ಗುರುವಾರ, ಡಿಸೆಂಬರ್ 22, 2011

2 ಜಿ ಹಗರಣ

1. ದೂರಸಂಪರ್ಕ ಖಾತೆಯ ಮಾಜಿ ಸಚಿವ ಸುಖ್‌ರಾಮ್ ಮತ್ತು ಇತರ ಇಬ್ಬರಿಗೆ 1996 ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
2. ವಿಚಾರಣಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯ ವಿರುದ್ಧ ಸುಖ್‌ರಾಮ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ಜಿ. ಪಿ. ಮಿತ್ತಲ್ ಅವರನ್ನು ಒಳಗೊಂಡ ನ್ಯಾಯಪೀಠವು ಸುಖ್‌ರಾಮ್, ದೂರಸಂಪರ್ಕ ಖಾತೆಯ ಮಾಜಿ ಉಪ ಮಹಾನಿರ್ದೇಶಕ ರುನು ಘೋಷ್ ಮತ್ತು ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮರಾವ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
3. ಮೂವರೂ ಜನವರಿ ಐದರಂದು 2011 ವಿಚಾರಣಾ ನ್ಯಾಯಾಲಯದಲ್ಲಿ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
4. 1996ರಲ್ಲಿ ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್ ಕಂಪೆನಿಯು ದೂರಸಂಪರ್ಕ ಇಲಾಖೆಗೆ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಸರಬರಾಜು ಮಾಡಿರುವ ಹಗರಣ ಇದಾಗಿದ್ದು , ಘೋಷ್ ಮತ್ತು ರಾವ್ ಅವರಿಗೆ ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
5. ಸುಖ್‌ರಾಮ್ ವಿರುದ್ಧ ಸಂಚಿನಲ್ಲಿ ಭಾಗಿಯಾಗಿದ್ದ ಆಪಾದನೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಲಾಭಕ್ಕಾಗಿ ಅಧಿಕಾರ ದುರ್ಬಳಕೆ ಮತ್ತು ಕ್ರಿಮಿನಲ್ ದುರ್ನಡತೆಗಾಗಿ ವಿಧಿಸಲಾಗಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
6. 1990ರ ದಶಕದ ಮಧ್ಯಭಾಗದಲ್ಲಿ ನಡೆದ ಇನ್ನೊಂದು ಟೆಲಿಕಾಂ ಹಗರಣದಲ್ಲಿ ಸುಖರಾಮ್ ತಪ್ಪಿತಸ್ಥ ಎಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
7. 1993ರಿಂದ 1996ರ ವರೆಗೆ ದೂರಸಮಪರ್ಕ ಸಚಿವರಾಗಿದ್ದ ಸುಖ್‌ರಾಮ್ ಅವರು ರುನು ಘೋಷ್ ಜತೆ ಸೇರಿಕೊಂಡು ಹೈದರಾಬಾದ್ ಮೂಲದ ಕಂಪೆನಿಯಿಂದ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಖರೀದಿಸಿ ಇಲಾಖೆಗೆ ನಷ್ಟ ಉಂಟು ಮಾಡಿದ್ದರು ಎಂದು ಆಪಾದಿಸಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿತ್ತು.
8. 1996ರಲ್ಲಿ ಸಿಬಿಐ ಅಧಿಕಾರಿಗಳು ಸುಖ್‌ರಾಮ್ ನಿವಾಸದ ಮೇಲೆ ದಾಳಿ ಮಾಡಿ 3.6 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ