1. ದೆಹಲಿ ಡೇರ್‌ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ 7.2 ದಶಲಕ್ಷ ಡಾಲರ್ ಅನ್ನು ಆಟಗಾರರ ಖರೀದಿಗಾಗಿ ವಿನಿಯೋಗಿಸುವುದಕ್ಕೆ ಅವಕಾಶವಿದೆ.
2. ಸೂಪರ್ ಕಿಂಗ್ಸ್ ಹರಾಜಿನಲ್ಲಿ ವೆಚ್ಚ ಮಾಡಲು ಲಭ್ಯ ಇರುವುದು 4.5 ದಶಲಕ್ಷ ಡಾಲರ್. ಅದು ಹರಾಜಿನಲ್ಲಿ ಆಟಗಾರರನ್ನು ಕೊಳ್ಳಬಹುದು; ಇಲ್ಲವೆ ಹರಾಜಿನಿಂದ ಹೊರಗೆ ಉಳಿದು ರಣಜಿ ಆಟಗಾರರನ್ನು ಖರೀದಿಸಬಹುದು.
3. ಅತಿವೇಗವಾಗಿ ವಾಹನ ಓಡಿಸಿದ್ದಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅವರಿಗೆ ಇಲ್ಲಿನ ಪೊಲೀಸರು 239 ಡಾಲರ್ ದಂಡ ವಿಧಿಸಿದ್ದಾರೆ.
4. ವಿಕ್ಟೋರಿಯಾದ ಗೀಲಾಂಗ್ ಪ್ರದೇಶದಲ್ಲಿನ ರಸ್ತೆಯಲ್ಲಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ವಾಹನ ಓಡಿಸುವ ಮಿತಿ ಇದ್ದು; ಅಲ್ಲಿ ಕೆವಿನ್ ಅವರು ಗಂಟೆಗೆ 121 ಕಿ.ಮೀ. ವೇಗದಲ್ಲಿ ವಾಹನ ಓಡಿಸಿದ್ದು ಲೇಸರ್ ಸ್ಪೀಡ್ ಪತ್ತೆ ಯಂತ್ರದಲ್ಲಿ ದಾಖಲಾಗಿದೆ.
5. ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಸಾಧನೆಯ ಮೈಲಿಗಲ್ಲನ್ನು ಎಡಗೈ ಸ್ಪಿನ್ನರ್ ಜೋಶಿ ದಾಟಿದರು.
6. ಹರಿಯಾಣಾದ ರಾಜೇಂದ್ರ ಗೋಯೆಲ್ 750 ಗಳಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್‌ನ ದಾಖಲೆಯಾಗಿದೆ.
7. ಕನ್ನಡದ ಮೊಟ್ಟಮೊದಲ ವರ್ಣಚಿತ್ರ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದ ಹಿರಿಯ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಹಕ ಬಿ.ಎಸ್.ರಂಗಾ (93) ಇಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
8. 2011ರ ಜನವರಿ ಒಂದರಿಂದ ಜಾರಿಗೆ ಬರಲಿದೆ. ಕಾಂಬೋಡಿಯಾ, ಪಿಲಿಫೀನ್ಸ್, ವಿಯೆಟ್ನಾಂ, ಲಾವೋಸ್ ಮತ್ತು ಮ್ಯಾನ್ಮಾರ್ ದೇಶದಿಂದ ಆಗಮಿಸುವ ಬೌದ್ಧ ಭಿಕ್ಕುಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ.
9. ಏಕ ಗವಾಕ್ಷಿ ಪದ್ಧತಿಯಂತೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೊಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಈ ವೀಸಾ ನೀಡಲಾಗುವುದು ಹಾಗೂ ಇದು 30 ದಿನಗಳ ಕಾಲಾವಧಿ ಒಳಗೊಂಡಿದೆ.
10. 21ರಿಂದ ಎರಡು ದಿನದ ಭಾರತ ಪ್ರವಾಸ ಕೈಗೊಳ್ಳಲಿರುವ ರಷ್ಯ ಅಧ್ಯಕ್ಷ ಡ್ರಿಮಿಟಿ ಮೆಡ್ವಡೆವ್ ಪರಮಾಣು, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಭಾರತದ ಜತೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ.
11. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ (ಆಸಿಯಾನ್) ‘ಅರ್ಧ ಒಳಗೆ, ಅರ್ಧ ಹೊರಗೆ’ ಎಂಬಂತೆ ಇರುವ ಭಾರತ ಒಂದು ಅವಿವೇಕಿಗಳ ದೇಶ ಎಂಬುದಾಗಿ ಸಿಂಗಪುರದ ರಾಜತಾಂತ್ರಿಕರು ಅಮೆರಿಕದ ಅಧಿಕಾರಿಗಳಿಗೆ ತಿಳಿಸಿರುವ ಅಂಶವನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
12. ಜಪಾನ್‌ನಲ್ಲಿ ನಾಯಕತ್ವದ ಕೊರತೆ ಇದೆ,ಆಸಿಯಾನ್ ಜತೆಗೆ ಚೀನಾದ ಸಂಬಂಧ ಹೆಚ್ಚಿರುವುದರಿಂದ ಜಪಾನ್‌ನ ಕೊಬ್ಬು ಕರಗಿದೆ, ಭಾರತವೂ ಇಲ್ಲಿ ಅರ್ಧ ಒಳಗೆ, ಅರ್ಧ ಹೊರಗೆ ಎಂಬಂತೆ ಇದ್ದು, ಅದೊಂದು ‘ಸ್ಟುಪಿಡ್’ ದೇಶ ಎಂದು ಸಿಂಗಪುರದ ರಾಯಭಾರಿ ಟೊಮ್ಮಿ ಕೋ ಅವರು ಅಮೆರಿಕಕ್ಕೆ ತಿಳಿಸಿದ್ದರು.
13. ಸತತ ಮೂರನೇ ವರ್ಷವೂ ಬಾಲಿವುಡ್ ಸುಂದರಿ ಕತ್ರೀನಾ ಕೈಫ್ ಅವರು ವಿಶ್ವದ ‘ಅತ್ಯಂತ ಸೆಕ್ಸಿ ಮಹಿಳೆ’ ಎಂದು ನಾಮಕರಣಗೊಂಡಿದ್ದಾರೆ.
14. ಕೆನಡಾ ಸಂಸತ್ತಿನಲ್ಲಿ ಮೊದಲ ಬಾರಿ ಆಯ್ಕೆಯಾದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಿಖ್ ಸದಸ್ಯ ಟಿಮ್ ಉಪ್ಪಲ್ ಅವರು ಖಾಸಗಿಯಾಗಿ ಮಂಡಿಸಿದ ರಾಷ್ಟ್ರೀಯ ಸಾಮೂಹಿಕ ಹತ್ಯಾಕಾಂಡ ಸ್ಮಾರಕ ನಿರ್ಮಾಣ ಮಸೂದೆಯು ಅವಿರೋಧವಾಗಿ ಅಂಗೀಕಾರಗೊಂಡಿದೆ.
15. ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಮೆಕ್ಸಿಕೊದ ಕ್ಯಾನ್‌ಕನ್‌ನಲ್ಲಿ ನಡೆದ ಹವಾಮಾನ ವೈಪರೀತ್ಯ ತಡೆ ಕುರಿತ ಶೃಂಗದ ಯಶಸ್ಸನ್ನು ಜಪಾನ್ ಪ್ರಧಾನ ಮಂತ್ರಿ ನ್ಯಾಟೊ ಕಾನ್ ಸ್ವಾಗತಿಸಿದ್ದಾರೆ.
16. ‘ಸಮುದಾಯ ಸಹಭಾಗಿತ್ವದಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ’ ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ಆಯುಕ್ತ ಆರ್.ಶ್ರೀಕುಮಾರ್ ಅಭಿಪ್ರಾಯಪಟ್ಟರು.
17. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ದ್ವಿಶತಕ ಟೈಮ್ಸ್ ನಿಯತಕಾಲಿಕದಲ್ಲಿ ಸ್ಥಾನ ಪಡೆದಿದೆ.
18. ಅವರು ಗ್ವಾಲಿಯರ್‌ನಲ್ಲಿ 199 ರನ್ ಗಳಿಸಿದ್ದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಅಬ್ಬರ ಹೇಳತೀರದು. ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಇತಿಹಾಸವೊಂದಕ್ಕೆ ಸಾಕ್ಷಿಯಾಗಿದ್ದರು. ಸಚಿನ್ ಒಂದು ರನ್ ಗಳಿಸಿ 200 ರನ್ ತಲುಪಿದ್ದರು.
19. ಟೈಮ್ಸ್ ನಿಯತಕಾಲಿಕ ಈ ವರ್ಷದ ಕ್ರೀಡಾ ಕ್ಷೇತ್ರದ 10 ಅದ್ಭುತ ಕ್ಷಣಗಳನ್ನು ಪ್ರಕಟಿಸಿದೆ.
20. ವಾಂಚಾಯ್‌ನಲ್ಲಿರುವ ಕ್ವೀನ್ ಎಲಿಜಬೆತ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸೈನಾ 15-21, 21-16, 21-17 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಶಿಕ್ಸಿಯಾನ್ ವಾಂಗ್ ವಿರುದ್ಧ ಜಯ ಪಡೆದರು.
21. ಪ್ರಸಕ್ತ ಋತುವಿನಲ್ಲಿ ಸೈನಾ ಪಡೆಯುತ್ತಿರುವ ಮೂರನೇ ಹಾಗೂ ವೃತ್ತಿ ಜೀವನದ ನಾಲ್ಕನೇ ಸೂಪರ್ ಸೀರಿಸ್ ಪ್ರಶಸ್ತಿ ಇದಾಗಿದೆ.
22. ಭಾರತದ ಅಮೀಶ್ ಸಾಹೇಬಾ ಹಾಗೂ ಶಾವೀರ್ ತಾರಪುರ ಅವರು ಉಪಖಂಡದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
23. ಮಾಜಿ ಟೆನಿಸ್ ಆಟಗಾರ್ತಿ ಸ್ವಿಟ್ಜರ್ಲೆಂಡ್‌ನ ಮಾರ್ಟಿ ನಾ ಹಿಂಗಿಸ್ ಅವರು ಫ್ರಾನ್ಸ್‌ನ ಶೋಜಂಪರ್ ತಿಬಾಲ್ಟ್ ಹಟಿಮ್ ಅವರನ್ನು ವಿವಾಹವಾಗಿದ್ದಾರೆ.
24. ವಿಶ್ವದ ಖ್ಯಾತ ಮಾಹಿತಿ ಶೋಧ ಅಂತರ್‌ಜಾಲ ತಾಣ ಗೂಗಲ್, ಮೂರು ತಿಂಗಳ ಹಿಂದೆ ಶಾಲಾ ಮಕ್ಕಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಡೂಡಲ್4ಗೂಗಲ್ (doodle 4 google- ಗೂಗಲ್ ಲಾಂಛನ ರೇಖಾಚಿತ್ರ) ಸ್ಪರ್ಧೆಯಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬ ಪ್ರಥಮ ಬಹುಮಾನ ಗಳಿಸಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ.
25. ತಾಂತ್ರಿಕವಾಗಿ ಮತ್ತು ಸ್ವಾಭಾವಿಕವಾಗಿ ಬೆಳೆಯುತ್ತಿರುವ ಭಾರತ’ (technically and naturally growing india) ಶೀರ್ಷಿಕೆಯಡಿ ಮಂಗಳೂರಿನ ಸೇಂಟ್ ಅಲೋಶಿಯಸ್ ಪ್ರೌಢ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಅಕ್ಷಯ್ ರಾಜ್, ರಚಿಸಿದ ಗೂಗಲ್ ಲಾಂಛನದ ರೇಖಾ ಚಿತ್ರ ಪ್ರಥಮ ಸ್ಥಾನ ಪಡೆದಿದೆ.
26. ಈ ಬಾರಿಯ ಡೂಡ್ಲು 4ಗೂಗಲ್ ಸ್ಪರ್ಧೆಯ ವಿಷಯ ‘ಭಾರತಕ್ಕಾಗಿ ನನ್ನ ಕನಸು’. (my dream for india). ಎಲ್ಲಾ ಮಕ್ಕಳು ತಮ್ಮ ತಮ್ಮ ಕನಸಿನ ಭಾರತದ ಚಿತ್ರವನ್ನು ಗೂಗಲ್ ಲಾಂಛನದ ಅಕ್ಷರಗಳಲ್ಲಿ ಮೂಡಿಸಬೇಕಾಗಿತ್ತು.
27. ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಡಿಯಾ 300 ಕೋಟಿ ರೂಪಾಯಿ ವ್ಯವಹಾರ ನಡೆಸಲು ಆರಂಭಿಸಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅವರ ದೂರವಾಣಿಯ ಕದ್ದಾಲಿಕೆಗೆ ಮುಂದಾಗಿದ್ದಾಗಿ ಕಳೆದ ವಾರ ಸರ್ಕಾರ ಪೀಠದ ಮುಂದೆ ಪ್ರಮಾಣ ಪತ್ರ ಸಲ್ಲಿಸಿತ್ತು.
28. ಅಟಾರ್ನಿ ಜನರಲ್ ಜಿ.ಇ.ವಹನ್ವತಿ.
29. 2ಜಿ ತರಂಗಾಂತರ ಹಗರಣ ಆರೋಪ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುತ್ತಿರುವ ಖಾಸಗಿ ಕಂಪೆನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ನೀರಾ ರಾಡಿಯಾ.
30. ಹ್ಯೂಸ್ಟನ್ ವಿಮಾನನಿಲ್ದಾಣದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರ್‌ದೀಪ್ ಪುರಿ ಅವರು ಈ ರೀತಿಯ ಅವಮಾನಕ್ಕೆ ಒಳಗಾಗಿದ್ದು, ಮೀರಾ ಶಂಕರ್ ಪ್ರಕರಣದ ಬಳಿಕ ಇದು ತಡವಾಗಿ ಬೆಳಕಿಗೆ ಬಂದಿದೆ.
31. ಡಿಸೆಂಬರ್ 4ರಂದು ಮಿಸ್ಸಿಸಿಪ್ಪಿ ವಿಮಾನನಿಲ್ದಾಣದಲ್ಲಿ ಮೀರಾ ಶಂಕರ್ ಅವರನ್ನು ಮೈದಡವಿ ತಪಾಸಣೆ ಮಾಡಲಾಗಿತ್ತು.
32. ಅಧಿವೇಶನ ನಡೆಯಬೇಕಿದ್ದುದು 114 ಗಂಟೆ. ಆದರೆ ನಡೆದುದು ಕೇವಲ ಆರೂಮುಕ್ಕಾಲು ಗಂಟೆ. ಇದಕ್ಕೆ ಆದ ಖರ್ಚು 172 ಕೋಟಿ ರೂಪಾಯಿ.
33. ಸಂಸತ್ ಕಲಾಪಕ್ಕೆ ವರ್ಷಕ್ಕೆ ಒಟ್ಟು 527.45 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ.
34. ಸರ್ಕಾರ ಪ್ರತಿ ದಿನದ ಕಲಾಪಕ್ಕೆ ಸರಾಸರಿ 6.35 ಕೋಟಿ ರೂಪಾಯಿ ವ್ಯಯಿಸುತ್ತದೆ.
35. ನಿಯಮದ ಪ್ರಕಾರ ಬಜೆಟ್ ಅಧಿವೇಶನ 35 ದಿನ, ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳು ತಲಾ 24 ದಿನ ನಡೆಯಬೇಕೆಂದಿದೆ.
36. ಸತತ 23 ದಿನ ಯಾವುದೇ ಕಲಾಪ ನಡೆಯದೆ ಇದ್ದರೂ, ಸಂಸದರ ಭತ್ಯೆ, ಇತರ ಖರ್ಚುಗಳನ್ನೆಲ್ಲ ಭರಿಸಬೇಕಿರುವುದರಿಂದ 172 ಕೋಟಿ ಕೋಟಿ ರೂಪಾಯಿ ವೆಚ್ಚ ಆಗಿದೆ.
37. ದುಬೈ ವರ್ಲ್ಡ್ ಕಂಪೆನಿಯ ನೂತನ ಅಧ್ಯಕ್ಷರನ್ನಾಗಿ ಶೇಖ್ ಅಹಮದ್ ಬಿನ್ ಸಯೀದ್ ಅಲ್ ಮಗ್ದುಂಮ್ ಅವರನ್ನು ನೇಮಕ ಮಾಡಲಾಗಿದೆ.
38. ಅರಸರ ನ್ಯಾಯಾಲಯದ ನಿರ್ದೇಶಕ ಮೊಹಮದ್ ಅಲ್ ಶೈಬಾನಿ, ದುಬೈ ಇಂಟರ್‌ನ್ಯಾಷನಲ್ ಫನಾನ್ಸಿಯಲ್ ಸೆಂಟರ್‌ನ ಮುಖ್ಯಸ್ಥ ಅಹಮದ್ ಹಮೀದ್ ಅಲ್-ಟಯರ್ ಅವರನ್ನು ದುಬೈ ವರ್ಲ್ಡ್ ಕಂಪೆನಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
39. ದುಬೈ ವರ್ಲ್ಡ್ ಕಂಪೆನಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಶೇಖ್ ಅಹಮದ್ ಅವರು ಎಮಿರೇಟ್ಸ್ ಏರ್‌ಲೈನ್ಸ್ ಮತ್ತು ದುಬೈ ನಾಗರಿಕ ವಿಮಾನಯಾನ ಖಾತೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
40. ದುಬೈಯಲ್ಲಿ ಅನೇಕ ಕೃತಕ ದ್ವೀಪಗಳನ್ನು ನಿರ್ಮಿಸಿದ ದುಬೈ ವರ್ಲ್ಡ್ ಕಂಪೆನಿಯ ಅಂಗ ಸಂಸ್ಥೆಯಾದ ನಕೀಲ್ ಕಂಪೆನಿ ಸಹ ಅಪಾರ ನಷ್ಟ ಅನುಭವಿಸುತ್ತಿದ್ದು 10.5 ಶತಕೋಟಿ ಡಾಲರ್ ಸಾಲ ಮರುಪಾವತಿಗೆ ಸಮಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.
41. ಪ್ರಪಂಚದ ಅತಿ ಎತ್ತರದ ಕಟ್ಟಡವಾದ ‘ಬುರ್ಜ್ ಖಲೀಫಾ’ದಲ್ಲಿ ಒಂದು ರಾತ್ರಿ ತಂಗಲು ಬಯಸುವವರಿಗೆ ಬಾಡಿಗೆ ದಿನಕ್ಕೆ 285 ಅಮೆರಿಕನ್ ಡಾಲರ್ ಬಾಡಿಗೆ ನೀಡಿದರೆ ಈ ಕಟ್ಟಡದಲ್ಲಿ ಪಿಠೋಪಕರಣಗಳಿಂದ ಸುಸಜ್ಜಿತವಾದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ರಾತ್ರಿ ಕಳೆಯಬಹುದು ಎಂಬುದನ್ನು ದುಬೈ ಮೂಲದ ಕಂಪೆನಿ ಪ್ರಕಟಿಸಿದೆ.
42. 188 ಅಂತಸ್ತುಗಳಿರುವ ‘ಬುರ್ಜ್ ಖಲೀಫಾ’.
43. ಭಾರತೀಯ ಮೂಲದ ಹಿರಿಯ ಮುಖಂಡ ಸಾಮಿ ವೇಲು (74) ಅವರನ್ನು ಭಾರತ ಮತ್ತು ದಕ್ಷಿಣ ಏಷ್ಯಾಗಳಿಗೆ ಮಲೇಷ್ಯಾದ ವಿಶೇಷ ರಾಜತಾಂತ್ರಿಕರನ್ನಾಗಿ ನೇಮಿಸಲಾಗಿದೆ.
44. ಸಿಮೊನ್ ಕ್ಯಾಲನ್ ಅವರಿಂದ ವಿಚ್ಛೇದನ ಪಡೆದಿದ್ದು; ಇಂಗ್ಲೆಂಡ್ ನಟಿ ಲಿಜ್ ಹರ್ಲಿ ಅವರೊಂದಿಗೆ ಸ್ನೇಹ ಸಂಬಂಧ ಬೆಸೆದಿ ರುವುದಾಗಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಬೌಲರ್ ಶೇನ್ ವಾರ್ನ್ ಸ್ಪಷ್ಟಪಡಿಸಿದ್ದಾರೆ.
45. 2000-2010ರ ದಶಕವನ್ನು ಅಂತರ್‌ರಾಷ್ಟ್ರೀಯ ಇಂಟರ್‌ನೆಟ್ ದಶಕ ಎಂದೇ ವಿಶ್ವದಾದ್ಯಂತ ಪರಿಗಣಿಸಲಾಗುತ್ತಿದೆ.
46. ಸದ್ಯಕ್ಕೆ 20.2 ಕೋಟಿಗಳಷ್ಟು ವಿಳಾಸದ ಹೆಸರುಗಳು ನೋಂದಾವಣೆ ಮಾಡಲಾಗಿದೆ.
47. ಈ ವಿಳಾಸ ಸೂಚಿಸುವ ವ್ಯವಸ್ಥೆಯು (Domain Name System --DNS) ಇಂಟರ್‌ನೆಟ್ ಅನ್ನು ಅನೇಕ ಬಗೆಗಳಲ್ಲಿ ವಿಂಗಡಿಸಿದೆ.
48. ಉದಾಹರಣೆಗೆ ವಿಶ್ವವಿದ್ಯಾನಿಲಗಳು (edu) ಸರ್ಕಾರಗಳು gov (government), ವಾಣಿಜ್ಯ ಸಂಘಟನೆಗಳು com (commercial organizations), ಸೇನೆ mil (military), ಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳು net (network service providers), ಮತ್ತು ಲಾಭರಹಿತ ಸಂಘಟನೆಗಳು org (nonprofit organizations). ಹೀಗೆ ವಿಭಿನ್ನ ಸಂಘ, ಸಂಸ್ಥೆಗಳು ಅಂತರ್‌ಜಾಲದಲ್ಲಿ ಪ್ರತ್ಯೇಕ ಹೆಸರಿನಲ್ಲಿ ಗುರುತಿಸಿಕೊಂಡಿವೆ.
49. ಡಾಟ್ ಕಾಮ್ ಮತ್ತು ಡಾಟ್‌ನೆಟ್ ಹೆಸರಿನಲ್ಲಿನ ವಿಳಾಸಗಳು 10.3 ಕೋಟಿಗಳ ಸಂಖ್ಯೆ ದಾಟಿವೆ. ಈ ವರ್ಷದ ತೃತೀಯ ತ್ರೈಮಾಸಿಕದಲ್ಲಿ 75 ಲಕ್ಷ ಹೊಸ ಹೆಸರು - ವಿಳಾಸಗಳು ನೋಂದಾವಣೆಗೊಂಡಿವೆ.
50. ಇಂಗ್ಲಿಷ್ ಮಾತನಾಡುವ ದೇಶಗಳು ಶೇ 40ರಷ್ಟು ಇಂಟರ್‌ನೆಟ್ ಬಳಸುತ್ತಿವೆ.
51. ಬಿಎಸ್‌ಎನ್‌ಎಲ್ ‘ತ್ರೀಜಿ’ ಸೇವೆ ಈಗ ಆ್ಯಪಲ್ ಐಪೊಡ್‌ನಲ್ಲೂ ಲಭ್ಯವಿದೆ. ರಾಜಸ್ತಾನ ವೃತ್ತದಲ್ಲಿ ಈ ಸೇವೆಯನ್ನು ಪ್ರಯೋಗಿಕವಾಗಿ ಜಾರಿಗೊಳಿಸಲಾಗಿದ್ದು,
52. JPC – Joint Parliamentary committee .
53. UPA – United Progressive Alliance
54. BSNL - Bharat Sanchar Nigam Limited.
55. CDMA - Code division multiple access.
56. GSM - Global System for Mobile Communications.
57. GPRS - General packet radio service.
58. WAP - Wireless Application Protocol.
59. VPT - Village pump technical.
60. MTNL - Mahanagar Telephone Nigam Limited.
61. Nokia - Connecting people.
62. BSNL - "Connecting India",
63. Tv9 – for a better society .
64. 26/11ರ ಮುಂಬೈ ದಾಳಿ ಕೋರರಿಗೆ ಸೂಕ್ತ ಶಿಕ್ಷೆ ನೀಡಿದರೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿಯ ಸೇನೆ ಕಡಿತ ಮತ್ತು ಸರ್ ಕ್ರೀಕ್ ಗಡಿ ವಿವಾದದ ಬಗ್ಗೆ ಪಾಕಿಸ್ತಾನದ ಜತೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ಹೇಳಲಾಗಿದೆ.
65. ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರಿಗೆ ಬ್ರಿಟನ್ನಿನ ನ್ಯಾಯಾಲಯ 2.40 ಲಕ್ಷ ಪೌಂಡ್‌ಗಳ ಭದ್ರತೆ ಆಧಾರದ ಮೇಲೆ ಷರತ್ತುಬದ್ಧ ಜಾಮೀನು ನೀಡಿದ್ದರೂ ಅವರು ಜೈಲಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
66. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಗಗ್ಗರ’ ತುಳು ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡದಿರುವುದು ತುಳು ಚಿತ್ರರಸಿಕರಲ್ಲಿ ನಿರಾಶೆ ಮೂಡಿಸಿದೆ’ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದಯ ಧರ್ಮಸ್ಥಳ ಅವರು ತಿಳಿಸಿದರು.
67. ಕೆನ್ ಫೋಲೆಟ್ ತಿಳಿಸಿದರು. ಇಂಗ್ಲಿಷ್ ಮಾತನಾಡುವ ಮತ್ತು ಓದುವ ಜನರು ಇಂಗ್ಲೆಂಡ್‌ಗಿಂತ ಹೆಚ್ಚಾಗಿ ಭಾರತದಲ್ಲಿದ್ದಾರೆ ಎಂದಿರುವ ಅವರು, 8.9 ಕೋಟಿ ಮಂದಿ ಇಲ್ಲಿ ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡುತ್ತಾರೆ ಎಂದರು.
68. ತನ್ನ ಹೊಸ ಪುಸ್ತಕ ‘ದಿ ಫಾಲ್ ಆಫ್ ಜೈಂಟ್ಸ್’ನ ಪ್ರಚಾರಕ್ಕಾಗಿ ಭಾರತದಲ್ಲಿ ಪ್ರವಾಸ ಕೈಗೊಳ್ಳುತ್ತಿರುವ ಫೋಲೆಟ್ ಅವರು, ಭಾರತ ಮತ್ತು ಏಷ್ಯಾ ಭವಿಷ್ಯದ ಮಾರುಕಟ್ಟೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
69. ವಿವೇಕಾನಂದಂ ದೇವರಾಜ್ ಎಂಬ ಹೆಸರಿನ 24 ವರ್ಷದ ತರುಣ ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಮಂಗಳವಾರ ಗಳಿಸಿದರು.144 ಕೆ.ಜಿ.ಯ ತೂಕವಿದ್ದ ದೇವರಾಜ್ ಅವರು ಆರು ತಿಂಗಳ ಅವಧಿಯಲ್ಲಿ 67 ಕೆ.ಜಿ.ಯಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ‘ಸ್ಟಾರ್’ ವರದಿ ಮಾಡಿದೆ.
70. ಅಂತರ್ಜಾಲ ಬಳಕೆದಾರರ ಸಂಖ್ಯೆ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿದ್ದು, ಸದ್ಯ ಭಾರತ ಇಂಟರ್‌ನೆಟ್ ಬಳಕೆಯಲ್ಲಿ ಪ್ರಪಂಚದಲ್ಲಿಯೇ ಮೂರನೆಯ ಸ್ಥಾನದಲ್ಲಿದೆ ಎಂದು ಖ್ಯಾತ ಶೋಧ ತಾಣ ಗೂಗಲ್ ಹೇಳಿದೆ.
71. ಚೀನಾದಲ್ಲಿ 300 ದಶಲಕ್ಷ ಅಂತರ್ಜಾಲ ಬಳಕೆದಾರರಿದ್ದು, ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. 207 ದಶಲಕ್ಷ ಬಳಕೆದಾರರಿರುವ ಅಮೆರಿಕ ಎರಡನೆಯ ಸ್ಥಾನದಲ್ಲಿ ಹಾಗೂ ಈಗ 100 ದಶಲಕ್ಷ ಬಳಕೆದಾರರನ್ನು ದಾಟುತ್ತಿರುವ ಭಾರತ ಮೂರನೆಯ ಸ್ಥಾನದಲ್ಲಿದೆ.
72. ಗೂಗಲ್ ಇಂಡಿಯಾದ ಉತ್ಪಾದನಾ ಮುಖ್ಯಸ್ಥ ವಿನಯ್ ಗೋಯಲ್.
73. ಭಾರತದಲ್ಲಿ ಮೊಬೈಲ್ ಮೂಲಕ ಅಂತರ್ಜಾಲ ಜಾಲಾಡುವರ ಸಂಖ್ಯೆ 40 ದಶಲಕ್ಷದಷ್ಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದು 20ಪಟ್ಟು ವೃದ್ಧಿಯಾಗಿದೆ.
74. ಸೆಂಚುರಿಯನ್ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಸೂಪರ್‌ಸ್ಪೋರ್ಟ್ ಪಾರ್ಕ್ ಅಂಗಳದಲ್ಲಿ 50ನೇ ಶತಕದ ಕೊಡುಗೆ ನೀಡುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆಗೆ ಕಾರಣರಾದರು.
75. ಏಷ್ಯಾ ಮಟ್ಟದ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಸಂಸ್ಥೆ ವಿಪ್ರೊ ಲೈಟಿಂಗ್ ಆಗಿದ್ದು, ಕಂಪೆನಿ ವಿನ್ಯಾಸಗೊಳಿಸಿದ ‘ಎಲ್‌ಇಡಿ ಬೀದಿ ದೀಪ ಒರಿಯೊ’ಗೆ ಈ ವಿಶೇಷ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.
76. ಭೋಪಾಲ್ ಅನಿಲ ದುರಂತ ಸಂತ್ರಸ್ತರ ಕುಟುಂಬದವರಿಗೆ ರೂ 750 ಕೋಟಿ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈಗ ಸದ್ಯದಲ್ಲಿ ಇದನ್ನು ಎಲ್ಲರಿಗೆ ವಿತರಿಸಲು ಆಗುತ್ತಿಲ್ಲ ಎಂದು ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
77. ಅಮೆರಿಕದ ರಾಜತಾಂತ್ರಿಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ‘ತಾತ್ವಿಕ ನಾಯಕತ್ವವಿಲ್ಲದ’ ನಾಯಕಿ ಎಂದೂ, ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರನ್ನು ‘ಸುಲಿಗೆಕೋರ’ ಎಂದೂ ಜರಿದಿದ್ದ ಸಂಗತಿಯು ವಿಕಿಲೀಕ್ಸ್‌ನಿಂದ ಬಹಿರಂಗವಾಗಿದೆ.
78. ದ್ವಿಚಕ್ರ ವಾಹನ ತಯಾರಿಕೆಯ ವಿಶ್ವದ ಅತಿದೊಡ್ಡ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೀರೊ ಗ್ರೂಪ್ ಮತ್ತು ಜಪಾನಿನ ಹೋಂಡಾ ಮೋಟಾರ್ ಕಂಪನಿ ಮಧ್ಯದ 26 ವರ್ಷಗಳ ಬಾಂಧವ್ಯವು ಈಗ ಅಧಿಕೃತವಾಗಿ ಕೊನೆಗೊಂಡಿದೆ.
79. 133 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟಿಗ ಸಚಿನ್. ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಡೆಲ್ ಸ್ಟೇಯ್ನ್ ಎಸೆತವನ್ನು ಕವರ್‌ನತ್ತ ಡ್ರೈವ್ ಮಾಡಿ ಒಂಟಿ ರನ್ ತೆಗೆಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ತೂಬು ಬಿಚ್ಚಿಕೊಂಡ ಅಣೆಕಟ್ಟು. ಸೆಂಚೂರಿಯನ್‌ನಲ್ಲಿ 50ನೇ ಸೆಂಚುರಿ ಸವಿದರು.
80. 175ನೇ ಪಂದ್ಯದಲ್ಲಿ ತೆಂಡೂಲ್ಕರ್ ಅವರಿಂದ ಈ ಅಮೋಘ ಸಾಧನೆ ಮೂಡಿಬಂದಿದೆ. 197 ಎಸೆತಗಳಲ್ಲಿ ಮೂರಂಕಿ ದಾಟಿದರು.
81. ಸದ್ಯ ಸಚಿನ್ 14509 ರನ್ ಪೇರಿಸಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ (12333) ಹೊಂದಿದ್ದಾರೆ. 37 ವರ್ಷ ವಯಸ್ಸಿನ ದ್ರಾವಿಡ್ 12000 ರನ್ ಸಾಧನೆಗಾಗಿ 148 ಪಂದ್ಯ ಹಾಗೂ 255 ಇನಿಂಗ್ಸ್ ಆಡಬೇಕಾಯಿತು. ಅದರಲ್ಲಿ 31 ಶತಕ ಹಾಗೂ 59 ಅರ್ಧ ಶತಕಗಳಿವೆ. 53.31 ಸರಾಸರಿ ಹೊಂದಿದ್ದಾರೆ.
82. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ 175 ಪಂದ್ಯಗಳಿಂದ 14509 ರನ್ ಗಳಿಸಿದ್ದಾರೆ.
83. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ 442 ಪಂದ್ಯಗಳಿಂದ 17598 ರನ್ ಗಳಿಸಿದ್ದಾರೆ.
84. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 175 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಅಂದರೇ 50 ಗಳಿಸಿದ್ದಾರೆ.
85. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 442 ಪಂದ್ಯಗಳಿಂದ 46 ಶತಕಗಳನ್ನ ಗಳಿಸಿದ್ದಾರೆ.
86. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 90 ಕ್ಕೆ ಅತಿ ಹೆಚ್ಚು ಭಾರಿ ಔಟದ ಆಟಗಾರ 18
87. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಆಟಗಾರ 61
88. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ ಆಟಗಾರ 16
89. ಸಚಿನ್ ತೆಂಡೂಲ್ಕರ್ 10 ಸಾವಿರಗಳ ರನ್ ಗಡಿ ದಾಟಿದ ಮೊದಲ ಆಟಗಾರ .
90. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ( 1796 ರನ್ ,ಸರಾಸರಿ 59.87 )
91. ಸಚಿನ್ ತೆಂಡೂಲ್ಕರ್ 15000 ರನ್ ಗಡಿ ದಾಟಿದ ಮೊದಲ ಆಟಗಾರ .
92. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪುರಸ್ಕಾರಗಳಿಸಿದ ಆಟಗಾರ 8 .
93. ಸಚಿನ್ ತೆಂಡೂಲ್ಕರ್ 1996 ರ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಮತ್ತು ಸರಾಸರಿ ಹೊಂದಿದ ಆಟಗಾರ ( 573 ರನ್ ಸರಾಸರಿ 87.16 )
94. ಸಚಿನ್ ತೆಂಡೂಲ್ಕರ್ ವಿಶ್ವಕಪ್ ನ ಒಂದೆ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ (2003 ರಲ್ಲಿ 673 ರನ್ ) .
95. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಆಟಗಾರ 90.
96. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಆಡಿದ ಆಟಗಾರ 442.
97. ಸಚಿನ್ ತೆಂಡೂಲ್ಕರ್ 10 ವರ್ಷಗಳ ಕಾಲ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಮೊದಲ ಆಟಗಾರ .
98. ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಟೆಸ್ಟ್ ಆಡಿದ ಆಟಗಾರ 175.
99. ಸಚಿನ್ ತೆಂಡೂಲ್ಕರ್ ರಾಜೀವ್ ಗಾಂಧಿ ಖೇಲ್ ರತ್ನ , ಅರ್ಜುನ್ ಮತ್ತು ಪದ್ಮಶ್ರೀ ಈ ಮೂರು ಪ್ರಶಸ್ತಿಗಳನ್ನ ಗಳಿಸಿದ ಏಕೈಕ ವ್ಯಕ್ತಿ .
100. ಸಚಿನ್ ತೆಂಡೂಲ್ಕರ್ ರಣಜಿ , ದುಲೀಪ್ ಮತ್ತು ಇರಾನಿ ಟ್ರೋಪಿಗಳಲ್ಲಿ ಚೊಚ್ಚಲ ಪಂದ್ಯ ಪಂದ್ಯ ಶತಕ ಬಾರಿಸಿದ ಏಕೈಕ ವ್ಯಕ್ತಿ .
101. ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ನ ಕೌಂಟಿ ಕ್ಲಬ್ ಯಾರ್ಕ್ ಶೈರ್ ತಂಡವನ್ನು ಪ್ರತಿನಿಧಿಸಿದ ಮೊದಲ ವಿದೇಶಿ ಆಟಗಾರ ( 19 ನೇ ವಯಸ್ಸಿನಲ್ಲೆ ಸೇರ್ಪಡೆ .
102. ಕ್ರೀಡಾ ಋತುವಿನಲ್ಲಿ 7 ಬಾರಿ ಸಚಿನ್ ಸಾವಿರ ರನ್ ಗಳ ಗಡಿ ದಾಟಿದ್ದಾರೆ.
103. ಸಚಿನ್ ತೆಂಡೂಲ್ಕರ್ ಕ್ರೀಡಾ ಋತುವಿನಲ್ಲಿ ಅತ್ಯಧಿಕ 1894 ರನ್ ಗಳಿಕೆ ( 1998 ).
104. ಸಚಿನ್ ತೆಂಡೂಲ್ಕರ್ 56 ಬಾರಿ ಪಂದ್ಯ ಶೇಷ್ಠರಾಗಿ ಆಯ್ಕೆಯಾಗಿದ್ದು ಈ ಬಾರಿ 5 ಪೈಕಿ ಭಾರತ ಸೋತಿದೆ.
105. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 50 ಶತಕ ಬಾರಿಸಿದ ಮೊದಲ ಆಟಗಾರ .
106. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 75 ಶತಕ ಸಿಡಿಸಿದ ಮೊದಲ ಆಟಗಾರ.
107. ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಟೆಸ್ಟ್ 175 ಪಂದ್ಯ 14513 ರನ್ ಏಕದಿನ 442 ಪಂದ್ಯ 17598 ರನ್ ಒಟ್ಟು 31,958 ರನ್ .
108. ಸಚಿನ್ ತೆಂಡೂಲ್ಕರ್ – ಗಂಗೂಲಿ ಮೊದಲ ವಿಕೆಟ್ ಅತಿ ಹೆಚ್ಚು ಜತೆಯಾಟ ನಡೆಸಿದ ವಿಶ್ವದಾಖಲೆ ಹೊಂದಿದ್ದಾರೆ, 128 ಪಂದ್ಯಗಳಲ್ಲಿ 6271 ರನ್ .
109. ಸಚಿನ್ ತೆಂಡೂಲ್ಕರ್ – ಗಂಗೂಲಿ 20 ಬಾರಿ ಮೊದಲ ವಿಕೆಟ್ ಶತಕದ ಜೊತೆಯಾಟ ನಡೆಸಿರುವುದ ದಾಖಲೆ.
110. ಸಚಿನ್ ತೆಂಡೂಲ್ಕರ್ – ದ್ರಾವಿಡ್ 1999 ರಲ್ಲಿ ನ್ಯೂಜಿಲೆಂಡ್ ವಿರುದ್ದ 331 ರನ್ ಗಳ ಜೊತೆಯಾಟ ನಡೆಸಿರುವುದು ವಿಶ್ವದಾಖಲೆಯಾಗಿದೆ.
111. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 200ರನ್ ಗಳ ಜೊತೆಯಾಟವನ್ನು 6 ಬಾರಿ ನಿಭಾಯಿಸಿದ್ದಾರೆ, ಸಚಿನ್ ಮತ್ತು ದ್ರಾವಿಡ್ ಈ ಸಾಧನೆಯಲ್ಲಿ ಸಮಪಾಲು ಪಡೆದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ