ಸೋಮವಾರ, ಜನವರಿ 2, 2012

KAS Exam , ಕೆ.ಎ.ಎಸ್.ಪರೀಕ್ಷೆಗೆ ತಯಾರಿ

1. ಹಿಂದುಳಿದ ಜನಾಂಗದ ನಾಯಕ, ಸಮಾಜವಾದಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಸಾರೆಕೊಪ್ಪ ಬಂಗಾರಪ್ಪ (1932-2011) ಅವರು ಡಿ.26ರ ಬೆಳಗಿನ ಜಾವ 12.40ಕ್ಕೆ ತೀರಿಕೊಂಡಿದ್ದಾರೆ.
2. ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
3. ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಅವರಿಗೆ ಸೋತಿದ್ದರು.
4. ಅದಕ್ಕೂ ಮುಂಚೆ ಬಿಜೆಪಿಯ ಆಯನೂರು ಮಂಜಿನಾಥ್ ಅವರಿಗೆ ಸೋತಿದ್ದರು.
5. ಸಾರೇಕೊಪ್ಪ ಬಂಗಾರಪ್ಪ ಕರ್ನಾಟಕ ರಾಜ್ಯದ ೧೨ ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
6. ಎಸ್.ಬಂಗಾರಪ್ಪ ನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು (೧೯೯೦-೧೯೯೨).
7. ಕನ್ನಡ ಪತ್ತೇದಾರಿ ಸಾಹಿತ್ಯ ಬ್ರಹ್ಮ ಎನ್.ನರಸಿಂಹಯ್ಯ ಇನ್ನಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಮರಣ ಶಯ್ಯೆಯಲ್ಲಿದ್ದ ಅವರು ಭಾನುವಾರ(ಡಿ.25) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
8. 1925 ಸೆ.18 ರಂದು ಬೆಂಗಳೂರಿನಲ್ಲಿ ಜನಿಸಿದ ಎನ್ ನರಸಿಂಹಯ್ಯ.
9. 1952 ರಲ್ಲಿ ಎನ್.ನರಸಿಂಹಯ್ಯನವರು ತಮ್ಮ ಪ್ರಥಮ ಪತ್ತೇದಾರಿ ಕಾದಂಬರಿ ಪತ್ತೇದಾರ ಪುರುಷೋತ್ತಮ ಬರೆದರು.
10. ಎನ್.ನರಸಿಂಹಯ್ಯನವರಿಗೆ 1992ರಲ್ಲಿ ದಾವಣಗೆರೆಯಲ್ಲಿ ಜರುಗಿದ 61ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
11. ಅದೇ ವರ್ಷ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು.
12. 1997 ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು.
13. ಎಂಟು ಮರುಮುದ್ರಣಗೊಂಡ ಭಯಂಕರ ಭೈರಾಗಿ ಸೇರಿದಂತೆ ಇವರ ಎಲ್ಲಾ 550ಕ್ಕೂ ಅಧಿಕ ಕಾದಂಬರಿಗಳು ಜನಪ್ರಿಯತೆ ಗಳಿಸಿರುವುದು ವಿಶೇಷ.
14. 1932ರ ಅಕ್ಟೋಬರ್ 26ರಂದು ಶಿವಮೊಗ್ಗ ಜಿಲ್ಲೆಯ ಕುಬತೂರಿನಲ್ಲಿ ದಿವಂಗತ ಕಲಪ್ಲ್ಪ ಮತ್ತು ಕಲಮ್ಲ್ಮ ದಂಪತಿಯ ಪುತ್ರರಾಗಿ ಜನಿಸಿದ ಬಂಗಾರಪ್ಪ.
15. 1985-87ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು 1996ರಲ್ಲಿ 11ನೇ ಲೋಕಸಭೆಗೆ ಆಯ್ಕೆಯಾಗಿದ್ದರು.
16. 1998ರಲ್ಲಿ ಬಿಜೆಪಿಯ ಅಯನೂರು ಮಂಜುನಾಥ್ ವಿರುದ್ಧ ಸೋತಿದ್ದರು.
17. 1999ರಲ್ಲಿ 12ನೇ ಲೋಕಸಭೆಗೆ ಮತ್ತೆ ಆಯ್ಕೆಯಾಗಿದ್ದ ಅವರು 2003ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.
18. 2005ರಲ್ಲಿ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷವನ್ನು ಸೇರಿ ಲೋಕಸಭೆಗೆ ರಾಜೀನಾಮೆ ನೀಡಿದ್ದರು.
19. 2009ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಲೋಕಸಭೆಗೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ಚುನಾವಣೆಗೆ ನಿಂತಿದ್ದರು.
20. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ರಾಘವೇಂದ್ರ ಅವರಿಂದ ಪರಾಜಿತರಾಗಿದ್ದರು.
21. ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ತ್ಯಜಿಸಿ ಜನತಾದಳವನ್ನು ಸೇರಿದ್ದ ಬಂಗಾರಪ್ಪ ತಾವು ಮತ್ತು ದೇವೇಗೌಡರು ರಾಜಕೀಯದಿಂದ ನಿವೃತ್ತರಾಗುವುದೇ ಇಲ್ಲ ಎಂದು ಘೋಷಿಸಿದ್ದರು.
22. 1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು.
23. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ.
24. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು ಮೂರನೆ ಬಾರಿ ಸಿಟ್ಟಾಗಿದ್ದರು.
25. 1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ.
26. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ` ಎಂದು ತಿರುಗಿಬಿದ್ದಿದ್ದರು.
27. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು,
28. 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
29. 1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು.
30. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು.
31. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು.
32. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ.
33. ಪಾಕಿಸ್ತಾನದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ `ಮೆಮೊಗೇಟ್` ವಿವಾದ ಪ್ರಭಾವಿ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಮತ್ತು ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹಮ್ಮದ್ ಶುಜಾ ಪಾಷಾ ಅವರ ಸ್ಥಾನಕ್ಕೆ ಕುತ್ತು ತರುವಂತಿದೆ.
34. `ಮೆಮೊಗೇಟ್` ವಿವಾದಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಅವರ ಆಪ್ತ ಮತ್ತು ರಕ್ಷಣಾ ಕಾರ್ಯದರ್ಶಿಯಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಖಲಿದ್ ನಯೀಮ್ ಲೋಧಿ ಅವರಿಗೆ ಸರ್ಕಾರ ಷೋಕಾಸ್ ನೋಟಿಸ್ ನೀಡಿದೆ.
35. ರಕ್ಷಣಾ ಸಚಿವರ ಅನುಮತಿ ಪಡೆಯದೆ `ಮೆಮೊಗೇಟ್` ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿರುವ ಲೋಧಿ ಅವರಿಗೆ ಕಳೆದ ವಾರ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
36. ಹಿಂದೂಗಳ ಪವಿತ್ರ ಗ್ರಂಥ `ಭಗವದ್ಗೀತೆ~ಯನ್ನು ನಿಷೇಧಿಸಲು ಕೋರಿ ಸಲ್ಲಿಸಲಾದ ವಿವಾದಿತ ಅರ್ಜಿಯನ್ನು ಬುಧವಾರ ಸೈಬೀರಿಯಾ ಟಾಮ್ಸ್ಕ ಪಟ್ಟಣದ ನ್ಯಾಯಾಲಯ ವಜಾ ಮಾಡಿದೆ.
37. ಕ್ರಿಸ್ಟೊಫರ್ ಕೋಲಂಬಸ್ ಅಮೆರಿಕ ಕಂಡುಹಿಡಿದದ್ದು ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬಹು ಮುಖ್ಯ ಘಟನೆ.
38. ಕೋಲಂಬಸ್ ಮತ್ತು ಅವರ ತಂಡದವರು ಚಾರಿತ್ರಿಕ ಹಾಗೂ ಸಾಹಸಮಯ ಯಾತ್ರೆಯನ್ನು ಪೂರೈಸಿ 1492ರಲ್ಲಿ ಹಿಂತಿರುಗಿದ ವೇಳೆ `ಸಿಫಿಲಿಸ್` ರೋಗ ಹರಡುವಿಕೆಗೂ ಕಾರಣರಾದರು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
39. ಟ್ರೆಪೊನಿಮಾ ಪಲ್ಲಿಡಮ್` ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ಕಾಯಿಲೆಗೆ ಔಷಧ ಕಂಡುಹಿಡಿಯಲಾಗಿದ್ದರೂ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಹೃದಯ, ಮಿದುಳು, ಕಣ್ಣು ಮತ್ತು ಮೂಳೆಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
40. 1495ರಲ್ಲಿ 8 ನೇ ಚಾರ್ಲ್ಸ್ ಸೇನೆಯಲ್ಲಿ ಈ ಸಾಂಕ್ರಾಮಿಕ ರೋಗ ಮೊದಲು ಕಾಣಿಸಿಕೊಂಡಿತ್ತು.
41. `ಕೋಲಂಬಿಯನ್ ಥಿಯರಿ ಆಫ್ ಸಿಫಿಲಸ್` ಎಂದೇ ಹೆಸರಾದ ಈ ಸಿದ್ಧಾಂತವನ್ನು ಆರಂಭದಲ್ಲಿ ನಾನು ಗೇಲಿ ಮಾಡಿದ್ದೆ. ಆದರೆ ಹಲವಾರು ಸಂಶೋಧನೆಗಳು ಇದನ್ನು ನಿಜವೆಂದು ಸಾಬೀತುಪಡಿಸಿವೆ` ಎಂಬ ಜಾರ್ಜ್ ಹೇಳಿಕೆಯನ್ನು `ಲೈವ್‌ಸೈನ್ಸ್` ಉಲ್ಲೇಖಿಸಿದೆ.
42. ಕನ್ನಡದ ಆದಿಕವಿ ಪಂಪನಿಗೊಂದು ಸ್ಮಾರಕ ಭವನ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ನಿರ್ಮಾಣಗೊಂಡಿದ್ದು
43. ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಸ್ಪರ್ಧೆಯಲ್ಲಿರುವ ಡೇವ್ ವಾಟ್ಮೋರ್ ಐಪಿಎಲ್ ತಂಡ ಕೋಲ್ಕತ್ತ ನೈಟ್ ರೈಡರ್ಸ್‌ನ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.
44. ವಾಟ್ಮೋರ್ ಕಳೆದ ಎರಡು ಋತುಗಳಲ್ಲಿ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
45. ಇವರ ಮಾರ್ಗದರ್ಶನದಲ್ಲಿ ಸುಧಾರಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಕೋಲ್ಕತ್ತ ತಂಡ ಕಳೆದ ಋತುವಿನ ಟೂರ್ನಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿತ್ತು.
46. ಅದೇ ರೀತಿ ಚಾಂಪಿಯನ್ಸ್ ಲೀಗ್ ಟ್ವೆಂಟಿ- 20 ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿತ್ತು.
47. ವಾಟ್ಮೋರ್ ಹುದ್ದೆ ತ್ಯಜಿಸಿರುವುದನ್ನು ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಖಚಿತಪಡಿಸಿದ್ದಾರೆ
48. ವಾಟ್ಮೋರ್ ಪಾಕ್ ರಾಷ್ಟ್ರೀಯ ತಂಡದ ಕೋಚ್ ಹುದ್ದೆ ಅಲಂಕರಿಸಲು ಉತ್ಸುಕರಾಗಿದ್ದಾರೆ. ಈ ಕುರಿತು ಜನವರಿ ಎರಡನೇ ವಾರದಲ್ಲಿ ಮಾತುಕತೆಗೆ ಆಗಮಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರಿಗೆ ಸೂಚಿಸಿದೆ.
49. 1988ರಲ್ಲಿ ಮಾಡಿಕೊಂಡ ಈ ಒಪ್ಪಂದದಂತೆ ಪ್ರತಿ ವರ್ಷವೂ ಉಭಯ ದೇಶಗಳೂ ತಮ್ಮಲ್ಲಿರುವ ಅಣು ಸ್ಥಾವರಗಳ ಪಟ್ಟಿ ವಿನಿಯಮ ಮಾಡಿಕೊಳ್ಳುತ್ತವೆ.
50. ಪಾಕಿಸ್ತಾನವು ತನ್ನ ದೇಶದ ಅಣು ಸ್ಥಾವರಗಳ ಪಟ್ಟಿಯನ್ನು ಭಾನುವಾರ ಬೆಳಿಗ್ಗೆ 11.30 ಕ್ಕೆ ವಿದೇಶಾಂಗ ಕಚೇರಿಯಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗೆ ನೀಡಿತು ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
51. ಭಾರತ ಕೂಡ ತನ್ನ ದೇಶದ ಅಣು ಸ್ಥಾವರಗಳ ಪಟ್ಟಿಯನ್ನು ದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಪಾಕಿಸ್ತಾನದ ಹೈ ಕಮಿಷನ್ ಅಧಿಕಾರಿಗೆ ಮಧ್ಯಾಹ್ನ 12 ಗಂಟೆಗೆ ಸಲ್ಲಿಸಿತು.
52. 1992ರಿಂದಲೂ ಸತತವಾಗಿ ಈ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.ಇನ್ನೊಂದು ಪ್ರತ್ಯೇಕ ಒಪ್ಪಂದದ ಪ್ರಕಾರ ಎರಡೂ ದೇಶಗಳು ಪರಸ್ಪರ ಜೈಲುಗಳಲ್ಲಿ ಇರುವ ಕೈದಿಗಳ ಪಟ್ಟಿಯನ್ನೂ ವಿನಿಮಯ ಮಾಡಿಕೊಂಡಿವೆ.
53. 2008ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ.
54. ಕಮ್ಯುನಿಸ್ಟ್ ದೇಶವಾಗಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಇಲ್ ಇನ್ನಿಲ್ಲ
55. ಅವರ ಎರಡನೆಯ ಮಗ ಇಪ್ಪತ್ತೆಂಟು ವರ್ಷದ ಕಿಮ್ ಜಾಂಗ್ ಉನ್ ದೇಶದ ಹೊಸ ನಾಯಕರಾಗಿ ಅಧಿಕಾರ ವಹಿಸಿಕೊಂಡಿರುವುದು
56. ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ಇನ್ಫೋಸಿಸ್‌ನ ಹೊರಗುತ್ತಿಗೆ (ಬಿಪಿಒ) ವಿಭಾಗವು, ಆಸ್ಟ್ರೇಲಿಯಾ ಮೂಲದ ಪೋರ್ಟ್‌ಲ್ಯಾಂಡ್ ಗ್ರೂಪ್ ಅನ್ನು 3.7 ಕೋಟಿ ಡಾಲರ್‌ಗಳಿಗೆ (ರೂ. 195.44 ಕೋಟಿ) ಸ್ವಾಧೀನಪಡಿಸಿಕೊಳ್ಳಲಿದೆ.
57. ಈ ಸ್ವಾಧೀನ ಪ್ರಕ್ರಿಯೆ 2012ರ ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು `ಇನ್ಫೋಸಿಸ್ ಬಿಪಿಒ`ದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸ್ವಾಮಿ ಸ್ವಾಮಿನಾಥನ್ ತಿಳಿಸಿದ್ದಾರೆ.
58. ಸಿಡ್ನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪೋರ್ಟ್‌ಲ್ಯಾಂಡ್ ಗ್ರೂಪ್, ಮೆಲ್ಬರ್ನ್, ಬ್ರಿಸ್ಬೇನ್ ಮತ್ತು ಪರ್ತ್‌ಗಳಲ್ಲಿ ಕಚೇರಿ ಹೊಂದಿದ್ದು, 113 ತಂತ್ರಜ್ಞರನ್ನು ಒಳಗೊಂಡಿದೆ.
59. `ಇನ್ಫೋಸಿಸ್ ಬಿಪಿಒ`ದ ಮೂರನೇ ಸ್ವಾಧೀನ ಯತ್ನ ಇದಾಗಿದೆ.
60. 2007ರಲ್ಲಿ ಡೆನ್ಮಾರ್ಕ್‌ನ ಗ್ರಾಹಕ ಸರಕುಗಳ ದೈತ್ಯ ಸಂಸ್ಥೆ ಫಿಲಿಪ್ಸ್ ಜತೆ 7 ವರ್ಷಗಳ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ಒಪ್ಪಂದದ ಅನ್ವಯ, ಭಾರತ, ಪೋಲಂಡ್ ಮತ್ತು ಥಾಯ್ಲೆಂಡ್‌ನಲ್ಲಿನ ಫಿಲಿಪ್ಸ್‌ನ ಹೊರಗುತ್ತಿಗೆ ಕೇಂದ್ರಗಳನ್ನು ಸ್ವಾಧೀನಪಡಿಸಿಕೊಂಡಿತ್ತು.
61. 2009ರಲ್ಲಿ ಅಟ್ಲಾಂಟಾ ಮೂಲದ ಮ್ಯಾಕ್‌ಮಿಷ್ ಸಿಸ್ಟಮ್ಸ ಅನ್ನು 38 ದಶಲಕ್ಷ ಡಾಲರ್‌ಗಳಿಗೆ (ಅಂದಾಜು ರೂ.180 ಕೋಟಿಗಳಿಗೆ) ಸ್ವಾಧೀನಪಡಿಸಿಕೊಂಡಿತ್ತು.
62. ವಿಜಯ್ ಮುಂಜಾಲ್ ನೇತೃತ್ವದ ಹೀರೊ ಇಕೊ ಸಂಸ್ಥೆಯು, ಬ್ರಿಟನ್ ಮೂಲದ ಅಲ್ಟ್ರಾ ಮೋಟಾರ್ಸ್ ಅನ್ನು ಖರೀದಿಸಿದೆ.
63. ಹೀರೊ ಎಲೆಕ್ಟ್ರಿಕ್, ಹೀರೊ ಎಕ್ಸ್‌ಪೋರ್ಟ್ಸ್, ಮೆಡಿವಾ, ವಿನ್ ಮತ್ತು ಹೀರೊ ಇಕೊಟೆಕ್ ಸಂಸ್ಥೆಗಳೆಲ್ಲ ಸೇರಿಕೊಂಡು `ಹೀರೊ ಇಕೊ` ಸಂಸ್ಥೆ ರಚಿಸಲಾಗಿದೆ.
64. ಜನವರಿ 3 ರಿಂದ ಒಡಿಶಾದ ಭುವನೇಶ್ವರದಲ್ಲಿ ಆರಂಭವಾಗಲಿರುವ 99ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ಸಿನ ವಿಷಯ “ವಿಜ್ಞಾನದಲ್ಲಿ ಮಹಿಳೆ; ಮಹಿಳೆಗಾಗಿ ವಿಜ್ಞಾನ”.
65. ಆಲ್-ಇಂಡಿಯಾ ಸೈನ್ಸ್ ಕಾಂಗ್ರೆಸ್ಸಿನ ಪ್ರಸಕ್ತ ಸಾಲಿನ ಅಧ್ಯಕ್ಷರೂ ಮಹಿಳೆ; ಜೊತೆಗೆ ಈ ಸ್ಥಾನದ ಗೌರವವನ್ನು ಪಡೆದ ಮೊಟ್ಟಮೊದಲ ಕನ್ನಡತಿ ಡಾ. ಗೀತಾ ಬಾಲಿ, ಅವರು ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ.
66. ಆಲ್ ಇಂಡಿಯಾ ಸೈನ್ಸ್ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಡಾ. ಗೀತಾ ಬಾಲಿ ನಾಲ್ಕನೆಯ ಮಹಿಳಾ ಅಧ್ಯಕ್ಷೆ. ಇದಕ್ಕೂ ಮುನ್ನ ಡಾ. ಅಶಿಮಾ ಚಟರ್ಜಿ, ಡಾ. ಅರ್ಚನಾ ಶರ್ಮಾ, ಡಾ. ಮಂಜು ಶರ್ಮಾ ಅಧ್ಯಕ್ಷರಾಗಿದ್ದಾರೆ.
67. ಸದ್ಯದಲ್ಲೇ ಶತಮಾನದ ಇತಿಹಾಸ ಹೊಂದಲಿರುವ 1913 ರಲ್ಲಿ ಸ್ಥಾಪಿತವಾದ ಆಲ್ ಇಂಡಿಯಾ ಸೈನ್ಸ್ ಕಾಂಗ್ರೆಸ್ ಕೇವಲ ನಾಲ್ಕು ಜನ ಮಹಿಳಾ ಅಧ್ಯಕ್ಷರನ್ನು ಕಂಡಿದೆ ಎಂದರೆ, ವಿಜ್ಞಾನದಲ್ಲಿಯೂ ಮಹಿಳಾ ಪರ ಚಿಂತನೆಯ ಅವಶ್ಯಕತೆ ಇದೆಯೇ?
68. 98 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಹಿಳಾ ವಿಜ್ಞಾನ ಕಾಂಗ್ರೆಸ್ ಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ.
69. ಈ ವರ್ಷದ ಧ್ಯೇಯವಾಕ್ಯ “Science and Technology for inclusive innovation- Role of women” ಎಂದು.
70. ನಮ್ಮಲ್ಲಿ 2011ರ ಜನಗಣತಿಯ ಪ್ರಕಾರ ಪ್ರತಿ ಸಾವಿರ ಗಂಡುಮಕ್ಕಳಿಗೆ 914ಹೆಣ್ಣು ಮಕ್ಕಳಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಈ ಅನುಪಾತ ಬೇರೆ ಬೇರೆಯಾಗಿದೆ.
71. ಆದರೆ ಅಧ್ಯಯನಗಳ ಪ್ರಕಾರ ಪ್ರತಿ ಸಾವಿರ ಪುರುಷರಿಗೆ ಸರಾಸರಿ 1015 ಮಹಿಳೆಯರು ಇರಬೇಕು.
72. ಭಾರತೀಯ ವಿಜ್ಞಾನ ಮಂದಿರ (ಬೆಂಗಳೂರು)ದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಶೇಕಡಾ 20 ಕ್ಕಿಂತ ಕಡಿಮೆ.
73. ಕೆಳದರ್ಜೆಯ ಆಡಳಿತಾತ್ಮಕ ಕಾರ್ಯಾಲಯಗಳಲ್ಲಿ ಮಹಿಳೆಯರು ಶೇಕಡಾ 17.6 ರಷ್ಟಿದ್ದರೆ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಶೇಕಡಾ 7.18 ರಷ್ಟು ಮಾತ್ರ.
74. ಡಾ. ಅಬ್ದುಲ್ ಕಲಾಮ್‌ರವರು ಭಾರತದ ರಾಷ್ಟ್ರಪತಿ ಆದಾಗ, ಅವರು `ಇಂಡಿಯಾ - 2020` ಎಂಬ ಒಂದು ಅದ್ಭುತ ಕಲ್ಪನೆಯನ್ನು ಕೊಟ್ಟಿದ್ದರು.
75. ಯಾವುದೇ ಸಂಸ್ಥೆಯ ಲೆಕ್ಕ ಪತ್ರ ದಾಖಲೆಗಳನ್ನು ತಯಾರು ಮಾಡಲು ಅನುಸರಿಸಬೇಕಾದ ತತ್ವಗಳ ಸಂಕಲನ ಐಎಫ್‌ಆರ್‌ಎಸ್ ಎಂದು ವ್ಯಾಖ್ಯಾನಿಸಬಹುದು.
76. ಅಂತರರಾಷ್ಟ್ರೀಯ ಲೆಕ್ಕಪತ್ರ ಮಂಡಳಿ (ಇಂಟರ್‌ನ್ಯಾಷನಲ್ ಅಕೌಂಟಿಂಗ್ ಬೋರ್ಡ್, ಐಎಎಸ್‌ಬಿ) ಈ ತತ್ವಗಳನ್ನು ರೂಪಿಸಿದೆ. ಇದು ವಿಶ್ವ ಮಾನ್ಯವಾದ ತತ್ವವಾಗಿದೆ.
77. 2015ರಿಂದ ಐಎಫ್‌ಆರ್‌ಎಸ್ ಭಾರತದಲ್ಲಿ ಜಾರಿಗೆ ಬರಲಿದೆ.
78. 2015ರ ನಂತರ ಎಲ್ಲ ಲೆಕ್ಕ- ಪತ್ರಗಳನ್ನು ಈ ತತ್ವದ ಆಧಾರದ ಮೇಲೆಯೇ ಸಿದ್ಧಪಡಿಸಬೇಕಾಗುತ್ತದೆ. ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಂಪೆನಿಗಳು ಈಗಾಗಲೇ ಐಎಫ್‌ಆರ್‌ಎಸ್ ಆಧಾರದ ಮೇಲೆಯೇ ಲೆಕ್ಕ ಪತ್ರಗಳನ್ನು ತಯಾರು ಮಾಡುತ್ತಿವೆ ಎಂಬುದು ಗಮನಾರ್ಹ.
79. ಬದಲಾದ ಈ ವ್ಯವಸ್ಥೆ 2011ರಿಂದ ಜಾರಿಯಾಗಿದ್ದು, ರೈಲ್ವೆ ಇಲಾಖೆಯಲ್ಲಿ ತೆರವಾಗುವ `ಸಿ` ಮತ್ತು `ಡಿ` ವರ್ಗದ ಸಾವಿರಾರು ಹುದ್ದೆಗಳ ಭರ್ತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ತಮಗೆ ಇಷ್ಟವಾದ ಭಾಷೆಯಲ್ಲಿ ಬರೆಯಬಹುದಾಗಿದೆ.
80. ನೈರುತ್ಯ ರೈಲ್ವೆ ವಲಯ ಸೇರಿದಂತೆ ದೇಶದಲ್ಲಿ ಸುಮಾರು 20 ರೈಲ್ವೆ ವಲಯಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ