ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ಭಾರತದ ಆರ್ಥಿಕ, ಕೈಗಾರಿಕಾ ಅಭಿವೃದ್ಧಿ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದರು. ಜನರಲ್ ಎಲೆಕ್ಟ್ರೀಕ್ಸ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ರಿ ಇಮ್ಮೆಲ್ಟ್ ‘ಗ್ಲೋಬಲ್ ಲೀಡರ್‌ಷಿಪ್ ಅವಾರ್ಡ್’ ಪಡೆದುಕೊಂಡರು.
2. ಏಷ್ಯಾ ಮತ್ತು ಅಮೆರಿಕ ಉದ್ಯಮಿಗಳ ನಡುವೆ ಹೆಚ್ಚಿನ ಹೊಂದಾಣಿಕೆ ಮೂಡಿಸುವ ಸಲುವಾಗಿ ‘ಏಷ್ಯಾ ಸೊಸೈಟಿ’ ಸ್ಥಾಪಿಸಿರುವ ‘ಗ್ಲೋಬಲ್ ವಿಷನ್ ಅವಾರ್ಡ್’ ಪ್ರಶಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ, ಉದ್ಯಮಿ ಮುಖೇಶ್ ಅಂಬಾನಿ ಸ್ವೀಕರಿಸಿದರು.
3. ಅಮೆರಿಕಾದ ಅಧ್ಯಕ್ಷ 2012 ರ ಚುನಾವಣಿಗೆ ಪ್ರಸ್ತುತ ‘ಫಾಕ್ಸ್ ನ್ಯೂಸ್’ ಚಾನೆಲ್‌ನಲ್ಲಿ ವ್ಯಾಖ್ಯಾನಕಾರಿಣಿಯಾಗಿ ಮತ್ತು ಕಲಿಕಾ ಚಾನೆಲ್‌ನ ಕೇಬಲ್ ಜಾಲದ ಕಾರ್ಯಕ್ರಮ ವೊಂದರಲ್ಲಿ ಕಾಣಿಸಿ ಕೊಳ್ಳುತ್ತಿರುವ ಪಾಲಿನ್, ಪ್ರತಿ ಆವತರಣಿಕೆಗೆ (ಎಪಿಸೋಡ್) 2.50 ಲಕ್ಷ ಅಮೆರಿಕನ್ ಡಾಲರ್ ಸಂಭಾವನೆ ಪಡೆಯುತ್ತಿ ರುವುದಾಗಿ ‘ನ್ಯೂಯಾಕ್ ಟೈಮ್ಸ್’ ವರದಿ ಮಾಡಿದೆ.
4. ಸುಪ್ರೀಂಕೋರ್ಟ್‌ನಲ್ಲಿ ನಡೆದಿರುವ 2ಜಿ ಹಗರಣದ ವಿಚಾರಣೆಯಲ್ಲಿ ಪ್ರಧಾನಿ ಪರ ವಕಾಲತ್ತು ವಹಿಸುವ ಹೊಣೆಯನ್ನು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್ ಅವರಿಂದ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರಿಗೆ ಬದಲಾಯಿಸಲಾಗಿದೆ.
5. ಮುಂದಿನ ವರ್ಷದ ವೇಳೆಗೆ ದೇಶದ 9.306ಕೋಟಿ ಜನರು ಕೊಳೆಗೇರಿ ವಾಸಿಗಳಾಗಲಿದ್ದಾರೆ ಎಂದು ವಸತಿ, ಮತ್ತು ನಗರ ಬಡತನ ನಿರ್ಮೂಲನೆ ಸಚಿವೆ ಕುಮಾರಿ ಸೆಲ್ಜಾ ಶುಕ್ರವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
6. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಮೇಲಾ ಆ್ಯಂಡರ್ಸನ್ ತುಂಡುಡುಗೆಯಲ್ಲಿ ‘ಧಕ್ ಧಕ್ ಕರ್ನೇ ಲಗಾ..’ ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತು ‘ಅಶ್ಲೀಲತೆಯ ಆರೋಪದ ಮೇಲೆ ಈ ಕಾರ್ಯಕ್ರಮದ ಸಮಯ ಬದಲಾವಣೆಗೆ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಆದೇಶಿಸಿದ್ದು- ಜಾಗತಿಕ ಮಟ್ಟದಲ್ಲಿ ಈ ಜನಪ್ರಿಯ ಭಾರತೀಯ ರಿಯಾಲಿಟಿ ಶೋ ಪ್ರಚಾರವನ್ನು ಪಡೆಯಲು ನೆರವಾಗಿದೆ.
7. ಆಸ್ಟ್ರೇಲಿಯಾದಲ್ಲಿನ ಭಾರತೀಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ದೌರ್ಜನ್ಯದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಸಮುದಾಯದ ಪ್ರಮುಖರು ತಮ್ಮ ಹಕ್ಕುಗಳು ಹಾಗೂ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದಾರೆ.ಹೊಸ ಸಂಘಟನೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಆಸ್ಟ್ರೇಲಿಯನ್ಸ್ (ಎನ್‌ಸಿಐಎ) ಎಂದು ಹೆಸರಿಡಲಾಗಿದೆ.
8. ಪಾಕಿಸ್ತಾನ ತಂಡ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ವೆಂಟಿ-20 ಕ್ರಿಕೆಟ್ ಫೈನಲ್ ಪಂದ್ಯ ದಲ್ಲಿ ಬಾಂಗ್ಲಾದೇಶದ ವಿರುದ್ಧ 10 ವಿಕೆಟ್‌ಗಳ ಜಯ ಪಡೆಯಿತು.
9. ಮುಕ್ತ ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾ ರಾಜಧಾನಿ ಪಣಜಿ ನಲವತ್ತೊಂದನೆಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಜ್ಜಾಗಿದೆ. ಪಣಜಿಯನ್ನು ಚಿತ್ರೋತ್ಸವದ ಕಾಯಂ ನೆಲೆಯಾಗಿ ಪರಿಗಣಿಸಿದ ನಂತರ ನಡೆಯುತ್ತಿರುವ ಏಳನೇ ವರ್ಷದ ಚಿತ್ರೋತ್ಸವ ಇದು.
10. ಅಕ್ಟೋಬರ್ ತಿಂಗಳಲ್ಲಿ ದೇಶದ ರಫ್ತು ಪ್ರಮಾಣವು ಶೇ 21ರಷ್ಟು ವೃದ್ಧಿಯಾಗಿದ್ದು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಮದು ಹೆಚ್ಚಳವನ್ನು ಹಿಂದಿಕ್ಕಿದೆ.
11. ಭಾರತದ ಒಟ್ಟು 18 ಶತಕೋಟಿ ಡಾಲರ್‌ಗಳಷ್ಟು (ರೂ 90,000 ಕೋಟಿ) ರಫ್ತು ಸಾಧ್ಯವಾಗಿದ್ದು, ಆಮದು ಪ್ರಮಾಣವು ಶೇ 6.8ರಷ್ಟು ಏರಿಕೆಯಾಗಿ 28 ಶತಕೋಟಿ ಡಾಲರ್‌ಗಳಷ್ಟು (ರೂ 1,40,000 ಕೋಟಿ) ಆಗಿದೆ.
12. ಸೆಹ್ವಾಗ್ ಟೆಸ್ಟ್‌ನಲ್ಲಿ ಅವರ ಸಿಕ್ಸರ್‌ಗಳ ಸಂಖ್ಯೆ 84ಕ್ಕೇರಿತು. ಆ್ಯಡಂ ಗಿಲ್‌ಕ್ರಿಸ್ಟ್ (100 ಸಿಕ್ಸರ್) ದಾಖಲೆ ಹೊಂದಿದ್ದಾರೆ.
13. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಅಧ್ಯಕ್ಷರಾಗಿ ಭಾನುವಾರ 43 ಮತಗಳ ಅಂತರದಿಂದ ಆಯ್ಕೆಯಾದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಕ್ಷಣಕ್ಕೆ ಪ್ರತಿಕ್ರಿಯಿಸಿದ ಪರಿ ಇದು.
14. ಶ್ರೀನಾಥ್ ತಮ್ಮ ಪ್ರತಿಸ್ಪರ್ಧಿ ಎ.ವಿ. ಜಯಪ್ರಕಾಶ ವಿರುದ್ಧ 245 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
15. ಅಂತರರಾಷ್ಟ್ರೀಯ ಕ್ರಿಕೆಟ್‌ರಂಗದಲ್ಲಿ ಅಪಾರ ಅನುಭವ ಪಡೆದಿರುವ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಅತ್ಯಧಿಕ ಮತಗಳಿಂದ ಗೆದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದರು.
16. ಕುಂಬ್ಳೆ ಬಣದಿಂದ ಉಪಾಧ್ಯಕ್ಷರಾಗಿ ರಾಜರ್ ಬಿನ್ನಿ, ಬಿ.ಕೆ. ವೆಂಕಟೇಶ್ ಪ್ರಸಾದ್, ಪಿ. ಸದಾನಂದ ಮಯ್ಯ, ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
17. ಏಷ್ಯನ್ ಕ್ರೀಡಾಕೂಟದ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ‘ಬೆಂಗಳೂರು ಹುಡುಗ’ ಪಂಕಜ್ ಅಡ್ವಾಣಿ.
18. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ 1995ರಿಂದ ಈವರೆಗೆ ನಡೆದಿರುವ ಭೂಹಗರಣಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್ ನೇತೃತ್ವದ ಆಯೋಗವನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
19.
20. ವಿಶ್ವದ ಪ್ರತಿಷ್ಠಿತ ಶಿಷ್ಯವೇತನ ‘ರೋಡ್ಸ್ ಸ್ಕಾಲರ್‌ಷಿಪ್-2011’ಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 4 ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
21. ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರಲು ಸುಲಭ ಮಾರ್ಗವಾಗಿರುವ ಅಮೆರಿಕ ಗ್ರೀನ್ ಕಾರ್ಡ್ ವಾರ್ಷಿಕ ಲಾಟರಿ ಯೋಜನೆಗೆ ನಾನಾ ದೇಶಗಳ 1.5 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ.
22. ‘ಅಲ್ಪಸಂಖ್ಯಾತರ ಸ್ಥಿತಿ- ಗತಿಗಳ ಅಧ್ಯಯನಕ್ಕೆ ನೇಮಕ ಮಾಡಲಾದ ಸಾಚಾರ್, ರಂಗನಾಥ್ ಮಿಶ್ರಾ ನೇತೃತ್ವದ ಸಮಿತಿಗಳು ವರದಿ ನೀಡಿದ್ದರೂ ಅವುಗಳ ಶಿಫಾರಸುಗಳನ್ನು ಜಾರಿಗೆ ತರುವ ಕೆಲಸ ಮಾತ್ರ ಆಗುತ್ತಿಲ್ಲ’
23. ಭಾರತದರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಅವರು ಸೋಮವಾರ ಅಧ್ಯಕ್ಷರ ಅರಮನೆಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
24. ನ್ಯಾಯಮೂರ್ತಿ ಪದ್ಮರಾಜ್ ಅವರು ಪ್ರಸ್ತುತ ರಾಜ್ಯದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಶುಲ್ಕ ನಿಯಂತ್ರಣ ಆಯೋಗದ ಅಧ್ಯಕ್ಷರಾಗಿದ್ದಾರೆ.
25. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಆತ್ಮ ಚರಿತ್ರೆ ‘ಡಿಸಿಷನ್ ಪಾಯಿಂಟ್’ ಕೃತಿ ಅತ್ಯುತ್ತಮ ಮಾರಾಟವಾದ ಪುಸ್ತಕವಾಗಿದ್ದು, 10 ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ.
26. ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಏರಿಸುವ ಸಂಬಂಧ ಸಂವಿಧಾನದ ಉದ್ದೇಶಿತ (114ನೇ ತಿದ್ದುಪಡಿ) ಮಸೂದೆ 2010 ಗೆ ಹಲವಾರು ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
27. ಬಹಳ ದಿನಗಳಿಂದ ಎದುರು ನೋಡುತ್ತಿದ್ದ, ಮೊಬೈಲ್ ಸೇವಾ ಸಂಸ್ಥೆ ಬದಲಿಸಿದರೂ ಮೊಬೈಲ್ ಸಂಖ್ಯೆ ಬದಲಾಗದ (ಮೊಬೈಲ್ ನಂಬರ್ ಪೋರ್ಟೆಬಿಲಿಟಿ-ಎಂಎನ್‌ಟಿ) ಸೇವಾ ಸೌಲಭ್ಯವು ಗುರುವಾರ ಹರಿಯಾಣ ವೃತ್ತದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಲನೆಗೆ ಬಂದಿತು.
28. ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಈ ಸೇವೆಯನ್ನು ಇಲ್ಲಿ ಉದ್ಘಾಟಿಸಿದರು ದೇಶದಾದ್ಯಂತ ಇರುವ ಉಳಿದ 21 ವೃತ್ತಗಳಲ್ಲಿ ಈ ಸೇವೆಯು 2011ರ ಜನವರಿ 20ರಿಂದ ಜಾರಿಗೆ ಬರಲಿದೆ.
29. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥ ಅಧ್ಯಕ್ಷ ಡೊಮಿನಿಕ್ ಸ್ಟ್ರಾಸ್ ಕಾನ್.
30. ವಿಕಿಲೀಕ್ಸ್ ಬಹಿರಂಗಗೊಳಿಸಿರುವ ಅಮೆರಿಕದ 2.5 ಲಕ್ಷ ರಹಸ್ಯ ದಾಖಲೆಗಳ ಪೈಕಿ 3038 ದಾಖಲೆಗಳು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಸಂಬಂಧಪಟ್ಟವು ಎಂಬ ಸಂಗತಿಗೆ ಇದೀಗ ಬೆಳಕಿಗೆ ಬಂದಿದೆ.
31. ರಹಸ್ಯ ದಾಖಲೆಗಳೇನಲ್ಲ; 2,51,287 ದಾಖಲೆಗಳ ಪೈಕಿ 11,000 ದಾಖಲೆಗಳು ಮಾತ್ರ ಗೋಪ್ಯಕ್ಕೆ ಅರ್ಹವಾದವು; 9000 ದಾಖಲೆಗಳು ‘ವಿದೇಶೀಯರಿಗೆ ನಿಷಿದ್ಧ’ ಎಂದು ವರ್ಗೀಕರಣಗೊಂಡಿದ್ದವು; 4000 ದಾಖಲೆಗಳು ‘ಗೋಪ್ಯತೆಯ ಜತೆಗೆ ವಿದೇಶೀಯರಿಗೆ ನಿಷೇಧ’ ವಿಭಾಗದಡಿ ಸೇರಿದ್ದವು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
32. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿಯ ನಡೆಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲು ಅವರು 2009ರ ಜುಲೈ 31ರಂದು ಸೂಚಿಸಿದ್ದರು.
33. ನೀರಾ ರಾಡಿಯಾ ಮತ್ತು ಆಕೆಯು ತನ್ನ ಗ್ರಾಹಕರೊಂದಿಗೆ ನಡೆಸಿದ ಸಂಭಾಷಣೆಯ ಧ್ವನಿಮುದ್ರಣದ ಕ್ಯಾಸೆಟ್ ಸೋರಿಕೆ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
34. ಆಜಾದಿ ಬಚಾವೊ ಆಂದೋಲನದ ಚಳವಳಿಕಾರ, ಸ್ವದೇಶಿ ಚಿಂತನೆಯ ಪ್ರಚಾರಕ ರಾಜೀವ್ ದೀಕ್ಷಿತ್ (44) ಅವರು ತೀವ್ರ ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
35. ‘ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಪಿ.ಜೆ.ಥಾಮಸ್.
36. ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಇಂಟರ್‌ಪೋಲ್‌ ಬಂಧನಕ್ಕಾಗಿ ವಾರೆಂಟ್ ಹೊರಡಿಸಿದೆ.
37. ವಿವಾದಿತ ಇಟಾಸ್ಕಾ ಕಂಪೆನಿಗೆ ಕೆಐಎಡಿಬಿ ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು 87 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ 10 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
38. ಭಾರತೀಯ ದಂಡ ಸಂಹಿತೆ (ಐಪಿಸಿ)ಕಲಮು 491ನೇ (ಪರರ ಹೆಸರು ಹೇಳಿ ವಂಚನೆ),
39. ಭಾರತೀಯ ದಂಡ ಸಂಹಿತೆ (ಐಪಿಸಿ) 420 (ವಂಚನೆ),
40. ಭಾರತೀಯ ದಂಡ ಸಂಹಿತೆ (ಐಪಿಸಿ) 465 (ನಕಲಿ ದಾಖಲೆ ಸೃಷ್ಟಿ),
41. ಭಾರತೀಯ ದಂಡ ಸಂಹಿತೆ (ಐಪಿಸಿ) 468 (ಬೇರೆಯವರನ್ನು ವಂಚಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು) 32 - ರೆಡ್ ವಿತ್ 120 ಬಿ (ಒಳಸಂಚು)
42. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 7 - ಕಚೇರಿಯ ಕೆಲಸ ಮಾಡಿಕೊಡಲು ಲಂಚ ಪಡೆಯುವುದು.
43. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 8 - ಸರ್ಕಾರಿ ಅಧಿಕಾರಿಗಳಿಗೆ ಶಿಫಾರಸು ಮಾಡುವ ಸಲುವಾಗಿ ಲಂಚ ಪಡೆಯುವುದು.
44. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 12- ಲಂಚ ಪಡೆಯಲು ಪ್ರಚೋದಿಸುವುದು.
45. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಮು 13(1)(ಡಿ)- ಲಂಚ ಪಡೆಯುವ ಸಂಬಂಧ ಅನುಚಿತ ವರ್ತನೆ.
46. 2ಜಿ ಸ್ಪ್ರಕ್ಟ್ರಮ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಕಳೆದ 15 ದಿನಗಳಿಂದ ಸಂಸತ್ ಕಲಾಪಗಳಿಗೆ ಅಡ್ಡಿ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಬೊಕ್ಕಸಕ್ಕೆ 95 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
47. ಪ್ರಸಕ್ತ ವರ್ಷದ ಲೋಕಸಭೆ ಬಜೆಟ್ 347.65 ಕೋಟಿ ರೂಪಾಯಿಯಾದರೆ ರಾಜ್ಯಸಭೆಗೆ 172.33 ಕೋಟಿ ರೂಪಾಯಿ. ಒಟ್ಟಾರೆ ಸಂಸತ್ತಿಗೆ 527.45 ಕೋಟಿ ರೂಪಾಯಿ ನಿಗದಿಯಾಗಿದೆ.
48. ನ್ಯೂಟ್ರಾನ್ ಬಾಂಬ್ ಅನ್ವೇಷಕ ಸ್ಯಾಮುಯೆಲ್ ಟಿ. ಕೋಹೆನ್(89) ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ನಿಧನರಾದರು. ಅವರು ಉದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
49. ಪರಮಾಣು ಶಸ್ತ್ರಾಸ್ತ್ರಗಳಿಗೆ ಪರ್ಯಾಯವಾಗಿ ಪರಿಣಾಮಕಾರಿಯಾಗಿ ಬಳಸುವಂತಹ ನ್ಯೂಟ್ರಾನ್ ಬಾಂಬ್‌ಅನ್ನು ಕೋಹೆನ್ 1958ರಲ್ಲಿ ಕಂಡುಹಿಡಿದಿದ್ದರು.
50. ಅಕ್ರಮವಾಗಿ ಭೂಮಿ ಪಡೆಯಲು ಸಚಿವರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಯುನೈಟೆಡ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪೂರ್ಣಯ್ಯ.
51. ಪ್ರಸ್ತುತ 4,000 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಭೂಮಿಯನ್ನು ಹೊಂದಿರುವ ಇಟಾಸ್ಕಾ ಕಂಪೆನಿ ಭೂಮಿ ಪಡೆಯುವ ಹಾದಿಯುದ್ದಕ್ಕೂ ಅಕ್ರಮವನ್ನೇ ಮಾಡಿತ್ತು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ.
52. ರೂ 1 ಲಕ್ಷ ಮೌಲ್ಯದ ಕಂಪೆನಿಯಲ್ಲಿ ಯುನೈಟೆಡ್ ಟೆಲಿಕಾಂ ಬರೋಬ್ಬರಿ 350 ಕೋಟಿ ಷೇರು ಹೂಡಿಕೆ ಮಾಡುತ್ತದೆ.
53. ಅಚ್ಚರಿಯ ಸಂಗತಿ ಎಂದರೆ ‘ಸೌಭಾಗ್ಯ ಪೆಟ್ರೋಲ್ ಬಂಕ್’ನ ಕಾರ್ಮಿಕರ ಹೆಸರಿನಲ್ಲೇ ಇಂದೂ ಬಿಲ್ಡರ್ಸ್ ಎಂಬ ಬೇನಾಮಿ ಕಂಪೆನಿ ಅಸ್ತಿತ್ವಕ್ಕೆ ಬಂದಿತ್ತು.
54. ಚೀನಾದ ಒಂದು ಅತಿ ವೇಗದ ಪ್ರಯಾಣಿಕರ ರೈಲು ಪರೀಕ್ಷಾರ್ಥ ಓಡಿಸಿದ ವೇಳೆ ಗಂಟೆಗೆ 486 ಕಿ.ಮೀ. ಚಲಿಸಿ ವಿಶ್ವ ದಾಖಲೆಯನ್ನು ಮುರಿದಿದೆ ಎಂದು ಚೀನಾದ ರೈಲ್ವೆ ಸಚಿವಾಲಯ ತಿಳಿಸಿದೆ.
55. ಆರೋಪಿಯನ್ನು ಶರಣಾಗತನಾಗಿ ನಂತರ ಕ್ರಮಬದ್ಧವಾಗಿ ಜಾಮೀನು ಪಡೆಯುವಂತೆ ಯಾವುದೇ ಷರತ್ತು ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ನ್ಯಾಯಾಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಕೆ.ಎಸ್. ರಾಧಾಕೃಷ್ಣನ್ ಹೇಳಿದ್ದಾರೆ.
56. ಪರಮಾಣು ಬಾಧ್ಯತಾ ಮಸೂದೆೆಯಲ್ಲಿನ ಕರಾರುಗಳು ಭಾರತದ ಆಂತರಿಕ ಪರಮಾಣು ಕೈಗಾರಿಕೆಗೆ ತೀವ್ರವಾದ ಪೆಟ್ಟು ನೀಡಲಿದೆ ಎಂದು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
57. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆ ಎಸಗಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಸಂಚು ರೂಪಿಸಿದ್ದ ಸಂಗತಿ ವಿಕಿಲೀಕ್ಸ್ ಅಮೆರಿಕದ ಬೇಹುಗಾರಿಕಾ ದಳ 2009ರ ಜೂನ್ 19ರಂದು ಅಮೆರಿಕ ಸರ್ಕಾರಕ್ಕೆ ಈ ಆಘಾತಕಾರಿ ಮಾಹಿತಿ ರವಾನಿಸಿದ್ದ ಅಂಶ ದಾಖಲೆಯಿಂದ ದೃಢಪಟ್ಟಿದೆ.
58. ಕ್ವಾಲಾಲಂಪುರ ಅಂತಿಮ ಸುತ್ತಿನ ಪ್ರತಿಭಾ ಸ್ಪರ್ಧೆಯಲ್ಲಿ ‘ಬೆಲ್ಲಿ’ ನೃತ್ಯ ಪ್ರದರ್ಶಿಸಿದ ನಿಕೋಲ್ 17 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ‘ಮಿಸ್ ಅರ್ಥ್’ ಆಗಿ ಹೊರಹೊಮ್ಮಿದರು.
59. ಬ್ಲ್ಯಾಕ್ ಬೆರಿ ಮೆಸೆಂಜರ್ ಸೇವೆಯಲ್ಲಿ (ಬಿಬಿಎಂ) ಬಳಸುವ ಗೂಢ ಲಿಫಿಯ ಕುರಿತು ಭಾರತ ಸರ್ಕಾರಕ್ಕೆ ಕಾನೂನು ರೀತಿಯಲ್ಲಿ ಮಾಹಿತಿ ನೀಡುವುದಾಗಿ ರಿಸರ್ಚ್ ಇನ್ ಮೋಷನ್ (ರಿಮ್) ಹೇಳಿದೆ.‘
60. ಹರಾಜಿನಲ್ಲಿ ಕೊಚ್ಚಿ ತಂಡವನ್ನು 1533.33 ಕೋಟಿ ರೂಪಾಯಿಗೆ ಕೊಳ್ಳಲಾಗಿತ್ತು.
61. ಕೊಚ್ಚಿ ತಂಡದ ಪಾಲುದಾರ ಕಂಪೆನಿಗಳಾದ ಆ್ಯಂಕರ್ ಅರ್ಥ್, ಪಾರಿನೀ ಡೆವಲಪರ್ಸ್, ರೋಸಿ ಬ್ಲೂ ಮತ್ತು ಫಿಲ್ಮ್ ವೇವ್ ಬಳಿ ಶೇ 74 ರಷ್ಟು ಷೇರು ಇವೆ. ಉಳಿದ ಶೇ 26 ಪಾಲು ‘ಫ್ರೀ ಈಕ್ವಿಟಿ’ ರೂಪದಲ್ಲಿ ಗಾಯಕ್ವಾಡ್ ಕುಟುಂಬದ ರೆಂಡೆವೂ ಸ್ಪೋರ್ಟ್ಸ್ ವರ್ಲ್ಡ್ ಕಂಪೆನಿಯ ಬಳಿಯಿದೆ.
62. ಐಪಿಎಲ್ ಒಪ್ಪಂದವನ್ನು ಮುರಿದದ್ದಕ್ಕೆ ಬಿಸಿಸಿಐ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಈಗಾಗಲೇ ನಾಲ್ಕನೇ ವರ್ಷದ ಟೂರ್ನಿಯಲ್ಲಿ ಪಾಲ್ಗೊಳ್ಳುವುದರ ಮೇಲೆ ನಿಷೇಧ ಹೇರಿದೆ.
63. ಇಪ್ಪತ್ತೊಂದನೆಯ ಶತಮಾನದಲ್ಲಿ ಸುದ್ದಿಯ ಸ್ವರೂಪ ಮತ್ತು ವಿಶ್ವಾಸಾರ್ಹತೆಯನ್ನೇ ಬದಲಿಸಿರುವ ವಿಕಿಲೀಕ್ಸ್ ಒಂದು ಸ್ವತಂತ್ರ ಸುದ್ದಿ ಮಾಧ್ಯಮ ಸಂಸ್ಥೆ. ಜ್ಯೂಲಿಯನ್ ಅಸ್ಸಾಂಜೆ ಎಂಬಾತ 2006ರಲ್ಲಿ ಇದನ್ನು ಹುಟ್ಟು ಹಾಕಿದ.
64. ವಿಕಿಲೀಕ್ಸ್ ‘ದಿ ಸನ್‌ಶೈನ್ ಪ್ರೆಸ್’ ಎಂಬ ಹೆಸರಿನ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.
65. ಸ್ವಯಂ ಸನ್‌ಶೈನ್ ಸಂಸ್ಥೆಯೇ ಹೇಳಿಕೊಂಡಿರುವಂತೆ ಚೀನಾದ ಕೆಲವು ಬಂಡುಕೋರರು ಇದರ ಜನ್ಮದಾತರು.
66. 2008ರ ಸಾಲಿನ ‘ಎಕನಾಮಿಸ್ಟ್’ ನಿಯತಕಾಲಿಕದ ಮಾಧ್ಯಮ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿರುವ ವಿಕಿಲೀಕ್ಸ್ ನಿಜಕ್ಕೂ ಈಗ ಭ್ರಷ್ಟರು ಹಾಗೂ ದಾರಿ ಬಿಟ್ಟ ರಾಷ್ಟ್ರಗಳ ಪಾಲಿನ ಅದ್ಭುತ ಕಾವಲುಗಾರ.
67. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಅನುಸಾರ ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಆಸ್ಟ್ರೇಲಿಯಾ ಮೂಲದವನು.
68. ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶ ಈತನನ್ನು ನಮ್ಮಲ್ಲಿಗೆ ಬಾ ನಿನ್ನನ್ನು ರಕ್ಷಿಸುತ್ತೇವೆ ಎಂದು ಕೈಬೀಸಿ ಕರೆಯುತ್ತಿದೆ.
69. ವಾರ್ಷಿಕ ಹಜ್ ಯಾತ್ರೆ ವೇಳೆ ಸಂಗ್ರಹವಾಗುವ ಭಾರಿ ಪ್ರಮಾಣದ ಹಣವನ್ನೇ 26/11 ದಾಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಮೆರಿಕದ ರಾಯಭಾರ ಕಚೇರಿ ಶಂಕಿಸಿರುವುದನ್ನು ವಿಕಿಲೀಕ್ಸ್ ವೆಬ್‌ಸೈಟ್ ಬಹಿರಂಗಪಡಿಸಿದೆ.
70. ಚೀನಾ ಜತೆಗಿನ ರಾಜತಾಂತ್ರಿಕ ಸಂಬಂಧದಲ್ಲಿ ಯಾವುದಾದರೂ ತೊಂದರೆ ಎದುರಾದರೆ ಅದರ ವಿರುದ್ಧ ಬಲ ಪ್ರಯೋಗಕ್ಕೂ ಅಮೆರಿಕ ಸಜ್ಜಾಗಿರಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಅವರು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ತಿಳಿಸಿದ್ದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
71. ನಿಷೇಧಿತ ಉಗ್ರವಾದಿ ಸಂಘಟನೆ ಲಷ್ಕರ್-ಎ- ತೊಯ್ಬಾ, ತನ್ನ ಕಾರ್ಯ ಚಟುವಟಿಕೆಗಳಿಗಾಗಿ ಪ್ರತಿ ವರ್ಷ 52 ಲಕ್ಷ ಡಾಲರ್ ಆಯವ್ಯಯವನ್ನು ಹೊಂದಿದೆ ಎಂದು ಅಮೆರಿಕದ ರಹಸ್ಯ ದಾಖಲೆಯಿಂದ ತಿಳಿದು ಬಂದಿದೆ.
72. ಲಷ್ಕರ್‌ನ ಈ ಬೃಹತ್ ಮೊತ್ತದ ಆಯವ್ಯಯಕ್ಕೆ ಜಮಾತ್-ಉದ್- ದುವಾ ಸಂಘಟನೆಯ ದತ್ತಿನಿಧಿಯಿಂದ ಹಣ ಹರಿದು ಬರುತ್ತಿದೆ.
73. ಹಫೀಜ್ ಸಯೀದ್ ಎಂಬಾತ ಲಷ್ಕರ್-ಎ-ತೊಯ್ಬಾ ಮತ್ತು ಜಮಾತ್- ಉದ್- ದುವಾ ಎರಡೂ ಸಂಘಟನೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾನೆ.
74. ಹೊಸ ಅಧ್ಯಯನದ ಪ್ರಕಾರ ಹವಾಮಾನ ವೈಪರಿತ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ 2100ರ ವೇಳೆಗೆ ಸಮುದ್ರ ಮಟ್ಟ 3.3 ಅಡಿ (ಒಂದು ಮೀಟರ್) ಹೆಚ್ಚಳವಾಗಬಹುದು,
75. ಜಪಾನ್ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ 2011ರ ಹಣಕಾಸು ವರ್ಷದಲ್ಲಿ ಪರಿಸರ ತೆರಿಗೆಯನ್ನು ಜಾರಿಗೆ ತರಲು ಸರ್ಕಾರಿ ತೆರಿಗೆ ಆಯೋಗ ನಿರ್ಧರಿಸಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
76. 9 ಶತಮಾನಗಳ ಹಿಂದೆ ಚೀನಾ ಆಡಳಿತದ ಚುಕ್ಕಾಣಿ ಹಿಡಿದಿದ್ದ ಚಕ್ರವರ್ತಿ ಸ್ಯಾಂಗ್ ಹ್ಯೂತ್ಸಾಂಗ್ ಅವರ ಕಾಲದ ಸಾಂಪ್ರದಾಯಿಕ ತಂತಿವಾದ್ಯ ಇಲ್ಲಿ ನಡೆದ ಹರಾಜಿನಲ್ಲಿ 2ಕೋಟಿ ಡಾಲರ್‌ಗೆ ದಾಖ ಲೆಯ ಮಾರಾಟವಾಗಿದೆ.
77. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ‘ಆಟಗಾರರಾದ ಸಲ್ಮಾನ್ ಬಟ್, ಮೊಹಮ್ಮದ್ ಆಸೀಫ್ ಮತ್ತು ಮೊಹಮ್ಮದ್ ಆಮೇರ್ ಅವರು ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಬಹುದು’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸುದ್ದಿಸಂಸ್ಥೆಗೆ ತಿಳಿಸಿದೆ.
78. ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಮಸೂದೆ- 2010’ ಅಡಿಯಲ್ಲಿ ಮನೆಗೆಲಸ ಮಾಡುವ ಮಹಿಳೆಯರನ್ನು ತರಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
79. ಅಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರಿಗೆ ಪ್ರತಿಷ್ಠಿತ ಹೋಮಿಭಾಭಾ ಆಜೀವ ಸಾಧನೆ ಪ್ರಶಸ್ತಿಯನ್ನು ಜನವರಿ 17 ರಂದು ಇಲ್ಲಿ ನಡೆಯುವ ಭಾರತೀಯ ಪರಮಾಣು ಸಂಸ್ಥೆಯ 21ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು.
80. ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ
81. IPCC – Intergovernmetal Panel On Climate Change
82. ಇರಾನಿನ ವಿಜ್ಞಾನಿಯೊಬ್ಬರು ಆಯ್ಕೆಯಾಗುವುದನ್ನು ತಡೆಗಟ್ಟುವುದಕ್ಕಾಗಿ ಅಮೆರಿಕವು ಐಪಿಸಿಸಿ ಮುಖ್ಯಸ್ಥರೂ ಆದ ವಿಶ್ವಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಆರ್. ಕೆ. ಪಚೌರಿ ಅವರ ಮೇಲೆ ಒತ್ತಡ ಹೇರಿತ್ತು ಎಂಬ ಅಂಶ ವಿಕಿಲೀಕ್ಸ್ ವೆಬ್‌ಸೈಟ್‌ನಿಂದ ಬಹಿರಂಗವಾಗಿದೆ.
83. 2050 ವೇಳೆಗೆ ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು ಶೇ. 80ರಷ್ಟು ನಿಯಂತ್ರಿಸುವ ಯೋಜನೆಯನ್ನು ಅಮೆರಿಕ ಹೊಂದಿದೆ.
84. ಅಂತರರಾಷ್ಟ್ರೀಯ ಸರಾಸರಿಯಂತೆ ಶೇ 71ರಷ್ಟು ಜನರು ಮದ್ಯ ಸೇವಿಸುತ್ತಿದ್ದರೆ,
85. ಭಾರತದಲ್ಲಿ ಈ ಪ್ರಮಾಣ ಕೇವಲ ಶೇ 27ರಷ್ಟು ಮಾತ್ರ. ಮೊದಲ ಸ್ಥಾನದಲ್ಲಿ ಬ್ರಿಟನ್ ಇದೆ. ಅಲ್ಲಿ ಶೇ 84ರಷ್ಟು ಮಂದಿ ಕುಡಿತದ ಚಟ ಅಂಟಿಸಿಕೊಂಡಿದ್ದಾರೆ.
86. ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ.
87. ಎನ್‌ಡಿಎ ಆಡಳಿತವನ್ನೂ ಒಳಗೊಂಡಂತೆ 2001-09ರ ಅವಧಿಯಲ್ಲಿನ 2ಜಿ ತರಂಗಾಂತರ ಹಂಚಿಕೆ ಹಗರಣ ಪರಿಶೀಲನೆಗೆ ಸರ್ಕಾರ ಗುರುವಾರ ಏಕ ವ್ಯಕ್ತಿ ಸಮಿತಿ ರಚಿಸಿದೆ. ನಾಲ್ಕು ವಾರಗಳಲ್ಲಿ ಸಮಿತಿಯು ವರದಿ ನೀಡುವ ನಿರೀಕ್ಷೆ ಇದೆ.
88. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರನ್ನು ಒಳಗೊಂಡ ಏಕ ವ್ಯಕ್ತಿ ಸಮಿತಿಯು ‘2001-09ರ ಅವಧಿಯಲ್ಲಿ ತರಂಗಾಂತರ ಹಂಚಿಕೆಗೆ ಮತ್ತು ಪರವಾನಗಿ ವಿತರಣೆಗೆ ದೂರ ಸಂಪರ್ಕ ಇಲಾಖೆ ಅಳವಡಿಸಿಕೊಂಡಿದ್ದ ಕಾರ್ಯ ವಿಧಾನದ ಯುಕ್ತಾಯುಕ್ತತೆಯನ್ನು ಪರಿಶೀಲಿಸಲಿದೆ’.
89. ದೂರಸಂಪರ್ಕ ನೀತಿಯಲ್ಲಿ ಹಲವು ಲೋಪಗಳಾಗಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎಂದು ಟಾಟಾ ಉದ್ಯಮ ಸಮೂಹದ ಮುಖ್ಯಸ್ಥ ರತನ್ ಟಾಟಾ ಆಪಾದಿಸಿದ್ದಾರೆ.
90. ಭಾರತದಲ್ಲಿ ಶೇ 54ರಷ್ಟು ಮಂದಿ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ!
91. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು: ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ಭಾರತ), ಮುರಳಿ ವಿಜಯ್ (ಭಾರತ), ಸುರೇಶ್ ರೈನಾ (ಭಾರತ), ಅಲ್ಬಿ ಮಾರ್ಕೆಲ್ (ದಕ್ಷಿಣ ಆಫ್ರಿಕಾ).
92. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ಮುಂಬೈ ಇಂಡಿಯನ್ಸ್: ಸಚಿನ್ ತೆಂಡೂಲ್ಕರ್ (ಭಾರತ), ಹರಭಜನ್ ಸಿಂಗ್ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಕಿರೋನ್ ಪೊಲಾರ್ಡ್ (ವೆಸ್ಟ್ ಇಂಡೀಸ್).
93. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ರಾಜಸ್ತಾನ್ ರಾಯಲ್ಸ್: ಶೇನ್ ವಾರ್ನ್ (ಆಸ್ಟ್ರೇಲಿಯಾ), ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ).
94. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ದೆಹಲಿ ಡೇರ್‌ಡೆವಿಲ್ಸ್: ವೀರೇಂದ್ರ ಸೆಹ್ವಾಗ್ (ಭಾರತ).
95. ಮೂಲ ಐಪಿಎಲ್ ತಂಡದಲ್ಲಿಯೇ ಉಳಿದ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ಭಾರತ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ