1. ಕಾಮನ್‌ವೆಲ್ತ್ ಕೂಟದ ಕುಸ್ತಿ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿರುವ ಸುಶೀಲ್ ಟ್ಯಾಬ್ಲಾಯ್ಡಾ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು ಶೇ 32 ರಷ್ಟು ಮತಗಳನ್ನು ಪಡೆದರು. ಅವರು ಸೈಪ್ರಸ್‌ನ ಶೂಟರ್ ಜಾರ್ಜಿಯೊಸ್ ಅಚಿಲ್ಲೊಸ್ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಹಿಂದಿಕ್ಕಿದರು.
2. ಪ್ರತಿ ವರ್ಷ ಅಕ್ಟೋಬರ್ 16 ರಂದು ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಅಂಗ ಸಂಸ್ಥೆಯಾಗಿ ‘ವಿಶ್ವ ಆಹಾರ ಸಂಸ್ಥೆ’ ರೋಮ್ ನಗರದಲ್ಲಿ ಜನ್ಮ ತಳೆದ ದಿನ.
3. ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಡಾ.ಕಾರಂತ ಜನ್ಮೋತ್ಸವ ಸಮಿತಿ ನೀಡುವ ಪ್ರತಿಷ್ಠಿತ ‘ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ಭಾನುವಾರ ಪಡೆದುಕೊಂಡರು .
4.
5. ಕರ್ನಾಟಕ ಸರ್ಕಾರದ ವತಿಯಿಂದ ದಸರಾ ಮಹೋತ್ಸವದಲ್ಲಿ ನೀಡಲಾಗುವ 2010ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಯನ್ನು ಅರಮನೆ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಹಾವೇರಿ ಮೂಲದ ತಬಲ ವಾದಕ ಪಂಡಿತ್ ಶೇಷಗಿರಿ ಹಾನಗಲ್ಲ ಪಡೆದುಕೊಂಡರು .
6. 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪ್ರಮುಖ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಅವರುಗಳೆಂದರೇ ರಾಜಸ್ತಾನದ ಅಜ್ಮೀರ್‌ನಲ್ಲಿ ನೆಲೆಸಿದ್ದ ಉಮರ್ ಫರೂಕ್ (35) ಮತ್ತು ಕೇರಳದ ಕಾಸರಗೋಡಿನಲ್ಲಿದ್ದ ಇಬ್ರಾಹಿಂ ಮೌಲ್ವಿ (50) ಬಂಧಿತರು.
7. ಮುಂದಿನ ತಿಂಗಳು ಯಾಕೊಹಾಮಾದಲ್ಲಿ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಶೃಂಗಸಭೆಯ ನಡೆಯಲಿದೆ.
8. ವಿವಾದಿತ ಡಿಯಾಯು (ಜಪಾನೀಯರು ಇದನ್ನು ‘ಸೆಂಕಾಕು’ ಎನ್ನುತ್ತಾರೆ) ದ್ವೀಪದ ಮೇಲೆ ಜಪಾನಿನ ಹಸ್ತಕ್ಷೇಪವನ್ನು ವಿರೋಧಿಸಿ ಚೀನಾದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನರು ತೀವ್ರ ಪ್ರತಿಭಟನೆ ನಡೆಸಿದ್ದು,
9. ಜಪಾನ್, ಚೀನಾ ಹಾಗೂ ತೈವಾನ್ ರಾಷ್ಟ್ರಗಳು ಜನರಹಿತ ಡಿಯಾಯು ದ್ವೀಪವನ್ನು ತಮ್ಮದೆಂದು ಪರಸ್ಪರ ವಾದಿಸುತ್ತಿವೆ.
10. 2008ರಲ್ಲಿ 24 ವರ್ಷದ ಯುವಕ ಬ್ರೆಜಿಲ್‌ನ ರೂಪದರ್ಶಿ ಜೀಸಸ್ ಲುಜ್ ಜೊತೆ ಪ್ರೇಮ ಸಲ್ಲಾಪ ನಡೆಸಿದ್ದ 52ರ ಹರೆಯದ ಮಡೋನಾ ಈಗ ಆತನನ್ನು ತೊರೆದು ತನ್ನ ‘ಸ್ಟಿಕ್ಕಿ ಆ್ಯಂಡ್ ಸ್ವೀಟ್’ ಆಲ್ಬಮ್‌ಗೆ ನೃತ್ಯ ಸಂಯೋಜನೆ ಮಾಡಿರುವ 41 ವರ್ಷದ ಬ್ರಹಿಮ್ ರಚಿಕಿ ಜೊತೆ ಸುತ್ತುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ದೈನಿಕ ಅಂತರ್ಜಾಲದಲ್ಲಿ ವರದಿ ಮಾಡಿದೆ.
11. ‘ಕಂಟ್ಯೂನಿಯಸ್ ಆಟೊಮ್ಯಾಟಿಕ್ ಟ್ರೈನ್ ಕಂಟ್ರೋಲ್ ಸಿಸ್ಟಮ್’ ವ್ಯವಸ್ಥೆಯನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ಅಳವಡಿಸಲಾಗಿದೆ.
12. ಒಂದೊಮ್ಮೆ ‘ಆಟೊಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ ಸಿಗ್ನಲ್’ಗಳು ಸ್ಥಗಿತಗೊಂಡರೂ ರೈಲು ಪ್ರಯಾಣ ಮುಂದುವರಿಯಲಿದೆ.
13. ರೈಲು ನಿಯಂತ್ರಕರ ದೃಷ್ಟಿ ಸಾಮರ್ಥಕ್ಕೆ ಅನುಗುಣವಾಗಿ ಗಂಟೆಗೆ ಗರಿಷ್ಠ 25 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಲಿದೆ.
14. ಚಿಕುನ್ ಗುನ್ಯಾ, ಕಾಲರಾ, ದಡಾರ, ಸಿಡುಬು ಸೇರಿದಂತೆ ಇತರೆ ಅಂಟುಜಾಡ್ಯಗಳಿಂದ ಬಳಲುತ್ತಿರುವವರಿಗೆ ‘ನಮ್ಮ ಮೆಟ್ರೊ’ ರೈಲಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
15. ಪ್ರಯಾಣ ಆರಂಭವಾಗುವ 10 ನಿಮಿಷ ಮೊದಲಷ್ಟೇ ಪ್ರಯಾಣಿಕರು ನಿಲ್ದಾಣ ಪ್ರವೇಶಿಸಬಹುದಾಗಿದೆ. ದಿನದ ಕೊನೆಯ ಪ್ರಯಾಣ ಮುಕ್ತಾಯಗೊಂಡ 10 ನಿಮಿಷದ ಬಳಿಕ ಯಾವುದೇ ಪ್ರಯಾಣಿಕರು ನಿಲ್ದಾಣದಲ್ಲಿರುವಂತಿಲ್ಲ ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
16. ‘ವರ್ಷದ ಅತ್ಯುತ್ತಮ ಕ್ರಿಕೆಟ್ ಆಟಗಾರ’ ಪ್ರಶಸ್ತಿಗಿಂತ ತೆಂಡೂಲ್ಕರ್‌ಗೆ ಹೆಚ್ಚು ಖುಷಿ ತಂದಿದ್ದು ‘ಜನರ ಆಯ್ಕೆ’ ಪ್ರಶಸ್ತಿ.ಇದೇ ಚೊಚ್ಚಲ ಬಾರಿ ಈ ಪ್ರಶಸ್ತಿಯನ್ನು ಹಮ್ಮಿಕೊಳ್ಳಲಾಗಿತ್ತು.
17. ಆಗಸ್ಟ್ 24, 2009 ಹಾಗೂ ಆಗಸ್ಟ್ 10, 2010ರ ನಡುವಿನ ಅವಧಿಯಲ್ಲಿ ಸಚಿನ್ ನೀಡಿದ ಪ್ರದರ್ಶನದ ಆಧಾರ ಮೇಲೆ ‘ವರ್ಷದ ಅತ್ಯುತ್ತಮ ಕ್ರಿಕೆಟಿಗ’ ಪ್ರಶಸ್ತಿ ನೀಡಲಾಗಿದೆ.
18. ತೆಂಡೂಲ್ಕರ್ ಈ ಅವಧಿಯಲ್ಲಿ 10 ಟೆಸ್ಟ್‌ಗಳಿಂದ 81.25 ಸರಾಸರಿಯಲ್ಲಿ 1064 ರನ್ ಗಳಿಸಿದ್ದಾರೆ. ಹಾಗೇ, 17 ಏಕದಿನ ಪಂದ್ಯಗಳಿಂದ 65.29 ಸರಾಸರಿಯಲ್ಲಿ 914 ರನ್ ಪೇರಿಸಿದ್ದಾರೆ.
19. ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು 3ನೇ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಆದೇಶಿಸಿದ್ದಾರೆ.
20. ಅವರು ಸಂವಿಧಾನದ 10ನೇ ಪರಿಚ್ಛೇದದ 2(1)(ಎ) ಪ್ಯಾರಾದ ಅಡಿ ಸ್ಪೀಕರ್‌ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಇದೆಯೇ, ಇಲ್ಲವೇ ಎಂಬ ಬಗ್ಗೆಯಷ್ಟೇ ವಾದ, ಪ್ರತಿವಾದ ಆಲಿಸಬೇಕಿದೆ.
21. ಸಂವಿಧಾನದ 10ನೇ ಪರಿಚ್ಛೇದವು ‘ಪಕ್ಷಾಂತರದ ಕಾರಣಕ್ಕೆ ಅನರ್ಹತೆ’ ಕುರಿತು ಉಲ್ಲೇಖಿಸುತ್ತದೆ. ಅದೇ ಪರಿಚ್ಛೇದದ (2)(1)(ಎ) ಪ್ಯಾರಾ ಪ್ರಕಾರ ‘ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬ ಒಂದು ವೇಳೆ ಸ್ವ ಇಚ್ಛೆಯಿಂದ ಆ ಪಕ್ಷವನ್ನು ತೊರೆದಿದ್ದರೆ ಆತನು ಅನರ್ಹಗೊಳ್ಳುತ್ತಾನೆ’.
22. ಕಾಮನ್‌ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರ ಹಗರಣದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಸುಧಾಂಶು ಮಿತ್ತಲ್ ಅವರ ನಿವಾಸ, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನೇಕ ಕಟ್ಟಡಗಳ ಮೇಲೆ ದಾಳಿ ನಡೆಸಿದರು.
23. ಪಶ್ಚಿಮಘಟ್ಟ ವ್ಯಾಪ್ತಿಗೊಳಪಡುವ ತಲಕಾವೇರಿ, ಪುಷ್ಪಗಿರಿ ಹಾಗೂ ಬ್ರಹ್ಮಗಿರಿ ಅಭಯಾರಣ್ಯ ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಪೂರಕವಾಗಿ ಪರಿಶೀಲನೆ ನಡೆಸಲು ಆಗಮಿಸಿದ್ದ ‘ಯುನೆಸ್ಕೋ’ ಪ್ರತಿನಿಧಿಗಳಿಗೆ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ದಿಗ್ಬಂಧನ ಹಾಕಿ, ಕೊಡಗಿನಿಂದ ಹೊರ ಕಳಿಸಿದ.
24. ‘ಯುನೆಸ್ಕೋ ಪ್ರತಿನಿಧಿಗಳಾದ ಆಸ್ಟ್ರೇಲಿಯಾದ ಡಾ. ಬ್ರಿನ್ ಫರ್ಜಾಫ್ ಹಾಗೂ ಸ್ವಿಟ್ಜರ್ಲೆಂಡ್‌ನ ಡಾ. ವೆಂಡಿ.
25. ವಿಶ್ವಸಂಸ್ಥೆಯ ‘ಯುನೆಸ್ಕೊ ವಿಶ್ವಪರಂಪರೆ ಪಟ್ಟಿ’ಗೆ ಸೇರಿಸಲು ಜೀವವೈವಿಧ್ಯ ಹೊಂದಿರುವ ಕರ್ನಾಟಕದ ’ಪಶ್ಚಿಮಘಟ್ಟ’ ಹಾಗೂ ಕವಿ ರವೀಂದ್ರನಾಥ ಟ್ಯಾಗೋರರ ವಿಶ್ವಭಾರತಿ ಸಂಸ್ಥೆ ಇರುವ ಪಶ್ಚಿಮ ಬಂಗಾಳದ ‘ಶಾಂತಿನಿಕೇತನ’ ನಗರವನ್ನು ಶಿಫಾರಸು ಮಾಡಲಾ.
26. ಭಾರತದಲ್ಲಿ ಈಗಾಗಲೇ 30 ಪ್ರದೇಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
27. ಅಕ್ಟೋಬರ್ 28 ರಿಂದ 3 ದಿನಗಳ ಕಾಲ ನಗರದಲ್ಲಿ ‘ಬೆಂಗಳೂರು ಐಟಿ ಡಾಟ್ ಬಿಜ್ 2010’ ನಡೆಯಲಿದೆ. ಈ ಮೇಳದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
28. ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ರೀಡಾಗ್ರಾಮ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿದ ಆರೋಪಕ್ಕೆ ಒಳಗಾಗಿರುವ ಖಾಸಗಿ ಗುತ್ತಿಗೆದಾರ ಕಂಪೆನಿ ಎಮ್ಮಾರ್- ಎಂಜಿಎಫ್‌ನ 183 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಖಾತರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
29. ವಿಶ್ವದ ಪ್ರಪ್ರಥಮ ಅಂತರ್ ರಾಷ್ಟ್ರೀಯ ನವಜಾತ ಶಿಶು ಆರೈಕೆ ಶ್ರೇಷ್ಠತಾ ಪ್ರಶಸ್ತಿಯ ಗೌರವಕ್ಕೆ ಭಾರತೀಯ ದಾದಿ ಮುಂಬೈಯ ರೇಖಾ ಕಾಶೀನಾಥ ಸಾಮಂತ್ ಪಾತ್ರರಾಗಿದ್ದಾರೆ. ಸಾಮಂತ್ ಅವರು ಘಾನಾದ ಕುಮಾಸಿಯ ರೆಗಿನಾ ಒಬೆಂಗ್ ಅವರ ಜೊತೆಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
30. ಡರ್ಬಾನಿನ ಇಂಕೋಸಿ ಆಲ್ಬರ್ಟ್ ಲುಥುಲಿ ಅಂತರ್ ರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಭಾನುವಾರ ಆರಂಭವಾದ ನವಜಾತ ಶಿಶುದಾದಿಯರ 7ನೇ ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
31. 'ಜನಿಸುವ ಪ್ರತಿಯೊಂದು ಶಿಶುವಿನ ಆರೈಕೆ ನಿಟ್ಟಿನ ತಮ್ಮ ಸೇವೆಯಲ್ಲಿ ರೇಖಾ ಮತ್ತು ರೆಗಿನಾ ಅವರು ತೋರುತ್ತಿರುವ ಪ್ರೇಮ ಅಪೂರ್ವ' ಎಂದು ದಕ್ಷಿಣ ಆಫ್ರಿಕಾದ ನವಜಾತ ಶಿಶು ದಾದಿಯರ ಸಂಘದ ಅಧ್ಯಕ್ಷ ರುತ್ ಡೇವಿಜ್ ನುಡಿದರು.
32. ನಾಲ್ಕು ವರ್ಷದ ಬಾಲಕಿಯೊಬ್ಬಳು ಲಿಫ್ಟ್‌ನ ಬಾಗಿಲಿಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ಜೆ.ಪಿ.ನಗರ ಒಂದನೇ ಹಂತದ 11ನೇ ಅಡ್ಡರಸ್ತೆಯ ಸಾಯಿರಾಮ ಸಂಧ್ಯಾ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ ಇದೇ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ದೀಪೇಂದ್ರ ಎಂಬುವರ ಮಗಳು.
33. ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಸಿಬ್ಬಂದಿಯಾಗಿರುವ ಅನಿಶ್ ಅಮೆರಿಕದ ವಿದೇಶ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
34. ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ ಎಂದು ಬುಕರ್ ಪ್ರಶಸ್ತಿ ಪುರಸ್ಕೃತೆ ಅರುಂಧತಿ ರಾಯ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
35. ಭಾರತ- ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಏರ್ಪಡಿಸಿರುವ ಸೇನಾ ಪ್ರದರ್ಶನ ‘ಇಂದ್ರ- 2010’ ಅನ್ನು ವೀಕ್ಷಿಸಲು ಇಲ್ಲಿಗೆ ಆಗಮಿಸಿರುವ ಭಾರತಕ್ಕೆ ರಷ್ಯಾ ಒಕ್ಕೂಟದ ರಾಯಭಾರಿಯಾಗಿರುವ ಅಲೆಕ್ಸಾಂಡರ್ ಎಂ.ಕಡಕಿನ್.
36. ಭಾರತವನ್ನು ‘ಉದಯಿಸುತ್ತಿರುವ ಸೂಪರ್ ಪವರ್’ ಎಂದು ಬಣ್ಣಿಸಿರುವ ರಷ್ಯಾ, ಭಾರತದ ಸೇನಾ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತನ್ನ ಬೆಂಬಲ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.
37. ರಹಸ್ಯಗಳನ್ನು ಬಯಲು ಮಾಡುವ ಅಂತರ್ಜಾಲ ‘ವಿಕಿಲೀಕ್ಸ್’ ಅಮೆರಿಕ ಸೇನಾ ಪಡೆಯವರು ಇರಾಕ್‌ನಲ್ಲಿ ನಡೆಸಿರುವ ಹಿಂಸಾಕೃತ್ಯಗಳ ಬಗ್ಗೆ 4 ಲಕ್ಷಕ್ಕೂ ಅಧಿಕ ರಹಸ್ಯ ದಾಖಲೆಗಳನ್ನು ಬಯಲು ಮಾಡಿದೆ.
38. ಕಜಾಕಿಸ್ತಾನ್‌ನ ಬೈಕೊನುರ್‌ನಲ್ಲಿ ಈ ದುರಂತದ ಸ್ಮರಣಾ ದಿನವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.1960ರಲ್ಲಿ ಮತ್ತು 1963 ರಲ್ಲಿ ಸಂಭವಿಸಿದ ಅಪಘಾತದ ಸ್ಮರಣಾರ್ಥವಾಗಿ ರಷ್ಯಾದಲ್ಲಿ ಅ.24ನ್ನು ‘ಕರಾಳ ದಿನ’ (ಬ್ಲಾಕ್‌ಡೇ )ವನ್ನಾಗಿ ಆಚರಿಸಲಾಗುತ್ತದೆ.
39. ಪ್ರೊ.ತಾಳ್ತಜೆ ಕೇಶವ ಭಟ್ಟರ ನೆನಪಿನಲ್ಲಿ ನೀಡಲಾಗುವ ‘ಕೇಶವ ಪ್ರಶಸ್ತಿ’ಯನ್ನು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಪ್ರದಾನ ಮಾಡಿದರು .
40. ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಟಿಸಿರುವ ವಿಶ್ವ ಸಾರ್ವಕಾಲಿಕ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
41. ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಟಿಸಿರುವ ತಂಡದಲ್ಲಿ ರಿಕಿ ಪಾಂಟಿಂಗ್, ಬ್ರಯನ್ ಲಾರಾ, ಗ್ಲೆನ್ ಮೆಕ್‌ಗ್ರಾ ಹಾಗೂ ಸುನಿಲ್ ಗಾವಸ್ಕರ್ ಅವರಂತಹ ಆಟಗಾರರು ಕೂಡ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
42. ಲಾರಾ ಹಾಗೂ ಗಾವಸ್ಕರ್ ಎರಡನೇ ವಿಶ್ವ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲೂ ಪಾಂಟಿಂಗ್ ಇಲ್ಲ. ಕಪಿಲ್ ದೇವ್ ಹಾಗೂ ಮೆಕ್‌ಗ್ರಾಗೆ ಕೂಡ ಸ್ಥಾನ ಲಭಿಸಿಲ್ಲ.
43. ಈ ತಂಡವನ್ನು ಆಯ್ಕೆ ಮಾಡಿದ್ದು ಮಾಜಿ ನಾಯಕರಾದ ಇಯಾನ್ ಚಾಪೆಲ್, ಕ್ಲೈವ್ ಲಾಯ್ಡೆ, ಟೋನಿ ಗ್ರೇಗ್, ದುಲೀಪ್ ಮೆಂಡೀಸ್, ಆಲಿ ಬಾಕರ್, ಇಂತಿಕಾಬ್ ಅಲಾಮ್, ಜಾನ್ ರೈಟ್, ಅಜಿತ್ ವಾಡೇಕರ್. ಜೊತೆಗೆ ಕ್ರಿಕೆಟ್ ಇತಿಹಾಸಕಾರರು ಹಾಗೂ ಬರಹಗಾರರು ಆಯ್ಕೆ ಮಂಡಳಿಯಲ್ಲಿದ್ದರು.
44. ಡಾನ್ ಬ್ರಾಡ್ಮನ್, ಗ್ಯಾರಿ ಸೋಬರ್ಸ್ ಹಾಗೂ ಶೇನ್ ವಾರ್ನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಎಲ್ಲಾ 60 ಪಾಯಿಂಟ್ಸ್ ಪಡೆದಿದ್ದಾರೆ. ಅವರ ಬಳಿಕ ತೆಂಡೂಲ್ಕರ್ 51 ಪಾಯಿಂಟ್ ಗಳಿಸಿದ್ದಾರೆ.
45. ಓದುಗರ ಆಯ್ಕೆಯಲ್ಲಿ ಕೂಡ ಸಚಿನ್, ಬ್ರಾಡ್ಮನ್ ಗಿಲ್‌ಕ್ರಿಸ್ಟ್, ವಾರ್ನ್ ಹಾಗೂ ಅಕ್ರಮ್ ಸ್ಥಾನ ಪಡೆದಿದ್ದಾರೆ. ಇದರಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಇದ್ದಾರೆ.
46. ವಿಶ್ವ ಇಲೆವೆನ್: ಜಾಕ್ ಹಾಬ್ಸ್, ಲೆನ್ ಹಟನ್, ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್, ವಿವ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್, ಆ್ಯಡಮ್ ಗಿಲ್‌ಕ್ರಿಸ್ಟ್, ಮಾಲ್ಕಮ್ ಮಾರ್ಷಲ್, ಶೇನ್ ವಾರ್ನ್, ವಾಸೀಮ್ ಅಕ್ರಂ ಹಾಗೂ ಡೆನಿಸ್ ಲಿಲ್ಲಿ.
47. ಎರಡನೇ ವಿಶ್ವ ಇಲೆವೆನ್ ತಂಡ: ಸುನಿಲ್ ಗಾವಸ್ಕರ್, ಬ್ಯಾರಿ ರಿಚರ್ಡ್ಸ್, ಜಾರ್ಜ್ ಹೆಡ್ಲಿ, ಬ್ರಯನ್ ಲಾರಾ, ವಾಲಿ ಹ್ಯಾಮಂಡ್, ಇಮ್ರಾನ್ ಖಾನ್, ಅಲನ್ ನಾಟ್, ಬಿಲಿ ಓರಿಲಿ, ಫ್ರೆಡ್ ಟ್ರುಮನ್, ಮುತ್ತಯ್ಯ ಮುರಳೀಧರನ್ ಹಾಗೂ ಎಸ್.ಎಫ್.ಬೇಮ್ಸ್.
48. ಓದುಗರ ಇಲೆವೆನ್: ಸುನಿಲ್ ಗಾವಸ್ಕರ್, ವೀರೇಂದ್ರ ಸೆಹ್ವಾಗ್, ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್, ಬ್ರಯನ್ ಲಾರಾ, ಗ್ಯಾರಿ ಸೋಬರ್ಸ್, ಆ್ಯಡಮ್ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ವಾಸೀಮ್ ಅಕ್ರಂ, ಮುತ್ತಯ್ಯ ಮುರಳೀಧರನ್ ಹಾಗೂ ಗ್ಲೆನ್ ಮೆಕ್‌ಗ್ರಾ.
49. ಸಂಸ್ಕೃತಿ ರೈಲು. ಕವಿಗುರು ರವೀಂದ್ರನಾಥ ಟ್ಯಾಗೋರರ ಜೀವನ, ಬರಹ, ಸಂದೇಶಗಳನ್ನು ಹೊತ್ತು ಬಂದಿರುವ ‘ಸಂಸ್ಕೃತಿ ಎಕ್ಸ್‌ಪ್ರೆಸ್’ ಇದು.
50. ಟ್ಯಾಗೋರರ 150ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಇದೇ ವರ್ಷದ ಮೇ 9ರಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ‘ಸಂಸ್ಕೃತಿ ಎಕ್ಸ್‌ಪ್ರೆಸ್’ ರೈಲಿಗೆ ಚಾಲನೆ ನೀಡಿದ್ದರು. ಇದು 2011ರ ಮೇ ತಿಂಗಳಾಂತ್ಯದ ವರಗೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ.
51. ಸಂಸ್ಕೃತಿ ಎಕ್ಸ್‌ಪ್ರೆಸ್’ ರೈಲು ಇದೇ 28ರವರೆಗೆ ನಗರದ ದಂಡು ರೈಲು ನಿಲ್ದಾಣದಲ್ಲಿರುತ್ತದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ರವರೆಗೆ ಇದು ತೆರೆದಿರಲಿದ್ದು.
52. ಜಾಗತಿಕ ಆರ್ಥಿಕ ಹಿಂಜರಿಕೆಯ ಪರಿಣಾಮವಾಗಿ 2008-09ರಲ್ಲಿ ಶೇಕಡ 6.5ಕ್ಕೆ ಕುಸಿದಿದ್ದ ಭಾರತದ ಆರ್ಥಿಕ ವೃದ್ಧಿಯು 2009-10ರಲ್ಲಿ ಶೇಕಡ 7.4ಕ್ಕೆ ಚೇತರಿಸಿಕೊಂಡಿದೆ. ಈ ಚೇತರಿಕೆಯನ್ನು ಶೇಕಡ 8ರಷ್ಟಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಹೇಳಿದರು.
53. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ 550 ಅಡಿ ಎತ್ತರ ಹಾಗೂ 4 ಲಕ್ಷ ಅಡಿ ಸುತ್ತಳತೆಯ ‘ಅಂಟಿಲಿಯಾ’ ಹೆಸರಿನ ಈ ಗಗನ ಚುಂಬಿ ಮನೆಯನ್ನು ಶತಕೋಟಿ ಡಾಲರ್ ವೆಚ್ಚದಲ್ಲಿ ಪ್ರಾಚೀನ ಭಾರತೀಯ ವಾಸ್ತು ಪ್ರಕಾರ ನಿರ್ಮಿಸಲಾಗಿದೆ.
54. ಅ.27ರಂದು ಮುಖೇಶ್ ಅಂಬಾನಿ, ಪತ್ನಿ ನೀತಾ, ತಾಯಿ ಕೋಕಿಲಾಬೆನ್ ಹಾಗೂ ಮೂವರು ಮಕ್ಕಳೊಂದಿಗೆ ಗೃಹಪ್ರವೇಶ ಮಾಡಲಿದ್ದಾರೆ.
55. ಕಟ್ಟಡದ ಮೇಲೆ ಹೆಲಿಕಾಪ್ಟರ್‌ಗಳನ್ನಿಳಿಸಲು ಮೂರು ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ ಬ್ರಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ.
56. 2005ರಲ್ಲಿ ನೀತಾ ಅಂಬಾನಿ ಅಮೆರಿಕ ಪ್ರವಾಸದ ವೇಳೆಯಲ್ಲಿ ಮ್ಯಾಂಡರಿನ್ ಓರಿಯೆಂಟಲ್ ನ್ಯೂಯಾರ್ಕ್ ಕಟ್ಟಡ ನೋಡಿ ಆಕರ್ಷಿತರಾಗಿದ್ದರು. ನಂತರ ಆ ಕಟ್ಟಡದ ವಿನ್ಯಾಸಕಾರರನ್ನು ಭೇಟಿ ಮಾಡಿ ರೂಪುರೇಷೆ ಸಿದ್ಧಪಡಿಸಿ ಈ ಬೃಹತ್ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದರು.
57. ಆಯೋಗವು ಕ್ರೀಡಾಕೂಟಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಸುಮಾರು ರೂ 5,000-8,000 ಕೋಟಿವರೆಗಿನ ಮೊತ್ತದ ಹಣಕಾಸು ಮತ್ತು ಆಡಳಿತಾತ್ಮಕ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದೆ.
58. ಜೂನ್ ತಿಂಗಳಿಗೆ ಹೋಲಿಸಿದಲ್ಲಿ ಸ್ಟುಡಿಯೋ ಅಪಾರ್ಟ್‌ಮೆಂಟ್ ಬಾಡಿಗೆ ದರ 38,114.4 ಡಾಲರ್‌ನಿಂದ 24,502ಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ. ಬುರ್ಜ್‌ನಲ್ಲಿನ 900 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 825 ಇನ್ನೂ ಖಾಲಿಯಾಗಿಯೇ ಇವೆ ಎಂದು ಸ್ಥಳೀಯ ದಲ್ಲಾಳಿಗಳು ತಿಳಿಸಿದ್ದಾರೆ.
59. ವಾಸುದೇವ್ ರಾವ್ ಸ್ಮಾರಕ ಟ್ರಸ್ಟಿನ 2010ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಗೆ ಸುಳ್ಯದ ಜಿ.ಎಸ್.ಉಬರಡ್ಕ ಮತ್ತು ಬೆಂಗಳೂರಿನ ಸುಬ್ಬು ಹೊಲೆಯಾರ್ ಆಯ್ಕೆಯಾಗಿದ್ದಾರೆ.
60. ಉಬರಡ್ಕ ಅವರ ‘ಭೂಮಿತೂಗುವ ಹಕ್ಕಿ’, ಸುಬ್ಬು ಹೊಲೆಯಾರರ ‘ಎಲ್ಲರ ಬೆರಳಲ್ಲೂ ಅಂಟಿಕೊಂಡಿರುವ ಮುಖವೇ’ ಕೃತಿಗಳು ಆಯ್ಕೆಯಾಗಿವೆ.
61. 2010-11ರ ಏಪ್ರಿಲ್ ಸೆಪ್ಟಂಬರ್ ಅವಧಿಯಲ್ಲಿ ಒಟ್ಟು ರಫ್ತು 10330 ಕೋಟಿ ಡಾಲರ್ ತಲುಪುವ ಸಾಧ್ಯತೆ ಇದ್ದು, ವರ್ಷದಿಂದ ವರ್ಷಕ್ಕೆ ಶೇಕಡ 27.6 ರಷ್ಟು ವೃದ್ಧಿಯಾಗಿದೆ ಎಂದು ಶರ್ಮಾ ಹೇಳಿದ್ದಾರೆ.
62. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಏಕದಿನ ಪಂದ್ಯಗಳ ರಾಕಿಂಗ್ ಪಟ್ಟಿಯಲ್ಲಿ 117 ಪಾಯಿಂಟ್‌ಗಳೊಂದಿಗೆ ಭಾರತ ಎರಡನೇ ಸ್ಥಾನ ಪಡೆದಿದೆ.
63. 130 ಪಾಯಿಂಟ್ ಗಳಿಸಿರುವ ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣಾ ಆಫ್ರಿಕಾ 116 ಪಾಯಿಂಟ್ ಪಡೆದು ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ (115) ಮತ್ತು ಇಂಗ್ಲೆಂಡ್ (112) ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ.
64. ‘ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿನ ಸ್ಥಿತಿಯಲ್ಲಿ ಬದುಕುತ್ತಿರುವ ಸುಮಾರು ಶೇಕಡಾ 31ರಷ್ಟು ಜನರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿಲ್ಲ.
65. ಸಚಿನ್ ‘ಇಎಸ್‌ಪಿಎನ್‌ಕ್ರಿಕ್‌ಇನ್ಫೋ’ ಸೋಮವಾರ ಪ್ರಕಟಿಸಿರುವ ವಿಶ್ವ ಸಾರ್ವಕಾಲಿಕ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ತಂಡದಲ್ಲಿ ಬ್ರಾಡ್ಮನ್, ವಿವ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್ ಹಾಗೂ ಶೇನ್ ವಾರ್ನ್ ಇದ್ದಾರೆ. ಸಮಕಾಲೀನ ಕ್ರಿಕೆಟಿಗರಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ತೆಂಡೂಲ್ಕರ್.
66. ಒಬಾಮ ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವಾಗ ಅವರ ನಿಯೋಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬರುವುದಿಲ್ಲ.
67. ‘ಫಾರ್ಚೂನ್’ ನಿಯತಕಾಲಿಕ ತನ್ನ ‘ವರ್ಷದ ಉದ್ಯಮಿ’ ಪ್ರಶಸ್ತಿಯ ಅಂತಿಮ ಪಟ್ಟಿ ಸಿದ್ಧಪಡಿಸಿದ್ದು, ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಸೇರಿದಂತೆ ವಿಶ್ವದ ಎಂಟು ಜನ ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
68. ಸಂಜೆ 5 ಗಂಟೆಗೆ ಒಬಾಮ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ವಾಗತ ಕೋರುವರು. ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ವಂದನೆ ಸಲ್ಲಿಸುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ