1. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.
2. ಕರ್ನಾಟಕದಲ್ಲಿ ಮೇಲ್ಮನೆಗೆ ( ವಿಧಾನಪರಿಷತ್ )ನಡೆದ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ ಇವರಿಗೆ ಭರ್ಜರಿ ಜಯ
3. ಮೇಲ್ಮನೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ 123 ಮತಗಳನ್ನ ಗಳಿಸಿದರು.
4. ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ 69 ಮತಗಳನ್ನ ಪಡೆದರು
5. ಮೇಲ್ಮನೆ ಚುನಾವಣೆಯಲ್ಲಿ ಅಸಿಂಧುಗೊಂಡ ಮತ 6
6. ಮೇಲ್ಮನೆ ಚುನಾವಣೆಯಲ್ಲಿ ರದ್ದಾದ ಮತ 1
7. ಮೇಲ್ಮನೆ ಚುನಾವಣೆಯಲ್ಲಿ ಚಲಾವಣೆಯಾದ ಮತ ಒಟ್ಟು 198
8. ಮೇಲ್ಮನೆ ಚುನಾವಣೆಯಲ್ಲಿ ಒಟ್ಟು ಮತ 199
9. ಮೇಲ್ಮನೆ ಪ್ರವೇಶಿಸಿ ಗೆದ್ದು ಪರಿಷತ್ ಸದಸ್ಯತ್ವ ಪಡೆದ ರಾಜ್ಯದ ಮೊದಲ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
10. ಶ್ರೀ.ಡಿ.ವಿ.ಸದಾನಂದ ಗೌಡ ಅವಧಿ 2014 ಜೂನ್ 30 ರವರೆಗೆ
11. ಅಸಿಂಧುಗೊಂಡ 6 ಮತಗಳು ಮುಖ್ಯಮಂತ್ರಿ ಪರವೇ ಬಿದ್ದಿದೆ.
12. ಮುಖ್ಯಮಂತ್ರಿಗಳಿಗೆ ತೋರಿಸಿದರು ಎಂಬ ಕಾರಣಕ್ಕೆ ಬಿಜೆಪಿಯ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಮತವನ್ನು ರದ್ದುಪಡಿಸಲಾಯಿತು.
13. ಕಾಂಗ್ರೇಸ್ 71 ಸದಸ್ಯ ಬಲ ಹೊಂದಿದ್ದು ಆ ಪಕ್ಷಕ್ಕೆ ಬಿದ್ದಿರುವುದು 69 ಮತ ಮಾತ್ರ
14. 26 ಸದಸ್ಯ ಸಂಖ್ಯಾಬಲವನ್ನು ಹೊಂದಿದ್ದ ಜೆಡಿಎಸ್ ಮತದಾನದಿಂದ ದೂರ ಉಳಿದಿತ್ತು.
15. ರಾಜ್ಯದ ಇತಿಹಾಸದಲ್ಲಿ ಇದುವರೆಗೂ ವಿಧಾನಸಭೆಯ ಸದಸ್ಯರೇ ಮುಖ್ಯಮಂತ್ರಿಯಾಗಿದ್ದರು ಆದರೆ ಬಿಜೆಪಿಯಲ್ಲಿ ಅನಿರಿಕ್ಷಿತ ಬೆಳವಣಿಗೆಯಿಂದ ವಿಧಾನಪರಿಷತ್ ಸದಸ್ಯರೊಬ್ಬರು ಮುಖ್ಯಮಂತ್ರಿ ಪದವಿಗೇರಿದರು.
16. ಶಂಕರಪ್ಪ ಅವರಿಂದ ತೆರವಾದ ಸ್ಥಾನಕ್ಕಾಗಿ ಶ್ರೀ.ಡಿ.ವಿ.ಸದಾನಂದ ಗೌಡ ಸ್ಪರ್ದಿಸಿದ್ದರು.
17. ಜನಾಂಗೀಯ ದ್ವೇಷಕ್ಕೆ ತುತ್ತಾಗಿ ಹತ್ಯೆಗೀಡಾಗಿದ್ದ ಭಾರತೀಯ ಯುವಕ ನಿತಿನ್ ಗರ್ಗ್ ಕೊಲೆ ಪ್ರಕರಣದ ಆರೋಪಿಗೆ ವಿಕ್ಟೋರಿಯ ರಾಜ್ಯದ ಸುಪ್ರೀಂ ಕೋರ್ಟ್ 13 ವರ್ಷ ಜೈಲು ಶಿಕ್ಷೆ ವಿಧಿಸಿತು.
18. ಈ ಕೃತ್ಯ ವು ಜನಾಂಗೀಯ ದ್ವೇಷದ ಕೊಲೆ ಎಂಬುದಕ್ಕಿಂತಲೂ ಅತ್ಯಂತ ಹೀನಾ ಅಪರಾಧವಾಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಪಾಲ್ ಕಾಗ್ಲ್ಯಾನ್ ಅಭಿಪ್ರಾಯಪಟ್ಟಿದ್ದಾರೆ.
19. ಭಗವದ್ಗೀತೆಯು ತೀವ್ರಗಾಮಿ ನಿಲುವುಗಳ ಪ್ರತಿಪಾದನೆಯ ಗ್ರಂಥ ಎಂದು ತಗಾದೆ ತೆಗೆದಿರುವ ಸ್ಥಳೀಯ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್
20. ಭಗವದ್ಗೀತೆಯು 1788 ರಲ್ಲಿ ಮೊದಲ ಬಾರಿಗೆ ರಷ್ಯಾ ಭಾಷೆಗೆ ತರ್ಜುಮೆಗೊಂಡಿದೆ.
21. ಭಗವದ್ಗೀತೆಯನ್ನು ನಿಷೇಧಿಸುವಂತೆ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್ ಕೋರ್ಟ್ ಮೊರೆ ಹೋಗಿದ್ದು . ತೊಮ್ಸ್ಕ್ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 28 ರಂದು ಈ ಕುರಿತು ತೀರ್ಪು ನೀಡಲಿದೆ.
22. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿ. ಇವು ಸ್ವಾಯತ್ತ ಹಾಗೂ ಸ್ವತಂತ್ರ ವ್ಯವಸ್ಥೆಗಳು.
23. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆಯಡಿ ಯಾವುದೇ ಅಧಿಕಾರಿ ವಿರುದ್ಧ ದೂರು ದಾಖಲಾದ ಸಂದರ್ಭದಲ್ಲಿ, ಅಂತಹ ಅಧಿಕಾರಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ದೇಶಿಸುವ, ತನಿಖೆಗೆ ಸೂಚಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಅಧಿಕಾರ ಇವುಗಳಿಗೆ ಇರುತ್ತದೆ.
24. ಕಪಾಲ ವ್ಯವಸ್ಥೆಯಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಗರಿಷ್ಠ ಎಂಟು ಸದಸ್ಯರು ಇರುತ್ತಾರೆ. ಈ ಪೈಕಿ ನಾಲ್ವರು ನ್ಯಾಯಾಂಗ ಕ್ಷೇತ್ರದಿಂದ ಬಂದವರಾಗಿರುತ್ತಾರೆ.
25. ನಾಲ್ಕು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಮೀಸಲು.
26. ಇದು ಪ್ರಾಥಮಿಕ ವಿಚಾರಣಾ ತಂಡ ಹಾಗೂ ಸ್ವತಂತ್ರ ನ್ಯಾಯಿಕ ವಿಚಾರಣಾ ತಂಡಗಳನ್ನು ಪ್ರತ್ಯೇಕವಾಗಿ ಹೊಂದಿರಲಿದೆ.
27. ಕಾರ್ಯದರ್ಶಿ, ವಿಚಾರಣಾ ನಿರ್ದೇಶಕ, ತನಿಖಾ ನಿರ್ದೇಶಕ ಮತ್ತಿತರ ಅಧಿಕಾರಿಗಳು ಇದರಲ್ಲಿ ಇರುತ್ತಾರೆ.
28. ಪ್ರಧಾನ ಮಂತ್ರಿ, ಲೋಕಸಭೆ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿ ನೇಮಿಸಿದ ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿಯವರನ್ನು ಒಳಗೊಂಡ ಆಯ್ಕೆ ಸಮಿತಿ ಲೋಕಪಾಲರನ್ನು ನೇಮಿಸಲಿದೆ.
29. ರಾಷ್ಟ್ರಪತಿಯವರು ನೇಮಿಸಿದ ಪರಿಣತ ಕಾನೂನು ತಜ್ಞರೊಬ್ಬರು ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.ನೇಮಕದ ವಿಷಯದಲ್ಲಿ ಆಯ್ಕೆ ಸಮಿತಿಗೆ ಪೂರಕವಗಿ ಶೋಧನಾ ಸಮಿತಿ ಕೆಲಸ ಮಾಡುತ್ತದೆ.
30. ಶೋಧನಾ ಸಮಿತಿಯ ಶೇ 50ರಷ್ಟು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಮೀಸಲು.
31. ಕೆಲವು ವಿಶೇಷ ರಕ್ಷಣೆಗಳೊಂದಿಗೆ ಪ್ರಧಾನಿ ಸ್ಥಾನವನ್ನು ಲೋಕಪಾಲ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಿ ವಿರುದ್ಧ ವಿದೇಶಾಂಗ ವ್ಯವಹಾರ, ರಾಷ್ಟ್ರಕ್ಕೆ ಸಂಬಂಧಿಸಿದ ಬಾಹ್ಯ ಹಾಗೂ ಆಂತರಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಚಟುವಟಿಕೆ ಹಾಗೂ ಬಾಹ್ಯಾಕಾಶ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೆ ಅದರ ಬಗ್ಗೆ ತನಿಖೆ ನಡೆಸಲು ಲೋಕಪಾಲರಿಗೆ ಅಧಿಕಾರ ಇಲ್ಲ..
32. 3/4ರಷ್ಟು ಬಹುಮತವಿರುವ ಪೂರ್ಣಪೀಠ ಮಾತ್ರ ಪ್ರಧಾನಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ಧಾರ ಕೈಗೊಳ್ಳಬಹುದು. ಈ ಸಂಬಂಧದ ನಡಾವಳಿಗಳು ಚಿತ್ರೀಕರಣವಾಗಬೇಕು.
33. ಎ ಮತ್ತು ಬಿ ದರ್ಜೆ ಅಧಿಕಾರಿಗಳ ವಿರುದ್ಧ ದೂರು ಬಂದಾಗ ಲೋಕಪಾಲದ ಸೂಚನೆ ಅನುಸಾರ ಸಿವಿಸಿ ತನಿಖೆ ನಡೆಸುತ್ತದೆ. ನಂತರ ಸಿವಿಸಿ ಸಂಬಂಧಿಸಿದ ತನಿಖಾ ವರದಿಯನ್ನು ಮುಂದಿನ ಕ್ರಮಕ್ಕಾಗಿ ವಾಪಸು ಲೋಕಪಾಲಕ್ಕೆ ಕಳುಹಿಸುತ್ತದೆ.
34. ಸಿ ಮತ್ತು ಡಿ ದರ್ಜೆ ನೌಕರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ಸಿವಿಸಿಗೇ ಇರುತ್ತದೆ. ಈ ಬಗ್ಗೆ ಸಿವಿಸಿಯಿಂದ ವರದಿ ತರಿಸಿಕೊಳ್ಳುವ ಹಾಗೂ ಪರಿಶೀಲನೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ.
35. 10 ಲಕ್ಷ ರೂಪಾಯಿಗಿಂತ ಹೆಚ್ಚು ವಿದೇಶಿ ದೇಣಿಗೆ ಸ್ವೀಕರಿಸುವ ಎಲ್ಲ ಸಂಸ್ಥೆಗಳನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ (ಎಫ್‌ಸಿಆರ್‌ಎ) ಲೋಕಪಾಲರು ತನಿಖೆಗೆ ಒಳಪಡಿಸಬಹುದು.
36. ಲೋಕಪಾಲರು ತನಿಖೆ ಕೈಗೆತ್ತಿಕೊಳ್ಳಬೇಕೆಂದರೆ ದೂರು ದಾಖಲಾಗುವುದು ಕಡ್ಡಾಯ. ಸ್ವಯಂ ಪ್ರೇರಿತವಾಗಿ ಯಾವುದೇ ತನಿಖೆಗೆ ಮುಂದಾಗುವಂತಿಲ್ಲ.
37. ತಾವು ತನಿಖೆ ನಡೆಸಿದ ಹಾಗೂ ತಮ್ಮ ನಿರ್ದೇಶನದ ಮೇರೆಗೆ ತನಿಖೆಗೆ ಒಳಪಟ್ಟ ಯಾವುದೇ ಪ್ರಕರಣದ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಲೋಕಪಾಲರು ಯಾವ ಪೂರ್ವಾನುಮತಿಯನ್ನೂ ಪಡೆಯಬೇಕಿಲ್ಲ.ನೌಕರನ ವಿಚಾರಣೆ ಬಾಕಿ ಇರುವಾಗಲೇ ಭ್ರಷ್ಟಾಚಾರದಿಂದ ಸಂಪಾದಿಸಿದ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು
38. ನಾಗರಿಕ ಸೇವೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಸಂಸ್ಥೆಗಳು ಕೈಗೊಳ್ಳುವ ಯಾವುದೇ ನಿರ್ಧಾರದ ಬಗ್ಗೆ ಹಾಗೂ ಭ್ರಷ್ಟಾಚಾರ ಪರಿಹಾರ ವೇದಿಕೆಯಾಗಿ ಲೋಕಪಾಲ ವ್ಯವಸ್ಥೆಯೇ ಅಂತಿಮ ಮೇಲ್ಮನವಿ ಪ್ರಾಧಿಕಾರವಾಗಿರುತ್ತದೆ.
39. ಲೋಕಪಾಲಕ್ಕೆ ಬರುವ ದೂರುಗಳ ತನಿಖೆಯ ಬಗ್ಗೆ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿ, ಮೇಲ್ವಿಚಾರಣೆ ಮಾಡುವ ಅಧಿಕಾರ ಲೋಕಪಾಲಕ್ಕೆ ಇರುತ್ತದೆ.
40. ಕಾಲಮಿತಿ ನಿಗದಿಯನ್ನೂ ಮಸೂದೆ ಒಳಗೊಂಡಿದೆ. ಪ್ರಾಥಮಿಕ ವಿಚಾರಣೆಗೆ ಮೂರು ತಿಂಗಳ ಅವಧಿ ನಿಗದಿ ಮಾಡಲಾಗಿದ್ದು, ಇದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬಹುದು.
41. ತನಿಖೆಗೆ ಆರು ತಿಂಗಳು ಅವಕಾಶವಿದ್ದು, ಇನ್ನೂ ಆರು ತಿಂಗಳ ವಿಸ್ತರಿಸಬಹುದು. ನಂತರ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ಒಂದು ವರ್ಷ ನಿಗದಿಯಾಗಿದ್ದು, ಇದನ್ನು ಮತ್ತೊಂದು ವರ್ಷ ವಿಸ್ತರಿಸಲು ಅವಕಾಶವಿದೆ.
42. ನಾಗರಿಕ ಸಮಿತಿ ಕೇಳಿದ್ದು ಪ್ರಧಾನಿ ಸ್ಥಾನವನ್ನು ಬೇಷರತ್ತಾಗಿ ಲೋಕಪಾಲ ವ್ಯಾಪ್ತಿಗೆ ಒಳಪಡಿಸಬೇಕು
43. ನಾಗರಿಕ ಸಮಿತಿ ಕೇಳಿದ್ದು ಸಿಬಿಐ ಲೋಕಪಾಲ ಅಧೀನಕ್ಕೆ ತರಬೇಕು
44. ನಾಗರಿಕ ಸಮಿತಿ ಕೇಳಿದ್ದು ಕೆಳಹಂತದ ಅಧಿಕಾರಷಾಹಿಯನ್ನೂ ಲೋಕಪಾಲ ವ್ಯವಸ್ಥೆಯಡಿ ತನ್ನಿ
45. ನಾಗರಿಕ ಸಮಿತಿ ಕೇಳಿದ್ದು ನಾಗರಿಕ ಸನ್ನದು ನಿಗದಿ ಅಧಿಕಾರ ಲೋಕಪಾಲಕ್ಕೆ ಇರಬೇಕು
46. ನಾಗರಿಕ ಸಮಿತಿ ಕೇಳಿದ್ದು ಲಂಚ ಸಂಬಂಧಿ ದೂರುಗಳನ್ನು ನೇರವಾಗಿ ಲೋಕಪಾಲ ಗಮನಕ್ಕೆ ತರಬೇಕು.
47. ಲೋಕಪಾಲಕ್ಕೆ ತನಿಖೆಯ ಯಾವ ಅಧಿಕಾರವೂ ಇಲ್ಲ.
48. ದೇಶದ ಶೇ 63ರಷ್ಟು ಜನತೆಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸುವ ಆಹಾರ ಭದ್ರತಾ ಕಾಯ್ದೆಗೆ ಕೇಂದ್ರ ಸಂಪುಟ ಕೊನೆಗೂ ಅಳೆದು ಸುರಿದು ಒಪ್ಪಿಗೆ ಸೂಚಿಸಿದೆ.
49. ಗ್ರಾಮಾಂತರ ಪ್ರದೇಶಗಳ ಶೇ 75ರಷ್ಟು ಮತ್ತು ನಗರ ಪ್ರದೇಶಗಳ ಶೇ 50ರಷ್ಟು ಜನರನ್ನು ಈ ರಿಯಾಯಿತಿ ದರದ ಧಾನ್ಯ ಪೂರೈಕೆಯ ವ್ಯಾಪ್ತಿಗೆ ತರಲಾಗುವುದು ಎಂಬ ಭರವಸೆ ಮೇಲುನೋಟಕ್ಕೆ ಆಕರ್ಷಕವಾಗಿದೆ.
50. ಬಡತನದ ರೇಖೆಯ ಕೆಳಗಿನ ಪ್ರತಿ ಫಲಾನುಭವಿಗೆ (ಕಡು ಬಡವರಿಗೆ) ರೂ 3ರ ದರದಂತೆ 7 ಕಿಲೋ ಅಕ್ಕಿ, ರೂ 2 ರ ದರದಂತೆ ಗೋಧಿ ಮತ್ತು ರೂ 1 ರ ದರದಂತೆ ಇನ್ನಿತರ ಧಾನ್ಯ ಪಡೆಯುವ ಹಕ್ಕನ್ನು ಈ ಕಾಯ್ದೆಯಲ್ಲಿ ನೀಡುವುದು ಸರ್ಕಾರದ ಉದ್ದೇಶ.
51. ಬಡತನ ರೇಖೆಯ ಮೇಲಿರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕಿಲೋ ಆಹಾರಧಾನ್ಯವನ್ನು ಅವುಗಳ ಬೆಂಬಲ ಬೆಲೆಯ ಶೇ 50ರಷ್ಟಕ್ಕೆ ಸಿಗುವಂತೆ ಮಾಡಲಾಗುವುದೆಂಬುದು ಕಾಯ್ದೆಯಲ್ಲಿನ ಇನ್ನೊಂದು ಅಂಶ.
52. ಗರ್ಭಿಣಿಯರಿಗೆ 6 ತಿಂಗಳವರೆಗೆ ತಲಾ ರೂ 1000 ದಂತೆ ಭತ್ಯೆ, ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ಪಡಿತರ ಚೀಟಿ ಸ್ತ್ರೀ ಸಬಲೀಕರಣದ ಆಶಯ.
53. ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಈ ಕಾಯ್ದೆ ಆಹಾರ ಹಕ್ಕು ಕಾರ್ಯಕರ್ತರು ಮತ್ತು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ವಿರೋಧ ಎದುರಿಸುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ