ಶುಕ್ರವಾರ, ಡಿಸೆಂಬರ್ 16, 2011

ಪಿ.ಡಿ.ಓ. ಕೆ.ಎ.ಸ್ ಪರೀಕ್ಷೆಗೆ 2011 ರ ಪ್ರಚಲಿತ ಘಟನೆಗಳು

1. 11 ನೇ ಹಣಕಾಸು ಆಯೋಗ 2000 – 01 ರಿಂದ 2004 – 05 ರವರೆಗೆ
2. 11 ನೇ ಹಣಕಾಸು ಆಯೋಗವು ಗ್ರಾಮ ಪಂಚಾಯಿತಿ , ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ತಲಾ ಶೇ.70:20:10 ರ ಅನುಪಾತದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
3. 11 ನೇ ಹಣಕಾಸು ಆಯೋಗವು ರಾಷ್ಟ್ರೀಯ ಅಂಕಿ ಶಗಳ ಪ್ರಕಾರ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ನಿಗದಿಪಡಿಸಿದ ಒಟ್ಟು ಮೊತ್ತ ರೂ.8000 ಕೋಟಿ .
4. 11 ನೇ ಹಣಕಾಸು ಆಯೋಗವು ಬಿಡುಗಡೆ ಮಾಡಿದ ಅನುದಾದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳು ಬಳಸಿಕೊಂಡಿರುವ ಮೊತ್ತ ರೂ.6601.85 ಕೋಟಿ
5. 12 ನೇ ಹಣಕಾಸು ಆಯೋಗದ ಅವಧಿ 2005 ರಿಂದ 2009 ರವರೆಗೆ
6. 12 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ 71040 ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬಿಡುಗಡೆ ಮಾಡಲಾಗಿದೆ.
7. 13 ನೇ ಹಣಕಾಸು ಆಯೋಗದ ಅವಧಿ 2010 – 11 ರಿಂದ 2014 – 15 ರವರೆಗೆ
8. 13 ನೇ ಹಣಕಾಸು ಆಯೋಗವು 5 ವರ್ಷಗಳ ಅವಧಿಗೆ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 87519/- ಕೋಟಿ ರೂಗಳ ಅನುದಾನವನ್ನು ಶಿಫಾರಸ್ಸು ಮಾಡಿದೆ.
9. ಪಾಕಿಸ್ತಾನ ಕ್ರಿಕೆಟ್ ಮತ್ತೊಮ್ಮೆ ತಲೆತಗ್ಗಿಸಬೇಕಾಗಿದೆ. ಸ್ಪಾಟ್ ಫಿಕ್ಸಿಂಗ್ ಆಪಾದನೆ ಹೊತ್ತಿದ್ದ ಟೆಸ್ಟ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ ಹಾಗೂ ಮಧ್ಯಮ ವೇಗದ ಬೌಲರ್ ಮೊಹಮದ್ ಆಸಿಫ್ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ.
10. ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಕೇರಳ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಗೊಂಡಿದ್ದಾರೆ. ( 01/11/2011 )
11. ಪ್ರಪಂಚದ ಜನಸಂಖ್ಯೆ 1804 ರಲ್ಲಿ 1 ಶತಕೋಟಿ ಇತ್ತು
12. ಪ್ರಪಂಚದ ಜನಸಂಖ್ಯೆ 1927 ರಲ್ಲಿ 2 ಶತಕೋಟಿ .
13. ಪ್ರಪಂಚದ ಜನಸಂಖ್ಯೆ 1959 ರಲ್ಲಿ 3 ಶತಕೋಟಿ
14. ಪ್ರಪಂಚದ ಜನಸಂಖ್ಯೆ 1974 ರಲ್ಲಿ 4 ಶತಕೋಟಿ
15. ಪ್ರಪಂಚದ ಜನಸಂಖ್ಯೆ 1987 ರಲ್ಲಿ 5 ಶತಕೋಟಿ
16. ಪ್ರಪಂಚದ ಜನಸಂಖ್ಯೆ 1999 ರಲ್ಲಿ 6 ಶತಕೋಟಿ
17. ಪ್ರಪಂಚದ ಜನಸಂಖ್ಯೆ 2011 ರಲ್ಲಿ 7 ಶತಕೋಟಿ ( ದಿನಾಂಕ/01/11/2011)
18. ಜಗತ್ತಿನ 700 ನೇ ಕೋಟು ಮಗುವಾಗಿ ಹೆಣ್ಣು ಮಗು ಜನಿಸಿದೆ.
19. ಜಗತ್ತಿನ 500 ನೇ ಕೋಟಿಯ ಮಗು ಕ್ರೋಷಿಯಾದ ಮಾಟೆಜ್ ಗಾಸ್ಟರ್
20. ಜಗತ್ತಿನ 600 ನೇ ಕೋಟಿಯ ಮಗು ಅದ್ನಾನ್ ನೆವಿಕ್ .
21. ಪ್ರಪಂಚದಲ್ಲಿ ಪ್ರತಿ ಸೆಕೆಂಡ್ ಗೆ 2 ಮಗುವಿನ ಜನನವಾಗುತ್ತದೆ.
22. ಪ್ರತಿ ನಿಮಿಷಕ್ಕೆ 51 ಶಿಶುಗಳು ಜನಿಸುತ್ತದೆ. ಅದರಲ್ಲಿ 11 ಶಿಶುಗಳು ಉತ್ತರ ಪ್ರದೇಶ ಒಂದರಲ್ಲೆ ಹುಟ್ಟುತ್ತಿವೆ.
23. ಭಾರತದಲ್ಲಿ ಸಾವಿರ ಬಾಲಕರಿಗೆ 893 ಮಂದಿ ಬಾಲಕಿಯರಿದ್ದಾರೆ.
24. 2025 ರ ವೇಳೆಗೆ ಭಾರತದ ಜನಸಂಖ್ಯೆ ಸುಮಾರು 150 ಕೋಟಿ ತಲುಪಲಿದ್ದು , ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ.
25. ಜಾಗತಿಕವಾಗಿ 15 ಲಕ್ಷ ಮಕ್ಕಳು ಪಾಲಕರಿಲ್ಲದೆ ಜೀವನ ಕಳೆಯುತ್ತಿದ್ದಾರೆ.
26. ಜಗತ್ತಿನಾದ್ಯಂತ 9.25 ಲಕ್ಷ ಜನರು ಹಸಿವೆಯಿಂದ ಒದ್ದಾಡುತ್ತಿದ್ದಾರೆ.
27. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30 ತಿಂಗಳು , ಬುಕ್ಕಿ ಮಜೀದ್ ಗೆ 32 ತಿಂಗಳು, ಆಸಿಫ್ ಗೆ 12 ತಿಂಗಳು ಹಾಗೂ ಅಮೀರ್ ಗೆ 6 ತಿಂಗಳು ಶಿಕ್ಷೆಯನ್ನ ಲಂಡನ್ ನ ಸ್ಥಳಿಯ ನ್ಯಾಯಾಲಯ ಶಿಕ್ಷೆ ವಿಧಿಸಿತು.
28. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30.937 , ಆಸಿಫ್ ಗೆ 8120 ಹಾಗೂ ಅಮೀರ್ ಗೆ 9,389 ಫೌಂಡ್ ಹಣವನ್ನ ನ್ಯಾಯಾಲಯದ ವೆಚ್ಚ ಭರಿಸಬೇಕೆಂದು ಆದೇಶಿಸಿದೆ.
29. ಸ್ಪಾಟ್ ಫಿಕ್ಸಿಂಗ್ ಹಗರಣದ ಕುಟುಕು ಕಾರ್ಯಾಚರಣೆ ಮಾಡಿದ ನ್ಯೂಸ್ ಆಫ್ ವರ್ಲ್ಡ್ ನೀಡಿದ್ದ 77,500 ಫೌಂಡ್ ಹಣದಲ್ಲಿ ಅಮೀರ್ ಗೆ 2,500 , ಸಲ್ಮಾನ್ ಭಟ್ ಗೆ 10,000 ಹಾಗೂ ಆಸಿಫ್ ಗೆ 65,000 ಫೌಂಡ್ ನೀಡಿದ್ದಾಗಿ ಮಜೀದ್ ಒಪ್ಪಿಕೊಂಡಿದ್ದಾನೆ,
30. ಭಾರತದ ನಕಾಶೆಯಲ್ಲಿ ಆಗಿರುವ ಬೃಹತ್ ಪ್ರಮಾದವನ್ನು ಗಮನಕ್ಕೆ ತಂದ ಪತ್ರಕರ್ತರೊಬ್ಬರನ್ನು ಷಟ್ ಅಪ್ ಎಂದು ಚೀನಾದ ರಾಯಭಾರಿ ಜಂಗ್ ಯಾನ್ ಗದರಿಸಿದವರು.
31. ಸಚಿನ್ ತೆಂಡೂಲ್ಕರ್ 182 ಪಂದ್ಯಗಳಿಂದ 15048 ರನ್ ನ್ನ 56.19 ಸರಾಸರಿಯಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ ಯಾರು ಮಾಡ ದಾಖಲೆಯನ್ನ ನಿರ್ಮಿಸಿದ್ದಾರೆ.
32. ಸಚಿನ್ ತೆಂಡೂಲ್ಕರ್ ನಂತರದ ಸ್ಥಾನವನ್ನ ಭಾರತದವರೇ ಆದ ರಾಹುಲ್ ದ್ರಾವಿಡ್ 158 ಪಂದ್ಯಗಳಿಂದ 12,859 ರನ್ ಗಳಿಸಿದ್ದಾರೆ.
33. 2009 ಜೂನ್ 25 ರಂದು ಅನಿರೀಕ್ಷಿತವಾಗಿ ಮೃತಪಟ್ಟ ಸುಪ್ರಸಿದ್ಧ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರನ್ನು ಅವರ ಖಾಸಗಿ ವೈದ್ಯ ಕಾನ್ರಾಡ್ ಮುರ್ರೇ ಅವರೇ ಹತ್ಯೆ ಮಾಡಿರುವುದಾಗಿ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
34. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
35. ಮಾಲ್ಡಿವ್ಸ್ ನ ಅಡ್ಡು ದ್ವೀಪದಲ್ಲಿ 17 ನೇ ಸಾರ್ಕ್ ಶೃಂಗ ಸಭೆ ನಡೆಯಲಿದೆ.
36. ಖ್ಯಾತ ಕ್ರೀಡಾ ಬರಹಗಾರ , ಇಂಗ್ಲೆಂಡ್ ನ ಕೌಂಟಿ ತಂಡದ ಸಾಮರ್ಸೆಟ್ ನ ಮಾಜಿ ನಾಯಕ ಪೀಟರ್ ರೋಬಕ್ ನ್ಯೂಲೆಂಡ್ಸ್ ಹೋಟೇಲ್ ನ ಆರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
37. ಗುಜರಾತ್‌ನ ವಿವಾದಿತ ಇಶ್ರತ್ ಜಹಾನ್ ಪೊಲೀಸ್ ಎನ್‌ಕೌಂಟರ್ ಪ್ರಕರಣವನ್ನು `ನಕಲಿ~ ಎಂದು ಹೇಳಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ತನ್ನ ವರದಿಯಲ್ಲಿ ತಿಳಿಸಿದೆ.
38. ಪ್ರಕರಣದ ತನಿಖೆಗೆ ಹೈಕೋರ್ಟ್ ನೇಮಕ ಮಾಡಿದ್ದ ಆರ್.ಆರ್.ವರ್ಮ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡ ಇದೇ 18ರಂದು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ. ಪೊಲೀಸ್ ದಾಖಲೆಗಳ ಪ್ರಕಾರ ಎನ್‌ಕೌಂಟರ್ ನಡೆದಿದೆ ಎನ್ನಲಾದ 2004, ಜೂನ್ 15ಕ್ಕಿಂತ ಮೊದಲೇ ಈ ನಾಲ್ವರನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
39. ಆದಾಯ ಮೂಲಕ್ಕಿಂತ ಸುಮಾರು 66ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಎದುರಿಸುತ್ತಿದ್ದಾರೆ.
40. 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ 75 ಜಿಲ್ಲೆಗಳನ್ನು ಹೊಂದಿರುವ ದೊಡ್ಡ ರಾಜ್ಯ.
41. ಉತ್ತರ ಪ್ರದೇಶದಲ್ಲಿ 75 ಜಿಲ್ಲೆ 300 ತಾಲ್ಲೂಕುಗಳು ಇದೆ. 80 ಸಂಸದರು ಹಗೂ 403 ರಾಜ್ಯ ಶಾಸನ ಸಭೆ ಹೊಂದಿದೆ.
42. ಎನ್.ಸಿ.ಎಪ್ – 2005 ಕಲಿಕೆಯ ಮಟ್ಟದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಹೆಚ್ಚಿನ ವ್ಯತ್ಯಾಸ ಇರಬಾರದು ಎಂಬ ಉದ್ದೇಶದಿಂದ ಕೇಂದ್ರದ ಅಧೀನದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ರಾಷ್ಟ್ರೀಯ ಪಠ್ಯ ಕ್ರಮ ಮಾರ್ಗಸೂಚಿ ಪ್ರಕಟಿಸಿದೆ.
43. ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿ ಅನ್ವಯ ಮುಂದಿನ ಶೈಕ್ಷಣಿಕ ವರ್ಷದಲ್ಲಿ ( 2011 – 13 ) 5 ಹಾಗೂ 8 ನೇ ತರಗತಿಯ ಪಠ್ಯಪುಸ್ತಕ ಬದಲಾವಣೆ ಮಾಡಲು ರಾಜ್ಯ ಸರ್ಕಾರದ ಸಿದ್ಧತೆ ಮಾಡಿಕೊಂಡಿದೆ.
44. ಗೋಕಾಕ್ ಜಲಪಾತದಲ್ಲಿ ಜಲವಿದ್ಯುತ್ 1887 ರ ಅಕ್ಟೋಬರ್ 5 ರಂದು ಇದು ಏಷ್ಯಾ ಖಂಡದಲ್ಲಿಯೇ ಪ್ರಥಮ ಜಲವಿದ್ಯುತ್ ತಯಾರಿಕಾ ಸ್ಥಾವರ .
45. ಮೆಮೊಗೇಟ್` ವಿವಾದಕ್ಕೆ ಕಾರಣವಾದ ಪತ್ರ ಬಯಲಾಗಲು ಮನ್ಸೂರ್ ಇಜಾಜ್ ಕಾರಣ ಎನ್ನಲಾಗಿದೆ.
46. ಅಮೆರಿಕದಲ್ಲಿ ರಾಯಭಾರಿ ಆಗಿದ್ದ ಹುಸೇನ್ ಹಖಾನಿ ಮತ್ತು ಪಾಕ್ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾಜ್ ಅವರನ್ನೂ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ
47. ಪಾಕಿಸ್ತಾನದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದಿ`ಮೆಮೊಗೇಟ್`ವಿವಾದ ಅಮೆರಿಕದ ರಾಯಭಾರಿಯಾಗಿದ್ದ ಹುಸೇನ್ ಹಖಾನಿ ಅವರ ಸ್ಥಾನಕ್ಕೆ ಕುತ್ತು ತಂದದ್ದು, ಮಾಜಿ ಸಚಿವೆ ಶೆರ್ರಿ ರೆಹಮಾನ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.
48. ಅಲ್ ಖೈದಾ ಪಾತಕಿ ಒಸಾಮ ಬಿನ್ ಲಾಡೆನ್ ಮೇ 2ರಂದು ಹತನಾದ ನಂತರ ರಾಷ್ಟ್ರದಲ್ಲಿ ಸಂಭಾವ್ಯ ಕ್ಷಿಪ್ರ ಸೇನಾ ಕ್ರಾಂತಿ ತಡೆಯಲು ಪಾಕಿಸ್ತಾನವು ಅಮೆರಿಕದ ನೆರವು ಕೋರಿ ಬರೆದ ಪತ್ರ ಈ ವಿವಾದ ಎಬ್ಬಿಸಿತ್ತು.ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪರವಾಗಿ ಹುಸೇನ್ ಹಖಾನಿ ಈ ಪತ್ರವನ್ನು ಬರೆದಿದ್ದರು ಎಂದು ಆರೋಪಿಸಲಾಗಿತ್ತು.
49. ಶ್ವೇತ ಭವನ ಹಖಾನಿ ಅವರನ್ನು `ವಿಶೇಷ ಆಪ್ತ ಜೊತೆಗಾರ` ಎಂದು ಬಣ್ಣಿಸಿದ್ದು, ಹಖಾನಿ ಅವರ ರಾಜೀನಾಮೆಯನ್ನು `ಪಾಕ್‌ನ ಆಂತರಿಕ ವಿಚಾರ` ಎಂದು ಹೇಳಿದೆ.
50. 2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಐವರು ಕಾರ್ಪೊರೇಟ್ ಪ್ರಮುಖರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ.
51. ಯುನಿಟೆಕ್‌ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯಂಕಾ, ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಕಾರ್ಯನಿರ್ವಾಹಕರಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪಾರಾ ಅವರ ಬಿಡುಗಡೆಗೆ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ.
52. ವಿಶ್ವಸಂಸ್ಥೆಯ ಜಂಟಿ ಮೇಲುಸ್ತುವಾರಿ ಘಟಕದ (ಜೆಐಯು) ಏಷ್ಯಾ-ಪೆಸಿಫಿಕ್ ವಲಯದ ಸದಸ್ಯತ್ವಕ್ಕೆ ನಡೆದ ನೇರ ಚುನಾವಣೆಯಲ್ಲಿ ಭಾರತವು ಚೀನಾ ವಿರುದ್ಧ ಮಹತ್ವದ ಜಯ ಸಾಧಿಸಿದೆ.
53. ಟೆಸ್ಟ್ ನಲ್ಲಿನ ಉತ್ತಮ ಪ್ರದರ್ಶನಕ್ಕಾಗಿ (1ನೇ ಅಕ್ಟೋಬರ್ 2010ರಿಂದ 30ನೇ ಸೆಪ್ಟೆಂಬರ್ 2011ರ ಅವಧಿ) ರಾಹುಲ್ ದ್ರಾವಿಡ್ ಅವರನ್ನು ಪಾಲಿ ಉಮ್ರಿಗರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
54. ಜಿನೀವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಗಳಿಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಎ.ಗೋಪಿನಾಥನ್, ನವದೆಹಲಿಯಲ್ಲಿ ಚೀನಾದ ರಾಯಭಾರಿಯಾಗಿರುವ ಝಾಂಗ್ ಯಾನ್ ಅವರನ್ನು ಸೋಲಿಸಿ ಈ ಪ್ರತಿಷ್ಠಿತ ಘಟಕಕ್ಕೆ ಆಯ್ಕೆಯಾಗಿದ್ದಾರೆ.
55. 35 ವರ್ಷಗಳ ಬಳಿಕ ವಿಶ್ವಸಂಸ್ಥೆಯ ಪ್ರಬಲ ಬಾಹ್ಯ ಸಂಸ್ಥೆಯೊಂದರಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು 183 ಮತಗಳಲ್ಲಿ ಗೋಪಿನಾಥ್ ಪರ 106 ಮತಗಳು ಚಲಾವಣೆಗೊಂಡರೆ ಯಾನ್ ಪರ 77 ಮತಗಳು ಬಿದ್ದವು.
56. ಈ ಮುನ್ನ 1968ರಿಂದ 77ರ ವರೆಗೆ ಭಾರತವು ಈ ಘಟಕದಲ್ಲಿ ಕಾರ್ಯನಿರ್ವಹಿಸಿತ್ತು.
57. ಜೆಐಯು ಆಡಳಿತ ಅವಧಿಯು ಐದು ವರ್ಷಗಳಾಗಿದ್ದು, 2013ರ ಜನವರಿ 1ರಿಂದ ಜಾರಿಗೆ ಬರುತ್ತದೆ.
58. ಜೆಐಯು ವಿಶ್ವಸಂಸ್ಥೆಯ ಸ್ವಾಯತ್ತ ಬಾಹ್ಯ ಮೇಲ್ವಿಚಾರಣಾ ಸಂಸ್ಥೆಯಾಗಿದ್ದು, ವಿವಿಧ ಯೋಜನೆಗಳ ಮೌಲ್ಯಮಾಪನ, ಪರಿಶೀಲನೆ ಮತ್ತು ತನಿಖೆ ನಡೆಸುವ ಅಧಿಕಾರ ಹೊಂದಿದೆ. 11 ಪರೀಕ್ಷಕರು ಈ ಘಟಕದಲ್ಲಿ ಇರುತ್ತಾರೆ.
59. ವಿಶ್ವಸಂಸ್ಥೆಯಲ್ಲಿ ಚೀನಾದೊಂದಿಗೆ ನಡೆದ ನೇರ ಚುನಾವಣೆಯಲ್ಲಿ ಭಾರತ ಗೆಲುವು ಪಡೆದದ್ದು ಇದೇ ಮೊದಲಾಗಿರುವುದು ಮತ್ತೊಂದು ವಿಶೇಷ.
60. ಜೆಐಯುಗೆ ಆಯ್ಕೆಯಾದ ದೇಶಗಳ ಅಧಿಕಾರ ಅವಧಿ ಐದು ವರ್ಷಗಳಾದರೂ, ಸಾಮಾನ್ಯವಾಗಿ ಮತ್ತೆ ಐದು ವರ್ಷಗಳ ಕಾಲಕ್ಕೆ ಅದನ್ನು ಮುಂದುವರಿಸುವ ಸಂಪ್ರದಾಯವಿದೆ. ಚೀನಾವು 2002ರಿಂದ ಅಧಿಕಾರದಲ್ಲಿದ್ದು ಅದರ ಅವಧಿ 2012 ಡಿಸೆಂಬರ್‌ಗೆ ಕೊನೆಗೊಳ್ಳುತ್ತದೆ.
61. ಇತ್ತೀಚೆಗಷ್ಟೆ ಯಾನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಚೀನಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಹಂಚಿರುವ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಭೌಗೋಳಿಕಾ ವ್ಯಾಪ್ತಿಯಲ್ಲಿ ತೋರಿಸದೇ ಇರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಝಾಂಗ್ ಯಾನ್ ಪತ್ರಕರ್ತರೊಬ್ಬರಿಗೆ `ಬಾಯ್ಮುಚ್ಚು` ಎಂದು ಬೆದರಿಸಿದ್ದರು.
62. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಪಿನಾಥನ್, 2002ರ ಜನವರಿಯಿಂದ 2005ರ ಸೆಪ್ಟೆಂಬರ್‌ವರೆಗೆ ನ್ಯೂಯಾರ್ಕ್‌ನಲ್ಲಿ ಭಾರತದ ಸಹಾಯಕ ಕಾಯಂ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಆಗಸ್ಟ್ 1997- ಡಿಸೆಂಬರ್ 2001ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಕಾರ್ಯ ನಿರ್ವಹಿಸ್ದ್ದಿದರು.
63. ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹಕ್ಕೆ ನೂತನ ಉಪಾಧ್ಯಕ್ಷರಾಗಿ 43 ವರ್ಷದ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ನಿರ್ದೇಶಕ ಮಂಡಳಿ ಸರ್ವಾನುಮತದಿಂದ ನೇಮಕ ಮಾಡಿದೆ.
64. ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.
65. ಸೈರಸ್, ರತನ್ ಟಾಟಾ ಅವರೊಂದಿಗೆ ಮುಂದಿನ ಒಂದು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2012ರ ಡಿಸೆಂಬರ್ ತಿಂಗಳಲ್ಲಿ ಟಾಟಾ ನಿವೃತ್ತರಾಗುತ್ತಿದ್ದಂತೆ, ಇವರು ಉತ್ತರಾಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
66. ತನ್ನ ವಶದಲ್ಲಿರುವ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಸಂಗ್ರಹಿಸಿರುವ ತೆರಿಗೆ ಹಣವನ್ನು ಪ್ಯಾಲೆಸ್ಟೈನ್ ಆಡಳಿತಕ್ಕೆ ಒಪ್ಪಿಸುವಂತೆ ಇಸ್ರೇಲ್‌ಗೆ ಸಲಹೆ ನೀಡಿರುವ ವಿಶ್ವಸಂಸ್ಥೆ, ಆಕ್ರಮಿತ ಪ್ಯಾಲೆಸ್ಟೈನ್‌ನಲ್ಲಿ ವಸಾಹತೀಕರಣ ಚಟುವಟಿಕೆ ನಿಲ್ಲಿಸುವಂತೆಯೂ ಸೂಚಿಸಿದೆ.
67. ಪ್ಯಾಲೆಸ್ಟೈನ್ ಆಡಳಿತದ ಪರ ಇಸ್ರೇಲ್ ತೆರಿಗೆ ಸಂಗ್ರಹಿಸುತ್ತಿದ್ದು, ಇದು ನ್ಯಾಯಬದ್ಧವಾಗಿ ಪ್ಯಾಲೆಸ್ಟೈನ್ ಆಡಳಿತಕ್ಕೆ ಸಲ್ಲಬೇಕಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಕೋರಿದ್ದಾರೆ.
68. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಕೆನ್ನೆಗೆ ಬಾರಿಸಿದ ಘಟನೆ ಭ್ರಷ್ಟಾಚಾರ ಮತ್ತು ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಯಿಂದ ಕೋಪಗೊಂಡು ತಾನು ಈ ಕೃತ್ಯ ಎಸಗಿದ್ದಾಗಿ ಹಲ್ಲೆ ನಡೆಸಿದ ಹರ್ವಿಂದರ್ ಸಿಂಗ್ ಹೇಳಿದ್ದಾನೆ.
69. `ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿಗರು ಹುಟ್ಟಿದ್ದೇ ವ್ಯವಸ್ಥೆಯನ್ನು ಹಾಳು ಮಾಡಲು ಮತ್ತು ಅವರಿಗೆ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ` ಎಂಬ ಕಂಬಾರರ ಹೇಳಿಕೆ.
70. ಅಪರಿಚಿತ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನ ಹುಂಡಿಗೆ 168 ವಜ್ರದ ಹರಳುಗಳನ್ನು ಅರ್ಪಿಸಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ (ಟಿಟಿಡಿ) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
71. ವಜ್ರಗಳ ಬೆಲೆಯ ಮೌಲ್ಯಮಾಪನಕ್ಕಾಗಿ ಅವುಗಳನ್ನು ತಿರುಪತಿಯಲ್ಲಿರುವ ಟಿಟಿಡಿ ಖಜಾನೆಯ ಆಭರಣ ವಿಭಾಗಕ್ಕೆ ಕಳುಹಿಸಲಾಗಿದೆ. ಅವುಗಳ ಬೆಲೆ ಸುಮಾರು 1.5 ಕೋಟಿ ರೂಪಾಯಿ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
72. ರಾಹುಲ್ ಈ ಹಂತವನ್ನು ಮುಟ್ಟುವ ಹಾದಿಯಲ್ಲಿ 36 ಶತಕ ಹಾಗೂ 62 ಅರ್ಧ ಶತಕ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಇಲ್ಲಿಯವರೆಗೆ 53.31ರ ಸರಾಸರಿಯಲ್ಲಿ 13,061 ರನ್‌ಗಳು ಹರಿದು ಬಂದಿವೆ.
73. ಆಸ್ಟ್ರೇಲಿಯಾ ವಿರುದ್ಧವೇ ಹೆಚ್ಚು ರನ್ (1972) ಗಳಿಸಿದ್ದು. ವಿಂಡೀಸ್ ಎದುರು ಟೆಸ್ಟ್‌ನಲ್ಲಿ ಗಳಿಸಿದ ಒಟ್ಟು ರನ್ 1945.
74. ವರ್ಷದುದ್ದಕ್ಕೂ `ವಾಲ್` ಆಗಿ ನಿಂತು ಭಾರತ ತಂಡವನ್ನು ಕಾಪಾಡಿದ ದ್ರಾವಿಡ್‌ಗೆ 2011ರಲ್ಲಿ ಟೆಸ್ಟ್ ಕ್ರಿಕೆಟ್‌ನ ಸಾವಿರ ರನ್‌ಗಳ ಶ್ರೇಯ.
75. ಈ ವರ್ಷ ಆಡಿದ 11ಟೆಸ್ಟ್‌ಗಳ 20 ಇನಿಂಗ್ಸ್‌ಗಳಲ್ಲಿ ಒಟ್ಟು 1034 ರನ್ ಗಳಿಸಿದ್ದಾರೆ.( ದ್ರಾವಿಡ್ ).
76. ಈಜಿಪ್ತ್ ಕಮಲ್ ಗಂಜೌರಿ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.
77. ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಏಷ್ಯಾದ ಅತಿ ಸೆಕ್ಸಿ ಚೆಲುವೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
78. ಪದಚ್ಯುತ ಕೋಲ್ಕೋತಾ ಹೈಕೋರ್ಟ್ ನ್ಯಾ.ಸೌಮಿತ್ರ ಸೇನ್ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ಘೋಷಿ,ಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
79. 2011ರಲ್ಲಿ ಈ ಅನುಪಾತವು 1000: 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
80. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
81. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
82. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
83. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
84. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
85. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
86. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
87. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
88. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
89. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
90. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
91. ಲಿಬಿಯಾದ ಮಧ್ಯಂತರ ಸರಕಾರದ ಸೇನೆ ಅಕ್ಟೋಬರ್‌ 20ರಂದು ಮುಅಮ್ಮರ್‌ ಗಡಾಫಿ, ಮೋಟಾಸಿಂ ಗಡಾಫಿ ಅವರನ್ನು ಜೀವಂತವಾಗಿ ಸೆರೆ ಹಿಡಿದು ಹತ್ಯೆ ಮಾಡಿತ್ತು.

2 ಕಾಮೆಂಟ್‌ಗಳು: