1. ಇದನ್ನು ದೇಶದ 117 ಕೋಟಿ ಜನಸಂಖ್ಯೆಗೆ ವಿಭಜಿಸಿದರೆ ಅದನ್ನೇ ತಲಾದಾಯ ಎಂದು ಪರಿಗಣಿಸಲಾಗುತ್ತದೆ. 33,731 ಕೋಟಿ ತಲುಪಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ಮಾರುಕಟ್ಟೆ ದರಗಳು ರೂ 52,82,086 ಕೋಟಿಯಿಂದ ಶೇ 16ರಷ್ಟು ಏರಿಕೆ ಕಂಡಿದ್ದು, ರೂ 61,33,230 ಕೋಟಿ ತಲುಪಿದೆ. ದೇಶದ ಜನಸಂಖ್ಯೆ ಕೂಡ ಇದೇ ಅವಧಿಯಲ್ಲಿ 11.4 ಕೋಟಿಯಿಂದ 117ಕೋಟಿಗೆ ಏರಿದೆ.
2. ಇಂಡಿಯನ್ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವತರಣಿಕೆಯ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡದ ಯಾವುದೇ ಆಟಗಾರರಿಗೆ ಅವಕಾಶ ಲಭಿಸಿಲ್ಲ. ಆದರೆ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಪಾಕಿಸ್ತಾನದ ಅಲೀಮ್ ದಾರ್ ಹಾಗೂ ಅಸಾದ್ ರೌಫ್ ಅವಕಾಶ ಪಡೆದುಕೊಂಡಿದ್ದಾರೆ.
3. ಶ್ರೀಶಾಂತ್ ಭಾನುವಾರ ರಾತ್ರಿ ತಮ್ಮ ‘ಎಸ್- 36’ ಬ್ಯಾಂಡ್ ಆಯೋಜಿಸಿದ್ದ ಸಮಾರಂಭದಲ್ಲಿ ತಾವೇ ರಚಿಸಿದ ಗೀತೆಯನ್ನು ಹಾಡಿದರಲ್ಲದೆ, ಅದನ್ನು ಭಾರತ ತಂಡಕ್ಕೆ ಸಮರ್ಪಿಸಿದರು.
4. ಸಿಎಜಿ ವರದಿಯೊಂದನ್ನೇ ಆಧರಿಸಿ 2ಜಿ ತರಾಂಗತರ ಹಂಚಿಕೆಯ ಪರವಾನಗಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
5. ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದ ಬಗ್ಗೆ ಮೊದಲ ಮಧ್ಯಂತರ ತನಿಖಾ ವರದಿ ಸಲ್ಲಿಸಿರುವ ಶುಂಗ್ಲು ಸಮಿತಿಯು, 135 ಕೋಟಿ ರೂಪಾಯಿ ಮೌಲ್ಯದ ಪ್ರಸಾರದ ಹಕ್ಕು ನೀಡಿಕೆ ವ್ಯವಹಾರದಲ್ಲಿನ ಅಕ್ರಮಗಳಲ್ಲಿ ಪ್ರಸಾರ ಭಾರತಿಯಿಂದ ಅಮಾನತುಗೊಂಡಿರುವ ಸಿಇಒ ಬಿ.ಎಸ್.ಲಲ್ಲಿ ಹಾಗೂ ದೂರದರ್ಶನದ ಮಹಾ ನಿರ್ದೇಶಕ ಅರುಣ ಶರ್ಮ ಅವರನ್ನು ಪ್ರಧಾನವಾಗಿ ಹೆಸರಿಸಿದೆ.
6. ‘ಕ್ರೀಡಾಕೂಟದ ವ್ಯವಹಾರ ಸುಮಾರು 28,000 ಕೋಟಿಯಷ್ಟು ಭಾರಿ ಮೊತ್ತದ್ದಾಗಿರುವುದರಿಂದ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಅದಕ್ಕಾಗಿ ಅವಧಿ ವಿಸ್ತರಿಸಬೇಕು’ ಎಂದು ಶುಂಗ್ಲು ಮಂಗಳವಾರ ಹೇಳಿದ್ದಾರೆ.
7. ವಿಶ್ವದಲ್ಲೇ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಮೆರಿಕದ ಯೂನೈಸ್ ಸ್ಯಾನ್‌ಬಾರ್ನ್ (115) ಟೆಕ್ಸಾಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.
8. ಸ್ಯಾನ್‌ಬಾರ್ನ್ ನಿಧನದಿಂದ ಹಿರಿಯಜ್ಜಿಯ ಪಟ್ಟ ಜಾರ್ಜಿಯಾದ 114ರ ಹರೆಯದ ಬೆಸ್ಸೆ ಕೂಪರ್ ಪಾಲಾಗಿದೆ.
9. 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಜಿ.ವೆಂಕಟಸುಬ್ಬಯ್ಯ ಹೇಳಿದರು.
10. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣ ಶೇಕಡ 36ರಷ್ಟು ಏರಿಕೆ ಕಂಡಿದೆ.
11. ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ (ಉತ್ತರ ಪ್ರದೇಶ ಕೇಡರ್‌ನ 1973ರ ತಂಡದ ಐಎಎಸ್ ಅಧಿಕಾರಿ) ರಾಜಾ ಅವರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯ (1984ನೇ ತಂಡದ ಭಾರತೀಯ ಆರ್ಥಿಕ ಸೇವೆ ಅಧಿಕಾರಿ) ಬಂಧಿತರು.
12. ಕೇಂದ್ರ ಜಾಗೃತ ಆಯೋಗದ ತನಿಖೆಯನ್ನು ಆಧರಿಸಿ,2 ಜಿ ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿದಂತೆ ರೂ 22,000 ಕೋಟಿ ನಷ್ಟವಾಗಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ಯಲ್ಲಿ ದಾಖಲಿಸಿದೆ.
13. ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ’ (ನೈಸ್)
14. ಜಗತ್ತಿನಲ್ಲಿ ಅಂತರ್ಜಾಲ ಬಳಕೆ ದಟ್ಟಣೆ ಎಷ್ಟರಮಟ್ಟಿಗೆ ಏರುತ್ತಿದೆಯೆಂದರೆ ಅದಕ್ಕೆ ನಿಗದಿ ಮಾಡಿದ್ದ ಐಪಿ ವಿಳಾಸಗಳೆಲ್ಲಾ (ಇಂಟರ್‌ನೆಟ್ ಪ್ರೊಟೊಕಾಲ್) ಶುಕ್ರವಾರ (ಫೆ.4ರಂದು) ಸಂಪೂರ್ಣ ಬರಿದಾಗಲಿವೆ!
15. 1980ರಲ್ಲಿ ಐಪಿವಿ 4 ಆವೃತ್ತಿ ಜಾರಿಗೊಳಿಸಿದಾಗ 410 ಕೋಟಿ ಐಪಿ ವಿಳಾಸ ನೀಡುವ ಸಾಮರ್ಥ್ಯ ಅದಕ್ಕಿತ್ತು. ಅಷ್ಟೊಂದು ಅಗಾಧ ಸಾಮರ್ಥ್ಯವಿದ್ದ ಹಿನ್ನೆಲೆಯಲ್ಲಿ ಐಪಿ ವಿಳಾಸ ಯಾವತ್ತಿಗೂ ಬರಿದಾಗದು ಎಂದೇ ಆಗ ತಜ್ಞರು ಭಾವಿಸಿದ್ದರು.
16. 2ಜಿ ತಂರಂಗಾಂತರ ಹಂಚಿಕೆ ಹಗರಣ ಸೃಷ್ಟಿಸಿದ ಕೋಲಾಹಲದಿಂದ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯಾಸ ಪಡುತ್ತಿರುವ ಬೆನ್ನಲ್ಲೇ ‘ಇಸ್ರೊ ಎಸ್-ಬ್ಯಾಂಡ್’ಬಹುಕೋಟಿ ಹಗರಣದ ಭೂತ ಅದರ ಹೆಗಲೇರಿದೆ.
17. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಖಾಸಗಿ ಕಂಪೆನಿ ನಡುವೆ ನಡೆದ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದವೊಂದು ದೇಶದ ಬೊಕ್ಕಸಕ್ಕೆ ರೂ 2 ಲಕ್ಷ ಕೋಟಿ ಮೊತ್ತದ ಹಾನಿ ಉಂಟು ಮಾಡಿದೆ ಎನ್ನಲಾಗಿದೆ.
18. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ: ಇಸ್ರೊದ ವಾಣಿಜ್ಯ ವ್ಯವಹಾರದ ಅಂಗ ಸಂಸ್ಥೆ ‘ಆ್ಯಂಟ್ರಿಕ್ಸ್ ಕಾರ್ಪೊರೇಷನ್’ ಹಾಗೂ ಖಾಸಗಿ ಕಂಪೆನಿಯಾದ ದೇವಾಸ್ ಮಲ್ಟಿಮೀಡಿಯ ಸರ್ವಿಸ್ ನಡುವೆ ನಡೆದ ಒಪ್ಪಂದ ಈಗ ವಿವಾದವನ್ನು ಎಬ್ಬಿಸಿದ್ದು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
19. ದೇವಾಸ್ ಮತ್ತು ಆ್ಯಂಟ್ರಿಕ್ಸ್ ನಡುವಿನ ಪ್ರಸ್ತುತ ಒಪ್ಪಂದ 2005ರ ಜನವರಿ 28ರಂದು ನಡೆದಿತ್ತು. 70 ಮೆಗಾ ಹರ್ಟ್ಸ್ ಎಸ್-ಬ್ಯಾಂಡ್ ಅತಿ ದುಬಾರಿ ತರಂಗಾಂತರವನ್ನು ಸುಮಾರು ಎರಡು ಲಕ್ಷ ಕೋಟಿ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು.
20. 12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012-17) ಶೇಕಡ 4ರಷ್ಟು ಕೃಷಿ ವೃದ್ಧಿ ದರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಯೋಜನಾ ಆಯೋಗ ಉಪಾಧ್ಯಕ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.
21. ಏಕದಿನ ಕ್ರಿಕೆಟ್ ಹುಟ್ಟು ಪಡೆದಿದ್ದು 7ನೇ ಜೂನ್ 1971ರಲ್ಲಿ.
22. ಮೊಟ್ಟ ಮೊದಲ ಏಕದಿನ ವಿಶ್ವಕಪ್ ನಡೆದಿದ್ದು 1975ರಲ್ಲಿ.
23. ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದು ಭಾರತ ಹಾಗೂ ಇಂಗ್ಲೆಂಡ್ (ಲಾರ್ಡ್ಸ್, 7ನೇ ಜೂನ್). ವಿಶೇಷವೆಂದರೆ ಇದಕ್ಕೂ ಮುನ್ನ 18 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿದ್ದವು. ಆಗ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದ ಅಂಗಳಗಳಲ್ಲಿಯೇ ಏಕದಿನ ಪಂದ್ಯಗಳು ನಡೆದಿದ್ದು.
24. ಮೊದಲ ವಿಶ್ವಕಪ್‌ನಲ್ಲಿ ಟೆಸ್ಟ್ ಮಾನ್ಯತೆ ಹೊಂದಿದ್ದ ಆರು ರಾಷ್ಟ್ರಗಳು ಹಾಗೂ ಆಗ ಐಸಿಸಿ ಸಹ ಸದಸ್ಯ ರಾಷ್ಟ್ರಗಳಾಗಿದ್ದ ಪೂರ್ವ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಂಡಿದ್ದವು. ಶ್ರೀಲಂಕಾ ಆಗ ಟೆಸ್ಟ್ ಆಡುವ ರಾಷ್ಟ್ರದ ಮಾನ್ಯತೆ ಹೊಂದಿರಲಿಲ್ಲ ಎನ್ನುವುದು ಗಮನ ಸೆಳೆಯುವ ಅಂಶ.
25. ವಿಶ್ವಕಪ್‌ನಲ್ಲಿ ಮೊದಲ ಬೌಲ್ ಎಸೆದಿದ್ದು ಭಾರತದ ಮದನ್‌ಲಾಲ್ ಹಾಗೂ ಅದನ್ನು ಎದುರಿಸಿದ್ದು ಇಂಗ್ಲೆಂಡ್‌ನ ಜಾನ್ ಜೇಮ್ಸನ್.
26. ಮೊದಲ ಕ್ಯಾಚ್ ಪಡೆದಿದ್ದು ಭಾರತ ತಂಡದ ನಾಯಕರಾಗಿದ್ದ ಶ್ರೀನಿವಾಸ್ ವೆಂಕಟರಾಘವನ್.
27. ಇಂಗ್ಲೆಂಡ್ ವಿರುದ್ಧವೇ ಚೊಚ್ಚಲ ಪಂದ್ಯ ಆಡಿದ್ದ ಮೋಹಿಂದರ್ ಅಮರ್ನಾಥ್ ಎಸೆತದಲ್ಲಿ. ಅಮರ್ನಾಥ್ ಅವರು ಜೇಮ್ಸನ್ ರೂಪದಲ್ಲಿ ವಿಶ್ವಕಪ್‌ನ ಪ್ರಥಮ ವಿಕೆಟ್ ಪಡೆದ ಶ್ರೇಯ ಹೊಂದಿದ್ದಾರೆ.
28. ಇಂಗ್ಲೆಂಡ್‌ನ ಡಿ.ಎಲ್.ಅಮೀಸ್ ಅವರು ಭಾರತದ ವಿರುದ್ಧವೇ ವಿಶ್ವಕಪ್‌ನ ಮೊದಲ ಶತಕ ಗಳಿಸಿದ್ದು. ಅವರು 137 ರನ್ ಗಳಿಸಿದ್ದರು.
29. ವಿಚಿತ್ರವೆಂದರೆ ಭಾರತ ಅದೇ ಪಂದ್ಯದಲ್ಲಿ ಗಳಿಸಿದ್ದ ಒಟ್ಟು ಮೊತ್ತ 60 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್. ಸುನಿಲ್ ಗಾವಸ್ಕರ್ ಔಟಾಗದೆ ಉಳಿದಿದ್ದರು. ಆದರೆ ಅವರು 174 ಎಸೆತಗಳಲ್ಲಿ ಗಳಿಸಿದ್ದು ಕೇವಲ 36 ರನ್.
30. ಇಂಗ್ಲೆಂಡ್‌ನವರು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುನ್ನೂರಕ್ಕೂ ಅಧಿಕ ರನ್ ಗಳಿಸಿದ್ದು. ಇಂಗ್ಲೆಂಡ್ 60 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತ್ತು. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದು ಕೂಡ ಅದೇ ಮೊದಲು.
31. ಭಾರತ ವಿರುದ್ಧದ ಪಂದ್ಯದಲ್ಲಿಯೇ ಇಂಗ್ಲೆಂಡ್ 202 ರನ್‌ಗಳಿಂದ ಜಯ ಪಡೆದಿದ್ದು, ದೊಡ್ಡ ಮೊತ್ತದ ಅಂತರದಲ್ಲಿ ತಂಡವೊಂದು ವಿಜಯ ಸಾಧಿಸಿದ ಮೊದಲ ಘಟನೆ.
32. ಕೀಥ್ ಫ್ಲೆಚರ್ ಹಾಗೂ ಅಮೀಸ್ ವಿಶ್ವಕಪ್‌ನಲ್ಲಿ ಮೂರಂಕಿಯ ಜೊತೆಯಾಟವಾಡಿದ ಮೊದಲ ಜೋಡಿ. ಎರಡನೇ ವಿಕೆಟ್‌ನಲ್ಲಿ ಇವರಿಬ್ಬರೂ 176 ರನ್ ಕಲೆಹಾಕಿದ್ದರು.ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು.
33. ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು. ಹದಿನೈದಕ್ಕೂ ಹೆಚ್ಚು ಬೌಂಡರಿಗಳನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.
34. ವಿಕಿಪೀಡಿಯ ತಿಂಗಳ ಪುಟ ವೀಕ್ಷಣೆ ಸಂಖ್ಯೆ 8.5 ಶತಕೋಟಿಗೆ ಏರಿದ್ದು, ಅತಿ ಹೆಚ್ಚು ಜನ ಭೇಟಿ ನೀಡುವ ಪ್ರಪಂಚದ ಐದನೆಯ ವೆಬ್ ತಾಣ ವಿಕಿಪೀಡಿಯ.
35. ಪರಮಾಣು ದಾಸ್ತಾನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಹಾಗೂ ರಷ್ಯ “ ಸ್ಟಾರ್ಟ್ ” ಒಪ್ಪಂದ ಅಮೆರಿಕಾ ಸೆನೆಟ್ ನಲ್ಲಿ ಅಂಗೀಕಾರವಾಯಿತು .
36. “ ಸ್ಟಾರ್ಟ್ ” ಒಪ್ಪಂದಕ್ಕೆ ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ಮತ್ತು ರಷ್ಯದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ 2010 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು .
37. “ ಸ್ಟಾರ್ಟ್ ” ಒಪ್ಪಂದದ ನಂತರ ಜಾರಿಗೊಂಡ ನಂತರ 2200 ರಿಂದ 1500 ಕ್ಕೆ ಇಳಿಯಲಿದೆ.
38. “ ಸ್ಟಾರ್ಟ್ ” ಒಪ್ಪಂದದ ನಂತರ ಅಮೆರಿಕಾದ 17 ಹಾಗೂ ರಷ್ಯಾದ 35 ಅಣ್ವಸ್ತ್ರ ತಾಣಗಳು ಪರಸ್ಪರ ಪರಿಶೀಲನೆಗೆ ಮುಕ್ತವಾಗಲಿದೆ.
39. ಬ್ರೆಜಿಲ್ ನ ಎಡಪಂಥೀಯ ಚಿಂತಕಿ ಅರ್ಥಶಾಸ್ತ್ರಜ್ಞೆ “ ದಿಲ್ಮಾ ರೌಸೆಫ್ ” ನೂತನ ಅಧ್ಯಕ್ಷರಾಗಿ 2011 , ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು .
40. ಟ್ಯುನೀಷಿಯಾ ಅಧ್ಯಕ್ಷ “ ಜಿನೆ ಅಲ್ ಅಬಿದಿನ್ ಬೆನ್ ಅಲಿ ” ಪದಚ್ಯುತಗೊಂಡರು ಇದರೊಂದಿಗೆ 23 ವರ್ಷಗಳ ನಿರಂಕುಶ ಅಧ್ಯಕ್ಷೀಯ ಆಡಳಿತ ಮುಕ್ತಾಯಗೊಂಡಿತು .
41. ದೇಶದ ಮಹತ್ವಕಾಂಕ್ಷೆಯ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸಂಪರ್ಕ ಉಪಗ್ರಹ “ ಜಿ ಸ್ಯಾಟ್ -5 ಪಿ ” ಅನ್ನು ಹೊತ್ತು ಸಾಗಿಸುತ್ತಿದ್ದ ಜಿ.ಎಸ್.ಎಲ್.ವಿ – ಎಫ್ 06 ರಾಕೆಟ್ 2010 ಡಿ.25 ರಂದು ಉಡಾವಣಿಗೊಂಡ ನಿಮಿಷದೊಳಗೆ ಸ್ಪೋಟಗೊಂಡು , ಯೋಜನೆ ಸಂಪೂರ್ಣ ವಿಫಲವಾಯಿತು. ಇದಕ್ಕಾದ ವೆಚ್ಚ 125 ಕೋಟಿ ರೂ .
42. “ ಜಿ ಸ್ಯಾಟ್ -5 ಪಿ ” ನಲ್ಲಿ “ ಸಿ – ಬ್ಯಾಂಡ್ ” ಪ್ರೇಷಕಗಳು , 12 ವಿಸ್ತರಿತ ಸಿ ಬ್ಯಾಂಡ್ ಪ್ರೇಷಕರಗಳನ್ನು ಅಳವಡಿಸಲಾಗಿತ್ತು .
43. “ ಜಿ ಸ್ಯಾಟ್ -5 ಪಿ ” ಇದು ದೇಶದ ದೂರಸಂಪರ್ಕ ,ಟಿವಿ ಮತ್ತಿತರ ಸಂವಹನ ರಂಗದ ಮಹತ್ತರ ಅಭಿವೃದ್ಧಯನ್ನು ನಿರೀಕ್ಷಿಸಲಾಗಿತ್ತು ಹಾಗೂ ಇನ್ ಸ್ಯಾಟ್ – 3ಇ ಉಪಗ್ರಹಕ್ಕೆ ಪರ್ಯಾಯವಾಗಿ ಇದನ್ನು ಸಿದ್ಧಪಡಿಸಲಾಗಿತ್ತು .
44. ಪ್ರಜಾಪ್ರಭುತ್ವದ ವಿರುದ್ಧ ಹೋರಾಡಲು ನಕ್ಸಲೀಯರ ಜೊತೆ ಸೇರಿ ಸಂಚು ರೂಪಿಸಿ ರಾಷ್ಟ್ರ ದ್ರೋಹ ಎಸಗಿದ ಆರೋಪಕ್ಕಾಗಿ ಮಾನವಹಕ್ಕು ಕಾರ್ಯಕರ್ತ “ ವಿನಾಯಕ ಸೇನ್ ” ನಕ್ಸಲ್ ಸಿದ್ಧಾಂತವಾದಿ ನಾರಾಯಣ್ ಸನ್ಯಾಲ್ ಮತ್ತು ಕೋಲ್ಕತ್ತಾದ ಉದ್ಯಮಿ ಪಿಯೂಷ್ ಗುಹಾ ಅವರಿಗೆ ಛತ್ತೀಸ್ ಗಢ್ ದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.
45. ಮಂಗಳೂರು ಮೂಲದ ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗೀಶ್ ಭಟ್ ವಿಧಾನ ಸಭೆಯ ಉಪಸಭಾಧ್ಯಕ್ಷ ಅಥವಾ Deputy Speaker .
46. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ದ.ಆಫ್ರೀಕಾದ ಜಾಕ್ ಕಾಲೀಸ್ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್ 10 ನೇ ಬಾರಿಗೆ ಟೆಸ್ಟ್ ರ್ಯಾಂಕಿಂಗ್ ನಂ.1 ಪಟ್ಟಿ ಪಡೆದುಕೊಂಡಿದ್ದಾರೆ.
47. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನ ಕ್ರಮವಾಗಿ ದ.ಆಫ್ರೀಕಾ ಹಾಗೂ ಇಂಗ್ಲೇಂಡ್ ಪಾಲಾಗಿದೆ.
48. ಅರ್ಜೇಂಟೀನಾದ ಪುಟ್ಬಾಲ್ ಆಟಗಾರ “ ಲಯೋನೆಲ್ ಮೆಸ್ಸಿ ” ಸತತ ಎರಡನೇ ಬಾರಿಗೆ FIFA ನೀಡುವ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ,
49. ಫೀಫಾ ರ್ಯಾಂಕಿಂಗ್ ಪಟ್ಟಯಲ್ಲಿ ಸ್ಪೇನ್ ಮೊದಲ ಸ್ಥಾನ ಹಾಲೆಂಡ್ ಜರ್ಮನಿ ಕ್ರಮವಾಗಿ ಹಾಗೂ ಭಾರತದ 144 ನೇ ಸ್ಥಾನ ಪಡೆದಿದೆ.
50. ವಿಶ್ವದ ಅತಿ ಉದ್ದವಾದ ಸೇತುವೆ ಚೀನಾದಲ್ಲಿದೆ ಅದರ ಉದ್ದ 42.5 ಕಿ.ಮೀ. ಇದರ ಹೆಸರು “ ಖಂ – ಗ್ ಡೋ ಹೈವಾನ್ ” ಆರು ಪಥಗಳ ಎಕ್ಸ್ ಪ್ರೆಸ್ ವೇ ಇದಾಗಿದ್ದು 8.0 ತೀವ್ರತೆಯ ಭೂ ಕಂಪನವನ್ನ ಎದುರಿಸುವ ಸಾಮರ್ಥ್ಯ ಹೊಂದಿದೆ . ಇದರ ಬಾಳಿಕೆ ಅವಧಿ ಸುಮಾರು 120 ವರ್ಷ ಪ್ರಯಾಣದ ಅವಧಿ 30 ನಿಮಿಷ ಹಾಗೂ ಇದರ ಯೋಜನೆಯ ವೆಚ್ಚ 500 ಶತ ಕೋಟಿ
51. ಮಾನವ ಪ್ರಥಮ ಭಾರಿಗೆ 1.70 ಲಕ್ಷ ವರ್ಷಗಳ ಹಿಂದೆ ಬಟ್ಟೆ ಧರಿಸಿದನಂತೆ ಇದರಿಂದ ಆಫ್ರೀಕಾದಿಂದ ಬೇರೆಡೆಗೆ ವಲಸೆ ಹೋಗಲು ಆತನಿಗೆ ಸಾಧ್ಯವಾಯಿತು.
52. ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ( ರಾ ) ನೂತನ ಮುಖ್ಯಸ್ಥರಾಗಿ “ ಎಸ್.ಕೆ.ತ್ರಿಪಾಠಿ ” ಅವರನ್ನು ನೇಮಿಸಲಾಯಿತು ಇವರು ಈ ಮೊದಲು ರಾ ಏರ್ ವಿಂಗ್ ಘಟಕದ ವಿಮಾನಯಾನ ಸಂಶೋಧನಾ ಕೇಂದ್ರದ ( ಎ.ಆರ್.ಸಿ ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು .
53. ಯುದ್ಧ ವಿಮಾನಗಳ ಅನುಭವಿ ಫೈಲಟ್ ಹಾಗೂ ರ್ ಮಾರ್ಷಲ್ ಎನ್.ಎ.ಕೆ.ಬ್ರೌನೆ ಅವರು ಭಾರತೀಯ ವಾಯುಪಡೆಯ ನೂತನ ಉಪಮುಖ್ಯಸ್ಥರಾಗಿ ನೇಮಕಗೊಂಡರು .
54. ಯುಎಎಸ್ ಪರವಾನಗಿ ಮತ್ತು ರೇಡಿಯೊ ತರಂಗಾಂತರ ಪಡೆಯುವ ನಿಟ್ಟಿನಲ್ಲಿ ಬಲ್ವಾ ಅವರಿಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ನೆರವಾಗಿದ್ದರು ಎನ್ನಲಾಗಿದೆ. ಬಲ್ವಾ ಅವರ ಡಿ.ಬಿ.ರಿಯಾಲ್ಟಿ ಗುಂಪು ಕಲೈಞ್ಞರ್ ಟಿವಿಗೆ 214 ಕೋಟಿ ರೂಪಾಯಿಗಳ ಸಾಲ ಒದಗಿಸಿತ್ತು. ಇದರಿಂದಾಗಿ ಹಗರಣದಲ್ಲಿ ಕಲೈಞ್ಞರ್ ಟಿವಿ ಶಾಮೀಲಾದ ಸಂಶಯ ಎದುರಾಗಿದೆ.
55. ಕಲೈಞ್ಞರ್ ಟಿವಿಯಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅವರಿಗೆ ಶೇ 60ರಷ್ಟು ಒಡೆತನ ಇದ್ದರೆ, ಅವರ ಪುತ್ರಿ ಹಾಗೂ ಸಂಸದೆ ಕನಿಮೋಳಿ ಅವರಿಗೆ ಶೇ 20ರಷ್ಟು ಒಡೆತನ ಇದೆ.
56. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಲಾದ ವೈದ್ಯಕೀಯ ವಿಮಾ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಂಧಿಸಿರುವ 111 ಮಂದಿಯಲ್ಲಿ ಭಾರತೀಯ ಮೂಲದ ಕನಿಷ್ಠ 6 ಜನ ಸೇರಿದ್ದಾರೆ.
57. ವೈದ್ಯಕೀಯ ವಿಮಾ ಹಗರಣವೊಂದು ವೈದ್ಯರು, ನರ್ಸ್‌ಗಳು, ಆರೋಗ್ಯ ಸುರಕ್ಷಾ ಕಂಪೆನಿಗಳು ಜಂಟಿಯಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 225 ದಶಲಕ್ಷ ಡಾಲರ್‌ಗೂ ಹೆಚ್ಚು ವಂಚಿಸಿರುವುದಾಗಿ ಹೇಳಲಾಗಿದೆ.ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9.54 ಲಕ್ಷ ವೈದ್ಯರಲ್ಲಿ ಭಾರತೀಯ ಮೂಲದ 60 ಸಾವಿರ ಮಂದಿ ಇದ್ದಾರೆ.
58. ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ
59. ನಗರ ಸೌಂದರ್ಯ ವರ್ಧನೆ ಕಲ್ಪನೆಯಡಿ ನಿರ್ಮಿಸಲಾದ ವಿಪ್ರೊ ಬೀದಿ ದೀಪ ‘ಒರಿಯೊ’ಕ್ಕೆ ಪ್ರಸಕ್ತ ಸಾಲಿನ ‘ಏಷ್ಯಾ-ಶ್ರೇಷ್ಠತೆ ಮನ್ನಣೆ ಪ್ರಶಸ್ತಿ’ ಲಭಿಸಿದೆ. ದೇಶದ ಪ್ರಮುಖ 120 ಪರಿಸರ ಸ್ನೇಹಿ ಕಟ್ಟಡಗಳಲ್ಲಿ 70 ಕಟ್ಟಡಗಳಿಗೆ ಈಗಾಗಲೇ ಹಸಿರು ತಂತ್ರಜ್ಞಾನದ ‘ಎಲ್‌ಇಡಿ’ ದೀಪಗಳನ್ನು ಕಂಪೆನಿ ಅಳವಡಿಸಿದೆ.
60. ಈಜಿಪ್ಟ್ ಮತ್ತಿತರ ಅರಬ್ ರಾಷ್ಟ್ರಗಳಲ್ಲಿನ ಜನಾಂದೋಲನದಿಂದ ಪ್ರಭಾವಿತರಾದ ಚೀನಾ ನಾಗರಿಕರು ಭಾನುವಾರ ‘ಮಲ್ಲಿಗೆ ಕ್ರಾಂತಿ’ ಹೆಸರಿನಲ್ಲಿ ಇಂಟರ್‌ನೆಟ್‌ನಲ್ಲಿ ನೀಡಿದ ಕರೆ ಮೇರೆಗೆ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಬೀದಿಗಿಳಿದಿದ್ದರು.
61. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಇದಂತೂ ನಿಜ. ಮಿಜೊರಾಂನ ವ್ಯಕ್ತಿಯೊಬ್ಬರಿಗೆ 39 ಹೆಂಡತಿಯರು, 94 ಮಕ್ಕಳು ಮತ್ತು 33 ಜನ ಮೊಮ್ಮಕ್ಕಳಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಇವರೆಲ್ಲಾ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ!
62. ಬಹುಪತ್ನಿತ್ವಕ್ಕೆ ಅವಕಾಶ ಇರುವ ’ಚನಾ’ ಪಂಗಡದ ಮುಖ್ಯಸ್ಥರಾಗಿರುವ 66 ವರ್ಷದ ಜಿಯೋನಾ ಚನಾ ‘ಚ್ಚುವಾನ್ ಥಾಟ್ ರನ್’ (ಹೊಸ ತಲೆಮಾರಿನ ಮನೆ) ಎಂಬ 100 ಕೋಣೆಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬದುಕು ನಡೆಸುತ್ತಿದ್ದಾರೆ.
63. ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಸೋಮವಾರದ ಪಂದ್ಯದ ಮೂಲಕ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲಿದ್ದಾರೆ. ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಆಟಗಾರ ಎಂಬ ಗೌರವ ಪಾಂಟಿಂಗ್‌ಗೆ ಒಲಿಯಲಿದೆ.
64. ಪಾಂಟಿಂಗ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ವಿಶ್ವಕಪ್‌ನಲ್ಲಿ 39 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರದ ಪಂದ್ಯ ಆಸೀಸ್ ನಾಯಕನಿಗೆ 40ನೇ ಪಂದ್ಯ ಎನಿಸಲಿದೆ. ಆ ಮೂಲಕ ಮೆಕ್‌ಗ್ರಾ ಅವರನ್ನು ಹಿಂದಿಕ್ಕುವರು.
65. ಸನತ್ ಜಯಸೂರ್ಯ (38), ವಾಸೀಮ್ ಅಕ್ರಮ್ (38) ಮತ್ತು ಸಚಿನ್ ತೆಂಡೂಲ್ಕರ್ (37) ಅವರು ಅತಿಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡವರ ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.
66. ದೇಶದಲ್ಲಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ 150 ವರ್ಷಗಳ ಸ್ಮರಣಾರ್ಥ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ.ದೇಶದ ನಾಣ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರೂ 150 ಬೆಲೆಯ ವಿಶೇಷ ನಾಣ್ಯಗಳನ್ನು ಮುದ್ರಿಸಲು ನಿರ್ಧರಿಸಿದೆ.
67. ಆದಾಯ ತೆರಿಗೆ ಇಲಾಖೆಗೆ (1860-2010) 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರೂ 5 ಬೆಲೆಯ ನಾಣ್ಯಗಳನ್ನೂ ಹೊರತರಲಾಗುವುದು. 150 ನಾಣ್ಯಗಳನ್ನು ಕೇಂದ್ರ ಸರ್ಕಾರವು ಮುದ್ರಿಸುತ್ತಿರುವುದು ಇದೇ ಮೊದಲು. ಈ ನಾಣ್ಯವನ್ನು ಬೆಳ್ಳಿ, ತಾಮ್ರ, ನಿಕಲ್ ಮತ್ತು ಸತುವಿನಿಂದ ಕೂಡಿದ ಮಿಶ್ರ ಲೋಹದಿಂದ ತಯಾರಿಸಲಾಗುವುದು. ‘ಸತ್ಯಮೇವ ಜಯತೆ’ ಮತ್ತು ಭಾರತ ಮುದ್ರಿಸಲಾಗುವುದು. ಇನ್ನೊಂದು ಬದಿ ಚಾಣಕ್ಯ, ಕಮಲದ ಹೂ ಜತೆ ಜೇನುಹುಳ ಮುದ್ರಿಸಲಾಗಿರುತ್ತದೆ.
68. ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಮತ್ತು ಎಂಜಿನಿಯರ್ ಪವಿತ್ರಾ ಮಝಿ ಅವರನ್ನು ಇನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಲು ನಕ್ಸಲೀಯರು ಒಪ್ಪಿಕೊಂಡಿದ್ದಾರೆ ಎಂದು ಸಂಧಾನಕಾರ ಪ್ರೊ.ಹರಗೋಪಾಲ್ ಈ ಮೊದಲು ತಿಳಿಸಿದ್ದರು.
69. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
70. ಸಂಧ್ಯಾ ಸುರಕ್ಷಾ, ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿೆ, ನಿಶ್ಯಕ್ತ ವಿಧವಾ ಪಿಂಚಣಿ ಹಾಗೂ ಅಶಕ್ತ ಪಿಂಚಣಿ ಯೋಜನೆಗಳಿಗಾಗಿ ಸರ್ಕಾರವು 2011-12ನೇ ಸಾಲಿನಲ್ಲಿ ರೂ 1,742 ಕೋಟಿ ಹಣ ಒದಗಿಸಿದೆ.
71. ಸುಮಾರು 10,450 ಗ್ರಾಮ ಸಹಾಯಕರ ಗೌರವಧನವನ್ನು ರೂ 3,000ಗಳಿಂದ ರೂ 3,500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಏಪ್ರಿಲ್ 1ರಿಂದ ಜಾರಿಯಾಗಲಿದೆ.
72. ಸಚಿನ್ ಅವರ ಭಾನುವಾರದ ಶತಕ ಒಂದು ದಿನದ ಕ್ರಿಕೆಟ್‌ನಲ್ಲಿ 47ನೇಯದು. ಟೆಸ್ಟ್‌ಗಳಲ್ಲಿ ಅವರು 50 ಶತಕ ಹೊಡೆದಿದ್ದಾರೆ. ಅಂದರೆ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ತಲುಪಲು ಕೇವಲ ಮೂರು ಶತಕಗಳು ಬೇಕು.
73. ಒಟ್ಟು 17,777 ರನ್ ಗಳಿಸಿದ್ದಾರೆ. ಅವರು ಒಂದು ದಿನದ ಪಂದ್ಯಗಳಲ್ಲಿ ಮೊಟ್ಟಮೊದಲ ದ್ವಿಶತಕ ಗಳಿಸಿದ (ನ್ಯೂಜಿಲೆಂಡ್ ವಿರುದ್ಧ) ಮೊದಲ ಆಟಗಾರನೂ ಹೌದು.
74. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಾಡಲಿರುವ ಬಜೆಟ್ ಭಾಷಣವು ಸ್ವತಂತ್ರ ಭಾರತದ 80ನೇ ಬಜೆಟ್ ಭಾಷಣವಾಗಲಿದೆ.
75. 1947ರ ನವೆಂಬರ್ 26ರಂದು ದೇಶದ ಪ್ರಥಮ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಅವರು ಮೊಟ್ಟ ಮೊದಲ ಬಜೆಟ್ ಭಾಷಣ ಮಾಡಿದರು.
76. ಅತಿ ಹೆಚ್ಚು ಅಂದರೆ 10 ಬಾರಿ ಬಜೆಟ್ ಭಾಷಣ ಮಾಡಿದ ಕೀರ್ತಿ ಮೂರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಪಿ. ಚಿದಂಬರಂ, ಯಶವಂತ್ ಸಿನ್ಹಾ, ವೈ. ಬಿ. ಚವಾಣ್ ಮತ್ತು ಸಿ. ಡಿ. ದೇಶಮುಖ್ ಅವರು ತಲಾ 7 ಬಾರಿ ಬಜೆಟ್ ಮಂಡಿಸಿದ್ದಾರೆ.
77. ದೇಶದ ನಾಲ್ಕನೇ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಆರು ಬಾರಿ ಬಜೆಟ್ ಮಂಡಿಸಿದ್ದಾರೆ.
78. ಮುಖರ್ಜಿ ಅವರು ಸೋಮವಾರದ್ದು ಸೇರಿ ನಾಲ್ಕು ವಾರ್ಷಿಕ ಬಜೆಟ್ ಮತ್ತು 2009-10ರ ಮಧ್ಯಂತರ ಬಜೆಟ್ ಸೇರಿದಂತೆ ಐದು ಬಜೆಟ್ ಮಂಡಿಸಿದ ಕಿರ್ತಿಗೆ ಪಾತ್ರರಾಗಲಿದ್ದಾರೆ.
79. ಅಮೆರಿಕದ ಅಲಸ್ಕಾ ನಗರದ ಮಾಜಿ ಗವರ್ನರ್ ಮತ್ತು ರಿಪಬ್ಲಿಕನ್ ಪಕ್ಷದ ನಾಯಕಿ ಸಾರಾ ಪಾಲಿನ್ ಅವರು ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
80. ಭಾರತದ ದಿಗ್ಗಜ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 2010 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ನಲ್ಲಿ ಬಾರಿಸಿದ ಏಕದಿನ ದ್ವಿಶತಕ
81. ಕರ್ನಾಟಕದ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ರಣಜಿ ಪಂದ್ಯಾವಳಿಯಲ್ಲಿ 600 ವಿಕೆಟ್ ಸಾಧನೆಗೈದಿದ್ದಾರೆ.
82. ಭಾರತದ ರೋಹನ್ ಬೋಪಣ್ಣ ಮತ್ತು ಇಸಾಮ್ ಉಲ್ ಹಕ್ ಖುರೇಷಿ 2010 ಗ್ಯಾನ್ ಪ್ರಿ ಪೀಸ್ ಅಂಡ್ ಸ್ಪೋರ್ಟ್ಸ್ ಪ್ರಶಸ್ತಿ ಪಡೆದಿದ್ದಾರೆ.
83. ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ 2010ನೆಯ ಸಾಲಿನ ಹಾಂಕಾಂಗ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಜಯಿಸಿದರು .
84. ಬೆಂಗಳೂರು ಮಿಡ್ ನೈಟ್ ಮ್ಯಾರಾಥಾನ್ ಡಿಸೆಂಬರ್ 11 ರಂದು ನಡೆಯಿತು. ಪುರುಷರು ವಿಭಾಗದಲ್ಲಿ ಇಥಿಯೋಪಿಯಾ ದೇಶದ ಸೆಗಾಜ್ ಹಿಲುಫ್ ಮೊದಲ ಸ್ಥಾನ ಪಡೆದರು.
85. ಜರ್ಮನಿಯ ಫಾರ್ಮುಲಾ – 1 ಮೋಟಾರ್ ಕಾರ್ ರೇಸ್ ಪಟು ಸೆಬಾಸ್ಟಿಯನ್ ವೆಟ್ಟೆಲ್ 2010 ನೆಯ ಸಾಲಿನ ಇಂಟರ್ ನ್ಯಾಷನಲ್ ಆಟೋಮೊಬೈಲ್ ಫೆಡರೇಷನ್ ಪುರಸ್ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
86. ಭಾರತದ ಪ್ರತಿಭಾವಂತ ಶೂಟಿಂಗ್ ಪಟು ಗಗನ್ ನಾರಂಗ್ ಇತ್ತೀಚಿನ ರ್ಯಾಂಕಿಂಗ್ ನಂತೆ ಏಷ್ಯಾದ ನಂಬರ್ ಒನ್ ಪಟು ಎನಿಸಿದ್ದಾರೆ. 2845 ಅಂಕಗಳೊಂದಿಗೆ ಮೊದಲ ಶ್ರೇಯಾಂಕದಲ್ಲಿ ಇದ್ದರು .
87. ಅರ್ಜೇಂಟೀನಾದ ಫಾರ್ವರ್ಡ್ ಫುಟ್ಬಾಲ್ ರ್ ಲಿಯೋನೆಲ್ ಮೆಸ್ಸಿ ಕ್ಯಾಸ್ಟ್ರೋಲ್ ರ್ಯಾಂಕಿಂಗ್ ನಲ್ಲಿ ವಿಶ್ವದ ಅಗ್ರಮಾನ್ಯ ಕ್ಲಬ್ ಪಟು ಎನಿಸಿದ್ದಾರೆ. 1268 ಅಂಕಗಳೊಂದಿಗೆ
88. ವಿಯಟ್ನಾಂನ ಹೊ ಚಿ ಮಿನ್ ನಗರದಲ್ಲಿ ನಡೆದ ಸ್ಪರ್ದೇಯಲ್ಲಿ ಬೆಂಗಳೂರಿನ 20 ವರ್ಷದ ಸುಂದರಿ “ ನೆಕೋಲ್ ಫರಿಯಾ ಮಿಸ್ ಅರ್ಥ್ – 2010 ಕಿರೀಟ ಧರಿಸಿದ್ದಾರೆ. ” ಅಂತಿಮ ಸುತ್ತಿನಲ್ಲಿ “ ಬೆಲ್ಲಿ ನೃತ್ಯ ”ಪ್ರದರ್ಶಿಸಿ 17 ಸ್ಪರ್ದಿಗಳನ್ನು ಹಿಂದಿಕ್ಕಿದರು
89. ಮಿಸ್ ಅರ್ಥ್ ಸ್ಪರ್ದೇಯನ್ನು 2001 ರಿಂದ ಆಯೋಜಿಸಲಾಯಿತು.
90. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮೆಕ್ಸಿಕೋದ ಕ್ಯಾನ್ ಕಾನ್ ನಲ್ಲಿ ಡಿಸೆಂಬರ್ 11 ರಂದು ನಡೆಯಿತು.
91. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮುಂದಿನ ಸಭೆ 2011 ಡರ್ಬನ್ ನಲ್ಲಿ ನಡೆಯಲಿದೆ.
92. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ 2020 ರ ವೇಳೆಗೆ ಹಸಿರು ನಿಧಿಗೆ 100 ಶತಕೋಟಿ ಡಾಲರ್ ಕ್ರೂಡೀಕರಿಸುವ ಗುರಿ .
93. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆಯಲ್ಲಿ ಬೊಲಿವಿಯಾ ಮಾತ್ರ ವಿರೋಧಿಸಿದೆ.
94. ಮಹಿಳೆಯರಿಗೆ ಸಮಾನ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆ ಹೊಸದಾಗಿ ಸ್ಥಾಪಿಸಿರುವ ಮಂಡಳಿಗೆ ಭಾರತ ಆಯ್ಕೆಯಾಗಿದೆ. ( ಯು.ಎನ್.ವುಮೆನ್ ).
95. ಅಮೆರಿಕಾದ ಅತ್ಯಂತ ಪ್ರಮುಖ ನಾಗರಿಕ ಪ್ರಶಸ್ತಿಯಾದ ಸ್ವಾತಂತ್ರ್ಯ ಪ್ರಶಸ್ತಿಗೆ ಈ ಭಾರಿ ಜರ್ಮನ್ ಚಾನ್ಸ್ ಲರ್ ಏಂಜೆಲ್ ಮರ್ಕೆಲ್ ಹಾಗೂ ಅಮಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಿದೆ.
96. ಫೆ.19 ರಿಂದ 21 ರ ವರೆಗೆ ಗದಗದಲ್ಲಿ 76 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
97. 77 ನೇ ಸಾಹಿತ ಸಮ್ಮೇಳನದ ಅಧ್ಯಕ್ಷರಾಗಿ ಪ್ರೋ. ಜಿ.ವೆಂಕಟಸುಬ್ಬಯ್ಯ ಆಯ್ಕೆ .
98. ಕಲ್ಯಾಣ ಸಿಂಗ್ ರಿಂದ “ ಜನಕ್ರಾಂತಿ ” ಪಕ್ಷ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆ .
99. ಗೋವಾ – ಕರ್ನಾಟಕ ಷಟ್ಪಥ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ
100. 2010 ರ 61 ನೇ ಗಣರಾಜ್ಯೋತ್ಸವಕ್ಕೆ ದ.ಕೊರಿಯಾದ ಅಧ್ಯಕ್ಷ ಲೀ ಮಯಂಗ್ ಬಾಕ್ ಮುಖ್ಯ ಅತಿಥಿ
101. ಗಂಗಾನದಿಯಲ್ಲಿ ಹಡಗಿನೊಂದರ ಮೇಲೆ ಬಿಹಾರ ಸಚಿವ ಸಂಪುಟ ಸಭೆ
102. ರಂಗ ಕಲಾವಿದೆ ಬಿ.ಜಯಶ್ರೀ ರಾಜ್ಯಸಭೆಗೆ ನಾಮಕರಣ
103. ದೇಶದ ಅತಿ ಐಷಾರಾಮಿ ರೈಲು “ ಮಹಾರಾಜ” ಕ್ಕೆ ಮಮತಾ ಬ್ಯಾನರ್ಜಿ ಚಾಲನೆ
104. ಬ್ರಿಟಿಷ್ ಮ್ಯಾಗಜಿನ್ ಯೂರೋ ಮನಿಯ 2010 ಸಾಲಿನ ಅತ್ಯುತಮ ರಾಷ್ಟ್ರೀಯ ಬ್ಯಾಂಕ್ ಗವರ್ನರ್ ಪ್ರಶಸ್ತಿಯನ್ನು ಬ್ಯಾಂಕ್ ಆಫ್ ಇಸ್ರೇಲ್ ನ ಗವರ್ನರ್ ಸ್ಟ್ಯಾನ್ಲಿ ಫಿಶ್ಚರ್ ರಿಗೆ ನೀಡಲಾಗಿದೆ.
105. ಬಾರತದಲ್ಲಿ ಶೇ.4 ಮುಸ್ಲಿಂ ಮೀಸಲಿಗೆ ಸುಪ್ರೀಂಕೋರ್ಟ್ ಒಪ್ಪಿಗೆ .
106. 2010 ಪರಿಸರ ಪ್ರಗತಿ ಸೂಚ್ಯಂಕ ( ಇಪಿಐ) ದಲ್ಲಿ 123 ನೇ ಸ್ಥಾನ ಪಡೆದ ಭಾರತ
107. ಭಾರತದ ಪ್ರಧಾನಿ ಸಿಂಗ್ , ರಷ್ಯಾ ಪ್ರಧಾನಿ ಪುಟಿನ್ 12 ಅಣುಸ್ಥಾವರ ಸ್ಥಾಪನೆಗೆ ಸಹಿ
108. ಜಿನಿವಾದಲ್ಲಿ ಬಿಗ್ ಬ್ಯಾಂಗ್ ಯಶಸ್ವಿ
109. ಭೂತಾನ್ ನ ಥಿಂಪುವಿನಲ್ಲಿ 16 ನೇ ಸಾರ್ಕ್ ಶೃಂಗಸಭೆ
110. ಕೆನಾಡ ಮ್ಯೂಸಿಯಂನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಅನಾವರಣ
111. ಮದರ್ ಥೆರೆಸಾ ಅಂಚೆ ಚೀಟಿ ಬಿಡುಗಡೆ ಮಾಡಿದ ಅಮೆರಿಕ
112. ರಾಜಭಾಷಾ ( ವಿದಾಯ) ಆಯೋಗದ ಅಧ್ಯಕ್ಷರಾಗಿ ಬೇಲೂರು ಜವರಯ್ಯ ನೇಮಕ
113. ಸಾರ್ವಜನಿಕ ಲೆಕ್ಕಪತ್ರ ಸಮಿತಿ ( ಪಿಎಸಿ) ಅಧ್ಯಕ್ಷರಾಗಿ ಗೋಪಿನಾಥ ಮುಂಡೆ ನೇಮಕ
114. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕಿಯಾಗಿ ಮಾಜಿ ಸಚಿವೆ ಮೋಟಮ್ಮ ನೇಮಕ
115. ಐಯುಸಿಎ ಮುಖ್ಯಸ್ಥರಾಗಿ ಪ್ರೋ.ಬಿ.ಹನುಮಯ್ಯ ನೇಮಕ
116. ತೆರಿಗೆ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ದೇಶದಿಂದ ದೋಚಿದ ದುಡ್ಡು 36 ಸಾವಿರ ಕೋಟಿ (8 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದ್ದು, ಅವನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಿನಂತಹ ಕಠಿಣ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
117. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನವಿ ಪಿಳ್ಳೈ
118. ವಾಷಿಂಗ್ಟನ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಹಿಂದೂ ಗುರು ಪ್ರಕಾಶಾನಂದ ಸರಸ್ವತಿ ನಿಗದಿತ ಸಮಯಕ್ಕೆ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಆತನ ಬಂಧನಕ್ಕೆ ಕೋರ್ಟ್ ವಾರೆಂಟ್.
119. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿದ್ದು, ಆ ಸಂದರ್ಭದಲ್ಲಿ ಕನ್ನಡ ಭಾಷಾಭಿವೃದ್ಧಿಗೆ ವಿಶೇಷ ಕೊಡುಗೆಯಾಗಿ ಅದನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ
120. ದೇಶದ ಆರ್ಥಿಕತೆ 2022-25ರ ವೇಳೆಗೆ 5 ಸಾವಿರ ಕೋಟಿಯನ್ನು ತಲುಪಲಿದೆ ಎಂದು ರಿಯಲನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ಐಸಿಐಸಿಐ ಬ್ಯಾಂಕಿನ ಅಧ್ಯಕ್ಷ ಕೆ.ವಿ ಕಾಮತ್ ಇದನ್ನು ಅನುಮೋದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ