇಕು. ಇವರಿಬ್ಬರ ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಆ ಸಭೆಗೆ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಿಕೊಳ್ಳಬಹುದು.
34. ಸಭೆಯ ನಿರ್ಣಯಗಳನ್ನು ಸಭೆಯಲ್ಲಿ ಹಾಜರಿರುವ ಚಿನಾಯಿತ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.
35. ಸಮಾನ ಮತಗಳು ಬಂದಲ್ಲಿ ಅಧ್ಯಕ್ಷರು ತಮ್ಮ ನಿರ್ಣಯಕ ಮತವನ್ನು ಹೆಚ್ಚುವರಿಯಾಗಿ ಕೊಡಲು ಅವಕಾಶವಿದೆ.
36. ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ಹಣಕಾಸಿನ ಹಿತಾಸಕ್ತಿ ಇರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಬಾರದು ಹಾಗೂ ಮತ ನೀಡಬಾರದು . ಹಾಗೇಯೇ ಅಧ್ಯಕ್ಷತೆ ವಹಿಸುವ ವ್ಯಕ್ತಿಯೂ ಕೂಡ ಹಣಕಾಸಿನ ಹಿತಾಸಕ್ತಿ ಹೊಂದಿದ್ದರೆ. ಅಂತಹ ವಿಷಯದ ಚರ್ಚೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ವಹಿಸಬಾರದು.
37. ಗ್ರಾಮ ಪಂಚಾಯಿತಿ ಸಭೆಗಳು ಅಥವಾ ಸ್ಥಾಯಿ ಸಮಿತಿಗಳ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಭಾಗವಹಿಸುವಿಕೆ ಭತ್ಯೆಯನ್ನು ಸಂದಾಯ ಮಾಡಬೇಕು. ಪ್ರಸ್ತುತ ಸರ್ಕಾರದ ಆದೇಶದಂತೆ ಸದಸ್ಯರು ಹಾಜರಾದ ಪ್ರತಿ ಸಭೆಗೆ ರೂ.100/- ರಂತೆ ಸಂದಾಯ ಮಾಡಬೇಕು.
38. ಅವಶ್ಯವೆಂದು ಭಾವಿಸಿದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ವಿಶೇಷ ಸಭೆ ಕರೆಯಬಹುದು.
39. ಗ್ರಾಮ ಪಂಚಾಯಿತಿಯ ಸದಸ್ಯರ ಮೂರನೇ ಒಂದು ಭಾಗ (1/3) ದಷ್ಟು ಸದಸ್ಯರು ಲಿಖಿತ ಕೋರಿಕೆ ಸಲ್ಲಿಸಿದರೂ ವಿಶೇಷ ಸಭೆ ಕರೆಯಲು ಅವಕಾಶವಿದೆ. ಲಿಖಿತ ಕೋರಿಕೆಯು ತಲುಪಿದ 15 ದಿವಸಗಳೊಳಗೆ ವಿಶೇಷ ಸಭೆಯನ್ನು ಕರೆಯಬೇಕು.
40. ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ಒಪ್ಪದಿದ್ದಲ್ಲಿ ಉಪಾಧ್ಯಕ್ಷರು ಕರೆಯಬೇಕು. ಉಪಾಧ್ಯಕ್ಷರು ಸಹ ಒಪ್ಪದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಸಭೆಯ ನೋಟೀಸು ಜಾರಿ ಮಾಡುವರು.
41. ವಿಶೇಷ ಸಭೆಗೆ ಮೂರು ಪೂರ್ಣ ದಿವಸಗಳ ನೋಟೀಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ.
42. ವಿಶೇಷ ಸಭೆಗೆ ಸಾಮಾನ್ಯ ಸಭೆಯಂತೆಯೇ ಶೇ. 50 ರಷ್ಟು ಕೋರಂ ಅವಶ್ಯವಿರುತ್ತದೆ.
43. ತುರ್ತು ಸಭೆಯನ್ನು ಅಧ್ಯಕ್ಷರು 24 ಗಂಟೆಯೊಳಗಾಗಿ ಕರೆಯಬಹುದು.
44. ತುರ್ತು ಸಭೆಯನ್ನು ನೈಸರ್ಗಿಕ ವಿಪತ್ತುಗಳಾದ ಮಳೆ ಹಾನಿ , ಬೆಂಕಿ ಅನಾಹುತ ಮತ್ತಿತರ ಪ್ರಕೃತಿ ವಿಕೋಪಗಳ ತುರ್ತು ನಿರ್ವಹಣೆಗೆ ಸಂಬಂಧಿಸಿದ ತುರ್ತು ಕ್ರಮ ತೆಗೆದುಕೊಳ್ಳಲು ಇಂತಹ ತುರ್ತು ಸಭೆಗಳನ್ನು ಕರೆಯಬಹುದು.
45. ನಡವಳಿ ಪುಸ್ತಕವು ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ / ಕಾರ್ಯದರ್ಶಿಗಳ ಸುಪರ್ದಿಯಲ್ಲಿರಬೇಕು.
46. ಸಭಾ ನಡವಳಿಯ ಒಂದು ಪ್ರತಿಯನ್ನು ಸಭೆ ನಡೆದ 10 ದಿನಗಳೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು.
47. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಸಭಾ ನಡವಳಿ ಪ್ರತಿಗಳನ್ನು ಒದಗಿಸಬೇಕು.
48. ನಡವಳಿ ಪುಸ್ತಕವು ಸದಸ್ಯರಿಗೆ ಮತ್ತು ಮತದಾರರಿಗೆ ( ಸಾರ್ವಜನಿಕರಿಗೆ ) ಪರಿಶೀಲನೆಗೆ ಮುಕ್ತವಾಗಿರಬೇಕು.
49. ಯಾವುದೇ ಸದಸ್ಯ ತನ್ನ ಅಭಿಪ್ರಾಯವನ್ನು ನಡವಳಿ ಪುಸ್ತಕದಲ್ಲಿ ನಮೂದಿಸಬೇಕೆಂದು ಒತ್ತಾಪಡಿಸಿದಲ್ಲಿ ನಮೂದಿಸಬೇಕು.
50. ಸ್ಥಲಿಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.
51. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಅವರ ಚುನಾವಣೆಯ ದಿನಾಂಕದಿಂದ 30 ತಿಂಗಳು ಆಗಿರುತ್ತದೆ. ಅಥವಾ ಸದಸ್ಯತ್ವ ಅವಧಿ ನಿಂತು ಹೋಗುವವರೆಗೆ ಯಾವುದೋ ಮೊದಲು ಆ ಅವಧಿಯಾಗಿರುತ್ತದೆ.
52. ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುದು ಮತ್ತು ಆ ಸಭೆಗಳ ಅಧ್ಯಕ್ಷತೆಯನ್ನು ವಹಿಸುವುದು ಅಧ್ಯಕ್ಷರ ಅಧಿಕಾರ .
53. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರ, ಕಾರ್ಯದರ್ಶಿ ಮತ್ತು ಇತರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು ಅಧ್ಯಕ್ಷರ ಅಧಿಕಾರಿ
54. ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಹೂಡಲು ಉದ್ದೇಶಿಸಿದ್ದರೆ ಅಥವಾ ಕ್ರಿಮಿಲನ್ ಅಪರಾಧದ ಕುರಿತು ತನಿಖೆ ನಡೆಯುತ್ತಿದ್ದರೆ ಅವರನ್ನು ಅಮಾನತ್ತಿನಲ್ಲಿಡುವ ಅಧಿಕಾರ ಅಧ್ಯಕ್ಷರಿಗಿದೆ.
55. ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಮಂಜೂರಾತಿ ಅಗತ್ಯವಿರುವಂತಹ ಯಾವುದೇ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ 24 ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.
56. ಅಧ್ಯಕ್ಷರು ರಜೆ ಹೋದಾಗ ಅಥವಾ ಕೆಲಸ ನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಮೇಲಿನ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು.
57. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. . ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
58. ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಅಧ್ಯಕ್ಷರ ಜವಾಬ್ದಾರಿ
· ಗ್ರಾಮ ಪಂಚಾಯಿತಿಯ ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
· ವಾರ್ಡ್ ಸಮತ್ತು ಗ್ರಾಮ ಸಭೆಗಳ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದು.
· ತಮ್ಮ ವಾರ್ಡ್ ನ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಲಭ್ಯ ಅನುದಾನದ ಇತಿಮಿತಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದು.
· ಸವಲತ್ತುಗಳನ್ನು, ವೈಯಕ್ತಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವುದು.
· ಸಂಪನ್ಮೂಲ ಕ್ರೋಢೀಕರಣಕ್ಕೆ ಮಹತ್ವ ನೀಡುವುದು.
· ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತೆ ನೋಡಿಕೊಳ್ಳುವುದು.
· ನಿಯಾಮವಳಿಗಳು ಮತ್ತು ಕಾಯಿದೆಯ ಅಂಶಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವುದು.
59. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಗೌರವಧನ ಅಧ್ಯಕ್ಷರು – 500 , ಉಪಾಧ್ಯಕ್ಷರು – 300 , ಸದಸ್ಯರು – 300
60. ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆ ಪತ್ರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು .
61. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು.
62. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು 10 ದಿನಗಳೊಳಗೆ ರಾಜೀನಾಮೆ ಪತ್ರವನ್ನು ಹಿಂದೆ ಪಡೆಯದಿದ್ದರೆ , ಅದು ಸ್ವೀಕೃತವಾಗಿದೆಯೆಂದು ಪರಿಗಣಿಸಬೇಕು.
63. ಗ್ರಾಮ ಪಂಚಾಯಿತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಒಂದು ವರ್ಷದವರೆಗೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು.
64. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ 1/3 ನೇ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
65. ಅವಿಶ್ವಾಸ ಗೊತ್ತುವಳಿ ಇದನ್ನು ಸ್ವೀಕರಿಸಿದ 30 ದಿನದೊಳಗೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಮಂಡಿಸಬೇಕು.
66. ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಸಭೆಯ ನೋಟೀಸನ್ನು ಕನಿಷ್ಠ 10 ದಿನಗಳಿಗೆ ಮುಂಚಿತವಾಗಿ ಸದಸ್ಯರಿಗೆ ನೀಡಬೇಕು.
67. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ 2/3 ರಷ್ಟು ಸದಸ್ಯರು ಪರವಾಗಿ ತೀರ್ಮಾನಿಸಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕಾರವಾಗುತ್ತದೆ.
68. ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ಒಂದು ವರ್ಶದ ಅವಧಿಯವರೆಗೆ ಮರು ಅವಿಶ್ವಾಸ ಗೊತ್ತುವಳಿಯ ಮಂಡಿಸುವ ಹಾಗಿಲ್ಲ.
69. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಸಾಬೀತಾದಲ್ಲಿ ಅವರನ್ನು ಹುದ್ಧೆಯಿಂದ ತೆಗೆದು ಹೊಕಬಹುದು.
70. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ದುರ್ವರ್ತನೆ , ಅದಿಕಾರ ದುರುಪಯೋಗ ಮತ್ತು ಭ್ರಷ್ಟಚಾರ ಪ್ರಕರಣಗಳು ಸಾಬೀತಾದಲ್ಲಿ ಹುದ್ದೆಯಿಂದ ತೆಗೆದು ಹಾಕಬಹುದು.
71. ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ಪಂಚಾಯಿತಿ ಅನುಮತಿಯಿಲ್ಲದೆ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ .
72. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
73. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಂಚಾಯಿತಿ ಕಾಮಗಾರಿಗಳಿಗೆ ತಾವಾಗಲೀ ತಮ್ಮ ಏಜೆಂಟರ ಮೂಲಕವಾಗಿ ಕರಾರು ಮಾಡಿಕೊಳ್ಳುವುದು ಅಥವಾ ಸಾಮಾಗ್ರಿ ಸರಬರಾಜು ಮಾಡುವುದು ಸಾಬೀತಾದರೆ ಸದಸ್ಯತ್ವ ರದ್ದಾಗುತ್ತದೆ.
74. ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ಸದಸ್ಯತ್ವ ರದ್ದಾಗುತ್ತದೆ.
75. ಕರ್ನಾಟಕ ಸರ್ಕಾರವು ದಿನಾಂಕ/31/03/2008 ರ ಆದೇಶದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಸೃಷ್ಠಿಸಿದೆ.
76. ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ಕರ್ತವ್ಯಗಳು
· ಗ್ರಾಮ ಪಂಚಾಯಿತಿಯ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯ ಸಮಗ್ರ ಜವಾಬ್ದಾರಿ
· ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ
· ರಾಜ್ಯ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಿಕ ಅನುಷ್ಟಾನದ ಜವಾಬ್ದಾರಿ.
· ಗ್ರಾಮ ಪಂಚಾಯಿತಿ ಸಭೆಯ ನಿರ್ಣಯಗಳ ಜಾರಿಯ ಜವಾಬ್ದಾರಿ .
· ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ವಹಿಗಳ ನಿರ್ವಹಣಾ ಜವಾಬ್ದಾರಿ .
· ಸರ್ಕಾರ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಸಿಕ ವರದಿ ಮತ್ತು ಎಂ.ಐ.ಎಸ್. ಸಲ್ಲಿಸುವ ಜವಾಬ್ದಾರಿ.
· ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕರ ಪರಿಷ್ಕರಣೆ ಮತ್ತು ಕರ ವಸೂಲಾತಿಯ ಸಮಗ್ರ ಜವಾಬ್ದಾರಿ.
· ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನದ ಎಂ.ಐ.ಎಸ್ ಮತ್ತು ಪಂಚತಂತ್ರ ತಂತ್ರಾಶದ ನಿರ್ವಹಣೆ .
· ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು.
· ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಮೇಲ್ವಿಚಾರಣೆ.
77. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯಗಳು
· ಗ್ರಾಮ ಪಂಚಾಯಿತಿ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೆರವು ನೀಡುವುದು.
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವುದು
· ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ , ಸ್ಥಾಯಿ ಸಮಿತಿಗಳ ಸಭೆ , ಇನ್ನಿತರ ಸಭೆಗಳಿಗೆ ತಿಳುವಳಿಕೆ ಪತ್ರ ಹೊರಡಿಸುವುದು.
· ಮೇಲಿನ ಸಭೆಗಳ ಸುಗಮ ನಿರ್ವಹಣೆ ಮತ್ತು ನಿರ್ಣಯಗಳ ದಾಖಲೀಕರಣ ಮಾಡುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಸಕಾಲದಲ್ಲಿ ಕರೆಯಲು ತಿಳುವಳಿಕೆ ಪತ್ರ ಹೊರಡಿಸುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳ ಸಭಾ ನಡವಳಿಗಳನ್ನು ದಾಖಲಿಸುವುದು.
· ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿ.
· ಗ್ರಾಮ ಪಂಚಾಯಿತಿಗಳ ಆಡಿಟ್ ವರದಿಗಳಿಗೆ ಅನುಪಾಲನಾ ವರದಿ ಸಿದ್ಧಪಡಿಸುವುದು.
· ಬೀದಿ ದೀಪ , ಕುಡಿಯುವ ನೀರಿನ ನಿರ್ವಹಣೆ
· ಸಾರ್ವಜನಿಕ ದೂರಗಳ ಪರಿಶೀಲನೆ , ಜನಸ್ಪಂದನ ಅರ್ಜಿಗಳ ವಿಲೇವಾರಿ
· ಗ್ರಾಮ ಪಂಚಾಯಿತಿಗಳ ಬಜೆಟ್ ತಯಾರಿಸಿ ಅನುಮೋದನೆಗೆ ಮಂಡಿಸುವುದು.
· ಗ್ರಾಮ ಪಂಚಾಯಿತಿಗಳ ವಿವಿಧ ವಹಿಗಳ ನಿರ್ವಹಣೆ
· ಗ್ರಾಮ ಪಂಚಾಯಿತಿಗ ಸದಸ್ಯರ ತರಬೇತಿ ನಿರ್ವಹಣೆ
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಇತರ ಜವಾಬ್ದಾರಿಗಳ ನಿರ್ವಹಣೆ
78. ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು , ವಾಟರ್ ಮೆನ್ , ಸ್ವಚ್ಛತಾ ಕಾರ್ಮಿಕರ ಸ್ಥಳೀಯ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಇವರು ಗ್ರಾಮ ಪಂಚಾಯಿತಿ ನೌಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ನೌಕರರನ್ನು ನೇಮಕ ಮಾಡಿ , ಅವರ ವೇತನವನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬಹುದು.
79. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಯಾವುದೇ ನೌಕರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ ದಂಡ ವಿಧಿಸಬಹುದು , ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು.
80. ಪ್ರತಿ ವರ್ಷ ಶೇ.10 ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಅಲ್ಲದೇ ಪುರುಷರು ಮತ್ತು ಮಹಿಳೆಯರಿಗೆ ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು.
81. ಪ್ರಸಕ್ತ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ.
82. ರಾಜ್ಯ ಪಂಚಾಯಿತಿ ಪರಿಷತ್ತಿನ ಅಧ್ಯಕ್ಷರು – ಮುಖ್ಯಮಂತ್ರಿಗಳು
83. ರಾಜ್ಯ ಪಂಚಾಯಿತಿ ಪರಿಷತ್ತಿನ ಉಪಾಧ್ಯಕ್ಷರು – ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು
84. ರಾಜ್ಯ ಪಂಚಾಯಿತಿ ಪರಿಷತ್ತಿಗೆ ಸರ್ಕಾರದಿದಂ ನಾಮ ನಿರ್ದೇಶಿಸಲ್ಪಟ್ಟ ಐವರು ಸಚಿವರು ಮತ್ತು 10 ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಇದರ ಸದಸ್ಯರಾಗಿದ್ದಾರೆ.
85. ರಾಜ್ಯ ಪಂಚಾಯಿತಿ ಪರಿಷತ್ತು ಸಮಿಯಿ ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರಬೇಕು.
86. ಮುಂದಿನ ಆರ್ಥಿಕ ವರ್ಷದ , ಅಂದರೆ ಏಪ್ರಿಲ್ 1ನೇ ತಾರಿಖೀನಿಂದ ಮಾರ್ಚಿ 31ನೇ ತಾರೀಖಿನವರೆಗೆ ಅಯವ್ಯವನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು .ಆಯವ್ಯ ಮತ್ತು ಲೆಕ್ಕಪತ್ರ ನಿಯಮಗಳು 2006 ನಿಯಮ 11 ಮತ್ತು 12 ರನ್ವಯ ಫೇಬ್ರವರಿ 1 ರಿಂದ ಮಾರ್ಚ್ 10 ರೊಳಗೆ ನಡೆಯುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು.
87. 2005 ರಲ್ಲಿ ಕರ್ನಾಟಕ ಸರ್ಕಾರವು ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು.
88. ಪಂಚಾಯತ್ ಜಮಾಬಂದಿ ಎಂದರೆ – ಯೋಜನೆಗಳನ್ನು ಜಾರಿಗೊಳಿಸಬೇಕು, ಅವುಗಳಿಗೆ ಹಣಬೇಕು , ಬಳಸಿದ ಹಣವನ್ನು ಪುಸ್ತಕಗಳಲ್ಲಿ ದಾಖಲೀಕರಿಸಬೇಕು. ನಡೆಸಲಾದ ಕಾಮಗಾರಿಗಳ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು . ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂದಿ.
89. ಗ್ರಾಮ ಪಂಚಾಯಿತಿ ಜಮಾಬಂದಿ ತಂಡವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ( ಇಓ ) ಮಾಡಬೇಕು.
90. ಗ್ರಾಮ ಪಂಚಾಯಿತಿ ಜಮಾಬಂದಿಯು ಪ್ರತಿ ವರ್ಷ ಆಗಸ್ಟ್ 16 ರಿಂದ ಸೆಪ್ಟೇಂಬರ್ 15 ರೊಳಗೆ ನಡೆಯಬೇಕು.
91. ಕಾರ್ಯನಿರ್ವಾಹಕ ಅಧಿಕಾರಿ ಜಮಾಬಂದಿ ನಡೆಯುವ ದಿನವನ್ನು ಗ್ರಾಮ ಪಂಚಾಯಿತಿಗಳಿಗೆ 30 ದಿನ ಮೊದಲು ತಿಳಿಸಿರಬೇಕು.
92. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ನೌಕರರು ಜಮಾಬಂದಿ ನಡೆಯುವಾಗ ಇರಬೇಕು . ಗ್ರಾಮ ಪಂಚಾಯಿತಿಯ ಕಿರಿಯ ಇಂಜಿನಿಯರ್ ಇರುವುದು ಕಡ್ಡಾಯ.
93. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂತಾದ ಅಧಿಕಾರಿಗಳು ಜಮಾಬಂದಿ ಮಾಡಬೇಕು . ಎಲ್ಲಾ ಗ್ರಾಮಗಳಲ್ಲೂ ಅಲ್ಲ . ಕಡೆಯ ಪಕ್ಷ ತಾಲ್ಲೂಕಿನ 2 ಗ್ರಾಮಗಳಲ್ಲಿ ಮಾಡಬೇಕು.
94. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ದಿನಾಂಕ/07/09/2005 ರಲ್ಲಿ ಜಾರಿಗೆ ಬಂದಿತು.
95. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ ಬೀದರ್ , ಗುಲ್ಬರ್ಗ , ರಾಯಚೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ/01/04/2006 ರಿಂದ ಜಾರಿಯಲ್ಲಿ ತರಲಾಯಿತು.
96. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಎರಡನೇ ಹಂತದಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನಾಂಕ/01/04/2007 ರಿಂದ ವಿಸ್ತರಿಸಲಾಯಿತು.
97. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸದ್ಯ ರಾಜ್ಯದ ಉಳಿದ ಜಿಲ್ಲೆಗಳಿಗೂ ದಿನಾಂಕ/01/04/2008 ರಿಂದ ಜಾರಿಗೊಳಿಸಲಾಯಿತು.
98. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಧಿಕಾರ ಪಡೆಯುತ್ತದೆ.
99. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ಗಿನಗಳಿಗೆ ಕೂಲಿಯ ಶೇ.25 ರಷ್ಟು ಮತ್ತು ಉಳಿದ ಅವಧಿಗೆ ಶೇ.50 ರಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯಲು ಹಕ್ಕು ಹೊದಿರುತ್ತಾರೆ.
100. ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಳನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದಾಗ ನಿಗದಿತ ದರದ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಪಡೆಯಲು ಈ ಕೂಲಿ ಕಾರ್ಮಿಕರಿಗೆ ಹಕ್ಕಿದೆ.

ಗುರುವಾರ, ಅಕ್ಟೋಬರ್ 20, 2011

ಪಂಚಾಯತ್ ರಾಜ್ 73 ನೇ ತಿದ್ದು ಪಡಿ

1. ಪಂಚಾಯಿತಿ ರಾಜ್ಯಗಳು ಅಥವಾ ಅವುಗಳ ಪರಿಕಲ್ಪನೆಗಳು ಭಾರತಕ್ಕೆ ಹೊಸದೇನಲ್ಲ . ಸಂವಿಧಾನದ 40 ನೇ ಪರಿಚ್ಛೇದದಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳು ಭಾಗದಲ್ಲಿ ಅದರ ಬಗ್ಗೆ ಮೊದಲೇ ವಿವರಣೆಯನ್ನು ನೀಡಲಾಗಿದೆ.
2. 40 ನೇ ಪರಿಚ್ಛೇದದಲ್ಲಿ ಹೀಗೆ ಹೇಳಲಾಗಿದೆ ರಾಜ್ಯವು ಗ್ರಾಮಗಳಲ್ಲಿ ಪಂಚಾಯಿತಿ ಗಳನ್ನು ರಚಿಸುವತ್ತ ಹಾಗೂ ಅವುಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವತ್ತ ಗಮನ ಹರಿಸಿ ಅವು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ನಿಯಮಗಳನ್ನು ರಚಿಸಬೇಕು .
3. 73 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಭಾಗ 9 ನ್ನು ಸೇರಿಸಲಾಯಿತು. 243 ನೇ ಪರಿಚ್ಛೇದದ ಮೂಲಕ ಪಂಚಾಯಿತಿಗೆ ಸಂಬಂಧಿಸಿದ ಶಬ್ಧಗಳಾದ ಜಿಲ್ಲೆ, ಗ್ರಾಮಸಭೆ , ಮಧ್ಯಂತರ ಹಂತ , ಪಂಚಾಯಿತಿ , ಪಂಚಾಯಿತಿ ಪ್ರದೇಶ , ಜನಸಂಖ್ಯೆ ಮುಂತಾದ ಶಬ್ದಗಳ ವಿವರಣೆಯನ್ನು ನೀಡಲಾಯಿತು.
4. 243 ಎ ಇದು ಗ್ರಾಮ ಸಭೆಗಳ ಅಧಿಕಾರಗಳ ಬಗ್ಗೆ ವಿವರಿಸುತ್ತದೆ.
5. 243 ಬಿ ಇದು ಪ್ರತಿ ರಾಜ್ಯವೂ ಪಂಚಾಯಿತಿಗಳನ್ನು ಹೊಂದಿರಲೇಬೇಕು ಎಂಬುದರ ಬಗ್ಗೆ ಹೇಳುತ್ತದೆ.
6. 243 ಸಿ ಇದು ಪಂಚಾಯಿತಿ ಹೊಂದಬಹುದಾದ ಸದಸ್ಯರ ಸಂಖ್ಯೆಯ ಬಗ್ಗೆ ಹೇಳುತ್ತದೆ.
7. 243 ಡಿ ಇದು ಪ್ರತಿಯೊಂದು ಪಂಚಾಯಿತಿಗಳಲ್ಲೂ ಅದು ಹೊಂದಿರಬೇಕಾದ ಪ.ಜಾತಿ , ಪ.ಪಂಗಡಗಳ ಮೀಸಲಾತಿಯ ಬಗ್ಗೆ ಹೇಳುತ್ತದೆ. ಅಲ್ಲದೇ 1/3 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ದೊರಯಬೇಕು ಎಂದು ಹೇಳುತ್ತದೆ.
8. 243 ಇ ಪಂಚಾಯಿತಿಗಳ ಕಾಲಾವಧಿಯನ್ನು ವಿವರಿಸುತ್ತದೆ. ಅದನ್ನು 5 ವರ್ಷಗಳಿಗೆ ನಿಗದಿ ಪಡಿಸುತ್ತದೆ.
9. 243 ಎಫ್ ಇದು ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಣೆ ನೀಡುತ್ತದೆ.
10. 243 ಜಿ ಪಂಚಾಯಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ಅಧಿಕಾರಗಳು ಪ್ರತಿಯೊಂದು ಪಂಚಾಯಿತಿಯಲ್ಲೂ ರಾಜ್ಯ ಸರ್ಕರಗಳ ಮೇಲ್ವಿಚಾರಣೆಯಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೆಲಸಗಳನ್ನ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಲು ಬೇಕಾದ ಧಿಕಾರಗಳನ್ನು ಒಳಗೊಂಡಿರುತ್ತದೆ.
11. 243 ಹೆಚ್ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ವಿವರಿಸುತ್ತದೆ.
12. 243 ಐ ಆರ್ಥಿಕ ಸ್ಥಿತಿಗಳನ್ನು ಅವಲೋಕಿಸಲು ಹಣಕಾಸು ಆಯೋಗಗಳ ರಚನೆಯನ್ನು ವಿವರಿಸುತ್ತದೆ.
13. 243 ಜೆ ಲೆಕ್ಕ ಪ್ತರ ವೀಕ್ಷಣೆಯನ್ನು ವಿವರಿಸುತ್ತದೆ.
14. 243 ಕೆ ಇದು ಪಂಚಾಯಿತಿಯ ಚುನಾವಣೆಯ ಬಗ್ಗೆ ಹೇಳುತ್ತದೆ. ಮತದಾರ ಪಟ್ಟಿ ತಯಾರಿಕೆಯಿಂದ ಹಿಡಿದು ಶಿಸ್ತುಬದ್ಧ ಪಂಚಾಯಿತಿ ರಚನೆಯವರೆಗಿನ ಪ್ರಕ್ರಿಯೆ ಒಳಗೊಂಡಿದೆ.
15. 243 ಎಲ್ ರಾಜ್ಯ ಕ್ಷೇತ್ರಗಳಿಗೆ ಈ ಕಾಯ್ದೆಯು ಅನ್ವಯವಾಗುವ ಬಗ್ಗೆ ವಿವರಣೆ ನೀಡುತ್ತದೆ.
16. 243 ಎಂ ಇದು ಸಂವಿಧಾನದ 244 ನೇ ಪರಿಚ್ಛೇದಗಳಲ್ಲಿ ವಿವರಿಸಿರುವ ಪ್ರಾಂತ್ಯಗಳಿಗೆ 73 ನೇ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳುತ್ತದೆ.
17. 243 ಎನ್ 73 ನೇ ತಿದ್ದುಪಡಿಯ ಜೊತೆಗೆ ಅದಕ್ಕೆ ಪೂರ್ವದಲ್ಲಿ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾಯ್ದೆಗಳು ಮುಂದುವರಿಯುವ ಬಗ್ಗೆ ಹೇಳುತ್ತದೆ.
18. 243 ಒ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ.
19. 74 ನೇ ತಿದ್ದು ಪಡಿಯಲ್ಲಿ 9 ಎ ಎಂಬ ಭಾಗವು ಸೇರಿಸಲಾಯಿತು. 243 ನೇ ಪರಿಚ್ಛೇದಕ್ಕೆ ಅನುಚ್ಛೇದಗಳನ್ನು ಸೇರಿಸಲಾಯಿತು. 243 ಪಿ ಯಿಂದ 243 ಝಡ್ ಜಿ ಯ ವರೆಗೆ
20. 74 ನೇ ತಿದ್ದು ಪಡಿಯಲ್ಲಿ 243 ಪಿ ಇದು ಕಮಿಟಿ , ಜಿಲ್ಲೆ ಮಹಾನಗರ ಪ್ರದೇಶ ಮುನಿಸಿಪಲ್ ಪ್ರದೇಶ , ನಗರಸಭೆ , ಪಂಚಾಯತ್ , ಜನಸಂಖ್ಯೆ ಮುಂತಾದ ಶಬ್ದಗಳಿಗೆ ವಿವರಣೆ ನೀಡುತ್ತದೆ.
21. 74 ನೇ ತಿದ್ದು ಪಡಿಯಲ್ಲಿ 243 ಕ್ಯೂ ಇದು ಮುನಿಸಿಪಲಿಟಿಗಳ ರಚನೆಯ ಬಗ್ಗೆ ಹೇಳುತ್ತದೆ.
22. 74 ನೇ ತಿದ್ದು ಪಡಿಯಲ್ಲಿ 243 ಆರ್ ನಗರ ಸಭೆಗಳ ರಚನೆ ಬಗ್ಗೆ ವಿವರಿಸುತ್ತದೆ.
23. 74 ನೇ ತಿದ್ದು ಪಡಿಯಲ್ಲಿ 243 ಎಸ್ ವಾರ್ಡ್ ಕಮಿಟಿಗಳ ರಚನೆ
24. 74 ನೇ ತಿದ್ದು ಪಡಿಯಲ್ಲಿ 243 ಟಿ ಸ್ಥಾನಗಳ ಮೀಸಲಾತಿ ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ ಮೀಸಲಾತಿ ಬಗ್ಗೆ ಹೇಳುತ್ತದೆ.
25. 74 ನೇ ತಿದ್ದು ಪಡಿಯಲ್ಲಿ 243 ಯು ನಗರ ಸಭೆಗಳ ಅವಧಿಯ ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.
26. 74 ನೇ ತಿದ್ದು ಪಡಿಯಲ್ಲಿ 243 ವಿ ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ ಇದ್ದಂತೆಯೇ ಇದೆ.
27. 74 ನೇ ತಿದ್ದು ಪಡಿಯಲ್ಲಿ 243 ಡಬ್ಲ್ಯೂ ಅಧಿಕಾರ ಹಾಗೂ ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು
28. 74 ನೇ ತಿದ್ದು ಪಡಿಯಲ್ಲಿ 243 ಎಕ್ಸ್ ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಹೇಳುತ್ತದೆ.
29. 74 ನೇ ತಿದ್ದು ಪಡಿಯಲ್ಲಿ 243 ವೈ ಇದು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ.
30. 74 ನೇ ತಿದ್ದು ಪಡಿಯಲ್ಲಿ 243 ಝಡ್ ಲೆಕ್ಕ ಪತ್ರವನ್ನು ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.
31. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎ ನಗರಸಭೆಯ ಚುನಾವಣೆಗಳ ಬಗ್ಗೆ ಹೇಳುತ್ತದೆ.
32. 74 ನೇ ತಿದ್ದು ಪಡಿಯಲ್ಲಿ 243 ಝಡ್ ಬಿ ರಾಜ್ಯ ಕ್ಷೇತ್ರಗಳಿಗೆ ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.
33. 74 ನೇ ತಿದ್ದು ಪಡಿಯಲ್ಲಿ 243 ಝಡ್ ಸಿ ಪಂಚಾಯಿತಿಗಳಲ್ಲಿ ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ .
34. 74 ನೇ ತಿದ್ದು ಪಡಿಯಲ್ಲಿ 243 ಝಡ್ ಡಿ ಜಿಲ್ಲಾ ಯೋಜನಾ ಕಮಿಟಿ ಬಗ್ಗೆ ತಿಳಿಸುತ್ತದೆ.
35. 74 ನೇ ತಿದ್ದು ಪಡಿಯಲ್ಲಿ 243 ಝಡ್ ಇ ಮಹಾನಗರ ಪಾಲಿಕೆ ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.
36. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎಫ್ ನಗರಸಭೆಯ ಹಳೆಯ ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.
37. 74 ನೇ ತಿದ್ದು ಪಡಿಯಲ್ಲಿ 243 ಝಡ್ ಜಿ ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ ದೂರವಿಡುತ್ತದೆ.
38. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾನೆ.
39. ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರಿವಿದೆ.
40. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
41. ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ನಿಧಿಯಿಂದ ತಮ್ಮ ಸಂಬಳ ಭತ್ಯೆಗಳನ್ನು ಪಡೆಯುತ್ತಾರೆ.
42. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವಿರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪುಗಳನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಬಹುದು.
43. ಕೆಲವೊಂದು ಜಿಲ್ಲೆಗಳಲ್ಲಿ 2500 ಕ್ಕಿಂತ ಕಡಿಮೆಯಿಲ್ಲದ ಪ್ರದೇಶವನ್ನು ಕೆಲವು ಜಿಲ್ಲೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ ಕೇಂದ್ರಗಳಾಗಿ ಸರ್ಕಾರವು ನಿರ್ಧರಿಸಬಹುದು .
44. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ 1985 ರಲ್ಲಿ ಪಂಚಾಯಿತಿ ರಾಜ್ ಕಾಯಿದೆಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಸ್ಥಾನಗಳ ಮೀಸಲಾತಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನೀಡಲಾಯಿತು.
45. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ( ಸದಸ್ಯರ ಸ್ಥಾನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ಸೇರಿ ) ಕನಿಷ್ಠ 1/3 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
46. 1913 ರಲ್ಲಿ ಮೈಸೂರು ಸಂಸ್ಥಾನವು ಗ್ರಾಮಗಳಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ವಿಷಯ ಕೈಗೆತ್ತಿಕೊಂಡಿತು.
47. 1957 ರಲ್ಲಿ ಬಲವಂತರಾಯ್ ಮೆಹತ್ ಸಮಿತಿ ವರದಿ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು ಪ್ರತಿಪಾದಿಸಿ ಪ್ರಖ್ಯಾತವಾಯಿತು.
48. 73 ನೇ ತಿದ್ದು ಪಡಿಯಲ್ಲಿ ಮೂರು ಹಂತದ ಪಂಚಾಯಿತಿಗಳ ರಚನೆ ಬಗ್ಗೆ ಗ್ರಾಮ , ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ .
49. 73 ನೇ ತಿದ್ದು ಪಡಿಯಲ್ಲಿ ಪಂಚಾಯಿತಿಯಲ್ಲಿ ಒಟ್ಟು ಸ್ಥಾನಗಳ 1/3 ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಮೀಸಲಿಡಬೇಕು.
50. 73 ನೇ ತಿದ್ದು ಪಡಿಯಲ್ಲಿ ಪ್ರತಿ ರಾಜ್ಯ ಸರ್ಕಾರವೂ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿ ವಿಮರ್ಶೆ ಮಾಡಿ ಅವುಗಳಿಗೆ ಸರ್ಕಾರ ನೀಡಬೇಕಾದ ಹಣದ ಬಗ್ಗೆ ನಿರ್ಧರಿಸಲು ಹಣಕಾಸು ಆಯೋಗ ಒಂದನ್ನು ಪ್ರತಿ 5 ವರ್ಷಕ್ಕೊಮ್ಮೆ ರಚಿಸಬೇಕು.
51. ಮೂರು ಹಂತದ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗ ರಚಿಸಲು ಕಲಂ 308 ರಲ್ಲಿ ಅವಕಾಶ ಕಲ್ಪಿಸಲಾಗಿದೆ.
52. 73 ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯವನ್ನು ಜಾರಿಗೆ ತರಲಾಯಿತು.
53. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯನ್ನುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಿದೆ.
54. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷನೂ ಮತ್ತು ಉಪಾಧ್ಯಕ್ಷನು ಇರುತ್ತಾರೆ . ಅಧ್ಯಕ್ಷನಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವಿದೆ.
55. ಪಂಚಾಯಿತಿ ಸಮಿತಿ ಆಡಳಿತವು ಚುನಾಯಿತ ಅಧ್ಯಕ್ಷ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಕಾರ್ಯನಿರ್ವಾಹಣಾಧಿಕಾರಿಯಿಂದ ನಡೆಸಲ್ಪಡುತ್ತದೆ.
56. ಕಾರ್ಯನಿರ್ವಹಣಾಧಿಕಾರಿಯು ರಾಜ್ಯ ಸರ್ಕಾರದ ಎ ದರ್ಜೆ ಅಧಿಕಾರಿ ಅಥವಾ ಅಸಿಸ್ಟೆಂಟ್ ಕಮಿಷನರ್ ರವರಿಗೆ ಸಮನಾ ಹುದ್ದೆಯವರಾಗಿದ್ದು , ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ಪಂಚಾಯಿತಿ ಸಮಿತಿಯ ಎಲ್ಲ ಅಧಿಕಾರಗಳು ಹಾಗೂ ನೌಕರರ ಮೇಲೆ ಹತೋಟಿ ಹೊಂದಿದ್ದು ಕೆಲಸಗಳನ್ನು ನಿರ್ವಹಿಸುತ್ತಾರೆ.
57. ಜಿಲ್ಲಾ ಪಂಚಾಯತ್ ಪ್ರತಿ ನಲ್ವತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಹಾಗೂ ಚಿಕ್ಕಮಗಳೂರು , ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಮೂವತ್ತು ಸಾವಿರ ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹದಿನೆಂಟು ಸಾವರ ಜನಸಂಖ್ಯೆಗೆ ಒಬ್ಬರಂತೆ ಆರಿಸಿ ಬರುವ ಚುನಾಯಿತ ಸದಸ್ಯರಿರುತ್ತಾರೆ.
58. ತಾಲ್ಲೂಕ್ ಪಂಚಾಯಿತಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಸದಸ್ಯರು ಚುನಾಯಿತರಾಗಿ ಬರುವರು .
59. ಜಿಲ್ಲಾಪಂಚಾಯತ್ ನಲ್ಲಿ ಜಿಲ್ಲೆಯ ವಿಧಾನಭಾ , ಲೋಕಸಭಾ , ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರುಗಳು ರಾಜ್ಯ ಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಜಿಲ್ಲಾ ಪಂಚಾಯಿತಿಯ ಸದಸ್ಯರುಗಳಾಗಿರುತ್ತಾರೆ.
60. ಬಹಳ ಹಿಂದೆ “ ಪಂಚರು ” ಪಂಚಾಯಿತಿಗಳ ಮುಖ್ಯಸ್ಥರಾಗಿರುತ್ತಿದ್ದರು.
61. ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು ಅವಕಾಶವಿತ್ತು.
62. 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್ ಸಮಿತಿ ” ಎಂದು ಕರೆಯಲಾಯಿತು.
63. “ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್ ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು ಸದಸ್ಯರಾಗಿದ್ದರು.
64. ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ ತರಲಾಯಿತು.
65. “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ , ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ ಜಾರಿಯಾಯಿತು.
66. 1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯನ್ನು ಜಾರಿಗೆ ತಂದಿತು.
67. 1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.
68. “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.
69. 1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.
70. ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು ವರದಿಯನ್ನು ಒಪ್ಪಿಸಿತು.
71. ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .
72. 1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್ ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್ ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿತು.
73. ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ , ಜಿಲ್ಲಾ ಪರಿಷತ್ ) .
74. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಹುಟ್ಟು ಹಾಕಿದವು.
75. ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ ವ್ಯವಸ್ಥೆ ಜಾರಿಗೆ ಬಂದಿತು.
76. ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.
77. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು.
78. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.
79. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
80. 73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ ( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು ಮೀಸಲಾತಿ ).
81. 73 ನೇ ತಿದ್ದುಪಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮೂರು ಹಂತದ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು.
82. 73 ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷವಾಗಿ ಶೇ.33 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಶೇ.80 ಹಾಗೂ ಹಿಂದುಳಿದ ವರ್ಗಕ್ಕೆ ಶೇ.20 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.
83. ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆಗೆ 2002 ರಲ್ಲಿ ತಿದ್ದುಪಡಿಯನ್ನು ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
84. ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳ ಅಭಿವೃದ್ದಿ ಕುರಿತು ಚರ್ಚಿಸಿ ಸಲಹೆ ನೀಡಲು ಪೂರಕವಾಗಿ ರಾಜ್ಯ ಪಂಚಾಯಿತಿ ಕೌನ್ಸಿಲ್ ರಚನೆಗೆ ಅವಕಾಶ ಕಲ್ಪಿಸಿದೆ.
85. ಸಂವಿಧಾನದ 73 ನೇ ತಿದ್ದುಪಡಿ ಗ್ರಾಮ ಸಭೆಗಳನ್ನು ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಕರ್ನಾಟಕವು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಳಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಹುಟ್ಟು ಹಾಕಿದೆ.
86. 6 ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸುವುದು
87. ವರ್ಷಕ್ಕೆ ಎರಡು ಬಾರಿ ವಾರ್ಡ್ ಸಭೆ ನಡೆಸುವುದು.
88. ವಾರ್ಡಿನ ಮತದಾರರ ಶೇ.10 ರಷ್ಟು ಅಥವಾ 20 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಾರ್ಡ್ ಸಭೆಯ ಕೋರಂ .
89. ವಾರ್ಡ್ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು . ಪರಿಶಿಷ್ಠ ಜಾತಿ / ಪಂಗಡಗಳ ಜನರ ಹಾಜಾರಾತಿ ಪ್ರಮಾಣ ಅವರ ಒಟ್ಟು ಜನಸಂಖ್ಯೆಗೆ ಅನುಗುಣವಾಗಿರಬೇಕು .
90. ವಾರ್ಡ್ ಸಭೆಯ ಅಧ್ಯಶ್ರತೆಯನ್ನು ಆ ವಾರ್ಡಿನ ಸದಸ್ಯರೇ ವಹಿಸಬೇಕು . ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಾಮ ನಿರ್ದೇಶ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ಅಧ್ಯಕ್ಷತೆ ವಹಿಸಬೇಕು.
91. ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು
92. ಕನಿಷ್ಠ ಒಂದು ವಾರಕ್ಕೆ ಮುಂಚಿತವಾಗಿ ವಾರ್ಡ್ ಸಭೆಗೆ ಸಾಕಷ್ಟು ಪ್ರಚಾರ ನೀಡಬೇಕು.
93. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಸಭೆಗಳನ್ನು ಮೊದಲು ನಡೆಸಬೇಕು . ನಂತರ ಒಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಗ್ರಾಮ ಸಭೆಯನ್ನು ನಡೆಸಬೇಕು.
94. ಗ್ರಾಮ ಸಭೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.
95. ಗ್ರಾಮ ಸಭೆಯ ಶೇ.10 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಗ್ರಾಮಸಭೆಯನ್ನು ಕರೆಯಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಸಭೆಗಳನ್ನು ಕರೆಯುವುದು ಕಡ್ಡಾಯವಾಗಿದೆ. ಆದರೆ ವಿಶೇಷ ಗ್ರಾಮ ಸಭೆಗಳ ನಡುವೆ ಕನಿಷ್ಟ ಮೂರು ತಿಂಗಳ ಅಂತರವಿರಬೇಕು.
96. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಸದಸ್ಯರು ವಹಿಸಬೇಕು.
97. ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10 ಕ್ಕೆ ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೇಯೋ ಅದು ಗ್ರಾಮ ಸಭೆಯ ಕೋರಂ .
98. ಗ್ರಾಮ ಸಭೆಗೆ ಪ್ರತಿ ವಾರ್ಡಿನಿಂದ ಕನಿಷ್ಟ 10 ಜನರು ಗ್ರಾಮ ಸಭೆಯಲ್ಲಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಬೇಕು.
99. ಗ್ರಾಮ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ / ಪಂಗಡ ಜನರ ಹಾಜರಾತಿ ಪ್ರಮಾಣ ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು.
100. ಪ್ರಕರಣ 4 ರಲ್ಲಿಲ ಗ್ರಾಮ ಪಂಚಾಯಿತಿ ರಚನೆ ಕುರಿತು ಸ್ಪಷ್ಟಪಡಿಸಲಾಗಿದೆ.