ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರು ಕ್ರಮವಾಗಿ ಕೆಎಸ್‌ಸಿಎ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚುನಾವಣೆ ನವೆಂಬರ್ 21 ರಂದು ನಡೆಯಲಿದೆ.
2. ಕುಂಬ್ಳೆ ಸ್ಪರ್ಧಿಸಲು ನಿರ್ಧರಿಸಿರುವ ಕಾರಣ ಅಧ್ಯಕ್ಷರಾಗಿ ಮರು ಆಯ್ಕೆ ಬಯಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಾದಿ ಕಠಿಣವಾಗಿದೆ.
3. ಆದರ್ಶ ಗೃಹ ನಿರ್ಮಾಣ ಸಂಘದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟ ಸೇನೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಇಂಗಿತವನ್ನು ರಕ್ಷಣಾ ಸಚಿವಾಲಯ ವ್ಯಕ್ತಪಡಿಸಿದೆ.
4. ದಕ್ಷಿಣ ಕರೊಲಿನಾ ಪ್ರಾಂತ್ಯದ ಗವರ್ನರ್ ಹುದ್ದೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದ 38 ವರ್ಷದ ನಿಕ್ಕಿ ಹ್ಯಾಲೆ ಜಯಭೇರಿ ಬಾರಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಾಟ್ ಪಕ್ಷದ. ವಿನ್ಸೆಂಟ್ ಶೀಶನ್ ಅವರನ್ನು ಹಿಂದಿಕ್ಕುವ ಮೂಲಕ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
5. ವ್ಯಾಪಾರ ಮತ್ತು ಹೂಡಿಕೆ, ಗಣಿ, ಕಲ್ಲಿದ್ದಲು ಮತ್ತು ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಕಾರ ಸಂಬಂಧ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಆಫ್ರಿಕಾ ಒಕ್ಕೂಟದ ಪ್ರಮುಖ ದೇಶವಾದ ಮಾಲವಿ ಮತ್ತು ಭಾರತ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.
6. ಪಂಡಿತ್ ರಾವ್ ಬರೆದ ‘ಅಕ್ಕಮಹಾದೇವಿ: ಪ್ರೇಮ್ ದಿವಾನಿ ಎಂಬ ಪುಸ್ತಕವನ್ನು ರಾಜ್ಯ ಸಾರಿಗೆ ಸಚಿವ ಮೋಹನ್ ಲಾಲ್ ಬುಧವಾರ ಬಿಡುಗಡೆ ಮಾಡಿದರು.ಅಕ್ಕನ ಕೃತಿಯೊಂದು ಪಂಜಾಬ್‌ಗೆ ಅನುವಾದವಾದ್ದು ಇದೇ ಮೊದಲು.
7. ರೊಮೇನಿಯಾದ ಜಿಪ್ಸಿ ಸಮುದಾಯಕ್ಕೆ ಸೇರಿದ 10 ವರ್ಷದ ಬಾಲೆಯೊಬ್ಬಳು ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದಾಳೆ!ತನ್ನ 10 ವರ್ಷದ ಮಗಳು ತಾಯಿಯಾಗಿರುವುದನ್ನು ಆಕೆಯ ಜಿಪ್ಸಿ ಅಮ್ಮ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ‘ನಮ್ಮ ಕುಟುಂಬಕ್ಕೆ ಮೊಮ್ಮಗಳ ಸೇರ್ಪಡೆಯಾಗಿರುವುದರಿಂದ ಬಹಳ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.
8. ತಂತ್ರಜ್ಞಾನ ಕ್ಷೇತ್ರದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಪ್ರಮುಖ ನಿಯತಕಾಲಿಕೆ ಈ ಆಯ್ಕೆ ಮಾಡಿದ್ದು, ಅಮಿತ್ ಗೋಯಲ್ ಅವರನ್ನು ‘ಆವಿಷ್ಕಾರದ ಆಸ್ಕರ್’ ಎಂದು ಬಣ್ಣಿಸಿದೆ.
9. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಅಮಿತ್ ಗೋಯಲ್ ಅವರು ಇಂಧನ ವಲಯದಲ್ಲಿ ಮಾಡಿರುವ ಸಾಧನೆಗಾಗಿ ಅವರನ್ನು 2010ನೇ ಸಾಲಿನ ಅತ್ಯುತ್ತಮ ಸಂಶೋಧಕ ಎಂದು ಆಯ್ಕೆ ಮಾಡಲಾಗಿದೆ.
10. ಅಕ್ಟೋಪಸ್ ಪಾಲ್-2 ಇದು ಹೊಸದಾಗಿ ಸೇರ್ಪಡೆಗೊಂಡಿರುವ ಅಷ್ಟಪದಿ. ವಿಶ್ವಕಪ್ ಫುಟ್‌ಬಾಲ್ ಪಂದ್ಯಾಟ ದ ಭವಿಷ್ಯ ಹೇಳಿದ್ದ ಅಕ್ಟೋಪಸ್ ಪಾಲ್‌ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದನ್ನು ಪಶ್ಚಿಮ ಜರ್ಮನಿಯ ‘ಸೀ ಲೈಫ್’ ಕೇಂದ್ರಕ್ಕೆ ಸೇರಿಸಲಾಗಿದೆ.
11. ಕ್ರಿಸ್ತಪೂರ್ವ 1550-1295ರ ಅವಧಿಯಲ್ಲಿ ಥೇಬ್ಸ್ ಅನ್ನು ಆಳಿದ ಸತ್ದೆಜೆಹುಟಿ ರಾಜವಂಶಕ್ಕೆ ಸೇರಿದ 18ನೇ ಅರಸನ ಶವ (ಮಮ್ಮಿ)ದ ಮುಖವಾಡ. ಇದನ್ನು ಲಂಡನ್‌ನ ‘ಬ್ರಿಟಿಷ್ ಮ್ಯೂಸಿಯಂ’ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. -ಎಪಿ ಚಿತ್ರ
12. 15 ಶಾಸಕರ ಪೈಕಿ 9 ಮಂದಿ ಸದನ ಸಮಿತಿ ಅಧ್ಯಕ್ಷ ಅಪ್ಪಚ್ಚು ರಂಜನ್ ಅವರಿಗೆ ಲಿಖಿತವಾಗಿ ಉತ್ತರ ನೀಡಿದ್ದಾರೆ.ಖುದ್ದಾಗಿ ಹಾಜರಾಗಿ ಉತ್ತರಿಸಲು ಗುರುವಾರದವರೆಗೂ ಕಾಲಾವಕಾಶವಿದೆ. ಹೀಗಾಗಿ ಉಳಿದ ಶಾಸಕರು ನೋಟಿಸ್‌ಗೆ ಉತ್ತರ ನೀಡುವ ಸಾಧ್ಯತೆಗಳಿವೆ.
13. ಒಬಾಮ ಅವರ ಭೇಟಿಯ ನಿಮಿತ್ತ ಸಂಸತ್ ಭವನವನ್ನು ಸುಂದರಗೊಳಿಸಲಾಗಿದ್ದು ಬ್ರಿಟಿಷರು 1947ರಲ್ಲಿ ಇದೇ ಸೆಂಟ್ರಲ್ ಹಾಲ್‌ನಲ್ಲಿ ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ್ದರು.
14. ಒಬಾಮ ಉತ್ತಮ ವಾಗ್ಮಿಯಾದರೂ ಸಂಸತ್ತಿನ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಎಂಬ ಉಪಕರಣವನ್ನು ಬಳಸಲಿದ್ದಾರೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಸ್ಪೀಕರ್ ಮೀರಾ ಕುಮಾರ್ ಮತ್ತು ಸಂಸದೀಯ ವ್ಯವಹಾರ ಸಚಿವ ಪವನ್ ಕುಮಾರ್ ಬನ್ಸಲ್ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ.
15. ಅನ್ಸಾರಿ ಸ್ವಾಗತ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಸಂಸತ್ತಿನಲ್ಲಿಟ್ಟಿರುವ ಸಂದರ್ಶಕರ ಪುಸ್ತಕದಲ್ಲಿ ಒಬಾಮ ಅವರು ಸಹಿ ಹಾಕುವರು.
16. ಆಫ್ರೋ- ಅಮೆರಿಕನ್ ಗೀತೆ ‘ಡೀಪ್ ರಿವರ್’ನೊಂದಿಗೆ ಕಾರ್ಯಕ್ರಮ ಮುಗಿಯಲಿದೆ.
17. ವಿಶ್ವದ ಶ್ರೀಮಂತ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಪ್ರಪಂಚದಲ್ಲೇ ಕನಿಷ್ಠ ಬೆಲೆಯ ನ್ಯಾನೊ ಕಾರು ಮೋಡಿ ಮಾಡಿದೆ.
18. 2,500 ಡಾಲರ್ ಬೆಲೆಯ ಈ ಕಾರನ್ನು ಪರಿಚಯಿಸಿದ ರತನ್ ಟಾಟಾ ಅವರ ಬಗ್ಗೆ ಮಿಶೆಲ್‌ಗೆ ಒಬಾಮ ಹೇಳಿದರು.
19. ಒಬಾಮ ದಂಪತಿ ನವದೆಹಲಿಗೆ ತೆರಳುವ ಮುನ್ನ ಸಂತ ಕ್ಸೇವಿಯರ್ ಕಾಲೇಜಿಗೆ ಭೇಟಿ ನೀಡಿದ್ದರು.
20. ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ಉಪ ನಾಯಕ ಎಸ್.ಎಸ್.ಅಹ್ಲುವಾಲಿಯ, ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಪಾಲ್ಗೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
21. ‘ಡಿಜಿಟಲ್ ಗ್ರೀನ್’ ಸರ್ಕಾರೇತರ ಸಂಸ್ಥೆಯ ರೈತ ಮಹಿಳೆ ವಂದನಾ ಭೈರಿಕೊಪ್ಪೆ ಅವರು ತೂಗುಫಲಕದ ಕೊಡುಗೆ ನೀಡಿದಾಗ, ‘ಇದನ್ನು ಶ್ವೇತಭವನದಲ್ಲಿ ತೂಗಿ ಹಾಕುತ್ತೇನೆ’ ಎನ್ನುತ್ತಾ ಕೃತಜ್ಞತೆ ಅರ್ಪಿಸಿದರು.
22. ಸಾಂಪ್ರದಾಯಿಕ ಮಹಾರಾಷ್ಟ್ರ ದಿರಿಸಿನಲ್ಲಿದ್ದ ರೈತನೊಬ್ಬನ ಕೈ ಕುಲುಕಿ ‘ನಿಮ್ಮನ್ನು ನೋಡಿ ಬಹಳ ಸಂತೋಷವಾಯಿತು’ ಎಂದರು.
23. ಮಕ್ಕಳ ಹಕ್ಕು ಮತ್ತು ಶಿಕ್ಷಣಕ್ಕಾಗಿ ದುಡಿಯುತ್ತಿರುವ ‘ಪ್ರಥಮ್’ ಸಂಸ್ಥೆಯ ಮಳಿಗೆಗೆ ತೆರಳಿ ‘ಮಹಾತ್ಮ ಗಾಂಧೀಜಿ’ ಅವರನ್ನು ಕುರಿತ ಪುಸ್ತಕಗಳಿಗೆ ಸಹಿ ಹಾಕಿದರು.
24. 2009- 10ರಲ್ಲಿ ಭಾರತ- ಅಮೆರಿಕದ ದ್ವಿಪಕ್ಷೀಯ ವ್ಯವಹಾರ 36.6 ಶತಕೋಟಿ ಡಾಲರ್ ತಲುಪಿದೆ.
25. ತೈವಾನ್ ಪ್ರತಿಷ್ಠಾನವು, ‘ಏಷ್ಯಾ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪ್ರಶಸ್ತಿ -2010’ಗೆ ವೇಶ್ಯಾವಾಟಿಕೆ ಜಾಲದಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುತ್ತಿರುವ ಮುಂಬೈ ಮೂಲದ ರಕ್ಷಣಾ ಪ್ರತಿಷ್ಠಾನವನ್ನು ಆಯ್ಕೆ ಮಾಡಿದೆ.
26. ತೈವಾನ್ ಪ್ರತಿಷ್ಠಾನದ ಅಧ್ಯಕ್ಷ ಎಂದು ವಾಂಗ್ ಜಿನ್-ಪೈಂಗ್.
27. ಜಪಾನ್ ಪ್ರಧಾನಿ ನಯಟೊ ಕನ್.
28. ನವದೆಹಲಿ: ಒರಿಸ್ಸಾಗೆ ‘ಒಡಿಶಾ’ ಎಂದು ಮರು ನಾಮಕರಣ ಮಾಡಲು ಹಾಗೂ ಈ ರಾಜ್ಯದ ಭಾಷೆ ಒರಿಯಾವನ್ನು ‘ಒಡಿಯಾ’ ಎಂದು ಕರೆಯಲು ಅವಕಾಶ ನೀಡುವ ತಿದ್ದುಪಡಿ ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ನೀಡಿತು.
29. ಅಮೆರಿಕದ ಭಾರತದ ರಾಯಭಾರಿ ಟಿಮತಿ ರೋಮರ್.
30. ತಮ್ಮ ಬಾಲ್ಯದ ನಾಲ್ಕು ವರ್ಷಗಳನ್ನು ಕಳೆದ ಜಕಾರ್ತದಲ್ಲಿ ಒಬಾಮ ಕಳೆದಿದ್ದರು.
31. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ವಿಚಾರವಾಗಿ ಒಬಾಮ ಅವರ ಈ ನಿರ್ಧಾರದ ಬಗ್ಗೆ ಮುಂದಿನ ದಿನಗಳಲ್ಲಿ ಚೀನಾ ತಲೆಕೆಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದಿ ಟೈಮ್ಸ್ ಎಚ್ಚರಿಸಿದೆ.
32. ಅಮೆರಿಕದ ಬೆಂಬಲವಿದ್ದರೂ ಭಾರತಕ್ಕೆ ಕಾಯಂ ಸದಸ್ಯತ್ವ ಶೀಘ್ರವೇ ದಕ್ಕುವ ಸಾಧ್ಯತೆ ಇಲ್ಲ ಎಂದು ಹೆಸರಾಂತ ಮಾಧ್ಯಮ ಸಂಸ್ಥೆಯಾದ ಎನ್‌ಪಿಆರ್ ಹೇಳಿದೆ.
33. ಅಂತರರಾಷ್ಟ್ರೀಯ ಭೂಪಟದಲ್ಲಿ ಭಾರತ ಪಡೆಯುತ್ತಿರುವ ಮಹತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಈ ನಿರ್ಧಾರ ಒಂದು ಹೆಜ್ಜೆ ಮಾತ್ರ ಎಂದು ದಿ ಲಾಸ್ ಏಂಜಲೀಸ್ ಟೈಮ್ಸ್ ಹೇಳಿದೆ.
34. ‘ಕಾರ್ಪೊರೇಷನ್ ಬ್ಯಾಂಕ್ ಪ್ರಾಯೋಜಿಸಿದ ‘ಕಾರ್ಪ್ ಪ್ರಶಸ್ತಿ’ಯನ್ನು ಇಬ್ಬರಿಗೆ (ರೈತ ಹಾಗೂ ರೈತಮಹಿಳೆ) ನೀಡಲಾಗುವುದು.
35. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಉಷಾ ಥೋರಟ್, ತಮ್ಮ 38 ವರ್ಷಗಳ ಸೇವೆಯ ನಂತರ ಮಂಗಳವಾರ ಇಲ್ಲಿ ನಿವೃತ್ತರಾದರು.
36. ಮೋಸದಾಟಕ್ಕೆ ಒಪ್ಪದಿರುವ ಕಾರಣ ಪ್ರಾಣ ಬೆದರಿಕೆ ಬಂದಿದೆ ಎಂದು ಹೇಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್ ಜುಲ್ಕರೈನ್ ಹೈದರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೇ ವಿದಾಯ ಹೇಳಿ; ಅಚ್ಚರಿಗೊಳಿಸಿದ್ದಾರೆ.
37. (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳ೦: ಮ೦ಗಲಾಪುರ೦.
38. ಕಾರ್ಗಿಲ್ ಹುತಾತ್ಮರ ಕುಟುಂಬದವರಿಗಾಗಿ ನಿರ್ಮಿಸಲಾದ ಮುಂಬೈನ ‘ಆದರ್ಶ ಹೌಸಿಂಗ್ ಕಾಂಪ್ಲೆಕ್ಸ್’ ಹಗರಣಕ್ಕೆ ಸಿಕ್ಕಿ ತಲೆದಂಡ ತೆತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್.
39. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರಿಗೂ ಹತ್ತಿರದವರಾದ ‘ಶುದ್ಧ ವರ್ಚಸ್ಸು, ದಕ್ಷತೆ ಹಾಗೂ ಉತ್ತಮ ನಡವಳಿಕೆಯ’ ಪೃಥ್ವಿರಾಜ್ ಅವರಿಗೆ ಅನಿರೀಕ್ಷಿತವಾಗಿ ‘ಮುಖ್ಯಮಂತ್ರಿ ಸ್ಥಾನ’ ಒಲಿದಿದೆ.
40. ಹಿಂದುಳಿದ ವರ್ಗದ ಜನಪ್ರಿಯ ನಾಯಕ ಛಗನ್ ಭುಜಬಲ್ ಅವರು ನಿರ್ವಹಿಸುತ್ತಿದ್ದ ಈ ಸ್ಥಾನಕ್ಕೆ ಪಕ್ಷದ ವರಿಷ್ಠ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರನ್ನು ತಂದು ಕೂರಿಸಿದೆ.
41. ನಿಘಂಟುತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರನ್ನು ಬೆಂಗಳೂರಿನಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
42. ನಗರದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಡಿಸೆಂಬರ್ 24ರಿಂದ 26ರವರೆಗೆ ಸಮ್ಮೇಳನ ನಡೆಯಲಿದೆ.
43. ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರ ವಿರುದ್ಧ ಇರುವ ‘ಅಪಾರ ಮೊತ್ತದ ಹಣ ದುರ್ಬಳಕೆ’ ಆರೋಪವನ್ನು ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ನೇಮಿಸಿದ್ದ ತ್ರಿಸದಸ್ಯ ನ್ಯಾಯಾಂಗ ಸಮಿತಿ ಎತ್ತಿ ಹಿಡಿದಿದ್ದು ಇದರಿಂದ ಅವರಿಗೆ ವಾಗ್ದಂಡನೆ ವಿಧಿಸಲು ವೇದಿಕೆ ಸಿದ್ಧಗೊಂಡಂತಾಗಿದೆ.
44. ಸರಕು ಕ್ರಯದಾರನಿಂದ 33,22,800 ರೂಪಾಯಿ ಪಡೆದುಕೊಂಡು ತಮ್ಮ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡಿದ್ದ ಸೇನ್, ಈ ವಿಷಯವನ್ನು ಹೈಕೋರ್ಟ್‌ಗೆ ಮರೆಮಾಚಿದ್ದ ಆರೋಪ ಎದುರಿಸುತ್ತಿದ್ದಾರೆ.
45. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ನೇತೃತ್ವದ ಸಮಿತಿಯ ಪರವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರ ಮಂಡಿಸಲಾದ ವರದಿಯ ಪ್ರಕಾರ, ಸೆನ್ ಅವರ ದುರ್ನಡತೆ ಸಂವಿಧಾನದ ನಿಯಮಗಳಡಿ ಸಾಬೀತಾಗಿದೆ.
46. 2ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು ಇದಕ್ಕೆ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಎ.ರಾಜಾ ಅವರನ್ನು ಮಹಾಲೆಕ್ಕ ಪರಿಶೋಧಕ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ವರದಿಯು ನೇರ ಹೊಣೆ ಮಾಡಿದೆ ಎನ್ನಲಾಗಿದೆ.
47. ಮಹಾಲೆಕ್ಕ ಪರಿಶೋಧಕ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ವಿನೋದ ರೇ
48. ದೂರಸಂಪರ್ಕ ಸಚಿವಾಲಯ 2ಜಿ ಸ್ಪೆಕ್ಟ್ರಂ ‘ರೇಡಿಯೋ ತರಂಗ’ಗಳನ್ನು 2008ರಲ್ಲಿ 2001ರ ಬೆಲೆಗೆ ‘ಮೊದಲು ಬಂದವರಿಗೆ ಮೊದಲು’ ಎಂಬ ಆಧಾರದಲ್ಲಿ ಮಂಜೂರು ಮಾಡಿದ್ದು ಹರಾಜು ಪ್ರಕ್ರಿಯೆಯ ನಿಯಮಗಳನ್ನು ಗಾಳಿಗೆ ತೂರಿದೆ.
49. 2010ರಲ್ಲಿ 3ಜಿ ತರಂಗಗಳ ಹರಾಜಿನಿಂದ 67.718.95 ಕೋಟಿ ವರಮಾನ ದೊರೆತಿದೆ.2ಜಿ ಮಂಜೂರಾತಿಯಿಂದ 1.40 ಲಕ್ಷ ಕೋಟಿ ನಷ್ಟವಾಗಿದೆ.
50. ಉಳಿದ 36,700 ಸಾವಿರ ಕೋಟಿ ನಷ್ಟ ಗುತ್ತಿಗೆ ಮಿತಿಗಳನ್ನು ಮೀರಿ ಹಾಲಿ ಒಂಬತ್ತು ಸಂಸ್ಥೆಗಳಿಗೆ ನಿಗದಿ ಮಾಡಿರುವುದರಿಂದ ಸಂಭವಿಸಿದೆ ಎಂದು ವರದಿ ಹೇಳಿದೆ. ವರದಿ ಪ್ರತಿಯನ್ನು ಹಣಕಾಸು ಸಚಿವಾಲಯ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.
51. ಕಾಮನ್‌ವೆಲ್ತ್ ಕ್ರೀಡಾಕೂಟದ ಎರಡು ವಾರಗಳ ಕ್ರೀಡಾಕೂಟದಿಂದ ದೇಶಕ್ಕೆ 70,000 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಲಾಗಿದೆ.
52. ಕಾಮನ್‌ವೆಲ್ತ್ ಕ್ರೀಡಾಕೂಟದ ಮಾಜಿ ಮಹಾಲೇಖಪಾಲ ವಿ.ಕೆ.ಶುಂಗ್ಲು ನೇತೃತ್ವದಲ್ಲಿ ಪ್ರಧಾನಿ ಅ.15ರಂದು ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಅದು 90 ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ.
53. ಶಬರಿಮಲೆ ದೇವಾಲಯದ ಅಯ್ಯಪ್ಪ ಸ್ವಾಮಿ ಮೂರ್ತಿಯ ಪಾದಸ್ಪರ್ಶ ಮಾಡಿ ವಿವಾದಕ್ಕೆ ಒಳಗಾಗಿರುವ ಚಿತ್ರನಟಿ ಜಯಮಾಲಾ ಅವರ ವಿರುದ್ಧ ನಾಲ್ಕು ವರ್ಷಗಳ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೊಲೀಸರು ಮುಂದಾಗಿದ್ದಾರೆ.
54. ಇವರ ಜೊತೆಗೆ ಜ್ಯೋತಿಷಿ ಉಣ್ಣಿಕೃಷ್ಣನ್ ಮತ್ತು ಅವರ ಸಹಾಯಕ ರಘುಪತಿ ಅವರ ವಿರುದ್ಧವೂ ಭಾರತೀಯ ದಂಡ ಸಂಹಿತೆಯ 295 ಎ (ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು) ಕಲಮಿನ ಅಡಿ ಇದೇ 15ರ ಒಳಗೆ ದೋಷರೋಪಣಾ ಪಟ್ಟಿ ಸಲ್ಲಿಕೆಗೆ ಅವರು ನಿರ್ಧರಿಸಿದ್ದಾರೆ.
55. ನ್ಯಾಯಾಂಗ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎಂಬ ತಮ್ಮ ಹಿಂದಿನ ಆರೋಪದಿಂದ ಹಿಂದೆ ಸರಿಯದ ಹಿರಿಯ ವಕೀಲ ಮತ್ತು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್, ಈ ಸಂಬಂಧ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.
56. ಹರಿಯಾಣದ ಮಾಜಿ ಪೊಲೀಸ್ ಮುಖ್ಯಸ್ಥ ಎಸ್.ಪಿ.ಎಸ್.ರಾಥೋಡ್ ವಿರುದ್ಧ ರುಚಿಕಾ ಗಿರ್‌ಹೋತ್ರ ಅವರ ಕುಟುಂಬ ಮಾಡಿರುವ ಆರೋಪಗಳನ್ನು ಎತ್ತಿಹಿಡಿಯಲು ಅಗತ್ಯವಾದ ಯಾವ ಸಾಕ್ಷ್ಯವೂ ಇಲ್ಲ ಎಂದು ಸಿಬಿಐ ಬುಧವಾರ ಹೇಳಿದೆ.
57. ದೇಶದ ಅತಿದೊಡ್ಡ ಕಾರ್ಪೋರೇಟ್ ಹಗರಣದ ಪ್ರಮುಖ ರೂವಾರಿಯಾಗಿರುವ ‘ಸತ್ಯಂ ಕಂಪ್ಯೂಟರ್ಸ್’ನ ಮಾಜಿ ಅಧ್ಯಕ್ಷ ಬಿ. ರಾಮಲಿಂಗರಾಜು ಬುಧವಾರ ಇಲ್ಲಿಯ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗತರಾದರು.
58. ಭಾರತ ಆಫ್ಘಾನಿಸ್ತಾನವನ್ನು ಪಾಕಿಸ್ತಾನದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಪಿಸಿದ್ದಾರೆ.
59. ಪರಮಾಣು ಪರೀಕ್ಷೆ ನಡೆಸಿ ಅಮೆರಿಕದಿಂದ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿರುವ ಉತ್ತರ ಕೊರಿಯಾ ಈಗ ವಿವಿಧ ದೇಶಗಳಿಗೆ ಪರಮಾಣು ತಂತ್ರಜ್ಞಾನ ಪೂರೈಸಿದ ಮತ್ತೊಂದು ಗುರುತರ ಅಪಾದನೆ ಎದುರಿಸುತ್ತಿದೆ.
60. ಇರಾನ್, ಸಿರಿಯಾ ಮತ್ತು ಮ್ಯಾನ್ಮಾರ್‌ಗಳಿಗೆ ಉತ್ತರ ಕೊರಿಯಾ ಪರಮಾಣು ತಂತ್ರಜ್ಞಾನ ಪೂರೈಸಿರಬಹುದಾದ ಸಾಧ್ಯತೆಗಳಿವೆ ಎಂದು ಆರೋಪಿಸಿರುವ ವಿಶ್ವಸಂಸ್ಥೆ, ಈ ಕುರಿತು ಬುಧವಾರ ಭದ್ರತಾ ಮಂಡಳಿಗೆ 75 ಪುಟಗಳ ವರದಿ ಸಲ್ಲಿಸಿದೆ.
61. ಭಾರತೀಯರಾದ ಕೃಷ್ಣನ್ ಪಾರ್ಥಸಾರಥಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಲಾಟರಿ ಸ್ಪರ್ಧೆಯಲ್ಲಿ 20 ಲಕ್ಷ ಡಾಲರ್ ಗೆದ್ದಿದ್ದಾರೆ.
62. ಭಾರತೀಯ ಮೂಲದ ಕಾನೂನು ತಜ್ಞ ಪ್ರೊ. ವರ್ನ್ ಕೃಷ್ಣನ್ ಅವರನ್ನು ಕೆನಡಾದ ಒಂಟಾರಿಯೊದ ಭದ್ರತಾ ಆಯೋಗದ ಆಯುಕ್ತರ ಸ್ಥಾನಕ್ಕೆ ನೇಮಿಸಲಾಗಿದೆ.
63. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮೆರಿಕದ ಸಿಐಎ ಏಜೆಂಟ್ ಆಗಿದ್ದರು ಮತ್ತು ಅವರು ತಮ್ಮ ಪತಿ ರಾಜೀವ್ ಗಾಂಧಿ ಹಾಗೂ ಅತ್ತೆ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಲು ಸಂಚು ನಡೆಸುತ್ತಿದ್ದರು ಎಂದು ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್.
64. ಪೀಠದಲ್ಲಿದ್ದ ಉಪ ಸಭಾಪತಿ ಕೆ. ರೆಹಮಾನ್ ಖಾನ್.
65. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪೃಥ್ವಿರಾಜ್ ಚವಾಣ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಮತ್ತು ಎಂಟು ಮಂದಿ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
66. ಮಹಾರಾಷ್ಟ್ರದ ರಾಜ್ಯಪಾಲ ರಾಜ್ಯಪಾಲ ಕೆ. ಶಂಕರನಾರಾಯಣನ್.
67.
68. ಕರ್ನಾಟಕ ಜಿ.ಎ.ಸ್ಟ್ಯಾನಿ, ಜಮ್ಮುವಿನಲ್ಲಿ ಗುರುವಾರ ಮುಕ್ತಾಯಗೊಂಡ, 21ನೇ ರಾಷ್ಟ್ರೀಯ 17 ವರ್ಷದೊಳಗಿನವರ ಚೆಸ್ ಕೂಟದಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು.
69. ಶೂಟರ್ ಗಗನ್ ನಾರಂಗ್ ಅವರೇ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿ ಆಗಿರುತ್ತಾರೆಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಸ್ಪಷ್ಟಪಡಿಸಿದೆ.
70. ಸಚಿನ್ ಅವರಂತಹ ಆಟಗಾರನ ಬೆಂಬಲ ಲಭಿಸಿದ್ದು ಸಂಘಟಕ ಸಮಿತಿಯ ಅದೃಷ್ಟ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲೊರ್ಗಟ್ ತಿಳಿಸಿದರು.
71. ಮುಂಬೈಕರ್‌ಗೆ ಇದು ಆರನೇ ವಿಶ್ವಕಪ್ ಎನಿಸಲಿದೆ. ಈ ಮೂಲಕ ಅವರು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಸರಿಗಟ್ಟಲಿದೆ. ಮಿಯಾಂದಾದ್ ಆರು ವಿಶ್ವಕಪ್‌ಗಳಲ್ಲಿ ಪಾಕ್‌ನ್ನು ಪ್ರತಿನಿಧಿಸಿದ್ದಾರೆ.
72. ಏಕದಿನ ವಿಶ್ವಕಪ್ ಟೂರ್ನಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ಮುಂದಿನ ಫೆಬ್ರುವರಿ 19 ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದೆ.
73. ಸಚಿನ್ ತೆಂಡೂಲ್ಕರ್ ಅವರು ಮುಂದಿನ ವರ್ಷ ಉಪಭೂಖಂಡದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
74. ರಾಜಧಾನಿಯ ಹೃದಯ ಭಾಗದಲ್ಲಿರುವ, ರೈಲ್ವೆಗೆ ಸೇರಿದ 38 ಎಕರೆ ಭೂಮಿಯನ್ನು ಪಾರ್ಶ್ವನಾಥ್ ಡೆವಲಪರ್ಸ್‌ ಸಂಸ್ಥೆ 1,651ಕೋಟಿಗೆ ಖರೀದಿಸಿದೆ.
75. ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ಮೀಸಲಾತಿ ಶೇ 50 ಮೀರಬಾರದು ಎಂದು ಕಳೆದ ತಿಂಗಳ 4 ರಂದು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಗುರುವಾರ ವಾಪಸ್ ಕಳುಹಿಸಿದ್ದಾರೆ.
76. ಬಿರ್‌ಭೂಮ್ ಜಿಲ್ಲೆಯ ಸುಚಪುರ ಗ್ರಾಮದ ತೃಣಮೂಲ ಕಾಂಗ್ರೆಸ್‌ನ 11 ಮಂದಿ ಬೆಂಬಲಿಗರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಂನ 44 ಮಂದಿ ಬೆಂಬಲಿಗರು ಮತ್ತು ಸ್ಥಳೀಯ ಮುಖಂಡರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
77. ಪ್ರಧಾನಮಂತ್ರಿ ಕಚೇರಿಯು ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳಿಗಾಗಿಯೇ 3 ವರ್ಷಕ್ಕೆ ರೂ 34 ಲಕ್ಷ ಖರ್ಚು ಮಾಡಿದೆ !ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವಿ.ನಾರಾಯಣಸ್ವಾಮಿ ಈ ವಿಷಯವನ್ನು ತಿಳಿಸಿದರು.
78. ಅನೌಷ್ಕ ಅವರನ್ನು ಬ್ಲಾಕ್‌ಮೇಲ್ ಮಾಡಲು ಮುಂಬೈ ಮೂಲದ ಉದ್ಯಮಿ ಜುನೈದ್ ಖಾನ್ ಬಳಸಿದ್ದರು ಎನ್ನಲಾದ ಇ-ಮೇಲ್‌ಗೆ ಸಂಬಂಧಿಸಿದಂತೆ ಗೂಗಲ್ ಕಾರ್ಪೊರೇಷನ್‌ನಿಂದ ಸ್ಪಷ್ಟವಾದ ಮಾಹಿತಿ ಪಡೆಯಲು ತಮಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
79. ಇಂಗ್ಲೆಂಡ್‌ನಲ್ಲಿ ಕಾಗದದ ತೆಳು ಕೊಳವೆಗಳಿಂದ ತಯಾರಿಸಿದ, ಮೂರು ಅಡಿ ರೆಕ್ಕೆ ಇದ್ದ ಪುಟ್ಟ ವಿಮಾನವೊಂದು ಬೃಹತ್ ಗಾತ್ರದ ಹೀಲಿಯಂ ಬಲೂನಿನ ಸಹಾಯದಿಂದ 90,000 ಅಡಿ ಎತ್ತರದಲ್ಲಿ ಯಶಸ್ವಿಯಾಗಿ ಹಾರಾಡಿದೆ.
80. ‘ಪಾರಿಸ್’ (ಪೇಪರ್ ಏರ್‌ಕ್ರಾಫ್ಟ್ ರಿಲೇಸ್ಡ್ ಇನ್‌ಟು ಸ್ಪೇಸ್) ಹೆಸರಿನ ಈ ಯೋಜನೆಗೆ ಎಂಟು ಸಾವಿರ ಪೌಂಡ್ ವೆಚ್ಚವಾಗಿದೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.
81. ಕೊಲೆ ಆರೋಪದ ಮೇಲೆ ಗಲ್ಲಿಗೇರಿಸಿದ್ದ ವ್ಯಕ್ತಿಯ ಶವದ ಪಳೆಯುಳಿಕೆ (ಅಸ್ಥಿಪಂಜರ)ಯು 189 ವರ್ಷದ ಬಳಿಕ ವಾರಸುದಾರರ ವಶಕ್ಕೆ ದಕ್ಕಿದೆ! ತಮ್ಮ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜಾನ್ ಹೊರ್‌ವುಡ್ ಅವರನ್ನು 1821ರಲ್ಲಿ ನೇಣು ಹಾಕಲಾಗಿತ್ತು. ಅವರ ಅಸ್ಥಿಪಂಜರವನ್ನು ಬ್ರಿಟನ್ನಿನ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಗಿತ್ತು.
82. ಪೆನ್ ತೆಗೆದುಕೊಂಡರೆ ಇಂಕ್ ಖಾಲಿಯಾಗುವವರೆಗೆ ಬರೆದು ನಂತರ ಎಸೆಯುವುದು ರೂಢಿ. ಆದರೆ ಒಂದು ಅಕ್ಷರವನ್ನೂ ಬರೆಯಲು ಮನಸ್ಸಾಗದಂತಹ ಪೆನ್ ಆಸ್ಟ್ರೇಲಿಯಾದಲ್ಲಿದೆ. ಏಕೆಂದರೆ ಈ ಪೆನ್ನಿನ ಬೆಲೆ 1.7 ಕೋಟಿ ಡಾಲರ್!.
83. ಜನಸಂಖ್ಯಾ ನಿಯಂತ್ರಣಕ್ಕೆ ಒಂದೇ ಮಗುವಿನ ಕಡ್ಡಾಯ ನಿಯಮ ಜಾರಿಗೆ ತಂದಿದ್ದ ಚೀನಾದ ಪ್ರಮುಖ ನಗರವಾದ ಶಾಂಘೈ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮನೆಯಲ್ಲಿ ಒಂದೇ ನಾಯಿ ಸಾಕಬೇಕೆಂಬ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ.
84. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರಯತ್ನದ ಹೊರತಾಗಿಯೂ ಭಾರತದಲ್ಲಿ 2009ರಲ್ಲಿ 2 ಕೋಟಿ ಕ್ಷಯರೋಗಿಗಳ (ಟಿಬಿ) ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಮಾಣದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಓ) ವರದಿ ತಿಳಿಸಿದೆ.
85. ಸಚಿವ ರಾಜಾ 2008ರಲ್ಲಿ ಒಂಬತ್ತು ನಿರ್ವಾಹಕ ಕಂಪೆನಿಗಳಿಗೆ ತರಂಗಾಂತರವನ್ನು ಹಂಚಿಕೆ ಮಾಡಿದ್ದರು. ಆದರೆ ಕೆಲವು ಕಂಪೆನಿಗಳು, ಯಾವ ಉದ್ದೇಶಕ್ಕಾಗಿ ತರಾಂಗಾಂತರಗಳನ್ನು ಪಡೆದಿದ್ದವೋ ಆ ಸೇವೆಗಳನ್ನು ಇನ್ನೂ ಆರಂಭಿಸಿಯೇ ಇಲ್ಲ. ಈ ಸಂಬಂಧ ನಿರ್ವಾಹಕ ಕಂಪೆನಿಗಳಿಂದ ಟ್ರಾಯ್ ಈಗಾಗಲೇ ಅಗತ್ಯ ಮಾಹಿತಿಗಳನ್ನು ಕಲೆಹಾಕಿದೆ.
86. ಟ್ರಾಯ್ ಅಧ್ಯಕ್ಷ ಜೆ.ಆರ್.ಶರ್ಮ.
87. 2 ಜಿ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ನೀಡಿರುವ ವರದಿ ಇನ್ನು ಕೆಲವೇ ದಿನಗಳಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
88. ಈ ಹಗರಣದಿಂದಾಗಿ 70,000 ಕೋಟಿ ನಷ್ಟವಾಗಿದೆ ಎಂದು ದೂರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಮತ್ತು ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ಪೀಠ ವಿಚಾರಣೆ ನಡೆಸುತ್ತಿದೆ.
89. ದೂರವಾಣಿ ನಿರ್ವಾಹಕ ಕಂಪೆನಿಗಳಿಗೆ ಸಚಿವ ಎ.ರಾಜಾ ಅವರು ಹೆಚ್ಚುವರಿಯಾಗಿ ನೀಡಿರುವುದು 12.6 ಮೆಗಾಹರ್ಟ್ಸ್ ತರಂಗಾಂತರಗಳನ್ನು ಮಾತ್ರ.
90. ರಾಜಾ ಅವರಿಗಿಂತ ಮುಂಚೆ ದೂರಸಂಪರ್ಕ ಸಚಿವರಾಗಿದ್ದ ಉಳಿದ ಮೂವರು ಸಚಿವರು ಯಾವುದೇ ಮುಂಗಡ ಶುಲ್ಕ ಪಡೆಯದೇ 65.2 ಮೆಗಾಹರ್ಟ್ಸ್ ತರಾಂಗಾಂತರಗಳನ್ನು ವಿತರಿಸಿದ್ದರು ಎಂದು ದೂರಸಂಪರ್ಕ ಇಲಾಖೆಯು ಭಾನುವಾರ ಬಹಿರಂಗಪಡಿಸಿದೆ.
91. ದಯಾನಿಧಿ ಮಾರನ್, ಅರುಣ್ ಶೌರಿ ಮತ್ತು ದಿವಂಗತ ಪ್ರಮೋದ್ ಮಹಾಜನ್ ಅವರು ಸಚಿವರಾಗಿದ್ದ ಸಂದರ್ಭ ಹರಾಜು ನಡೆಸದೇ ಈ ತರಂಗಾಂತರ ಹಂಚಲಾಗಿತ್ತೆಂಬುದನ್ನು ಪುಷ್ಟೀಕರಿಸುವ ದಾಖಲೆಯನ್ನು ಇಲಾಖೆ ಬಿಡುಗಡೆ ಮಾಡಿದೆ.
92. ಶ್ರೀಕೃಷ್ಣ ದೇವಸ್ಥಾನವನ್ನು ಸರ್ಕಾರದ ಆದೇಶ (ಕಂಇ81 ಮುಅಬಿ 2008, ಬೆಂಗಳೂರು ದಿನಾಂಕ 26ನೇ ಅಕ್ಟೋಬರ್ 2010)ದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯಿದೆಯಡಿ ಸರ್ಕಾರ ಉಡುಪಿಯ ಅಷ್ಟಮಠಾಧಿಪತ್ಯಕ್ಕೆ ಬಿಟ್ಟುಕೊಡಲಾಗಿದೆ.
93. ಪಂಕಜ್ ಅಡ್ವಾಣಿ ಅವರು 16ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಂಗಾರ ತಂದಿತ್ತ ಗೌರವಕ್ಕೆ ಪಾತ್ರರಾದರು.
94. ಉತ್ತರಾಖಂಡ ಮೂಲದ ಹಿಮಾಲಯದ ಚಿಪ್ಕೊ ಪ್ರತಿಷ್ಠಾನವು ಲಂಡನ್ ಸಂಸತ್‌ನ ಕೆಳಮನೆಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಗ್ರೀನ್ ಆಪಲ್ ಪ್ರಶಸ್ತಿ ಪಡೆಯಲಿದೆ.
95. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತು 19 ವರ್ಷಗಳ ನಂತರ ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಅವರನ್ನು ಭಾಷಣ ಮಾಡುವಂತೆ ಒಸ್ಲೊಕ್ಕೆ ಆಹ್ವಾನಿಸಿದೆ.
96. ಮ್ಯಾನ್ಮಾರದಲ್ಲಿ ಸೇನಾಡಳಿತವನ್ನು ಕೊನೆಗಾಣಿಸಿ ಪ್ರಜಾಸತ್ತೆಯ ಮರು ಸ್ಥಾಪನೆ ಮತ್ತು ಮಾನವ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ನಡೆಸಿದ ಸೂಕಿ ಅವರಿಗೆ 1991ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
97. ನೊಬೆಲ್ ಸಮಿತಿ ಮುಖ್ಯಸ್ಥ ಥೋರ್ಬಜರ್ನ್ ಜಗ್‌ಲ್ಯಾಂಡ್.
98. ರತನ್ ಅವರಿಗಿಂತ ಮುಂಚೆ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಟಾಟಾ ಅವರು 1930ರಲ್ಲಿಯೇ ‘ಟಾಟಾ ಏರ್‌ಲೈನ್ಸ್’ ಸ್ಥಾಪಿಸಿದ್ದರು. 1950ರಲ್ಲಿ ಕೇಂದ್ರ ಸರ್ಕಾರವು ಈ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿ ‘ಏರ್ ಇಂಡಿಯಾ’ ಎಂದು ನಾಮಕರಣ ಮಾಡಿತ್ತು.
99. 2012ರಲ್ಲಿ ಸೇವಾ ನಿವೃತ್ತಿಯಾಗುವ ತಮ್ಮ ಈ ಮೊದಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ರತನ್ ಸ್ಪಷ್ಟಪಡಿಸಿದರು.72 ಶತಕೋಟಿ ಡಾಲರ್ ಮೌಲ್ಯದ ( ್ಙ 3,60,000 ಕೋಟಿ) ಟಾಟಾ ಸಮೂಹದ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ನಂತರ ರತನ್ ಅವರು, ಸಂಸ್ಥೆಯನ್ನು ಅಗಾಧವಾಗಿ ಬೆಳೆಸಿದ್ದಾರೆ. ವಿಶ್ವದ ಅತ್ಯಂತ ಕಡಿಮೆ ಬೆಲೆಯ ಮತ್ತು ಪುಟ್ಟ ಕಾರು ‘ನ್ಯಾನೊ’ ಅನ್ನೂ ಪರಿಚಯಿಸಿದ ಹೆಗ್ಗಳಿಕೆ ರತನ್ ಅವರದ್ದು.
100. 2ಜಿ ತರಂಗಾಂತರ ಹಗರಣದ ತನಿಖೆಗೆ ಸಂಸತ್‌ನ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸುವ ಅಗತ್ಯವೂ ಇಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
101. ಆಲ್ಕೋ ಮೀಟರ್: ವಾಹನ ಚಾಲಕರು ಪಾನಮತ್ತರಾಗಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಈ ಸಾಧನ ಬಳಸಲಾಗುತ್ತದೆ.
102. ವಿವಾದಿತ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ನಿವೇಶನ ಮಾಲೀಕತ್ವ ಕುರಿತಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಜಮಾತೆ ಉಲೇಮಾ-ಎ-ಹಿಂದ್ (ಜೆಯುಎಚ್) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
103. ವಿವಾದಿತ ನಿವೇಶನವನ್ನು ಹಿಂದೂ, ಮುಸ್ಲಿಮರು ಮತ್ತು ನಿರ್ಮೋಹಿ ಅಖಾಡಕ್ಕೆ ಸಮನಾಗಿ ಹಂಚಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಸೆ. 31ರಂದು ತೀರ್ಪು ನೀಡಿತ್ತು.
104. ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಕಳೆದ 9 ತಿಂಗಳಲ್ಲೇ ಕನಿಷ್ಠ ಎನ್ನಬಹುದಾದ ಶೇಕಡ 8.58ಕ್ಕೆ ಕುಸಿದಿದೆ.
105. ಇಲ್ಲಿ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ‘ಬಗೆಹರಿಯದ ವಿವಾದದ ಪಟ್ಟಿ’ಯಿಂದ ಜಮ್ಮು ಮತ್ತು ಕಾಶ್ಮೀರವನ್ನು ಕಿತ್ತು ಹಾಕಲಾಗಿದ್ದು ಇದರಿಂದ ಕಾಶ್ಮೀರ ವಿವಾದದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆನ್ನುವ ಪಾಕ್ ಕೋರಿಕೆಗೆ ಹಿನ್ನಡೆ ಉಂಟಾಗಿದೆ.
106. ಕರ್ನಾಟಕ ಸರ್ಕಾರದ ಲಾಂಛನದಲ್ಲಿರುವ ಬಿಳಿ ಗಂಢಬೇರುಂಡ ಶಾಂತಿ, ಸಮಾನತೆ ಹಾಗೂ ಧರ್ಮದ ಸಿದ್ಧಾಂತಗಳನ್ನು ಸಾರುತ್ತದೆ. ಆನೆಯ ಸೊಂಡಿಲು ಸಿಂಹದ ಶರೀರ ಹೊಂದಿರುವ ಶರಭದ ಚಿತ್ರ ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಹಳದಿ ಬಣ್ಣ ಪ್ರಾಮಾಣಿಕತೆ ಹಾಗೂ ರಾಜನಿಷ್ಠೆಯನ್ನು ಪ್ರತಿನಿಧಿಸಿದರೆ ಕೆಂಪು ಧೈರ್ಯ ಮತ್ತು ಆಳ್ವಿಕೆಯ ಸಂಕೇತವಾಗಿದೆ.
107. ವಿಶ್ವ ಕ್ರಿಕೆಟ್‌ನ ಏಕೈಕ ಮಹಿಳಾ ಫಿಜಿಯೋ ಕೂಡ ನ್ಯೂಜಿಲೆಂಡ್ ತಂಡದ ಆ ವೈದ್ಯೆ ಹೆಸರು ಕೇಟ್ ಸ್ಟಾಕರ್.
108. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಮೊದಲ ದೇಶ ನ್ಯೂಜಿಲೆಂಡ್.
109. ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಆವೃತ್ತಿಯನ್ನು 2011ರ ಏಪ್ರಿಲ್ 8ರಿಂದ ಮೇ 22ರವರೆಗೆ ನಡೆಯಲಿದೆ.
110.
111. ಏರ್ ಟೆಲ್ ಸಂಸ್ಥೆಯ ಒಟ್ಟಾರೆ ಗ್ರಾಹಕರ ಸಂಖ್ಯೆ 20 ಕೋಟಿ ದಾಟಿದ್ದು, ದೇಶದಲ್ಲಿನ ಚಂದಾದಾರರ ಸಂಖ್ಯೆ 15 ಕೋಟಿ ದಾಟಿದೆ. ಆಫ್ರಿಕಾದಲ್ಲಿ 4 ಕೋಟಿ ಮತ್ತು ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಉಳಿದ ಗ್ರಾಹಕರು ಇದ್ದಾರೆ.
112. ವಿಶ್ವದ 5ನೇ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆಯಾಗಿರುವ ಭಾರ್ತಿ ಏರ್‌ಟೆಲ್ ಗುರುವಾರ ಇಲ್ಲಿ ತನ್ನ ಹೊಸ ‘ಜಾಗತಿಕ ಲಾಂಛನ’ ಬಿಡುಗಡೆ ಮಾಡಿತು. ಲಾಂಛನದ ಜೊತೆ ಸಂಸ್ಥೆಯು, ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ. ಆರ್. ರೆಹಮಾನ್ ಅವರು ಸಂಯೋಜಿಸಿರುವ ‘ಏರ್‌ಟೆಲ್ ರಾಗ’ವನ್ನೂ ಬದಲಾಯಿಸಿದೆ.
113. ಜಿನಿವಾ, (ಎಪಿ): ಇಲ್ಲಿ ನಡೆದ ಹರಾಜಿನಲ್ಲಿ ನಸುಗೆಂಪಿನ ವಜ್ರ 4.60 ಕೋಟಿ ಡಾಲರ್‌ಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. 24.78 ಕ್ಯಾರಟ್‌ನ ಈ ನಸುಗೆಂಪಿನ ವಜ್ರವನ್ನು ಬ್ರಿಟಿಷ್ ವಜ್ರ ವ್ಯಾಪಾರಿ ಲಾರೆನ್ಸ್ ಗ್ರಾಫ್ ಖರೀದಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ