ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ - ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು.
2. ಕರ್ನಾಟಕದಲ್ಲಿ ಅತಿ ದೊಡ್ಡ ಮೃಗಾಲಯ - ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು.
3. ಕರ್ನಾಟಕದಲ್ಲಿ ಅತಿ ದೊಡ್ಡ ವಿಗ್ರಹ - ಗೊಮ್ಮಟೇಶ್ವರ, ಶ್ರವಣಬೆಳಗೊಳ.
4. ಕರ್ನಾಟಕದಲ್ಲಿ ಅತಿ ದೊಡ್ಡ ಗುಮ್ಮಟ - ಗೋಲಗುಮ್ಮಟ, ವಿಜಾಪುರ.
5. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷಿಧಾಮ - ರಂಗನತಿಟ್ಟು, ಮಂಡ್ಯ.
6. ಕರ್ನಾಟಕದಲ್ಲಿ ಅತಿ ದೊಡ್ಡ ಬಂದರು - ನವಮಂಗಳೂರು ಬಂದರು, ಮಂಗಳೂರು.
7. ಕರ್ನಾಟಕದಲ್ಲಿ ಅತಿ ದೊಡ್ಡ ಹೊರಾಂಗಣ ಕ್ರೀಡಾಂಗಣ - ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
8. ಕರ್ನಾಟಕದಲ್ಲಿ ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ - ಕಂಠೀರವ ಕ್ರೀಡಾಂಗಣ, ಬೆಂಗಳೂರು
9. ಕರ್ನಾಟಕದಲ್ಲಿ ಅತಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ - ಶರಾವತಿ
10. ಕರ್ನಾಟಕದಲ್ಲಿ ಅತಿ ದೊಡ್ಡ ನೀರಾವರಿ ಯೋಜನೆ ಹೊಂದಿರುವ ನದಿ – ಕಾವೇರಿ.
11. ಕರ್ನಾಟಕದಲ್ಲಿ ಅತಿ ದೊಡ್ಡ ಪುಸ್ತಕ ಮಳಿಗೆ - ಸಪ್ನಾ ಬುಕ್ ಸ್ಟಾಲ್, ಬೆಂಗಳೂರು
12. ಕರ್ನಾಟಕದಲ್ಲಿ ಅತಿ ದೊಡ್ಡ ಕೆರೆ - ಶಾಂತಿಸಾಗರ (ಸೂಳೆಕೆರೆ), ಚನ್ನಗಿರಿ (ದ.ಭಾರತದ 2ನೇ ಅತಿ ದೊಡ್ಡ ಕೆರೆ)
13. ಕರ್ನಾಟಕದಲ್ಲಿ ಅತಿ ದೊಡ್ಡ ಆಲದಮರವಿರುವ ಊರು - ರಾಮೋಹಳ್ಳಿ, ಬೆಂಗಳೂರು
14. ಕರ್ನಾಟಕದಲ್ಲಿ ಅತಿ ದೊಡ್ಡ ಗ್ರಾಮಪಂಚಾಯಿತಿ - ಹಾರೂಗೇರಿ, ರಾಯಬಾಗ ವಿ.ಸ.ಕ್ಷೇತ್ರ.
15. ಕರ್ನಾಟಕದಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ - ........., ಬೆಂಗಳೂರು
16. ಕರ್ನಾಟಕದಲ್ಲಿ ಅತಿ ದೊಡ್ಡ ಲೋಕಸಭಾ ಕ್ಷೇತ್ರ - ಬೆಂಗಳೂರು ಉತ್ತರ (ದೇಶದಲ್ಲಿ 2ನೇ ಅತಿ ದೊಡ್ಡ)
17. ಕರ್ನಾಟಕದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ - ಬೃ.ಬೆಂ.ಮ.ಪಾ. (ಚುನಾವಣಾ ಆಯೋಗ ಬೃ.ಬೆಂ.ಮ.ಪಾ.ಅನ್ನು ಚುನಾವಣಾ ಜಿಲ್ಲೆ ಎಂದು ಪರಿಗಣಿಸಿದೆ.)
18. ಕರ್ನಾಟಕದಲ್ಲಿ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ - ರಾಮನಗರ ಮಾರುಕಟ್ಟೆ, ರಾಮನಗರ
19. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಬೆಂಗಳೂರು ನಗರ
20. ಕರ್ನಾಟಕದಲ್ಲಿ ಅತಿ ಜನಸಂಖ್ಯೆ ಹೊಂದಿರುವ ನಗರ / ಜಿಲ್ಲೆ - ಬೆಂಗಳೂರು ನಗರ
21. ಕರ್ನಾಟಕದಲ್ಲಿ ಅತಿ ಹೆಚ್ಚು ಅನಕ್ಷರತೆ ಹೊಂದಿರುವ ಜಿಲ್ಲೆ - ರಾಯಚೂರು
22. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ ( 814.5 ಹೆಕ್ಟೇರು )
23. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ – ಆಗುಂಬೆ (ದೇಶದ 2ನೇ ಅತಿ ಹೆಚ್ಚು)
24. ಕರ್ನಾಟಕದಲ್ಲಿ ಅತಿ ಚಿಕ್ಕ ಜಿಲ್ಲೆ - ಬೆಂಗಳೂರು ನಗರ ಜಿಲ್ಲೆ
25. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ (131.5)
26. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ - ಕೊಡಗು
27. ಕರ್ನಾಟಕದಲ್ಲಿ ಅತಿ ಚಿಕ್ಕ ವಿಧಾನಸಭಾ ಕ್ಷೇತ್ರ -
28. ಕರ್ನಾಟಕದಲ್ಲಿ ಅತಿ ಚಿಕ್ಕ ಲೋಕಸಭಾ ಕ್ಷೇತ್ರ -
29. ಕರ್ನಾಟಕದಲ್ಲಿ ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ - ಉಡುಪಿ : ಚಿಕ್ಕಮಗಳೂರು
30. ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ – ಚಳ್ಳಕೆರೆ
31. ೧೯೬೩ - ಕನ್ನಡ ರಾಜ್ಯಭಾಷಾ ಅಧಿನಿಯಮ ಜಾರಿ.
32. ೧೯೬೮ - ತಾಲೂಕು ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
33. ೧೯೭೦ - ಉಪವಿಭಾಗ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
34. ೧೯೭೨ - ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
35. ೧೯೭೪ - ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
36. ೧೯೭೮ - ಸಿವಿಲ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ .
37. ೧೯೭೯ - ಸೆಷನ್ಸ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ.
38. ೧೯೮೦ - ಗೋಕಾಕ್ ಆಯೋಗ ರಚನೆ.
39. ೧೯೮೩ - ಕನ್ನಡ ಆಡಳಿತ ಭಾಷಾ ಸಮಿತಿ ರಚನೆ.
40. ೧೯೮೩ - ಸಚಿವಾಲಯದಲ್ಲಿ ಆಡಳಿತ ಕನ್ನಡ ಕಡ್ಡಾಯ.
41. ೧೯೮೪ - ಗಡಿ ಸಲಹಾ ಸಮಿತಿ ರಚನೆ.
42. ೧೯೮೪ - ಸರೋಜಿನಿ ಮಹಿಷಿ ಸಮಿತಿ ರಚನೆ.
43. ೧೯೮೫ - ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶ.
44. ೧೯೯೨ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ.
45. ೧೯೯೩ - ಕನ್ನಡ ಜಾಗೃತಿ ವರ್ಷಾಚರಣೆ.
46. ೧೯೯೫ - ಭಾ.ಆ.ಸೇ. (IAS) ಪರೀಕ್ಷೆಗೆ ಕನ್ನಡ ಪತ್ರಿಕೆ ಸೇರ್ಪಡೆ.
47. ೧೯೯೯ - ಕೆ.ಎ.ಎಸ್. (KAS) ಪರೀಕ್ಷೆಗೆ ಕನ್ನಡ ಕಡ್ಡಾಯ.
48. ೨೦೦೦ - ಗಡಿನಾಡು ಅಭಿವೃದ್ಧಿ ಅಧ್ಯಯನ ಆಯೋಗ ರಚನೆ
49. ೨೦೦೩ - ನಾಡಗೀತೆ ಅಧಿಕೃತ ನಿರ್ಧಾರ
50. ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ರಣಹದ್ದು ಸೌದಿ ಅರೇಬಿಯಾ ಗಡಿಯಲ್ಲಿ ಸಿಕ್ಕಿಬಿದ್ದಿದೆ.ಇಸ್ರೇಲ್ ಬೇಹುಗಾರಿಕಾ ಸಂಸ್ಥೆ ಮೊಸಾದ್‌ಗೆ ಸೇರಿದ ಈ ರಣಹದ್ದು ಟೆಲ್‌ಅವೀವ್ ವಿಶ್ವವಿದ್ಯಾಲಯದ ಲಾಂಛನವನ್ನು ಒಳಗೊಂಡ ಪಟ್ಟಿಯನ್ನು ಹೊಂದಿತ್ತು ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.
51. ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಹರ್ದೀಪ್ ಸಿಂಗ್ ಪುರಿ ಅವರು ಭಯೋತ್ಪಾದನಾ ನಿಗ್ರಹದ ಭದ್ರತಾ ಮಂಡಳಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
52. ಬ್ಯಾಂಕ್ ಶಾಖೆಗಳಿರದ ಗ್ರಾಮಗಳಲ್ಲಿ ಗ್ರಾಮೀಣ ವಿಕಾಸ ಕೇಂದ್ರಗಳ ಮೂಲಕ ಹಣಕಾಸು ಸೇವೆ ನೀಡುವ ವಿತ್ತೀಯ ಸೇರ್ಪಡೆಗೆ ಗಣನೀಯ ಕೊಡುಗೆ ನೀಡಿದ ಸಾಧನೆಗಾಗಿ ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್‌ಗೆ ‘ಸ್ಕೋಚ್ ವಿತ್ತೀಯ ಸೇರ್ಪಡೆ ಪ್ರಶಸ್ತಿ-2011’ ಲಭಿಸಿದೆ.
53. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಸರ್ವಶ್ರೇಷ್ಠ ಒಂದು ದಿನದ ಅಂತರರಾಷ್ಟ್ರೀಯ ತಂಡದಲ್ಲಿ ಆರಂಭಿಕ ಆಟಗಾರ ವಿಭಾಗದಲ್ಲಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ.
54. ಕೋಕ್ ತಂಪು ಪಾನೀಯ ಉತ್ಪಾದನಾ ಕಂಪೆನಿಯು ಐವತ್ತೊಂದು ಟೆಸ್ಟ್ ಶತಕಗಳ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಳ್ಳಲು ಮುಂದಾಗಿದೆ.ಮೂರು ವರ್ಷಗಳ ಅವಧಿಗೆ 20 ಕೋಟಿ ರೂಪಾಯಿ ಒಪ್ಪಂದದ ಪ್ರಸ್ತಾವವನ್ನು ‘ಮಾಸ್ಟರ್ ಬ್ಲಾಸ್ಟರ್’ ಮುಂದೆ ಇಟ್ಟಿದೆ.
55. ಪೂರ್ವ ಆಫ್ರಿಕಾದ ಉಗಾಂಡ ಮತ್ತು ಭಾರತದ ನಡುವೆ ಆರ್ಥಿಕ ಸಹಕಾರ ವೃದ್ಧಿಗೊಳ್ಳುತ್ತಿರುವಂತೆಯೇ ಕಂಪಾಲದಲ್ಲಿ ನೂತನ ರಾಯಭಾರಿಯನ್ನಾಗಿ ಎಸ್.ಎನ್.ರೇ ಅವರನ್ನು ಭಾರತ ನೇಮಕ ಮಾಡಿದೆ.
56. ಚೀನಾ ಮತ್ತು ಅಮೆರಿಕ ಜಂಟಿಯಾಗಿ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಆರ್ಡೊಸ್‌ನಲ್ಲಿ ಜಗತ್ತಿನ ಅತಿ ದೊಡ್ಡ ಸೌರ ಶಕ್ತಿ ಘಟಕವನ್ನು ಅಭಿವೃದ್ಧಿಪಡಿಸಲಿವೆ.
57. ಅಮೆರಿಕ ಮೂಲದ ರಿನಿವೇಬಲ್ ಎನರ್ಜಿ ಕಂಪೆನಿ ಮತ್ತು ಚೀನಾದ ಗಾಂಗ್‌ಡೌನ್ ಅಣು ಸೌರಶಕ್ತಿ ಕಂಪೆನಿಯ ಮಧ್ಯೆ ಈ ಬಗ್ಗೆ ಒಪ್ಪಂದ ಏರ್ಪಟ್ಟಿದೆ.
58. ಅಬ್ಬರದ ಬ್ಯಾಟಿಂಗ್‌ನಿಂದ ಎಲ್ಲಾ ಪ್ರಕಾರದ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿರುವ ಗೌತಮ್ ಗಂಭೀರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಭಾರಿ ಬೆಲೆಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾದರು..
59. ದೆಹಲಿಯ ಬ್ಯಾಟ್ಸ್‌ಮನ್ ಗಂಭೀರ್‌ಗೆ ರೂ.11.40 ಕೋಟಿ ಬೆಲೆ ತೆತ್ತು ಶಾರೂಖ್ ಖಾನ್ ಒಡೆತನದ ರೈಡರ್ಸ್ ಖರೀದಿ ಮಾಡಿತು.
60. ಟ್ವೆಂಟಿ-20 ಕ್ರಿಕೆಟ್‌ಗೆ ಅಗತ್ಯವಾದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಯೂಸುಫ್ ಪಠಾಣ್ ಹಾಗೂ ಕೊಡಗಿನ ‘ಬ್ಯಾಟಿಂಗ್ ಕಲಿ’ ರಾಬಿನ್ ಉತ್ತಪ್ಪ ಅವರು ಮೊದಲ ಸುತ್ತಿನಲ್ಲಿ ಬೆಲೆ ಏರಿಸಿಕೊಂಡ ಕ್ರಿಕೆಟಿಗರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ನಿಂತರು. ಇವರಿಬ್ಬರೂ ರೂ. 9.66 ಕೋಟಿಗೆ ಮಾರಾಟವಾದರು.
61. ತೀಸ್ತಾ ನದಿ ನೀರು ಹಂಚಿಕೆ ಕುರಿತು ಮಧ್ಯಂತರ ಒಪ್ಪಂದಕ್ಕೆ ಬರಲು ಬಾಂಗ್ಲಾದೇಶ ಮತ್ತು ಭಾರತವು ಸೋಮವಾರ ಮಾತುಕತೆ ಆರಂಭಿಸಿವೆ.
62. ತೀಸ್ತಾ ನದಿ ನೀರು ಹಂಚಿಕೆ ವಿವಾದವು 1952ರಿಂದಲೂ ಕಗ್ಗಂಟಾಗಿದೆ. ಈವರೆಗೂ ಎರಡೂ ದೇಶಗಳ ನಡುವೆ ಬರೀ ದಾಖಲೆ ಪತ್ರಗಳ ವಿನಿಮಯವಷ್ಟೆ ಆಗಿದೆ.
63. ಇಂಡಿಯನ್ ಪ್ರೀಮಿ ಯರ್ ಲೀಗ್ (ಐಪಿಎಲ್) ಟ್ವೆಂಟಿ- 20 ಕ್ರಿಕೆಟ್‌ನ ನಾಲ್ಕನೇ ಅವತರಣಿಕೆಯ ಟೂರ್ನಿಯಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿವೆ.
64. ನಾಲ್ಕನೇ ಋತುವಿನ ಟೂರ್ನಿಗೆ ಏಪ್ರಿಲ್ 8 ರಂದು ಚಾಲನೆ ಲಭಿಸಲಿದ್ದು, ಮೇ 28 ರಂದು ಕೊನೆಗೊಳ್ಳಲಿದೆ.
65. ಐಪಿಎಲ್ ಅಧ್ಯಕ್ಷ ಚಿರಾಯು ಅಮಿನ್.
66. ಸಾರಸ್ ಕೊಕ್ಕರೆ ತನ್ನ ವಿಶಿಷ್ಟ ಕೆಂಪು ತಲೆ, 6 ಅಡಿ ಎತ್ತರ, 8 ಅಡಿ ಗಾತ್ರದ ರೆಕ್ಕೆಗಳಿಂದಾಗಿ ‘ದೊಡ್ಡ ಪಕ್ಷಿ’ ಎಂದು ವಿಶ್ವದ ಗಮನ ಸೆಳೆದಿದೆ. ಕೊಕ್ಕರೆಗಳ 15 ತಳಿಗಳಲ್ಲಿ ಇದು ಅತಿ ದೊಡ್ಡ ಗಾತ್ರದ್ದಾಗಿದೆ.
67. ಮತದಾನದ ಕನಿಷ್ಠ ವಯೋಮಿತಿಯನ್ನು ಈಗಿನ 18ರಿಂದ 16 ವರ್ಷಕ್ಕೆ ಇಳಿಸುವ ಪ್ರಸ್ತಾವವನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವೈ.ಎಸ್.ಖುರೇಶಿ ತಿಳಿಸಿದ್ದಾರೆ.
68. ಭಾರತದ 15,000 ಬಡವರಿಗಾಗಿ ಬ್ರಿಟನ್ ರಾಜಕುಮಾರ ಚಾಲ್ಸ್ ಬೆಂಗಳೂರಿನಲ್ಲಿ ಅಥವಾ ಕೋಲ್ಕತ್ತದಲ್ಲಿ ಶಾಂತಿ ಪಟ್ಟಣ ಎಂಬ ಹೆಸರಿನ ಪರಿಸರ ಸ್ನೇಹಿ ಪಟ್ಟಣವೊಂದನ್ನು ನಿರ್ಮಿಸಲಿದ್ದಾರೆ.
69. ರಾಜಕುಮಾರ ಚಾರ್ಲ್ಸ್ ಅವರ ಈ ಯೋಜನೆಗೆ ಆಸ್ಕರ್ ಪುರಸ್ಕೃತ ಚಿತ್ರ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರವು ಸ್ಫೂರ್ತಿ ಎಂದು ಮಾಧ್ಯಮವೊಂದು ವರದಿ ಮಾಡಿದೆ.
70. ಬಹುಕೋಟಿ ವೆಚ್ಚದ ಈ ಯೋಜನೆಯ ಅಡಿಯಲ್ಲಿ 14 ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಪ್ರದೇಶದಲ್ಲಿ ಶಾಲೆಗಳು, ಅಂಗಡಿಗಳು ಮತ್ತು 3000 ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.
71. ಸ್ವಿಟ್ಜರ್‌ಲೆಂಡ್‌ನ ಡಾವೊಸ್‌ನಲ್ಲಿ ಜನವರಿ 26ರಿಂದ 30ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಬೆಂಗಳೂರು ಮೂಲದ 17ರ ಹರೆಯದ ಅಂಜಲಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
72. ಪ್ರಮುಖ ಪತ್ರಕರ್ತ ಎಂ.ಜೆ.ಅಕ್ಬರ್ ಅವರ ಟಿಂಡರ್‌ಬಾಕ್ಸ್- ‘ದಿ ಪಾಸ್ಟ್ ಅಂಡ್ ಫ್ಯೂಚರ್ ಆಫ್ ಪಾಕಿಸ್ತಾನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಸಂಜೆ ಮಾತನಾಡಿದ ಅಡ್ವಾಣಿ, ‘ಮತ್ತೆ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ’ ಎಂದು ಬಣ್ಣಿಸಿದರು.
73. ವಿಶ್ವಸಂಸ್ಥೆ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ನಿರ್ದೇಶಕರಾಗಿ ಕನ್ನಡಿಗ ಆಂಡಿ ಕೇಶವ ಶೆಣೈ ಅವರನ್ನು ನೇಮಕ ಮಾಡಲಾಗಿದೆ.
74. 2010-11ರ ಅವಧಿಯಲ್ಲಿ ರೈಲ್ವೆಯು ಸರಕು ಸಾಗಣೆಯಿಂದ 94,765 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದೂ ತಿಳಿಸಿವೆ.
75. .‘ಟ್ರೈನ್ ಸೆಟ್’ ಅಂದರೆ ರೈಲ್ವೆ ಎಂಜಿನ್ ಹಾಗೂ ಬೋಗಿಗಳು ಪರಸ್ಪರ ಸೇರಿಕೊಂಡಿರುವ ಹೊಸ ಶ್ರೇಣಿಯ ರೈಲುಗಳನ್ನು ದೇಶದಲ್ಲಿ ಪರಿಚಯಿಸುವ ವಿಚಾರವನ್ನು ಬಜೆಟ್ ಒಳಗೊಳ್ಳಲಿರುವ ಸಾಧ್ಯತೆ ಇದೆ.
76. ವಿದೇಶಗಳಲ್ಲಿರುವ 462 ಶತಕೋಟಿ ಡಾಲರ್ ಕಪ್ಪುಹಣವನ್ನು ಮರಳಿ ತಂದರೆ ಅದರಿಂದ ದೇಶದ ಪರಿಸ್ಥಿತಿಯಲ್ಲಿ ಅದ್ಭುತವೆನಿಸುವ ಬದಲಾವಣೆ ತರಲು ಸಾಧ್ಯ.
77. ಸಿಮಿ’ ಎಂದರೆ ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ ಎಂದರ್ಥ.
78. ಭಾರತಕ್ಕೆ ಬೇಕಾಗಿರುವ ನೌಕಾ ಯುದ್ಧ ತಂತ್ರ ಮಾಹಿತಿ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ನೌಕಾದಳದ ನಿವೃತ್ತ ಮುಖ್ಯಸ್ಥ ಅರುಣ್ ಪ್ರಕಾಶ್ ಅವರ ಬಂಧು ರವಿ ಶಂಕರನ್ ವಿಚಾರಣೆ ಜ.19ರಂದು ಲಂಡನ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸಿಬಿಐನ ಇಬ್ಬರು ಅಧಿಕಾರಿಗಳು ಭಾನುವಾರ ಲಂಡನ್‌ಗೆ ಪ್ರಯಾಣ ಬೆಳೆಸಿದರು.
79. ‘ರಾಷ್ಟ್ರೀಯ ದಿನದಂದು ಕುವೈತ್ ನಗರದಲ್ಲಿ ದೊರೆ ಶೇಖ್ ಸಬಾ ಅಲ್ ಅಹ್ಮದ್ ಅಲ್ ಸಭಾ ಅವರ ಆಶ್ರಯದಲ್ಲಿ ನಡೆಯಲಿರುವ ಸೇನಾ ಪೆರೇಡ್‌ನಲ್ಲಿ 2000 ಮೀಟರ್ ಉದ್ದದ ಧ್ವಜ ಅನಾವರಣಗೊಳ್ಳಲಿದೆ’ಎಂಬ ಸ್ವಯಂ ಸೇವಾ ಕೇಂದ್ರದ ಅಧ್ಯಕ್ಷ ಶೇಖಾ ಅಮ್ತಾಲ್ ಅಲ್ ಅಹ್ಮದ್ ಅಲ್ ಸಬಾ.
80. ವಿಧಾನ ಪರಿಷತ್‌ನ ನೂತನ ಉಪ ಸಭಾಪತಿಯಾಗಿ ಬಿಜೆಪಿಯ ಹಿರಿಯ ಸದಸ್ಯೆ ವಿಮಲಾಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
81. ವಿಮಲಾಗೌಡ ಅವರು ವಿಧಾನ ಪರಿಷತ್‌ನ ಉಪ ಸಭಾಪತಿ ಹುದ್ದೆಗೇರುತ್ತಿರುವ ಮೂರನೇ ಮಹಿಳೆ. ಈ ಹಿಂದೆ ಎಂ.ಆರ್.­ಲಕ್ಷ್ಮಮ್ಮ ಮತ್ತು ರಾಣಿ ಸತೀಶ್ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.
82. ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳ ಸಹಾಯಕ್ಕಾಗಿ ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ‘ವಿಪತ್ತು ನಿರ್ವಹಣಾ ತಂಡವನ್ನು’ ನಿಯೋಜಿಸಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
83. ದೂರ ಸಂಪರ್ಕ ಸಚಿವಾಲಯ ದೂರವಾಣಿ ಕದ್ದಾಲಿಕೆ ಪ್ರಕರಣಗಳಿಗೆ ವಿಧಿಸುವ ದಂಡವನ್ನು ರೂ 500 ರಿಂದ ರೂ 2 ಕೋಟಿಗೆ ಏರಿಸುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ.
84. ಕೇಂದ್ರ ಜಾಗೃತ ಆಯುಕ್ತರಾಗಿ ಪಿ.ಜೆ.ಜೋಸೆಫ್ ಅವರ ನೇಮಕವನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
85. ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇನ್‌ಫ್ರಾ ಮತ್ತು ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ (ಆರ್‌ಎನ್‌ಆರ್‌ಎಲ್) ಕಂಪೆನಿಗಳಿಗೆ ತನಿಖೆ ಇತ್ಯರ್ಥ ಪಡಿಸಲು ‘ಸೆಬಿ’ ರೂ 50 ಕೋಟಿ ದಂಡ ವಿಧಿಸಿದೆ.
86. ಮೊದಲ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆದಾಗ ಸರ್ಕಾರ 91 ಕೋಟಿ ರೂಪಾಯಿಯನ್ನು ಆದಾಯದಲ್ಲಿನ ಮೂಲ ತೆರಿಗೆ ರೂಪದಲ್ಲಿ ಹಣ ಪಡೆದಿತ್ತು. ಮೂರನೇ ಆವೃತ್ತಿಯಲ್ಲಿ ಸರ್ಕಾರ ಮೂಲ ರೂಪದಲ್ಲಿಯೇ 400 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯನ್ನು ಪಡೆದುಕೊಂಡಿತ್ತು.
87. ಇಂಡಿಯನ್ ಪ್ರೀಮಿಯರ್ ಲೀಗ್‌ನ ನಾಲ್ಕನೇ ಅವತರಣಿಕೆಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ 300 ಕೋಟಿ ರೂಪಾಯಿಗೂ ಹೆಚ್ಚು ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಬಹುದು ಎಂದು ಸರ್ಕಾರ ನಿರೀಕ್ಷೆ ಮಾಡಿದೆ.
88. ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಮಹಾನಿರ್ದೇಶಕ ಯೂಕಿಯಾ ಅಮನೊ.
89. ಜಗತ್ತಿನಲ್ಲಿ ಈಗ 61 ಅಣು ಸ್ಥಾವರಗಳು ನಿರ್ಮಾಣವಾಗುತ್ತಿದ್ದು, ಅದರಲ್ಲಿ 39 ಸ್ಥಾವರಗಳು ಏಷ್ಯಾದಲ್ಲೇ ಇವೆ ಎಂದರು.
90. 2030ರ ವೇಳೆಗೆ ಹೊಸದಾಗಿ 10-25ರಾಷ್ಟ್ರಗಳು ಅಣು ಶಕ್ತಿ ಹೊಂದುವ ನಿರೀಕ್ಷೆ ಇದೆ. ಇಂತಹ ರಾಷ್ಟ್ರಗಳು ಏಷ್ಯಾದಲ್ಲೇ ಹೆಚ್ಚಾಗಿರುತ್ತವೆ. ಭಾರತ, ಚೀನಾ, ಜಪಾನ್ ಮತ್ತು ಕೊರಿಯಾ ಗಣರಾಜ್ಯಗಳು ಸಹ ತಮ್ಮ ಅಣು ಶಕ್ತಿ ಯೋಜನೆಯನ್ನು ವಿಸ್ತರಿಸಲಿವೆ.
91. ಟ್ಯುನಿಸ್‌ನ ಉಚ್ಚಾಟಿತ ಅಧ್ಯಕ್ಷ ಜಿನೆ ಎಲ್ ಅಬಿದಿನೆ ಅಲಿ ಅವರ ಪತ್ನಿ ದೇಶದಿಂದ ಪರಾರಿಯಾಗುವ ಮೊದಲು ಕೇಂದ್ರ ಬ್ಯಾಂಕಿನಿಂದ 1.5 ಟನ್ ಚಿನ್ನವನ್ನು ಒಯ್ದಿದ್ದಾರೆ ಎಂದು ಫ್ರಾನ್ಸ್‌ನ ಪತ್ರಿಕೆಯೊಂದು ವರದಿ ಮಾಡಿದೆ.
92. ಇಪ್ಪತ್ತೈದರ ಹರೆಯದ ಇಬ್ಬರು ಮಕ್ಕಳ ತಾಯಿ ಆಸ್ಮಾ ಎಂಬವರು ತಮ್ಮ ಪುಟಾಣಿ ಮಕ್ಕಳೊಂದಿಗೆ 1ನೇ ತರಗತಿಗೆ ಸೇರಿದ ವಿಲಕ್ಷಣ ಪ್ರಸಂಗ ಪಂಜಾಬ್ ಪ್ರಾಂತ್ಯದ ಮಿಯಾನ್‌ವಲಿಯಲ್ಲಿ ನಡೆದಿದೆ.
93. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2009-10ನೇ ಹಣಕಾಸು ವರ್ಷದಲ್ಲಿ ಕಾಮಗಾರಿ ಸಂಕೇತ (ವರ್ಕ್ ಕೋಡ್) ನೀಡುವಾಗ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧನೆಯಲ್ಲಿ ದೃಢಪಟ್ಟಿದೆ.
94. ಸ್ವಿಟ್ಜರ್ಲೆಂಡ್ ಮೂಲದ ಕೇಮನ್ ದ್ವೀಪದಲ್ಲಿರುವ ಬ್ಯಾಂಕ್ ಜ್ಯೂಲಿಯಸ್ ಬಿಯರ್‌ನ ಮಾಜಿ ಉದ್ಯೋಗಿ ರುಡಾಲ್ಫ್ ಎಲ್ಮೆರ್ ಅವರು ಸೋಮವಾರ ಇಲ್ಲಿ ಬಹಿರಂಗವಾಗಿಯೇ ಅಸಾಂಜ್ ಅವರನ್ನು ಭೇಟಿ ಮಾಡಿ 2,000 ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಮಾಹಿತಿಗಳು ಇರುವ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಿದರು.
95. 1990ರಿಂದ 2009ರ ತನಕ ಅಮೆರಿಕ, ಬ್ರಿಟನ್, ಜರ್ಮನಿ, ಏಷ್ಯಾ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ ಮಾಹಿತಿಗಳು ಇದರಲ್ಲಿವೆ. ಹೀಗೆ ಕಪ್ಪು ಹಣವನ್ನು ಗೋಪ್ಯವಾಗಿ ಇಟ್ಟವರಲ್ಲಿ ಗಣ್ಯ ವ್ಯಕ್ತಿಗಳು, ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ ಎಂದು ಸ್ವಿಸ್ ಪತ್ರಿಕೆ ‘ಡೆರ್ ಸೊನ್‌ಟಾಗ್’ ಹೇಳಿದೆ.
96. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲ್ಡೀವ್ಸ್‌ನ 36ರ ಹರೆಯದ ವಕೀಲೆ ಫಾತಿಮಾತ್ ಧಿಯಾನಾ ಸಯೀದ್ ಮಾರ್ಚ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
97. ಹಾಲಿ ಪ್ರಧಾನ ಕಾರ್ಯದರ್ಶಿ ಭಾರತದ ರಾಜತಾಂತ್ರಿಕ ಶೀಲಕಾಂತ್ ಶರ್ಮಾ ಅವರ ಅಧಿಕಾರ ಅವಧಿ ಫೆ. 28ಕ್ಕೆ ಕೊನೆಗೊಳ್ಳಲಿದ್ದು,
98. ನವೆಂಬರ್ 10-11ರಂದು ಮಾಲ್ಡೀವ್ಸ್‌ನಲ್ಲಿ 17ನೇ ಸಾರ್ಕ್ ಸಮಾವೇಶ ನಡೆಯಲಿದ್ದು, ಅದನ್ನು ನಿಭಾಯಿಸುವ ಪ್ರಮುಖ ಹೊಣೆಗಾರಿಕೆ ಫಾತಿಮಾ ಅವರ ಮೇಲಿದೆ.
99. ನಗರದ ಜೆ.ಪಿ.ನಗರ 24ನೇ ಮುಖ್ಯರಸ್ತೆ ಮತ್ತು 15ನೇ ಅಡ್ಡರಸ್ತೆ ಕೂಡುವ ಜಂಕ್ಷನ್‌ನಲ್ಲಿ ಬಿಬಿಎಂಪಿ ನೂತನವಾಗಿ ನಿರ್ಮಿಸಿರುವ ‘ಜಿ.ಆರ್.ವಿಶ್ವನಾಥ್ ಅಂಡರ್‌ಪಾಸ್’
100. ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಎಫ್) ಮಾನ್ಯತೆ ರದ್ದುಗೊಳಿಸಿರುವ ಕೇಂದ್ರ ಸರ್ಕಾರಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿರುಗೇಟು ನೀಡಿದೆ. ‘ನಮ್ಮದು ಸ್ವಾಯತ್ತ ಸಂಸ್ಥೆ. ಐಸಿಸಿ ಮಾನ್ಯತೆ ಹೊಂದಿದ್ದೇವೆ.
101. 2010 ಅನ್ನು ಯಾವುದೇ ಗೊಂದಲವಿಲ್ಲದೆ ‘ಅಪ್ಲಿಕೇಷನ್ ವರ್ಷ’ ಎಂದು ಮೊಬೈಲ್ ಜಗತ್ತು ಕರೆದುಬಿಟ್ಟಿದೆ.
102. ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್,
103. ಪಟ್ನಾ: ಇಲ್ಲಿನ ಬಂಕಾ ಜಿಲ್ಲೆಯ ಗ್ರಾಮವೊಂದರ ಜನರು ಕೇಂದ್ರ ಕೃಷಿ ಸಚಿವರ ವಿರುದ್ಧ ಯಾವುದೇ ಗೊಣಗಾಟ ನಡೆಸಿಲ್ಲ. ಕಾರಣ, ಇವರು ಈರುಳ್ಳಿಯನ್ನೇ ಬಳಸುವುದಿಲ್ಲ. ಈ ಗ್ರಾಮದ ಜನರು ಕಳೆದ 200 ವರ್ಷಗಳಿಂದಲೂ ಈರುಳ್ಳಿಯನ್ನು ಉಪಯೋಗಿಸಿಲ್ಲ. ಅಮರ್‌ಪುರ್ ಬ್ಲಾಕ್‌ನ ಭಿಮ್‌ಸೆನ್ ಗ್ರಾಮದಲ್ಲಿ
104. ‘ಮಂತ್ರಿ ಮಂಡಲದ ನಿರ್ಣಯವನ್ನು ಬದಿಗೊತ್ತಿ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ’ ಎಂದು 2004ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣಪೀಠ ತೀರ್ಪು ನೀಡಿದೆ.
105.
106. 2010ರ ಆಗಸ್ಟ್ 30ರಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಸ್ವಿಸ್ ಕೌನ್ಸಿಲರ್ ಮಿಚೆಲಿನ್ ಕಾಲ್‌ಮಿರೇ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸ್ವಿಸ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವ ಅಧಿಕಾರ ಸಹಿತ ಹಲವು ತೆರಿಗೆ ವಂಚನೆ ತಡೆ ಕ್ರಮಗಳು ಈ ಒಪ್ಪಂದದಲ್ಲಿ ಇದ್ದು, ವಾಸ್ತವವಾಗಿ ಕಳೆದ ಜನವರಿ 1ರಿಂದಲೇ ಒಪ್ಪಂದ ಜಾರಿಗೆ ಬರಬೇಕಿತ್ತು.
107. ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್.ಅಶೋಕ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ‘ಜಸ್ಟೀಸ್ ಲಾಯರ್ಸ್‌ ಫೋರಂ’ ಮಾಡಿರುವ ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಸರ್ಕಾರ ಮನವಿ ಮಾಡಿದೆ.
108. ರಾಜಕೀಯ ಪ್ರಕ್ರಿಯೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ಗಣರಾಜ್ಯೋತ್ಸವದ ಮುನ್ನಾದಿನ, ಅಂದರೆ ಜ.25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
109. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್‌ಗೆ ಅಂಕಿ ಅಂಶಗಳ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಲು ಸೋಮವಾರ ಲಂಡನ್‌ಗೆ ತೆರಳಿದ್ದ ಸ್ವಿಸ್ ಬ್ಯಾಂಕ್ ಉದ್ಯೋಗಿ ರುಡಾಲ್ಫ್ ಎಲ್ಮರ್ ಅವರನ್ನು ಬುಧವಾರ ಸಂಜೆ ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಇಲ್ಲಿನ ಮುಖ್ಯ ಅಭಿಯೋಜಕ ಪೀಟರ್ ಪೆಲ್ಲೆಗ್ರಿನಿ ಗುರುವಾರ ತಿಳಿಸಿದ್ದಾರೆ.
110. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಆಗಿ ಆನಂದ್ ಸಿನ್ಹಾ ಅಧಿಕಾರ ಸ್ವೀಕರಿಸಿದ್ದಾರೆ. ಫೆಬ್ರುವರಿ 28, 2013ರ ವರೆಗೆ ಅವರ ಅಧಿಕಾರ ಅವಧಿ ಇರಲಿದೆ.
111. ಭಾರದ್ವಾಜ್, ‘ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಉಲ್ಟಾ ಚೋರ್ ಕೊತ್ವಾಲ್ ಕೊ ಡಾಂಟಾ (ಕಳ್ಳನೇ ಪೊಲೀಸರನ್ನು ನಿಂದಿಸಿದಂತೆ) ಎಂಬಂತಾಗಿದೆ.
112. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಭಾಗವಹಿಸಲಿದ್ದು ಇದೇ ಸಂದರ್ಭದಲ್ಲಿ ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಾಗಿ ಕ್ರಿಸ್ಟಲ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
113. ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಭದ್ರತಾ ಪಡೆಗಳಿಗೆ ಶೀಘ್ರವೇ ಆಮದು ಮಾಡಿಕೊಂಡ ‘ಬೆಲ್ಜಿಯಂ ಷೆಫರ್ಡ್ ಶ್ವಾನ’ಗಳು ನೆರವಾಗಲಿವೆ.
114. ಕಾಬೂಲ್‌ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ ಮೇಜರ್ ಲೈಶ್ರಮ್ ಜ್ಯೋತಿನ್ ಸಿಂಗ್ ಅವರಿಗೆ ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ನೀಡಲಾಗುತ್ತಿದೆ. ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಲಾಗುತ್ತಿದೆ.
115. ಚೀನಾಕ್ಕೆ ಅಮೆರಿಕದಿಂದ ವರ್ಷಕ್ಕೆ 100 ಶತಕೋಟಿ ಡಾಲರ್‌ಗೂ ಅಧಿಕ ಮೊತ್ತದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಲು ಒಪ್ಪಂದ ಮಾಡಲಾಗಿದೆ.
116. ಜಸ್ಟೀಸ್ ಲಾಯರ್ಸ್ ಫೋರಂನ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’
117. ಅಟಾರ್ನಿ ಜನರಲ್ ಜಿ. ವಹನ್ವತಿ,.
118. ವಿಶ್ವ ಆರ್ಥಿಕ ಒಕ್ಕೂಟದ (ಡಬ್ಲ್ಯುಇಎಫ್) ‘ಕ್ರಿಸ್ಟಲ್’ ಪ್ರಶಸ್ತಿಗೆ ಭಾರತೀಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಪಾತ್ರರಾಗಿದ್ದಾರೆ.
119. ಕ್ಯಾನ್ಸರ್ ರೋಗಿಗಳಿಗಾಗಿ ಶ್ರಮಿಸಿದ ಬಾರ್ಸಿಲೋನಾದ ಕಲಾವಿದ ಜೋಸ್ ಕ್ಯಾರಿರಾಸ್ ಅವರಿಗೂ ‘ಕ್ರಿಸ್ಟಲ್’ ಪ್ರಶಸ್ತಿ ನೀಡಲಾಗಿದೆ.
120. ಭಾರತೀಯ ಮೂಲದ ವೈದ್ಯ ವಿವೇಕ್ ಮೂರ್ತಿ ಅವರನ್ನು ಸಾರ್ವಜನಿಕ ಆರೋಗ್ಯ ಸಂಬಂಧಿತ ಸಲಹಾ ಸಮಿತಿಗೆ ನೇಮಿಸಲಾಗಿದ್ದು, ಕೃಷಿ ವಿಜ್ಞಾನಿ ಇಸ್ಲಾಂ ಎ.ಸಿದ್ದಿಕಿ ಅವರನ್ನು ಮುಖ್ಯ ಕೃಷಿ ಸಂಧಾನಕಾರರಾಗಿ ಮರುನೇಮಕ ಮಾಡಲಾಗಿದೆ.
121. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ಫೆಬ್ರುವರಿ 19ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್‌ನ ಸಮಗ್ರ ಮಾಹಿತಿಯನ್ನು ನೀಡುವ ಅಧಿಕೃತ ವೆಬ್‌ಸೈಟ್ ಅನ್ನು ‘ಯಾಹೂ’ ಸಹಯೋಗದಲ್ಲಿ ರೂಪಿಸಿದೆ iccevents.yahoo.com ಗೆ ಗುರುವಾರ ಚಾಲನೆ ನೀಡಲಾಯಿತು.
122. ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗಾಗಿ ಆಯೋಜಿಸಲಾಗುತ್ತಿರುವ ‘ಇಂಡಿಯಾ ಟ್ರೋಫಿ’ ಟ್ವೆಂಟಿ-20 ಕ್ರಿಕೆಟ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು,
123. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 27 ಸರ್ಕಾರಿ ಅಧಿಕಾರಿಗಳೂ ಸೇರಿದಂತೆ 62 ಮಂದಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ.
124. ಐದನೇ ಪೀಳಿಗೆಯ ಯುದ್ಧ ವಿಮಾನ ಎಫ್- 35 ಖರೀದಿಗೆ ಭಾರತ ಮುಂದಾಗಬಹುದು ಎಂಬ ಭಾರಿ ನಿರೀಕ್ಷೆಯನ್ನು ಅಮೆರಿಕ ಹೊಂದಿದೆ.
125. 10 ಶತಕೋಟಿ ಡಾಲರ್ ಮೌಲ್ಯದ 126 ವಿಮಾನಗಳಿಗೆ ಭಾರತ ಟೆಂಡರ್‌ದಾರನಾಗಿದೆ. ಎಂಟು ದೇಶಗಳು ಮತ್ತು ಆರು ಕಂಪೆನಿಗಳು ಈ ಕುರಿತ ಆಯ್ಕೆ ಪ್ರಕ್ರಿಯೆಯನ್ನು ಕಾತರದಿಂದ ಎದುರು ನೋಡುತ್ತಿವೆ.
126. ಸೌರವ್ಯೆಹದ ಹೊರಗಡೆ ಸೂರ್ಯನಂತಹ ಬೇರೆ ನಕ್ಷತ್ರಕ್ಕೆ ಸುತ್ತು ಹಾಕುತ್ತಿರುವ ಈ ‘ಬಿಸಿ ಗ್ರಹ’ವನ್ನು ‘ವ್ಯಾಸ್ಪ್-33ಬಿ’ ಅಥವಾ ‘ಎಚ್‌ಡಿ 15082’ ಎಂದು ಗುರುತಿಸಲಾಗಿದೆ.
127. ಬ್ರಿಟನ್‌ನ ಕೀಲ್ ವಿಶ್ವವಿದ್ಯಾಲಯದ ಅಲೆಕ್ಸಿಸ್ ಸ್ಮಿತ್ ನೇತೃತ್ವದ ತಂಡ ಈ ಗ್ರಹವನ್ನು ಗುರುತಿಸಿದೆ. ಕ್ಯಾನೆರಿ ದ್ವೀಪದಿಂದ ‘ವಿಲಿಯಂ ಹಾರ್ಷಲ್’ ದೂರದರ್ಶಕ ಇದನ್ನು ಪತ್ತೆ ಮಾಡಿದೆ. ವ್ಯಾಸ್ಪ್ ಗ್ರಹದಿಂದ ಹೊರಹೊಮ್ಮುತ್ತಿದ್ದ ಶಾಖವನ್ನು ಅತಿನೇರಳೆ ಕಿರಣ ದಾಖಲಿಸುವ ಕ್ಯಾಮೆರಾಗಳಿಂದ ಪತ್ತೆಮಾಡಲಾಯಿತು.
128. ‘ವ್ಯಾಸ್ಪ್-33ಬಿ’ ಗ್ರಹದ ಉಷ್ಣತೆ 3,200 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಸುತ್ತುಹಾಕುವ ನಕ್ಷತ್ರದ ಉಷ್ಣತೆ 7160 ಡಿಗ್ರಿ ಸೆಲ್ಸಿಯಸ್ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
129. ಸೌರವ್ಯೆಹದ ಅತಿದೊಡ್ಡ ಗ್ರಹ ಗುರುವಿಗಿಂತ ನಾಲ್ಕೂವರೆ ಪಟ್ಟು ದೊಡ್ಡದಾಗಿರುವ ವ್ಯಾಸ್ಪ್, ಸೂರ್ಯನ ನಿಕಟವರ್ತಿ ಗ್ರಹ ಬುಧನಿಗಿಂತ ತನ್ನ ನಕ್ಷತ್ರಕ್ಕೆ ಹತ್ತಿರದಲ್ಲಿದೆ.
130. ವ್ಯಾಸ್ಪ್ ಗ್ರಹ ಸುತ್ತುಹಾಕುವ ನಕ್ಷತ್ರದ ಉಷ್ಣತೆಯನ್ನು (7160 ಸೆ.) ಗಮನಿಸಿದರೆ ನಮ್ಮ ಸೂರ್ಯನ ಉಷ್ಣತೆ (5600 ಸೆ.) ತೀರಾ ಕಡಿಮೆ ಎಂದನಿಸಬಹುದು.
131. ನಮ್ಮ ಆಕಾಶಗಂಗೆ ತಾರಾಗಣದಲ್ಲಿ ಈ ಮುನ್ನ ಅತಿ ಬಿಸಿಯ ಗ್ರಹ ಎಂದು ಗುರುತಿಸಲಾಗಿದ್ದ ‘ವ್ಯಾಸ್ಪ್12ಬಿ’ ಗ್ರಹದ ಉಷ್ಣತೆಗಿಂತ 900 ಸೆಲ್ಸಿಯಸ್ ಹೆಚ್ಚು ಶಾಖವನ್ನು ಹೊಂದಿದೆ.
132. ಚೀನಾದಲ್ಲಿ ಹೊಸ ವರ್ಷದ ಆಚರಣೆ ಅಂಗವಾಗಿ ಪಂಚತಾರಾ ಹೋಟೆಲೊಂದು ಈ ವಿಶೇಷ ಔತಣಕ್ಕಾಗಿ 3,88,888 ಯುವಾನ್ (59 ಸಾವಿರ ಅಮೆರಿಕನ್ ಡಾಲರ್) ನಿಗದಿಪಡಿಸಿದೆ.ಚಾಂದ್ರಮಾನ ಕ್ಯಾಲೆಂಡರ್‌ನಂತೆ ಚೀನಾದಲ್ಲಿ ಫೆಬ್ರುವರಿ 2ರಂದು ಹೊಸ ವರ್ಷಾಚರಣೆ ನಡೆಯುತ್ತದೆ.
133. 2009ನೇ ಸಾಲಿನ ಕ್ಯಾಸ್ಟ್ರಾಲ್ ‘ವರ್ಷದ ಶ್ರೇಷ್ಠ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾದ ಸಚಿನ್ ತೆಂಡೂಲ್ಕರ್.
134. ಈಜಿಪ್ಟ್ ವಿದ್ಯಮಾನವನ್ನು ದಿನವಿಡೀ ಪ್ರಸಾರ ಮಾಡುತ್ತಿದ್ದ ಅಲ್ ಜಜೀರಾ ಟಿವಿ ಚಾಲೆನ್‌ನ ಪ್ರಸಾರಕ್ಕೆ ಹೊಸ್ನಿ ಮುಬಾರಕ್ ಆಡಳಿತ ಭಾನುವಾರದಿಂದ ನಿಷೇಧ ಹೇರಿದೆ.
135. ಉಚಿತ ಸಂಖ್ಯೆ 54321ಕ್ಕೆ JOIN ಎಂದು ಸಂದೇಶ ಕಳುಹಿಸುವ ಮೂಲಕ ಗ್ರಾಹಕರು ರಕ್ತ ಸಹಾಯವಾಣಿ ಕ್ಲಬ್‌ಗೆ ಸೇರಬಹುದು. ತುರ್ತು ಸಂದರ್ಭದಲ್ಲಿ ಗ್ರಾಹಕರು 54321ಕ್ಕೆ NEED ಎಂದು ಸಂದೇಶ ಕಳುಹಿಸಿ ಲಾಭ ಪಡೆಯಬಹುದು.
136. ಟ್ರೈ ವ್ಯಾಲಿ’ ವಿಶ್ವವಿದ್ಯಾಲಯದಿಂದ ವಂಚನೆಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೊ ಕಾಲರ್ ಅಳವಡಿಸಿರುವ ತನ್ನ ಕ್ರಮವನ್ನು ಅಮೆರಿಕ ಸೋಮವಾರ ಸಮರ್ಥಿಸಿಕೊಂಡಿದೆ.
137. ದೂರಸಂಪರ್ಕ ಕಾರ್ಯದರ್ಶಿಯಾಗಿದ್ದ ಸಿದ್ಧಾರ್ಥ ಬೇಹೂರ, ಅವರ ಸಹಾಯಕ ಆರ್.ಕೆ.ಚಂದೋ ಲಿಯಾ ಮತ್ತಿತರರನ್ನು ಸಮಿತಿ ಹೊಣೆ ಮಾಡಿದೆ ಎಂದು ಹೇಳಲಾಗಿದೆ.
138. . 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿನ ಲೋಪಗಳ ತನಿಖೆಯ 1300 ಪುಟಗಳ ದಾಖಲೆಯನ್ನು ಒಳಗೊಂಡ 150 ಪುಟಗಳ ವರದಿಯನ್ನು ಪಾಟೀಲ್ ಸಲ್ಲಿಸಿದ್ದಾರೆ.
139. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿನ ಲೋಪಗಳಲ್ಲಿ ನೀರಾ ರಾಡಿಯಾ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಮಾಜಿ ಮುಖ್ಯಸ್ಥ ಪ್ರದೀಪ್ ಬೈಜಾಲ್, ಸಿದ್ಧಾರ್ಥ ಬೇಹೂರ, ಡಿ.ಎಸ್.ಮಾಥುರ್ ಮತ್ತಿತರರ ವಿಚಾರಣೆಯನ್ನು ಸಂಸ್ಥೆ ಈಗಾಗಲೇ ನಡೆಸಿದೆ.
140. ದಕ್ಷಿಣ ದೆಹಲಿಯ ವಸಂತ ವಿಹಾರ ಪ್ರದೇಶದ ಮಮತಾ ಪಾಲನಾ ಕೇಂದ್ರದಲ್ಲಿರುವ ಈ ಪುಟ್ಟ ‘ಪಾರ್ಥ’ನನ್ನು ಇಟಲಿಯ ಜರ್ಮನೊ ಗುಸೆಪ್ ಮತ್ತು ಬೊಶೆಟ್ಟೊ ಮಿಷೆಲಾ ದಂಪತಿ ತಮ್ಮ ದೇಶಕ್ಕೆ ಕರೆದೊಯ್ಯಬಹುದು ಎಂದು ಕೋರ್ಟ್ ತಿಳಿಸಿದೆ.
141. ವಿಳಿಂಜಂ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ನೆಸಿದ್ದ ಮಧ್ಯಪ್ರದೇಶದ ಇಂದೋರ್ ಮೂಲದ ಕರಣ್ ಸಿಂಗ್ ಠಾಕೂರ್ (44) ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ. ಆತನಿಂದ 79 ಪಾಸ್‌ಪೋರ್ಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
142. ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ವಿರುದ್ಧ ಸಿಡಿದೆದ್ದಿರುವ ಅಲ್ಲಿನ ನಾಗರಿಕರು ಸೋಮವಾರ ಕೂಡಾ ಅನಿರ್ದಿಷ್ಟಾವಧಿಯ ಪ್ರತಿಭಟನೆ ಮುಂದುವರಿಸಿದ್ದು.
143. ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ 30-80 ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದರ ಬತ್ತಳಿಕೆಯಲ್ಲಿ 110ಕ್ಕೂ ಅಧಿಕ ಅಣ್ವಸ್ತ್ರಗಳಿವೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
144. ಶತಮಾನಗಳಿಂದ ಬೀಗ ಮುದ್ರೆ ಹಾಕಿರುವ ಇಲ್ಲಿನ ಪ್ರಸಿದ್ಧ ಪಶುಪತಿನಾಥ ದೇವಾಲಯದ ಮುಖ್ಯ ಖಜಾನೆಯನ್ನು ತೆರೆಯದಂತೆ ನೇಪಾಳದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
145. ಸಾಧಾರಣವಾಗಿ ಹುಟ್ಟಿದ ಆರೋಗ್ಯವಂತ ಶಿಶು 3.35 ಕೆ.ಜಿ. ಇರುತ್ತದೆ. 5 ಕೆ.ಜಿ ವರೆಗೆ ಇರುವ ಮಕ್ಕಳನ್ನು ದೊಡ್ಡದು ಎಂದು ಪರಿಗಣಿಸಲಾಗಿದ್ದು 5 ಕೆ.ಜಿ.ಗಿಂತ ಹೆಚ್ಚಿರುವ ಮಗುವನ್ನು ‘ದೈತ್ಯ’ ಎಂದು ಕರೆಯಲಾಗುತ್ತದೆ.
146. ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ- ಐಜಿಪಿ) ಡಾ. ಅಜಯ್ ಕುಮಾರ್ ಸಿಂಹ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಜೀಜಾ ಹರಿಸಿಂಗ್ ಮತ್ತು ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮಂಡಳಿಯ ಡಿಜಿಪಿ ಎಸ್.ಸಿ.ಸಕ್ಸೇನಾ ಅವರು ಸೇವೆಯಿಂದ ಸೋಮವಾರ ನಿವೃತ್ತರಾದರು.
147. ನೇಮಕಾತಿ ವಿಭಾಗದ ಡಿಜಿಪಿ ಡಾ.ಎಸ್.ಟಿ.ರಮೇಶ್ ಅವರು ರಾಜ್ಯದ ನೂತನ ಹಂಗಾಮಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ- ಐಜಿಪಿ) ಸೋಮವಾರ ಅಧಿಕಾರ ಸ್ವೀಕರಿಸಿದರು. ಇದೇ ಮೊದಲ ಬಾರಿಗೆ ಹಂಗಾಮಿ ಡಿಜಿಪಿ- ಐಜಿಪಿಯನ್ನು ಸರ್ಕಾರ ನೇಮಕ ಮಾಡಿದೆ.
148. 2009-10ನೇ ಸಾಲಿನ ಪರಿಷ್ಕೃತ ಆರ್ಥಿಕ ವೃದ್ಧಿ ದರವನ್ನು ಸರ್ಕಾರ ಪ್ರಕಟಿಸಿದೆ.ಮೊದಲು ಶೇಕಡ 7.4ರಷ್ಟು ವೃದ್ಧಿ ದರ ಅಂದಾಜಿಸಲಾಗಿತ್ತು. ತಯಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದು ಶೇ 8ರಷ್ಟು ತಲುಪಬಹುದು ಎಂದು ಪರಿಷ್ಕೃತ ವರದಿ ಹೇಳಿದೆ.
149. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ಭಾರತೀಯರ ತಲಾದಾಯ ಶೇಕಡ 14.5ರಷ್ಟು ಹೆಚ್ಚಿದ್ದು, ರೂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ