ಬುಧವಾರ, ಡಿಸೆಂಬರ್ 21, 2011

KAS Exam , ಕೆ.ಎ.ಎಸ್ ಪರೀಕ್ಷಾ ಪ್ರಶ್ನೋತ್ತರಗಳು

1. 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
2. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
3. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
4. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
5. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
6. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
7. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
8. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
9. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
10. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
11. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
12. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
13. ಪ್ರಸಕ್ತ ಭಾರಿಯ ಹಂಪಿ ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ಎಸ್.ಎಲ್.ಬೈರಪ್ಪ ಸೇರಿದಂತೆ ಒಟ್ಟು ಆರು ಜನರಿಗೆ ದೊರಿತಿದೆ.
14. ತುಂಗಭದ್ರಾ ಜಲಾಶಯ ನಿರ್ಮಿಸಲು ಆಗಿನ ಹೈದರಾಬಾದ್ ಸರ್ಕಾರ 1950 ರಲ್ಲಿ ಭೂಸ್ವಾಧೀನ ನಡೆಸಿತು.
15. ತುಂಗಭದ್ರಾ ಜಲಾಶಯ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸುಮಾರು 17 ಗ್ರಾಮಗಳು ಮುಳುಗಡೆಯಾದವು.
16. ಈ ಪೈಕಿ ರಾಂಪುರ ತಾಲ್ಲೂಕಿನ ಒಂದು ಗ್ರಾಮದ 17 ಕುಟುಂಗಳನ್ನು ಅಗಳಕೇರಾ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಪುನರ್ವಸತಿಗಾಗಿ ಹುಲಿಗಿಯ ಕುಬೇರಗೌಡರಿಂದ 48 ಎಕರೆ ಭೂಸ್ವಾಧೀನಪಡಿಸಿಕೊಂಡು 6,969 ರೂ ಪರಿಹಾರ ವಿತರಿಸಲಾಗಿತ್ತು.
17. ಈ ಸಂದರ್ಭದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಪಡೆದ ಕುಟುಂಬದಿಂದ ಹೆಚ್ಚುವರಿಯಾಗಿ ಎಕರೆಗೆ 50 ರೂನಂತೆ ಸರ್ಕಾರ ವಸೂಲಿ ಮಾಡಿತ್ತು. 5 ಎಕರೆಗಿಂತ ಕಡಿಮೆ ಜಮೀನು ಪಡೆದ ಸಂತ್ರಸ್ತರಿಗೆ ಉಚಿತವಾಗಿ ವಿತರಿಸಲಾಗಿತ್ತು.
18. ಸಂತ್ರಸ್ತರಿಗೆ ಸರ್ಕಾರ ನೀಡಿದ ಜಮೀನಿನ ಮಾಲಿಕತ್ವ ಎತ್ತಿಹಿಡಿದಿರುವ ಇಲ್ಲಿನ ಒಂದನೇ ತ್ವವರಿತ ನ್ಯಾಯಾಲಯ , ಕೆಳ ನ್ಯಾಯಾಲಯ ನೀಡಿದ ಆದೇಶ ತಳ್ಳಿ ಹಾಕುವ ಮೂಲಕ 61 ವರ್ಷಗಳ ಸಂತ್ರಸ್ತರ ಹೋರಾಟಕ್ಕೆ ನ್ಯಾಯ ಒದಗಿಸಿದೆ.
19. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವರ ನಿವಾಸದ ಮತ್ತು ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.6 ಕೆ.ಜಿ. ಚಿನ್ನ , 17 ಲಕ್ಷ ರೂ. ನಗದು ವಶವಡಿಸಿಕೊಂಡಿದ್ದಾರೆ.
20. ರಷ್ಯಾದ ಸೈಬೀರಿಯಾದ ನ್ಯಾಯಾಲಯವೊಂದು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಿಷೇಧಿಸಲು ಹೊರಟಿದೆ.
21. ಮಾಸ್ಕೊ – ಇಸ್ಕಾನ್ ಭಗವದ್ಗೀತೆ ನಿಷೇಧ ಕುರಿತ ತೀರ್ಪನ್ನು ಅಮಾನತಿಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28 ಮುಂದೂಡಿದೆ.
22. ನರ್ಸ್ ಭಂವರಿ ದೇವಿ ಪಹರಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮಹಿಪಾಲ್ ಮದೆರ್ನಾ ಅವರ ಪತ್ನಿ ಲೀಲಾ , ಶಾಸಕ ಮಲ್ಕನ್ ಸಿಂಗ್ ವರ ಇಬ್ಬರು ಪುತ್ರರನ್ನು ಸಿಬಿಐ ಸೋಮವಾರ ವಿಚಾರಣೆಗೊಳಪಡಿಸಿದೆ.
23. ಉತ್ತ ಕೋರಿಯಾ ಪರಮೊಚ್ಚ ನಾಯಕ ಎರಡನೇ ಕಿಮ್ ಜಾಂಗ್ ಇಲ್ ದಿನಾಂಕ/17/12/2011 ರಂದು ಹೃದಯಾಘಾತದಿಂದ ನಿಧನರಾದರು.
24. ಸ್ವಾತಂತ್ರ್ಯ ನಂತರವೂ ಗೋವಾ ಪ್ರದೇಶವು ಪೋರ್ಚುಗೀಸರ ಅಧೀನದಲ್ಲಿತ್ತು ಇದನ್ನು ವಶಪಡಿಸಲು ಭಾರತ ಸರ್ಕಾರ ಆಪರೇಷನ್ ವಿಜಯ್ ಹೆಸರಿನಲ್ಲಿ ಯುದ್ಧ ಸಾರಿತು. 1961 ಡಿಸೆಂಬರ್ 19 ರಂದು ಗೋವ ಭಾರತದ ವಶವಾಯಿತು.
25. ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು 1510 ರಲ್ಲಿ .
26. ಸುಧಾರಣಾವಾಧಿ ಲೂಯಿಸ್ ದಿ ಮನೇಜಸ್ ಬ್ರಾಗಾಂಕಾ ಅವರು ಹೊರತರುತ್ತಿದ್ದ ಒ ಹೆರಾಲ್ಡೋ ಪತ್ರಿಕೆ ಪೋರ್ಚುಗೀಸರ ದುರಾಡಳಿತ ವಿರುದ್ಧದ ಹೋರಾಟಕ್ಕೆ ಬೆನ್ನೆಲುಬಾಗಿತ್ತು.
27. ಇದನ್ನು ಹತ್ತಿಕ್ಕಲು ಪೋರ್ಚುಗೀಸ್ ಸರ್ಕಾರವು ಗೋವಾದಲ್ಲಿ ಪ್ರೆಸ್ ಸೆನ್ಸಾರ್ ಶಿಪ್ ಜಾರಿಗೊಳಿಸಿತು.
28. ಗೋವಾ ವಿಮೋಚನಾ ಚಳವಳಿಗೆ ರಾಜಕೀಯ ಬಲ ನೀಡಲು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ವರು 1928 ರಲ್ಲಿ ಗೋವಾ ನ್ಯಾ,ನಲ್ ಕಾಂಗ್ರೇಸ್ ಸ್ಥಾಪಿಸಿದರು.
29. 1930 ರ ವೇಳೆಗೆ ಪೋರ್ಚುಗೀಸ್ ಸರ್ಕಾರವು ಆಕ್ಟೋ ಕಲೋನಿಯಲ್ ಕಾಯಿದೆ ಜಾರಿಗೊಳಿಸಿ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಭೆಗಳಿಗೆ ನಿಷೇಧ ಹೇರಿತು.
30. ಗೋವಾ ವಿಮೋಚನಾ ಚಳವಳಿಯ ಪಿತಾ ಎಂದು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ರನ್ನ ಕರೆದರು.
31. 1961 ಡಿಸೆಂಬರ್ 18 ಮತ್ತು 19 ರಂದು ಸತತ 33 ಗಂಟೆಗಳ ಸೇನೆ ದಾಳಿ ನಡೆಸುವ ಮೂಲಕ ಗೋವಾ ಮತ್ತು ಸುತ್ತಮುತ್ತಲಿನ ದ್ವೀಪಗಳು ವಿಮೋಚನೆಗೊಳಿಸಲಾಯಿತು.
32. ಪೋರ್ಚುಗೀಸರು ಭಾರತಕ್ಕೆ ಅಧಿಕೃತವಾಗಿ ಭಾರತಕ್ಕೆ ಶರಣಾಗಿದ್ದು 1974 ರಲ್ಲಿ ಗೋವಾ ವಿಮೋಚನೆಯನ್ನು ಒಪ್ಪಿಕೊಂಡಿತು.
33. ಗೋವಾ 1987 ರಲ್ಲಿ ಪ್ರತ್ಯೇಕ ರಾಜ್ಯವಾಗಿ ಗೋವಾ ಅಸ್ತಿತ್ವಕ್ಕೆ ಬಂತು.
34. ಪ್ರಸ್ತುತ ದಮನ್ ಮತ್ತು ದಿಯೂ , ದಾದ್ರಾ ಮತ್ತು ನಗರ್ ಹವೇಲಿ ದ್ವೀಪಗಳು ಕೇಂದ್ರಾಡಳಿತ ಪ್ರದೇಶವಾಗಿದೆ.
35. ಭಾರತದಲ್ಲಿ information technology ಕ್ಷೇತ್ರದಲ್ಲಿ 2012ನೇ ಸಾಲಿನಲ್ಲಿ ಸುಮಾರು 2.5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್.
36. 34 ವರ್ಷಗಳ ಬಳಿಕ ರಣಜಿ ಪಂದ್ಯದ ಆತಿಥ್ಯ ವಹಿಸಲು ಶಿವಮೊಗ್ಗ ಸಜ್ಜಾಗಿದೆ.
37. 1995 ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪಂದ್ಯ ನಡೆದಿತ್ತು.
38. ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ ಭಾರತ ತಂಡದಲ್ಲಿ ಕುಮಟಾ ಮೂಲಕ 27 ವರ್ಷದ ಯುವಕನೂ ಸೇರಿದ್ದಾನೆ.
39. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಅಚ್ಚುಮೆಚ್ಚಿನ ಈ ಯುವಕನ ಹೆಸರು ರಾಘವೇಂದ್ರ. ವಿಶೇಷವೆಂದರೆ ಈ ವರೆಗೆ ಪ್ರಥಮ ದರ್ಜೆ ಪಂದ್ಯವನ್ನು ಆಡದ ರಾಘವೇಂದ್ರ ಈ ಇಬ್ಬರು ಮಹಾನ್ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ನಲ್ಲಿ ನೆರವು ನೀಡುತ್ತಿದ್ದಾನೆ.
40. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಉದ್ಯೋಗಿಯಾಗಿರುವ ರಾಘವೇಂದ್ರ ಮೆಷಿನ್ ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಿಂಗ್ ಮಾಡಿ ಬಾಲ್ ಎಸೆಯುವ ಕಲೆ ಹೊಂದಿದ್ದಾನೆ.
41. ಆಸೀಸ್ ವೇಗಿ ಪಾಟಿಸನ್ ಸ್ವಿಂಗ್ ಎದುರಿಸಲು ಸಜ್ಜಾಗುತ್ತಿರುವ ಸಚಿನ್ ಹಾಗೂ ದ್ರಾವಿಡ್ ಗೆ ಸದ್ಯಕ್ಕೆ ರಾಘವೇಂದ್ರನೇ ಉತ್ತಮ ಸಹಾಯಕರು .
42. ದೇಶದ ಅತ್ಯುನ್ನತ ನಾಗರೀಕ ಸನ್ಮಾನ ಇದ್ದ ಅಡ್ಡಿಯನ್ನು ಕೇಂದ್ರ ಸರ್ಕಾರ ಸರಿಪಡಿಸಿದೆ. ಪ್ರಶಸ್ತಿಯಲ್ಲಿ ಕ್ರೀಡಾ ವಿಭಾಗವನ್ನು ಸೇರ್ಪಡೆಗೊಳಿಸುವುದಕ್ಕೆ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಸಮ್ಮತಿ ಸೂಚಿಸಿ ಕಳಿಸಿದ ಪತ್ರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಅಂಕಿತ ಹಾಕಿದ್ದಾರೆ.
43. ಹೀಗಾಗಿ ಮುಂದಿನ ದಿನಗಳಲ್ಲಿ ಹೀಗಾಗಿ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಸಾಧನೆ ಮೆರೆದವರ ಸರಿ ಸಮನಾಗಿ ಕ್ರೀಡಾಪಟುಗಳು ನಿಲ್ಲಬಹುದಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಶ್ರೇಷ್ಠ ಹಾಕಿಪಟು ಧ್ಯಾನ್ ಚಂದ್ ಇಬ್ಬರೂ ಭಾರತ ರತ್ನ ಪಡೆಯಬಹುದಾಗಿದೆ.
44. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನ ಚರಿತ್ರೆಯ ಮೊದಲ ಕಾಪಿ ದಾಖಲೆ ಮೊತ್ತಕ್ಕೆ ಹರಾಜಾಗಿರು ಸುದ್ದಿ ಬಂದಿದೆ.ಸುಮಾರು 37 ಕೆಜಿ ತೂಕದ, 852 ಪುಟಗಳ ಈ ಬೃಹತ್ ಪುಸ್ತಕಕ್ಕೆ ಸುಮಾರು 1.72 ಕೋಟಿ ರು ಮೊತ್ತದ ಬೆಲೆ ಹರಾಜಿನಲ್ಲಿ ಕೂಗಲಾಗಿದೆ.
45. ಸಚಿನ್ ಅವರ ರಕ್ತದ ಸಹಿಯುಳ್ಳ ವಿಶೇಷ ಕಾಪಿಗಳು ಕೂಡಾ ಲಭ್ಯವಿದ್ದು ಪ್ರತಿ ಪುಸ್ತಕಕ್ಕೆ 75,000 ಡಾಲರ್ ದುಡ್ಡು ತೆರಬೇಕಾಗುತ್ತದೆ.
46. ಜೀವನ ಚರಿತ್ರೆ ಪುಸ್ತಕದಲ್ಲಿ ಸಚಿನ್ ಅವರ ಅಪರೂಪದ 1,500 ಚಿತ್ರಗಳು ಇದ್ದು ಪುಸ್ತಕದ ಅಂಚಿಗೆ ಚಿನ್ನದ ಲೇಪನ ಇರುತ್ತದೆ ಎಂದು ಪ್ರಕಾಶಕರು ಹೇಳಿದ್ದಾರೆ.
47. ಅತ್ಯಂತ ಸಜ್ಜನ, ಸಂಭಾವಿತ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ವಿ.ಜಿ. ಸಭಾಹಿತ್ (56) ಅವರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ನಿಧನರಾದರು.
48. ಕೋರ್ಟ್ ಕೋಣೆ 3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ. ಸಭಾಹಿತ್ ಅವರು ಕಚೇರಿಯಲ್ಲಿ ಹೃದಯ ಸ್ತಂಭನಕ್ಕೊಳಗಾಗಿದ್ದಾರೆ.
49. ಅವರನ್ನು ಫಾರ್ಟಿಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು.
50. ನವೆಂಬರ್ 26ರಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದ ನ್ಯಾ. ಸಭಾಹಿತ್ ಅವರು 1979ರಲ್ಲಿ ವಕೀಲ ವೃತ್ತಿ ಸೇರಿ ಕರ್ನಾಟಕ ಹೈಕೋರ್ಟಿನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರು.
51. ಅವರ ತಂದೆ ನ್ಯಾ. ಜಿ.ಎಸ್ ಸಭಾಹಿತ್ ಕೂಡ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು.
52. 1988ರಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದ ಅವರನ್ನು, 2000ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. 2001 ಜುಲೈನಲ್ಲಿ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡ ಅವರು 2017ರಲ್ಲಿ ನಿವೃತ್ತರಾಗುವವರಿದ್ದರು.
53. ಕಳೆದ ವರ್ಷ 11 ಭಿನ್ನಮತೀಯ ಶಾಸಕರು ದಂಗೆಯೆದ್ದಿದ್ದಾಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಭಿನ್ನ ತೀರ್ಪನ್ನು ನೀಡಿತ್ತು. ಆಗ ಆ ಪ್ರಕರಣವನ್ನು ನ್ಯಾ. ವಿ.ಜಿ. ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು. ಅ.29ರಂದು ನೀಡಿದ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು ನ್ಯಾ.ಸಭಾಹಿತ್ ಎತ್ತಿಹಿಡಿದಿದ್ದರು.
54. ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರು ಬಿಜೆಪಿ ಸ್ಪೀಕರ್ ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿ ಎಂದು ತೀರ್ಪು ನೀಡಿದ್ದಾರೆ.
55. ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ.
56. ಅಧ್ಯಕ್ಷರು ಅಥವಾ ಮುಖ್ಯಸ್ಥರೂ ಸೇರಿದಂತೆ ಲೋಕಪಾಲದಲ್ಲಿ ಒಂಬತ್ತು ಸದಸ್ಯರಿರುತ್ತಾರೆ.
57. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿ ಸಂಸ್ಥೆ ಮುಖ್ಯಸ್ಥರಾಗಿರುತ್ತಾರೆ.
58. ಲೋಕಸಭೆ ಸ್ಪೀಕರ್, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನಾಲ್ವರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಿದೆ.
59. ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಐದು ವರ್ಷ. `ವಾಗ್ದಂಡನೆ ನಿರ್ಣಯ` (ಇಂಪೀಚ್‌ಮೆಂಟ್) ಮೂಲಕ ಲೋಕಪಾಲರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದಾಗಿದೆ.
60. `ವಾಗ್ದಂಡನೆ ನಿರ್ಣಯ` ಕ್ಕೆ ಇದಕ್ಕೆ 100 ಸಂಸದರ ಸಹಿ ಒಳಗೊಂಡ ದೂರು ಅಗತ್ಯ.
61. ಲೋಕಪಾಲದಲ್ಲಿ ಹಾಗೂ ಶೋಧನಾ ಸಮಿತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
62. ಲೋಕಪಾಲ ಪೀಠದಲ್ಲಿ ಅರ್ಧದಷ್ಟು ಕಾನೂನು ಅಥವಾ ನ್ಯಾಯಾಂಗ ಹಿನ್ನೆಲೆಯಿಂದ ಬಂದವರು ಸದಸ್ಯರಾಗಿರುತ್ತಾರೆ.
63. ಲೋಕಪಾಲಕ್ಕೆ ಸ್ವಯಂ ಪ್ರೇರಿತವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ದೂರುಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು.
64. ಲೋಕಪಾಲದ ವಿಚಾರಣಾ ವಿಭಾಗವು ನಿರ್ದೇಶಕರು ಪ್ರಾಥಮಿಕ ವಿಚಾರಣೆ ಅವರನ್ನೊ ಗೊಂಡಿರುತ್ತದೆ.
65. ಲೋಕಪಾಲರು ದೂರು ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೂ ಕೇಳಬಹುದು. ಪ್ರಾಥಮಿಕ ತನಿಖೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
66. ಕಾಲಾವಕಾಶ ಅಗತ್ಯವಾದರೆ ಲಿಖಿತ ಮನವಿ ಸಲ್ಲಿಸಬೇಕು. ಆರು ತಿಂಗಳವರೆಗೆ ಸಮಯ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ.
67. ದೇಶದ ಅತ್ಯುನ್ನತ ತನಿಖಾ ಸಂಸ್ಥೆ `ಸಿಬಿಐ` ಅನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
68. ಸಿಬಿಐ ಆಡಳಿತಾತ್ಮಕ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಲ್ಲೇ ಉಳಿಸಲಾಗಿದೆ.
69. ಲೋಕಪಾಲ ಶಿಫಾರಸು ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾತ್ರ ಈ ಸಂಸ್ಥೆ ಅಧೀನದಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ.
70. ಸಿಬಿಐ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಲಿದೆ.
71. ಎಸ್‌ಪಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ಸಿವಿಸಿ, ಗೃಹ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಒಳಗೊಂಡ ಸಮಿತಿ ನೇಮಿಸಲಿದೆ.
72. ಅಂತರರಾಷ್ಟ್ರೀಯ ವ್ಯವಹಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ಆಂತರಿಕ ಮತ್ತು ಬಾಹ್ಯ ಭದ್ರತೆ ಮೊದಲಾದ ಮಹತ್ವದ ವಿಷಯಗಳನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
73. ಪ್ರಧಾನಿ ವಿರುದ್ಧದ ದೂರುಗಳ ತನಿಖೆ ಕುರಿತು ಲೋಕಪಾಲ ಪೂರ್ಣಪೀಠ ತೀರ್ಮಾನಿಸಬೇಕು. ಇದಕ್ಕೆ ಕನಿಷ್ಠ 2/3 ರಷ್ಟು ಸದಸ್ಯರ ಒಪ್ಪಿಗೆ ಇರಬೇಕು.
74. ಪ್ರಧಾನಿ ವಿಚಾರಣೆ ಸಾರ್ವಜನಿಕವಾಗಿ ನಡೆಯಬಾರದು. ಕೋಣೆಯೊಂದರಲ್ಲಿ ಗೌಪ್ಯವಾಗಿ ನಡೆಯಬೇಕು. ದೂರು ತಿರಸ್ಕೃತವಾದರೆ ದಾಖಲೆ ಬಹಿರಂಗ ಮಾಡಬಾರದು ಎಂದು ಮಸೂದೆ ವ್ಯಾಖ್ಯಾನಿಸಿದೆ.
75. ಲೋಕಪಾಲದಿಂದ ಶಿಫಾರಸು ಮಾಡಲಾದ ಪ್ರಕರಣಗಳ ತನಿಖಾ ವರದಿಯನ್ನು ಈ ಸಂಸ್ಥೆಗೇ ಸಲ್ಲಿಸಬೇಕು.
76. ಕನಿಷ್ಠ ಮೂವರು ಸದಸ್ಯರು ವರದಿಯನ್ನು ಪರಿಶೀಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೇ? ಪ್ರಕರಣ ಕೈಬಿಡಬೇಕೇ ಅಥವಾ ಇಲಾಖೆ ವಿಚಾರಣೆಗೆ ಆದೇಶಿಸಬೇಕೇ ಎಂಬ ತೀರ್ಮಾನ ಮಾಡಬಹುದು.
77. ಮೊಕದ್ದಮೆ ದಾಖಲಿಸಲು ಸರ್ಕಾರದ ಮುಖ್ಯಸ್ಥರ ಅಥವಾ ಇಲಾಖಾ ಮುಖ್ಯಸ್ಥರ ಮಂಜೂರಾತಿ ಅಗತ್ಯವಿಲ್ಲ.
78. ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಲೋಕಪಾಲದ `ಪ್ರಾಸಿಕ್ಯೂಷನ್` ವಿಭಾಗ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು.
79. ಕರ್ನಾಟಕ, ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ದೇಶದಾದ್ಯಂತ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತು ನಿಷೇಧಿಸುವಂತೆ ನ್ಯಾಯಮೂರ್ತಿ ಷಾ ಸಮಿತಿ ನೀಡಿದ ಸಲಹೆಯನ್ನು ಗಣಿ ಸಚಿವಾಲಯ ಮಂಗಳವಾರ ತಿರಸ್ಕರಿಸಿದೆ.
80. ಅಕ್ರಮ ಗಣಿಗಾರಿಕೆಗೆ ಲಗಾಮು ಹಾಕುವ ಉದ್ದೇಶದಿಂದ ನ್ಯಾ.ಎಂ.ಬಿ.ಷಾ ತನಿಖಾ ಸಮಿತಿಯು ಕೋಟ್ಯಂತರ ರೂಪಾಯಿ ವಹಿವಾಟಿನ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿತ್ತು.
81. ಸುಖೋಯ್ ಯುದ್ಧ ನೌಕೆಯಲ್ಲಿ ಸಂಚರಿಸಿ ಮತ್ತು ನೌಕಾ ವಿಹಾರ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಿಮಾನದಲ್ಲಿ ಸಂಚರಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
82. 77 ವರ್ಷದ ಪ್ರತಿಭಾ, 81 ನೌಕಾಪಡೆ ಹಡಗುಗಳು ಮತ್ತು 44 ವಾಯು ನೌಕೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
83. ರಾಷ್ಟ್ರಪತಿಗಳ ವೈಯಕ್ತಿಕ ಸಮುದ್ರ ವಾಯುವಿಹಾರ ನೌಕೆ ಐಎನ್‌ಎಸ್ ಸುಭದ್ರಾದಲ್ಲಿ ನೌಕಾಪಡೆಯ ಪರಿವೀಕ್ಷಣೆ ಮಾಡಿದ ಮೊದಲ ರಾಷ್ಟ್ರಪತಿ.
84. ನೌಕಾಪಡೆಗೆ ವಿಕ್ರಮಾದಿತ್ಯ ವಾಯುನೌಕೆ ಸೇರ್ಪಡೆಯಿಂದ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
85. ಪ್ರಸ್ತುತ ಭಾರತದ ಸೇನೆ 65,758 ಬಂದೂಕಗಳನ್ನು ಹೊಂದಿದೆ.
86. ಭಾರತದ ಸೇನೆಗೆ ಹೊಸದಾಗಿ 20 ಲಕ್ಷ ಬಂದೂಕಗಳ ಗತ್ಯವಿದೆ.
87. ಪ್ರಸ್ತುತ ಇನ್ಸಾನ್ ಬಂದೂಕಗಳ ಬದಲಾಗಿ 10 ಕೆ.ಜಿ. ಹೆಚ್ಚಿನ ತೂಕ ಹೊಂದಿರುವ ಹೊಸ ರೈಫಲ್ ಗಳನ್ನು ಪೂರೈಸಲು ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
88. ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಿದ್ದ ಗೋರಾಗಳು ( ಬಿಳಿಯರು ) ತೊಲಗಿದರು , ಕಾಲಾಗಳು ( ಕರಿಯರು ) ಬಂದರು . ಆದರೆ ಸ್ವಾತಂತ್ರ್ಯ ಬಂದು 6 ದಶಕ ಸಂದರೂ ಭ್ರಷ್ಟಚಾರ ನಿಂತಿಲ್ಲ ಎಂದು ವಿಷಾಧಿಸಿದ್ದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ.
89. ನೊಬೆಲ್ ಪ್ರಶಸ್ತು ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಬರೆದದ್ದು 1911 ರಲ್ಲಿ
90. ಜನ ಗಣ ಮನ ಕವಿತೆಯುವ ಮೊದಲು ಪ್ರಕಟಗೊಂಡಿದ್ದು ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ .
91. ಜನ ಗಣ ಮನವನ್ನು ರಾಗಬದ್ದವಾಗಿ ಮೊದಲು ಹಾಡಿದ್ದು 1911 ರ ಡಿಸೆಂಬರ್ 27 ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕೋಲ್ಕೋತಾ ಧಿವೇಶನದಲ್ಲಿ.
92. ಟ್ಯಾಗೋರ್ ರವರು ಜನ ಗಣ ಮನ ಗೀತೆಯನ್ನು ಬರೆದದ್ದು ಸಂಸ್ಕೃತ ಮಿಶ್ರಿತ ಬೆಂಗಾಲಿ ಬಾಷೆಯಲ್ಲಿ .
93. ಜನ ಗಣ ಮನವು ಭಾರತದ ವೈವಿಧ್ಯತೆಯನ್ನು ವರ್ಣಿಸುವ ಗೀತೆಯು ಸುದೀರ್ಘವಾದ 5 ನುಡಿಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಚುಟುಕುಗೊಳಿಸುವ ಉದ್ದೇಶದಿಂದ ಕೆಲವು ನುಡಿಗಳನ್ನು ಕೈ ಬಿಡಲಾಯಿತು.
94. ಇಂದು ನಾವು ಹಾಡುತ್ತಿರುವುದು 52 ಸೆಕೆಂಡುಗಳ ರಾಷ್ಟ್ರಗೀತೆಯು ಚುಟುಕು ರೂಪದ್ದಾಗಿದೆ.
95. ಟ್ಯಾಗೋರ್ ರು 1919 ರಲ್ಲಿ ಐರಿಷ್ ಕವಿ ಜೇಮ್ಸ್ ಎಚ್. ಕ್ಯೂಸಿನ್ಸ್ ಅವರ ಆಹ್ವಾನದ ಮೇರೆಗೆ ಆಂದ್ರ ಪ್ರದೇಶದ ಮದನಪಲ್ಲಿಯಲ್ಲಿರುವ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ಜನ ಗಣ ಮನ ಗೀತೆಯನ್ನು ರಾಗಬದ್ಧವಾಗಿ ಹಾಡಿದರು.
96. ನಂತರದ ದಿನಗಳಲ್ಲಿ ಮದನಪಲ್ಲಿಯ ಪರಿಸರದಲ್ಲಿಲ ಈ ಗೀತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದರು . ಅದಕ್ಕೆ ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂದು ಶಿರ್ಷಿಕೆ ನೀಡಿದರು.
97. ಸ್ವಾತಂತ್ರ್ಯ ನಂತರ ದೇಶದ ರಾಷ್ಟ್ರಗೀತೆಯನ್ನಾಗಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಯನ್ನು ಆಯ್ಕೆ ಮಾಡಬೇಕೆ ಅಥವಾ ಜನ ಗಣ ಮನ ಗೀತೆಯನ್ನೇ ಎಂಬ ಬಗ್ಗೆ ನಾಯಕರು ಹಲವು ಸುತ್ತಿನ ಚರ್ಚೆ ನಡೆಸಿದರು.
98. 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
99. ಪ್ರಸಕ್ತ ಫುಟ್ಬಾಲ್ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಭಾರತ ಫುಟ್ಬಾಲ್ ತಂಡದ ಸ್ಟ್ರೈಕರ್ ಸುನೀಲ್ ಛೆಟ್ರಿ ಅವರಿಗೆ ಅಖಿಲ ಭಾರತ ಫುಟ್ಬಾಲ್ ಫೇಡರೇಷನ್ ( ಎಐಎಫ್.ಎಫ್ ) ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
100. ಸುನೀಲ್ ಛೆಟ್ರಿ 17 ಅಂತರರಾಷ್ಟ್ರೀಯ ಪಂದ್ಯಗಳಿಂದ 13 ಗೋಲುಗಳನ್ನು ಗಳಿಸಿದ್ದಾರೆ.
101. 2011 ರ ವರ್ಷದಲ್ಲಿ ಭಾರತದ ಫುಟ್ಬಾಲ್ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಗೋಲು ದಾಗಿದೆ.
102. 2011 ರಲ್ಲಿ 20 ಕ್ಲಬ್ ಪಂದ್ಯಗಳನ್ನಾಡಿದ ಛೆಟ್ರಿ 11 ಗೋಲುಗಳನ್ನು ಗಳಿಸಿದ್ದಾರೆ.
103. 2011 ರ ಅರ್ಜುನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಛೆಟ್ರಿ ಇತ್ತಿಚೆಗೆ ಮುಕ್ತಾಯಗೊಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲೂ ಶ್ರೇಷ್ಠ ಆಟಗಾರನೆಂಬ ಪ್ರಶಸ್ತಿ ಪಡೆದಿದ್ದಾರೆ.
104. ಇನ್ಪೋಸಿಸ್ ಬಿಪಿಒ , ಆಸ್ಟ್ರೇಲಿಯಾ ಮೂಲದ ಫೋರ್ಟ್ ಲ್ಯಾಂಡ್ ಗ್ರೂಪ್ ಕಂಪನಿ ಯನ್ನು ಖರೀದಿಸಿದೆ.
105. 1999 ರಲ್ಲಿ ಪೋರ್ಟ್ ಲ್ಯಾಂಡ್ ಗ್ರೂಪ್ ಸ್ಥಾಪನೆಯಾಗಿತ್ತು. ಇದರ ಮುಖ್ಯ ಕಛೇರಿ ಸಿಡ್ನಿಯಲ್ಲಿದೆ. ಮೆಲ್ಲೋರ್ನ್ , ಬ್ರಿಸ್ಬೇನ್ ಪರ್ತ್ ನಲ್ಲಿ ಕಛೇರಿಯನ್ನು ಹೊಂದಿದೆ.
106. ಫೋರ್ಡ್ ಇಂಡಿಯಾ ತನ್ನ ಎಸ್ ಯುವಿ ವಾಹನವನ್ನು ಜನಪ್ರಿಯಗೊಳಿಸಲು ದಿ ಗ್ರೇಟ್ ಫೋರ್ಡ್ ಎಂಡೋವೇರ್ ಡ್ರೈವ್ ಅಭಿಯಾನವನ್ನು ಬೆಂಗಳೂರಿನಲ್ಲಿ ಕೈಗೊಂಡಿದೆ.
107. ಐಎನ್.ಜಿ ವೈಶ್ಯ ಬ್ಯಾಂಕ್ ಇಂಧನ ದಕ್ಷತೆಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿಗಳಿಸಿದೆ.
108. ಮುಲ್ಲಪೆರಿಯಾರ್ ಅಣೆಕಟ್ಟು ಕುರಿತು ಚಿತ್ರಿಸಲಾಗಿರುವ ಡ್ಯಾಮ್ 999 ಚಿತ್ರದ ಮೂರು ಹಾಡುಗಳು ಅತ್ಯುತ್ತಮ ಸೃಜನಶೀಲ ಗೀತೆಗಳ ವರ್ಗದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸ್ಪರ್ದಿಸಿದೆ.
109. 1911 ರ್ಲಲಿ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ .
110. ಏಯೇಜ್ ಟು ಇಂಡಿಯಾ ಕೃತಿಯ ಕರ್ತೃ – ನಿಕೇಟಿನ್
111. ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ ಎಂದು WTO ಸಂಸ್ಥೆಗೆ ಕರೆಯುತ್ತಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ