ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ನೆಲ್ಸನ್ ಮಂಡೇಲಾ ಬರೆದಿದ್ದ ‘ಲಾಂಗ್ ವಾಕ್ ಟು ಫ್ರೀಡಂ’ ಎಂಬ ಕೃತಿ
2. ನೆಲ್ಸನ್ ಮಂಡೇಲರ ವಿಶ್ವದಾದ್ಯಂತ 20 ಭಾಷೆಗಳಲ್ಲಿ ಮಂಗಳವಾರ ಬಿಡುಗಡೆಗೊಂಡ ತಮ್ಮ ಪುಸ್ತಕ ‘ಕಾನ್ವರ್‌ಸೇಷನ್ಸ್ ವಿಥ್ ಮೈಸೆಲ್ಫ್’ ಬಿಡುಗಡೆಗೊಂಡಿದೆ.
3. ಜೈಲು ಶಿಕ್ಷೆ ಅನುಭವಿಸುತ್ತಿರುವ ಪ್ರಸಕ್ತ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸೈಬೊ ತನ್ನ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುವಂತೆ ಪತ್ನಿಗೆ ಮನವಿ ಮಾಡಿಕೊಂಡಿದ್ದಾರೆ.
4. ಬ್ರಿಟನ್, ಭಾರತದ ಅತಿದೊಡ್ಡ ವಾಹನ ರಫ್ತು ಮಾರುಕಟ್ಟೆಯಾಗಿದ್ದು, 2009-10ನೇ ಸಾಲಿನಲ್ಲಿ ದೇಶಿ ಆಟೊಮೊಬೈಲ್ ಉದ್ದಿಮೆಯು 481 ದಶಲಕ್ಷ ಡಾಲರ್‌ಗಳಷ್ಟು (ಅಂದಾಜು ್ಙ 2400 ಕೋಟಿಗಳಷ್ಟು ಮೊತ್ತದ) ವಾಹನಗಳನ್ನು ಮಾರಾಟ ಮಾಡಿದೆ.
5. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ಅವರನ್ನು ಆಸ್ಟ್ರೇಲಿಯಾ ಮಾಧ್ಯಮಗಳು ‘ಶತಮಾನದ ವ್ಯಕ್ತಿ’ ಎಂದು ಬಣ್ಣಿಸಿವೆ.
6. ‘ಸಚಿನ್ ಶ್ರೇಷ್ಠ ಆಟಗಾರ, ಆತನ ಪ್ರತಿಯೊಂದು ಹೊಡೆತಗಳು ಆಸಕ್ತಿ ಯನ್ನು ಕೆರಳಿಸುತ್ತವೆ’ ಎಂದು ಕ್ರೀಡಾ ಅಂಕಣಕಾರ ಪೀಟರ್ ರಾಯಬುಕ್ ಅಭಿಪ್ರಾಯಪಟ್ಟಿದ್ದಾರೆ
7. ‘ಕಹೋ ವಾಟ್ಸ್ ಯೂವರ್ ಐಡಿಯಾ’ ಎನ್ನುವ ಈ ಕಾರ್ಯಕ್ರಮದಲ್ಲಿ ಅಂತರ್‌ಶಾಲಾ ಮಕ್ಕಳ ನಡುವೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.
8. ಜಾಗತಿಕ ಮಟ್ಟದಲ್ಲಿ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ (ಕಡು ಬಡತನ) ಭಾರತಕ್ಕೆ 67ನೇ ಸ್ಥಾನ.
9. ಸಮತೋಲನ ಆಹಾರ ಇಲ್ಲದೇ, ಕಡಿಮೆ ತೂಕ ಹೊಂದಿರುವ ವಿಶ್ವದ ಮಕ್ಕಳಲ್ಲಿ ಶೇ 42ರಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಇದು ಭಾರತೀಯರಲ್ಲಿ ಇರುವ ಹಸಿವಿನ ಪ್ರಮಾಣವನ್ನು ಸೂಚಿಸುತ್ತದೆ.
10. ಅ.16ರಂದು ನಡೆಯುವ ‘ವಿಶ್ವ ಆಹಾರ ದಿನ’ದ ಪ್ರಯುಕ್ತ ಸೋಮವಾರ ಬಿಡುಗಡೆ ಮಾಡಿರುವ ವಿಶ್ವ ಹಸಿವಿನ ರಾಷ್ಟ್ರಗಳು ಪಟ್ಟಿಯಲ್ಲಿ ಈ ಅಂಶಗಳು ಬಹಿರಂಗಗೊಂಡಿವೆ.
11. ಹೊವಾರ್ಡ್ ಜೇಕಬ್‌ಸನ್ಅವರ ‘ದಿ ಫಿಂಕ್ಲರ್ ಕ್ವೆಶ್ಚನ್’ ಚಿತ್ರಪಟಗಳ (ಕಾಮಿಕ್ ನಾವೆಲ್) ಕೃತಿಗೆ ಬುಕರ್ ಪ್ರಶಸ್ತಿ ಸಂದಿದೆ.
12. ಪ್ರಶಸ್ತಿಯ 42 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಚಿತ್ರಪಟಗಳ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ.
13. ಭಾರತ 2011ರ ಜನವರಿ 1ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ 10 ಹಂಗಾಮಿ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಲಿದ್ದು ಈ ಗುಂಪು ಪ್ರತಿ ಎರಡು ವರ್ಷಗಳಿಗೊಮ್ಮೆ ರೊಟೇಷನ್ ಆಧಾರದಲ್ಲಿ ಬದಲಾಗಲಿದೆ.
14. ಭಾರತ ತನ್ನ ಸತತ ಪ್ರಯತ್ನದ ಫಲವಾಗಿ ಹತ್ತೊಂಬತ್ತು ವರ್ಷಗಳ ನಂತರವಾದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಎರಡು ವರ್ಷಗಳ ಅವಧಿಗೆ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
15. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಹೀಗೆ ಆಯ್ಕೆ ಆಗಿರುವುದು ಇದು ಏಳನೇ ಬಾರಿ.
16. ಭದ್ರತಾ ಮಂಡಳಿ ಹಂಗಾಮಿ ಸದಸ್ಯ ರಾಷ್ಟ್ರಗಳಾಗಿ ಜರ್ಮನಿ, ದಕ್ಷಿಣ ಆಫ್ರಿಕಾ, ಕೊಲಂಬಿಯಾ ಹಾಗೂ ಪೋರ್ಚುಗಲ್ ಸಹ ಈಗ ಆಯ್ಕೆಯಾಗಿವೆ.
17. “ಭಾರತಕ್ಕೆ ಭದ್ರತಾ ಮಂಡಳಿಯ ಹಂಗಾಮಿ ಸದಸ್ಯನಾಗಲು ಕೇವಲ 128 ದೇಶಗಳ ಅಥವಾ ಮೂರನೇ ಎರಡರಷ್ಟು ಬೆಂಬಲ ಸಾಕಿತ್ತು. ಆದರೆ ವಿಶ್ವಸಂಸ್ಥೆಯ 192 ರಾಷ್ಟ್ರಗಳ ಪೈಕಿ 187 ದೇಶಗಳು ಮಂಗಳವಾರ ನಡೆದ ಮತದಾನದಲ್ಲಿ ಅನುಮೋದಿಸುವ ಮೂಲಕ ಭಾರತವನ್ನು ಕಾಯಂ ಸದಸ್ಯನಾಗಲು ನೈತಿಕವಾಗಿ ಮತ್ತಷ್ಟು ಪ್ರೇರೇಪಿಸಿವೆ” ಎಂದು ತಿಳಿಸಿದರು.
18. 19 ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಕ್ರೀಡೆಗಳ ಲಾಂಛನವಾದ ಹುಲಿಮರಿ ‘ಶೇರಾ’.
19. 19 ಕಾಮನ್‌ವೆಲ್ತ್ ಕ್ರೀಡೆ ಎರಡು ಸಾವಿರ ಮಕ್ಕಳು ‘ವಂದೇಮಾತರಂ’ ಹಾಡಲಿದ್ದಾರೆ. ಸುಖ್ವಿಂದರ್ ಅವರ ‘ಚಕ್ ದೇ ಇಂಡಿಯಾ’, ಕೈಲಾಶ್ ಖೇರ್ ಅವರ ‘ಅಲ್ಲಾ ಕೆ ಬಂದೆ’ ಹಾಗೂ ಶುಭಾ ಮುದ್ಗಲ್ ಅವರ ‘ಅಬ್ ಕೆ ಸಾವನ್’ ಹಾಡುಗಳು ಕರ್ಣಾನಂದವನ್ನುಂಟುಮಾಡಲಿವೆ . ಸ್ಕಾಟ್ಲೆಂಡ್‌ನ ವಿಶ್ವವಿಖ್ಯಾತ ‘ಬ್ಯಾಗ್‌ಪೈಪರ್’ ಸಂಗೀತವೂ ಇದೆ.
20. 2014 ರಲ್ಲಿ ಗ್ಲಾಸ್ಗೋದಲ್ಲಿ ನಡೆಯುವ 20 ನೇ ಕಾಮನ್‌ವೆಲ್ತ್ ಕ್ರೀಡೆಗಳಿಗೆ ಸ್ಕಾಟ್ಲೆಂಡ್ ಕಲಾವಿದರು ಸ್ವಾಗತಿಸಲಿದ್ದಾರೆ.
21. ನಡಿಗೆ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದಿದ್ದ ಭಾರತದ ರಾಣಿ ಯಾದವ್ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಕೆಟ್ಟ ಹೆಸರು ತಂದರು.
22. ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಆಸೀಸ್ ತಂಡವನ್ನು ಸೋಲಿಸುವುದರ ಜೊತೆಗೆ, 2-0ಯಿಂದ ಸರಣಿ ಗೆಲುವನ್ನೂ ತನ್ನದಾಗಿಸಿಕೊಂಡಿತು.
23. 2008ರಲ್ಲಿಯೂ ಭಾರತ ತಂಡವು 2-0ಯಿಂದ ರಿಕಿ ಬಳಗವನ್ನು ಸೋಲಿಸಿತ್ತು.
24. ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾರತ ಈ ಟ್ರೋಫಿಯನ್ನು ಗೆಲ್ಲುತ್ತಿರುವುದು ಐದನೇ ಬಾರಿ.
25. 19 ನೇ ಕಾಮನ್ ವೆಲ್ತ್ ಗೇಮ್ಸ್ ಪುರುಷರ ಹಾಕಿ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ.
26. ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್, ರಾಜಕುಮಾರ ಚಾರ್ಲ್ಸ್ ಅವರೊಂದಿಗೆ ಮನಮೋಹನ್ ಸಿಂಗ್ ಕೂಡ ಭಾಗವಹಿಸಿದ್ದರು.
27. ಆಹಾರ ನೀತಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಂಸ್ಥೆಯೊಂದು ಸಿದ್ಧಪಡಿಸಿದ ಸೂಚಿಯೊಂದರ ಪ್ರಕಾರ ಹಸಿವು ಮತ್ತು ಮಕ್ಕಳ ಅಪೌಷ್ಟಿಕತೆ ಎದುರಿಸುತ್ತಿರುವ ವಿಶ್ವದ 84ರಾಷ್ಟ್ರಗಳ ಪೈಕಿ ಭಾರತ 67ನೇ ಸ್ಥಾನದಲ್ಲಿದೆ.
28. ಸುಮಾರು ಇಪ್ಪತ್ತೇಳು ಕೋಟಿ ಭಾರತೀಯರು ನಿತ್ಯ ಅರೆಹೊಟ್ಟೆಯಲ್ಲಿ ಬದುಕುತ್ತಿದ್ದಾರೆ ಎಂದು ಲಂಡನ್ ಮೂಲದ ‘ಆಕ್ಷನ್ ಏಡ್’ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
29. ಆಹಾರದ ಕೊರತೆ ಎದುರಿಸುತ್ತಿರುವ ವಿಶ್ವದ ಜನಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಭಾರತದಲ್ಲಿದ್ದಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ.42ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ.
30. ಮೈಸೂರು ಅರಸ ಪರಂಪರೆಯಲ್ಲಿ ಅತ್ಯಂತ ದುರದೃಷ್ಟ ರಾಜ ಎಂದರೆ ಜಯಚಾಮರಾಜ ಒಡೆಯರ್. 1940ರಿಂದ 1947ರವರೆಗೆ ಅವರು ಮಹಾರಾಜರಾಗಿದ್ದರು.
31. ಜಯಚಾಮರಾಜ ಒಡೆಯರ್ 1969ರಲ್ಲಿ ಅವರು ನಡೆಸಿದ ದರ್ಬಾರು ಕೊನೆಯ ದರ್ಬಾರ್. 1970ರ ವೇಳೆಗೆ ರಾಜಧನವೂ ರದ್ದಾಗಿ ಸರ್ಕಾರಿ ದಸರಾ ಆರಂಭವಾಯಿತು.
32. ಭಾರತದ ಕ್ರೀಡಾಪಟುಗಳು 38 ಚಿನ್ನ, 27 ರಜತ, 36 ಕಂಚಿನ ಪದಕಗಳನ್ನು ಗೆದ್ದು ಪದಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು.
33. ದೆಹಲಿಯ ಲೆಫ್ಟನಂಟ್ ಗವರ್ನರ್ ಖನ್ನಾ ಅವರು ಕಾಮನ್‌ವೆಲ್ತ್ ಕ್ರೀಡೆಗಳ ಧ್ವಜವನ್ನು, 2014 ರಲ್ಲಿ ಕ್ರೀಡೆಗಳನ್ನು ನಡೆಸುವ ಗ್ಲಾಸ್ಗೊ ಮುಖ್ಯಸ್ಥ ರಾಬರ್ಟ್ ವಿಂಟಾ ಅವರಿಗೆ ಹಸ್ತಾಂತರಿಸಿದರು. ವಿಂಟಾ ಅದನ್ನು ಕೆಲ್ವಿನ್‌ನ ಲಾರ್ಡ್ ಸ್ಮಿತ್ ಅವರಿಗೆ ಕೊಟ್ಟರು
34. ಕಾಮನ್‌ವೆಲ್ತ್ ಕ್ರೀಡಾ ಫೆಡರೇಷನ್ ಅಧ್ಯಕ್ಷ ಮೈಕ್ ಫೆನೆಲ್, ಈ 19ನೇ ಕ್ರೀಡೆಗಳ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡೇವಿಡ್ ಡಿಕ್ಸನ್ ಪ್ರಶಸ್ತಿ ವಿಜೇತರ ಹೆಸರು ಪ್ರಕಟಿಸಿದರು. ಜಮೈಕಾದ ಟ್ರಿಪಲ್‌ಜಂಪ್‌ಪಟು ಟ್ರೇಸಿಯಾ ಸ್ಮಿತ್ ಈ ಗೌರವಕ್ಕೆ ಪಾತ್ರರಾದರು.
35. ಫೆಡರೇಷನ್ ಕಾರ್ಯದರ್ಶಿಯಾಗಿ 17 ವರ್ಷ ಸೇವೆ ಸಲ್ಲಿಸಿದ್ದ ಡೇವಿಡ್ ಡಿಕ್ಸನ್ ಹೆಸರಲ್ಲಿ ಈ ಪ್ರಶಸ್ತಿ ಕೊಡಲಾಗುತ್ತದೆ.
36. ಕಾಮನ್‌ವೆಲ್ತ್ ಕ್ರೀಡಾ ಫೆಡರೇಷನ್‌ನ ಉಪಪೋಷಕ ಪ್ರಿನ್ಸ್ ಎಡ್ವರ್ಡ್ ಕ್ರೀಡೆಗಳು ಮುಕ್ತಾಯವಾದವು ಎಂದು ಘೋಷಿಸಿದರು.
37. ಸ್ಕಾಟ್ಲೆಂಡ್‌ನಿಂದ ಬಂದಿದ್ದ 352 ಮಂದಿ ಬ್ಯಾಗ್‌ಪೈಪರ್ ಸಂಗೀತಗಾರರು ಸ್ಕಾಟ್ಲೆಂಡ್ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರು.
38. ವಿಶ್ವ ಪ್ರೇಮದ ಸಂಗೀತದಲ್ಲಿ ಉಷಾ ಉತ್ತುಪ್, ಇಳಾ ಅರುಣ್, ಸುಖ್ವಿಂದರ್, ಕೈಲಾಶ್ ಖೇರ್, ಶಿವಮಣಿ, ಶುಭಾ ಮುದ್ಗಲ್ ಮುಂತಾದವರು ಮನತಟ್ಟುವ ಹಾಡುಗಳನ್ನು ಹಾಡಿದರು.
39. ‘ದಿ ಪ್ಯಾಕ್’ನ ಐದನೇ ಮತ್ತು ಕೊನೆಯ ಕಂತಿಗೆ ದೊರೆತಿದೆ. ಈ ಮೊದಲೇ ‘ದಿ ಪ್ಯಾಕ್’ ವೈಲ್ಡ್‌ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ನಾಮಕರಣಗೊಂಡಿತ್ತು
40. ಅ.13 ರಂದು ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿಶ್ವದ ಶ್ರೇಷ್ಠ ವನ್ಯಜೀವಿ ವಿಜ್ಞಾನಿ ಡಾ.ಜಾರ್ಜ್ ಶಾಲನ್ ಅವರು ನಿರ್ಮಾಪಕ ಕೃಪಾಕರ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಸೇನಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
41. ಮೊಬೈಲ್ ಗ್ರಾಹಕರು ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ಹೋದಾಗ ಒಳಬರುವ ಕರೆಗಳು ಹಾಗೂ ಹೊರಹೋಗುವ ಕರೆಗಳ ಮೇಲೆ ಈಗ ವಿಧಿಸಲಾಗುತ್ತಿರುವ ರೋಮಿಂಗ್ ಶುಲ್ಕಗಳನ್ನು ತೆಗೆದುಹಾಕುವಂತೆ ಉನ್ನತ ಮಟ್ಟದ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
42. ಪ್ರಸ್ತುತ ಇರುವ 22 ವೃತ್ತಗಳ ಬದಲಿಗೆ ಇಡೀ ದೇಶವನ್ನು ಒಂದೇ ವೃತ್ತವೆಂದು ಪರಿಗಣಿಸುವಂತೆ ಅಥವಾ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸುವಂತೆ ದೂರಸಂಪರ್ಕ ಇಲಾಖೆಯು ರಚಿಸಿದ ಉನ್ನತ ಮಟ್ಟದ ಸಮಿತಿಯು ಹೇಳಿದೆ.
43. ರಾಜಕೀಯ ಮತ್ತು ರಾಜತಾಂತ್ರಿಕತೆಯಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವಕ್ಕೆ’ ನೀಡಿದ ಕೊಡುಗೆಯನ್ನು ಗುರುತಿಸಿ ನೀಡಿರುವ ಕೇಂಬ್ರಿಜ್ ವಿಶ್ವವಿದ್ಯಾಲಯದ ‘ಫೆಲೊ ಆಫ್ ಟ್ರಿನಿಟಿ ಹಾಲ್’ ಗೌರವಕ್ಕೆ ರಾಜ್ಯ ಸಭಾ ಸದಸ್ಯ ಮಣಿಶಂಕರ್ ಅಯ್ಯರ್ ಪಾತ್ರರಾಗಿದ್ದಾರೆ.
44. ಕುಸ್ತಿ ಸ್ಪರ್ಧಿ ಸುಶೀಲ್ ಕುಮಾರ್ ಅವರು ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನ ‘ಅತ್ಯಂತ ಜನಪ್ರಿಯ ಅಥ್ಲೀಟ್’ ಆಗಿ ಆಯ್ಕೆಯಾಗಿದ್ದಾರೆ. ಕೂಟದ ಟ್ಯಾಬ್ಲಾಯ್ಡಾ ‘ಗೇಮ್ಸ್ ನ್ಯೂಸ್’ ನಡೆಸಿದ ಸಮೀಕ್ಷೆಯಲ್ಲಿ ಸುಶೀಲ್ ಗೆಲುವು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ