1. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
2. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.
3. ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಅವರ ಒಡೆತನದ ಓಬಾಳಪುರಂ ಗಣಿ ಸಂಸ್ಥೆಯ ಅಕ್ರಮ ಗಣಿ ವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ 5,100/- ಕೋಟಿ ರೂ. ನಷ್ಟವಾಗಿದೆಯೆಂದು ಸಿಬಿಐ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದೆ.
4. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಯಾಗಿ ನ್ಯಾ.ವಿಕ್ರಮ್ ಜಿತ್ ಸೇನ್ ದಿನಾಂಕ/24/12/2011 ರಂದು ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ.
5. ಜ್ಞಾನಪೀಠ ಪ್ರಶಸ್ತು ಪುರಸ್ಕೃತ ಕಂಬಾರರಿಗೆ ಕೇಂದ್ರ ನಾಟಕ ಅಕಾಡೆಮಿ ಫೆಲೋಶಿಪ್ ಸಂದಿದೆ.
6. ಆಕ್ಷೇಪಾರ್ಹ ಮಾಹಿತಿಯನ್ನು ಪ್ರಕಟಿಸಿದ್ದಕ್ಕಾಗಿ ಫೇಸ್‌ಬುಕ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಮತ್ತು ಯುಟ್ಯೂಬ್ ಸೇರಿದಂತೆ 21 ಸಾಮಾಜಿಕ ವೆಬ್ ತಾಣಗಳಿಗೆ ವಿಚಾರಣೆ ಎದುರಿಸಲು ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
7. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕಗಳ ಮಾರಾಟ), 293 (ಅಪ್ರಾಪ್ತರಿಗೆ ಅಶ್ಲೀಲ ವಸ್ತುಗಳ ಮಾರಾಟ) ಮತ್ತು 120-ಬಿ (ಅಪರಾಧವೆಸಗಲು ಸಂಚು) ಅಡಿಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
8. ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಸುದೇಶ್ ಕುಮಾರ್ ಕೇಸನ್ನು ದಾಖಲಿಸಿಕೊಂಡಿದ್ದು, ಜ.13ರೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ್ಧಾರೆ.
9. ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಧರ್ಮ ವಿರೋಧಿ ಮತ್ತು ಸಮಾಜ ವಿರೋಧಿ ಮಾಹಿತಿಯನ್ನು ಪ್ರಕಟಿಸದಂತೆ ನಿಷೇಧ ಹೇರಿ ಈ ಎಲ್ಲ ವೆಬ್ ಸೈಟ್ ಗಳ ವಿರುದ್ಧ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ದಂಡಾಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
10. ಸಾಮಾಜಿಕ ತಾಣಗಳನ್ನು ಸೆನ್ಸಾರ್ ಮಾಡಬೇಕೆಂದು ಕೇಂದ್ರ ಸಚಿವ ಕಪಿಲ್ ಸಿಬಾಲ್ ಹೇಳಿರುವ ಬೆನ್ನ ಹಿಂದೆಯೇ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.
11. ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ಸಂಸ್ಥೆ ತನ್ನ ಮೌಲ್ಯವನ್ನು ಸುಮಾರು 100 ಬಿಲಿಯನ್ ಡಾಲರ್ ಮೊತ್ತಕ್ಕೆ ಏರಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.
12. ಜೊತೆಗೆ ಫೇಸ್ ಬುಕ್ ಐಪಿಒ ಗಳನ್ನು ಕೂಡಾ 2012ರಲ್ಲಿ ಹೊರ ಬಿಡುವ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳುತ್ತದೆ.
13. ಸುಮಾರು 800 ಮಿಲಿಯನ್ ಗೂ ಅಧಿಕ ಸದಸ್ಯರನ್ನು ಹೊಂದಿರುವ ಫೇಸ್ ಬುಕ್ ನ ಮೇಲೆ ಹಣ ಹೂಡಲು ಬ್ಯಾಂಕರ್ ಗಳು ಸಿದ್ಧರಿದ್ದಾರೆ. ಆದರೆ, ಸಿಇಒ ಮಾರ್ಕ್ ಝಕರ್ ಬರ್ಗ್ ಮಾತೇ ಅಂತಿಮ ಎನ್ನುತ್ತಾರೆ ಸಿಎಫ್ ಒ ಡೇವಿಡ್ ಎಬೆರ್ಸ್ಮನ್.
14. ಹಾರ್ವಡ್ ವಿಶ್ವವಿದ್ಯಾಲಯದ ಡಾರ್ಮೆಂಟರಿ ಕೋಣೆಯೊಂದರಲ್ಲಿ ಸುಮಾರು 2004ರ ವೇಳೆಗೆ ಆರಂಭವಾದ ಸಾಮಾಜಿಕ ಜಾಲ ತಾಣ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುತ್ತಿರುವ ಆಪ್ತ ವೆಬ್ ತಾಣವಾಗಿದೆ.
15. ಸದ್ಯಕ್ಕೆ ಸುಮಾರು 41 ಬಿಲಿಯನ್ ಡಾಲರ್ ತೂಗುವ ಕಂಪನಿ ಈಗ ಗೂಗಲ್ ಹಾಗೂ ಅಮೆಜಾನ್ ನಂತರದ ಸ್ಥಾನದಲ್ಲಿದೆ.
16. ಭರವಸೆಯ ಅಥ್ಲೀಟ್ ಅಶ್ವಿನಿ ಅಕ್ಕುಂಜಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಒಂದು ವರ್ಷದ ನಿಷೇಧ ದೃಢಪಟ್ಟಿದೆ.
17. ನ್ಯಾ. ದೀನೇಶ್ ದಯಾಳ್ ನೇತೃತ್ವದ ಶಿಸ್ತು ಸಮಿತಿ ಸಂಶದ ಲಾಭನ್ನು ಕ್ರೀಡಾಳುಗಳತ್ತ ವಾಲಿಸಿದ್ದು, ನಿಷೇಧದ ಅವಧಿ ಕೇವಲ ಒಂದು ವರ್ಷದ್ದಾಗಿರುವುದರಿಂದ ಮುಂದಿನ ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಜೀವಂತವಾಗಿದೆ.
18. ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಮಸೂದೆ ಬಗ್ಗೆ ಪ್ರಚಾರಕ್ಕೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಣ್ಣಾ ಹಜಾರೆ ತಂಡವನ್ನು ತರಾಟೆಗೆ ತೆಗೆದುಕೊಂಡಿದೆ.
19. ಎಂಎಂಆರ್‌ಡಿಎ ಮೈದಾನಕ್ಕೆ ವಿಧಿಸಲಾಗುತ್ತಿರುವ ಶುಲ್ಕವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಗೂ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
20. `ನಿಮ್ಮ ಕೋರಿಕೆಯನ್ನು ಮನ್ನಿಸಿ ಆದೇಶ ಹೊರಡಿಸಿದರೆ ಸಂಸತ್ತಿನ ಕಲಾಪದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಮತ್ತು ಲೋಕಪಾಲ ಮಸೂದೆಯ ಬಗ್ಗೆ ಸಂಸತ್ತು , ಆರಂಭಿಸಿರುವಾಗ ಆ ವಿಚಾರದಲ್ಲಿಯೇ ಸಮಾನಾಂತರವಾಗಿ ಪ್ರಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ` ಎಂದು ನ್ಯಾಯಮೂರ್ತಿ ಪಿ. ಬಿ. ಮುಜುಂದಾರ್ ಮತ್ತು ಮೃದುಲಾ ಭಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
21. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ